ಅಕೋಲಾದಲ್ಲಿ ನಡೆದ ಮೊದಲ ಭವ್ಯ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ೧೬,೦೦೦ಕ್ಕೂ ಹೆಚ್ಚು ಹಿಂದೂಗಳ ಗರ್ಜನೆ
ಹಿಂದೂತ್ವನಿಷ್ಠ ಶಾಸಕ ಟಿ. ರಾಜಾಸಿಂಗ್ ಅವರ ನೇರ ಪ್ರಶ್ನೆ!
ಹಿಂದೂ ರಕ್ಷಣೆಗಾಗಿ ಸಿದ್ಧರಾಗಲು ಸಂಕಲ್ಪ!

ಅಕೋಲಾ, ೮ ಮೇ (ವಾರ್ತೆ) – ಛತ್ರಪತಿ ಸಂಭಾಜಿ ಮಹಾರಾಜರನ್ನು ೪೯ ದಿನಗಳ ಕಾಲ ಅತ್ಯಂತ ಕ್ರೂರವಾಗಿ ಹಿಂಸಿಸಿ ಕೊಲೆ ಮಾಡಿದ, ಕಾಶಿ ವಿಶ್ವನಾಥ ದೇವಸ್ಥಾನವನ್ನು ಧ್ವಂಸಗೊಳಿಸಿದಂತಹ ಕ್ರೂರಿ ಔರಂಗಜೇಬನ ಸಮಾಧಿಗಾಗಿ ಮಹಾರಾಷ್ಟ್ರ ಸರಕಾರ ಪ್ರತಿ ವರ್ಷ ಆರೂವರೆ ಲಕ್ಷ ರೂಪಾಯಿಗಳನ್ನು ನೀಡುತ್ತಿರುವುದು ಸೂಕ್ತವಲ್ಲ. ಮಹಾರಾಷ್ಟ್ರದ ಹಿಂದೂಗಳು ಈಗ ಜಾಗೃತರಾಗಿದ್ದಾರೆ. ಹಾಗಾಗಿ ಏನೇ ಆಗಲಿ ಔರಂಗಜೇಬನ ಸಮಾಧಿ ಮತ್ತು ಅವನ ಹೆಸರಿಗೆ ಮಾತ್ರ ಮಹಾರಾಷ್ಟ್ರದ ಹಿಂದೂಗಳು ನ್ಯಾಯೋಚಿತ ಮಾರ್ಗದಿಂದ ವಿರೋಧ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಿಂದೂಗಳು ಇದನ್ನು ವಿರೋಧಿಸುತ್ತಿರುವಾಗ, ಇಂತಹ ಆಕ್ರಮಣಕಾರಿಯ ಸಮಾಧಿಗಾಗಿ ಲಕ್ಷಾಂತರ ರೂಪಾಯಿ ನೀಡಿ ಸರಕಾರ ಯಾಕೆ ಉದಾತ್ತೀಕರಣ ಮಾಡುತ್ತಿದೆ? ಎಂದು ತೆಲಂಗಾಣದ ಪ್ರಖರ ಹಿಂದೂತ್ವನಿಷ್ಠ ಶಾಸಕ ಟಿ. ರಾಜಾಸಿಂಗ್ ಅವರು ಮೇ ೩ ರಂದು ಅಕೋಲಾದಲ್ಲಿ ನಡೆದ ಭವ್ಯ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯಲ್ಲಿ ಪ್ರಶ್ನಿಸಿದರು. ಈ ಸಭೆಯಲ್ಲಿ ೧೬,೦೦೦ಕ್ಕೂ ಹೆಚ್ಚು ಹಿಂದೂಗಳು ಉಪಸ್ಥಿತರಿದ್ದರು.

ಹಿಂದೂತ್ವದ ಬಲದಲಿ ಹಿಂದೂಗಳು ಮಾಡಿದರು ನಿರ್ಧಾರ | ಹಿಂದೂ ರಾಷ್ಟ್ರವು ಕೇವಲ ಕನಸಲ್ಲ, ಅದುವೇ ಹಿಂದೂಗಳ ಆಧಾರ ||
ಘೋಷಣೆಗಳನ್ನು ಕೂಗುತ್ತಾ ಹಿಂದೂಗಳು ಏಕವೀರಾ ಮೈದಾನವನ್ನು ಕಂಪಿಸುವಂತೆ ಮಾಡಿದ್ದರು. ಹಣೆಯ ಮೇಲೆ ತಿಲಕವನ್ನಿಟ್ಟುಕೊಂಡೇ ಎಲ್ಲರಿಗೂ ಸಭಾಸ್ಥಳಕ್ಕೆ ಪ್ರವೇಶ ನೀಡಲಾಯಿತು. ಈ ಸಭೆಯ ಮೂಲಕ ಅಕೋಲಾದ ನಿವಾಸಿಗಳಲ್ಲಿ ಹಿಂದೂತ್ವದ ಕಿಚ್ಚು ಪ್ರಜ್ವಲಿಸಿತು.
🔥 “Declare Bharat a Hindu Rashtra!” – Fiery call by @TigerRajaSingh
Akola, Maharashtra: At the Hindu Rashtra-Jagruti Sabha organised by the Hindu Rashtra Samanvay Samiti, attended by over 16,000 Hindus, Raja Singh strongly opposed government funds being used for Aurangzeb’s… pic.twitter.com/bnTx36V299
— Sanatan Prabhat (@SanatanPrabhat) May 7, 2026
ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಬೋಧಪ್ರದ ವಿಚಾರಗಳು ಮತ್ತು ಕಾರ್ಯಕ್ರಮದ ವೈಶಿಷ್ಟ್ಯಪೂರ್ಣ ವಿದ್ಯಮಾನಗಳು
೧. ಹಿಂದೂಗಳೇ, ದಮನಕ್ಕೆ ಗುರಿಯಾಗದೆ ‘ಹಿಂದೂ’ ಆಗಿ ಸಂಘಟಿತರಾಗಿ! – ಸದ್ಗುರು ಸ್ವಾತಿ ಖಾಡ್ಯೆ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

೧. ಸುಮಾರು ಎರಡು ದಶಕಗಳ ಹಿಂದೆ ಜಿಹಾದಿ ಭಯೋತ್ಪಾದಕತೆಯನ್ನು ಮುಚ್ಚಿಡಲು ‘ಹಿಂದೂ ಭಯೋತ್ಪಾದಕತೆ’ ಅಥವಾ ‘ಭಗವಾ ಭಯೋತ್ಪಾದಕತೆ’ ಎಂಬ ಪದ ಪ್ರಯೋಗವನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಇದು ಹಿಂದೂತ್ವನಿಷ್ಠ ಸಂಘಟನೆಗಳನ್ನು ಹತ್ತಿಕ್ಕುವ ಒಂದು ‘ಟೂಲ್ ಕಿಟ್’ (ವಿರೋಧ ವ್ಯವಸ್ಥೆ) ಆಗಿತ್ತು. ಆದ್ದರಿಂದಲೇ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ, ಹಾಗೆಯೇ ದಾಭೋಲ್ಕರ್-ಪಾನ್ಸರೆ-ಕಲಬುರ್ಗಿ-ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳಲ್ಲೂ ಹಿಂದೂತ್ವನಿಷ್ಠರನ್ನು ವಿನಾಕಾರಣ ಸಿಲುಕಿಸಲಾಯಿತು. ಹಿಂದೂಗಳಿಗೆ ತೀವ್ರ ಕಿರುಕುಳ ನೀಡಲಾಯಿತು; ಆದರೆ ಈ ಹಿಂದೂ ವೀರರು ಯಾವುದಕ್ಕೂ ಬಗ್ಗಲಿಲ್ಲ. ಕೊನೆಗೆ ಸತ್ಯಕ್ಕೇ ಜಯವಾಯಿತು. ನ್ಯಾಯಾಲಯವು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಎಲ್ಲಾ ಹಿಂದೂತ್ವನಿಷ್ಠರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿತು. ಸತ್ಯವನ್ನು ಎಷ್ಟೇ ಹತ್ತಿಕ್ಕಿದರೂ, ಅದನ್ನು ಶಾಶ್ವತವಾಗಿ ಅಡಗಿಸಿಡಲು ಸಾಧ್ಯವಿಲ್ಲ. ಇಂದು ಹಿಂದೂಗಳನ್ನು ಹತ್ತಿಕ್ಕುವ ಪ್ರಯತ್ನಗಳು ಎಲ್ಲೆಡೆ ನಡೆಯುತ್ತಲೇ ಇವೆ. ಆದ್ದರಿಂದ ‘ಧಟಾಸಿ ಆಣಾವಾ ಧಟ | ಉದ್ಧಟಾಸಿ ಪಾಹಿಜೆ ಉದ್ಧಟ ||’ (ದರ್ಪ ತೋರಿಸುವವನಿಗೆ ದರ್ಪದಿಂದಲೇ ಮತ್ತು ಉದ್ಧಟನಿಗೆ ಉದ್ಧಟತನದಿಂದಲೇ ಉತ್ತರಿಸಬೇಕು) ಎಂಬ ಸಮರ್ಥ ರಾಮದಾಸರ ವಚನದಂತೆ ನಡೆದುಕೊಳ್ಳಬೇಕಾಗುತ್ತದೆ. ಭಗವಾ ಭಯೋತ್ಪಾದಕತೆಯ ಸಂಕೇತವಲ್ಲ, ಅದು ಶೌರ್ಯದ ಸಂಕೇತವಾಗಿದೆ. ಭವಿಷ್ಯದಲ್ಲಿ ಹಿಂದೂತ್ವನಿಷ್ಠರ ದಮನವಾಗಬಾರದೆಂದರೆ; ಹಿಂದೂಗಳು ಜಾತಿ, ಮತ, ಪಕ್ಷ ಮತ್ತು ಸಂಪ್ರದಾಯಗಳನ್ನು ಮರೆತು ‘ಹಿಂದೂ’ ಆಗಿ ಸಂಘಟಿತರಾಗಬೇಕಿದೆ.
೨. ಇಂದು ಹಿಂದೂತ್ವನಿಷ್ಠ ಸಂಘಟನೆಗಳು ಸಾಕಷ್ಟಿವೆ; ಆದರೆ ಅವುಗಳ ನಡುವೆ ಸಂಘಟನೆಯಿಲ್ಲ; ಆದ್ದರಿಂದಲೇ ಪುರೋಗಾಮಿಗಳ (ಅಧೋಗಾಮಿಗಳ) ಒತ್ತಡಕ್ಕೆ ಹಿಂದೂಗಳು ಮರುಳಾಗುತ್ತಿದ್ದಾರೆ.
೩. ಭಯೋತ್ಪಾದಕ ಕಸಬ್ ನಿಗೆ ಸರಕಾರದ ಹಣದಿಂದ ವಕೀಲರನ್ನು ಒದಗಿಸಲಾಗುತ್ತದೆ. ಭಯೋತ್ಪಾದಕ ಯಾಕೂಬ್ ಮೆಮನ್ ಗೆ ನ್ಯಾಯ ಒದಗಿಸಲು ರಾತ್ರಿ ೧ ಗಂಟೆಗೆ ನ್ಯಾಯಾಲಯದ ಬಾಗಿಲನ್ನೂ ತೆರೆಯಲಾಗುತ್ತದೆ; ಆದರೆ ನಿರಪರಾಧಿ ಹಿಂದೂತ್ವನಿಷ್ಠರಿಗೆ ನ್ಯಾಯ ಸಿಗುತ್ತಿಲ್ಲ. ಅವರಿಗೆ ಕಿರುಕುಳ ನೀಡಲಾಗುತ್ತಿದೆ, ಇದು ಅತ್ಯಂತ ದುರ್ದೈವದ ಸಂಗತಿಯಾಗಿದೆ.
ಛತ್ರಪತಿ ಶಿವರಾಯರನ್ನು ಅವಮಾನಿಸುವವರಿಗೆ ಹಿಂದೂ ಸಮಾಜವು ತಕ್ಕ ಪ್ರತ್ಯುತ್ತರ ನೀಡಲಿದೆ! – ಸುನಿಲ್ ಘನವಟ್, ಹಿಂದೂ ಜನಜಾಗೃತಿ ಸಮಿತಿ

೧. ಮೌಲಾನಾ ಸಾಜಿದ್ ಅವರಂತಹ ವ್ಯಕ್ತಿಗಳು ಭಾರತ-ಇರಾನ್ ಯುದ್ಧದಲ್ಲಿ ಇರಾನ್ ಪರವಾಗಿ ಮಾತನಾಡುತ್ತಾರೆ ಮತ್ತು ಛತ್ರಪತಿಗಳ ಸಾಮ್ರಾಜ್ಯವನ್ನು ನಿರಾಕರಿಸುತ್ತಾರೆ, ಇದು ಅತ್ಯಂತ ಗಂಭೀರ ವಿಷಯವಾಗಿದೆ. ಅಫ್ಜಲ್ ಖಾನ್ ಮತ್ತು ಶಾಹಿಸ್ತೆ ಖಾನ್ ಗೆ ಛತ್ರಪತಿಗಳ ಸಾಮರ್ಥ್ಯವೇನೆಂದು ತಿಳಿದಿತ್ತು; ಇಂತಹ ಆಕ್ರಮಣಕಾರರನ್ನು ಉದಾತ್ತೀಕರಣಗೊಳಿಸುವ ಮೂಲಕ ಛತ್ರಪತಿಗಳಿಗೆ ಅವಮಾನ ಮಾಡುವವರಿಗೆ ಈಗ ಹಿಂದೂ ಸಮಾಜವು ತಕ್ಕ ಪ್ರತ್ಯುತ್ತರ ನೀಡಲಿದೆ.
೨. ಸದ್ಯಕ್ಕೆ ರಾಜ್ಯದಲ್ಲಿ ‘ಲವ್ ಜಿಹಾದ್’ ಜೊತೆಗೆ ‘ಕಾರ್ಪೊರೇಟ್ ಜಿಹಾದ್’ ಸಂಕಟವೂ ಎದುರಾಗಿದೆ. ಪರತವಾಡದ ೧೮೦ ಹೆಣ್ಣುಮಕ್ಕಳ ಉದಾಹರಣೆಯಾಗಲಿ ಅಥವಾ ನಾಗಪುರ-ಕೊಲ್ಲಾಪುರದ ಪ್ರಕರಣಗಳಾಗಲಿ, ಈಗ ವೃತ್ತಿಪರ ಕ್ಷೇತ್ರಗಳಲ್ಲಿ ಹಿಂದೂ ಹೆಣ್ಣುಮಕ್ಕಳು ಸುರಕ್ಷಿತವಾಗಿ ಉಳಿದಿಲ್ಲ. ಅಕೋಲಾದ ‘ಬಿಂದಿ ಘರ್’ ಪ್ರಕರಣದಿಂದ ಹಿಂದೂಗಳು ಪಾಠ ಕಲಿಯಬೇಕು. (‘ಬಿಂದಿ ಘರ್’ ಪ್ರಕರಣ ಎಂದರೆ ಅಕೋಲಾದ ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ ಅಂಗಡಿಗಳಲ್ಲಿ ಕೆಲವು ಮಹಿಳೆಯರನ್ನು ಕರೆಸಿಕೊಂಡು ಅವರ ಲೈಂಗಿಕ ಶೋಷಣೆ ಮಾಡುವುದು, ಬೆದರಿಕೆ ಹಾಕುವುದು ಮತ್ತು ಮಾನಸಿಕ ಕಿರುಕುಳ ನೀಡುವಂತಹ ಕೃತ್ಯಗಳು ನಡೆದಿವೆ. ಇದರ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದು, ಕೆಲವರನ್ನು ಬಂಧಿಸಲಾಗಿದೆ.) ಇಂತಹ ಪ್ರವೃತ್ತಿಗಳಿಗೆ ಬೆಂಬಲ ನೀಡುವವರಿಗೆ ಭವಿಷ್ಯದಲ್ಲಿ ಸಹಾಯ ಮಾಡುವುದನ್ನು ನಿಲ್ಲಿಸಬೇಕು.
೩. ಅಕೋಲಾದಲ್ಲಿರುವ ‘ಶಿವಾಜಿ ಪೇಟೆ’ ಎಂಬ ಹೆಸರು ‘ಛತ್ರಪತಿ ಶಿವಾಜಿ ಪೇಟೆ’ ಎಂದು ಬದಲಾಗಲೇಬೇಕು; ವಾಶಿಮ್ ಅನ್ನು ‘ವತ್ಸಗುಲ್ಮ’ ಮತ್ತು ಮಂಗಳೂರು ಪೀರ್ ಅನ್ನು ‘ಮಂಗಳೂರು ನಾಥ್’ ಎಂದು ಮರುನಾಮಕರಣ ಮಾಡುವ ಮೂಲಕ ಸ್ವಾಭಿಮಾನವನ್ನು ಜಾಗೃತವಾಗಿಡಬೇಕು.
೪. ದೇವತೆಗಳ ವಿಡಂಬನೆ, ಮೂರ್ತಿ ಧ್ವಂಸಗೊಳಿಸುವುದು, ಮತಾಂತರ ಅಥವಾ ದೇವಸ್ಥಾನಗಳ ಮೇಲಿನ ದಾಳಿಗಳ ವಿರುದ್ಧ ಪ್ರತಿಯೊಂದು ಹಳ್ಳಿಗಳಲ್ಲೂ ಈಗ ‘ಗ್ರಾಮ ರಕ್ಷಣಾ ದಳ’ಗಳ ಸ್ಥಾಪನೆಯಾಗುವುದು ಅತ್ಯಗತ್ಯವಾಗಿದೆ.
‘ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಸಂಬೋಧಿಸಿದ ಕಾರಣಕ್ಕಾಗಿ ಕಾಮ್ರೇಡ್ ಗೋವಿಂದ ಪಾನಸರೆ ಅವರ ‘ಶಿವಾಜಿ ಕೋಣ ಹೋತಾ?’ (ಶಿವಾಜಿ ಯಾರಾಗಿದ್ದನು?) ಎಂಬ ಪುಸ್ತಕವನ್ನು ನಿಷೇಧಿಸಬೇಕೆಂದು ಶ್ರೀ ಸುನೀಲ್ ಘನವಟ್ ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಹಿಂದೂಗಳ ಭೂಮಿಯಲ್ಲಿ ಹಿಂದೂಗಳ ಸಭೆಗೇ ವಿರೋಧ ವ್ಯಕ್ತವಾಗುವುದು ದುರ್ದೈವದ ಸಂಗತಿ! – ಸುನೀಲ್ ಘನವಟ್, ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಯೋಜಕರು, ಹಿಂದೂ ಜನಜಾಗೃತಿ ಸಮಿತಿಅಕೋಲಾದಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಸುನೀಲ್ ಘನವಟ್ ಅವರು, ಹಿಂದೂಗಳ ಭೂಮಿಯಲ್ಲಿಯೇ ಹಿಂದೂಗಳ ಸಭೆಗೆ ಅಕೋಲಾದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಈ ದೇಶ ಹಿಂದೂಗಳದ್ದು! ಈ ಭೂಮಿ ಹಿಂದೂಗಳದ್ದು! ಈ ಮಹಾರಾಷ್ಟ್ರ ಛತ್ರಪತಿಗಳದ್ದು! ಹಾಗಾಗಿ ಇಲ್ಲಿ ಸಭೆ ನಡೆದೇ ನಡೆಯುತ್ತದೆ. ಒಂದು ವೇಳೆ ಹಿಂದೂಗಳ ಭೂಮಿಯಲ್ಲಿ ಸಭೆ ನಡೆಸಬಾರದು ಎಂದಾದರೆ, ನಾವು ಪಾಕಿಸ್ತಾನಕ್ಕೆ ಹೋಗಿ ಸಭೆ ನಡೆಸಬೇಕೇ? ಎಂದು ಸುನೀಲ್ ಅವರು ಪ್ರಶ್ನಿಸಿದರು. |
ಇಂದಿನ ಹಿಂದೂ ಹೆದರುವವನಲ್ಲ, ಹೆದರಿಸುವವನಾಗಬೇಕು! – ಟಿ. ರಾಜಾಸಿಂಗ್, ಶಾಸಕರು

೧. ವಿದರ್ಭದ ನರನಾಳಾ ಮತ್ತು ನರಸಿಂಹಗಡ ಕೋಟೆಗಳ ಮೇಲಿನ ಅಕ್ರಮ ನಿರ್ಮಾಣ ಮತ್ತು ‘ಲ್ಯಾಂಡ್ ಜಿಹಾದ್’ ಅನ್ನು ತಡೆಯಲೇಬೇಕು. ಯಾವುದಾದರೊಬ್ಬ ಮಾವಳ (ಸೈನಿಕ) ಅಲ್ಲಿ ಭಗವಾ ಧ್ವಜವನ್ನು ಹಾರಿಸಲು ಹೋದರೆ, ಅವನ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಪುರಾತತ್ವ ಇಲಾಖೆಯು ಕ್ರಮ ಕೈಗೊಳ್ಳದಿದ್ದರೆ, ಮಾವಳರು(ಸೈನಿಕರು) ಕೆಲಸ ಮಾಡಬೇಕಾಗುತ್ತದೆ.
೨. ನಾವು ಭಾರತದಲ್ಲಿ ಒಂದು ಸಂಕಲ್ಪದೊಂದಿಗೆ ಮುಂದೆ ಸಾಗುತ್ತಿದ್ದೇವೆ, ಅದೇನೆಂದರೆ ನಿದ್ರಿಸುತ್ತಿರುವ ಹಿಂದೂಗಳನ್ನು ಜಾಗೃತಗೊಳಿಸುವುದು ಮತ್ತು ಜಾತಿ-ಪಂಥಗಳಲ್ಲಿ ಹಂಚಿ ಹೋಗಿರುವ ಹಿಂದೂಗಳನ್ನು ಸಂಘಟಿಸುವುದು. ಹಿಂದೂಗಳು ವಿಭಜನೆಯಾಗಬಾರದು ಎನ್ನುವ ಕಾರಣಕ್ಕಾಗಿ ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡುವುದು ನಮ್ಮ ಸಂಕಲ್ಪವಾಗಿದೆ. ಭಾರತವನ್ನು ಅಧಿಕೃತವಾಗಿ ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವ ಸಮಯ ಬಂದಿದೆ.
೩. ನಾವು ಮಹಾರಾಷ್ಟ್ರದ ಪವಿತ್ರ ಭೂಮಿಯಲ್ಲಿ ಜನ್ಮ ತಾಳಿದ್ದೇವೆ ಎಂಬ ಬಗ್ಗೆ ನಮಗೆ ಅಭಿಮಾನವಿರಬೇಕು; ಆದರೆ ನಮ್ಮ ದುರ್ದೈವವೆಂದರೆ ನಾವು ಒಂದು ಜಾತ್ಯತೀತ ರಾಜ್ಯದಲ್ಲಿದ್ದೇವೆ. ಶ್ರೀರಾಮನ ಶೋಭಾಯಾತ್ರೆಯ ಸಮಯದಲ್ಲಿ ಹಿಂದೂಗಳನ್ನು ಹೆದರಿಸಲಾಗುತ್ತದೆ. ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತದೆ. ತೆಲಂಗಾಣ ಪೊಲೀಸರು ನನ್ನ ಮೇಲೆ ೧೮೦ ಪ್ರಕರಣಗಳನ್ನು ದಾಖಲಿಸಿದ್ದಾರೆ; ಆದರೆ ನಾನು ಹೆದರುವುದಿಲ್ಲ; ಏಕೆಂದರೆ ನಾವು ಛತ್ರಪತಿ ಶಿವರಾಯರು ಮತ್ತು ಛತ್ರಪತಿ ಸಂಭಾಜಿ ಮಹಾರಾಜರ ಮಾವಳರಾಗಿದ್ದೇವೆ.(ಸೈನಿಕರಾಗಿದ್ದೇವೆ)
೪. ‘ಲವ್ ಜಿಹಾದ್’ ಮತ್ತು ಗೋಹತ್ಯೆಯ ಹೆಚ್ಚುತ್ತಿರುವ ಘಟನೆಗಳು ವಿಷಾದನೀಯವಾಗಿವೆ. ಗೋಮಾತೆಗೆ ‘ರಾಜ್ಯಮಾತೆ’ ಸ್ಥಾನಮಾನ ಸಿಕ್ಕಿದ್ದರೂ ಸಹ ಕಳ್ಳಸಾಗಾಣಿಕೆ ನಡೆಯುತ್ತಿರುವುದು ಆಡಳಿತದ ವೈಫಲ್ಯವಾಗಿದೆ.
೫. ಮತಾಂತರದ ಹಿನ್ನೆಲೆಯಲ್ಲಿ ಹಿಂದೂಗಳು ಸಂಕಲ್ಪ ಮಾಡಬೇಕು, ‘ನಾನು ಮಹಾರಾಷ್ಟ್ರದ ಕಟ್ಟಕಡೆಯ ಹಿಂದೂವನ್ನೂ ಸಹ ಜಾಗೃತಗೊಳಿಸುತ್ತೇನೆ’.
೬. ಸಭೆಗೆ ಸಹಕರಿಸಿದ ವ್ಯಾಪಾರಿಗಳಿಗೆ ಕೆಲವು ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ. ಅಂತಹ ವ್ಯಾಪಾರಿಗಳಿಗೆ ನಾನು ಹೇಳುವುದೇನೆಂದರೆ, ‘ಹೆದರಬೇಡಿ, ದೂರು ನೀಡಿ.’ ಇಂದಿನ ಹಿಂದೂ ಹೆದರುವವನಲ್ಲ, ಹೆದರಿಸುವವನಾಗಬೇಕು.
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಬಗ್ಗೆ ಗೌರವೋದ್ಗಾರ!ಹಿಂದೂ ಜನಜಾಗೃತಿ ಸಮಿತಿಯು ಅನೇಕ ಅಡೆತಡೆಗಳನ್ನು ಎದುರಿಸುತ್ತಾ ದೇಶವನ್ನು ಉಳಿಸಲು ಹಗಲಿರುಳು ಶ್ರಮಿಸುತ್ತಿದೆ. – ಶಾಸಕ ಟಿ. ರಾಜಾಸಿಂಗ್ |
‘ಟಿಪ್ಪು ಸುಲ್ತಾನ್’ ಬದಲಿಗೆ ಮಹಾನಗರ ಪಾಲಿಕೆಯ ಸಭಾಂಗಣಕ್ಕೆ ‘ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ’ ಎಂದು ನಾಮಕರಣ ಮಾಡಲು ಆಗ್ರಹ!

ಅಕೋಲಾ ಮಹಾನಗರ ಪಾಲಿಕೆಯ ಯಾವ ಸಭಾಂಗಣಕ್ಕೆ ‘ಟಿಪ್ಪು ಸುಲ್ತಾನ್’ ಹೆಸರನ್ನು ಇಡಲಾಗಿದೆಯೋ, ಅದನ್ನು ತಕ್ಷಣವೇ ಬದಲಾಯಿಸಿ ‘ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ’ ಎಂದು ನಾಮಕರಣ ಮಾಡಬೇಕೆಂದು ಟಿ. ರಾಜಾಸಿಂಗ್ ಅವರು ಒತ್ತಾಯಿಸಿದರು.
ಬದುಕಿರುವವರೆಗೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಧ್ವನಿ ಎತ್ತುತ್ತೇನೆ!
ಮೊಬೈಲ್ ಫ್ಲ್ಯಾಶ್ ಲೈಟ್ ಆನ್ ಮಾಡಿಸಿ ನೆರೆದಿದ್ದವರಿಂದ ಮಾಡಿಸಿದ ಸಂಕಲ್ಪ!

ಟಿ. ರಾಜಾಸಿಂಗ್ ಅವರು ಹಿಂದೂಗಳಿಗೆ ಮೊಬೈಲ್ ಫೋನ್‌ನ ಫ್ಲ್ಯಾಶ್‌ಲೈಟ್ ಬೆಳಗಿಸಲು ಹೇಳಿ ನೆರೆದವರಿಂದ ಪ್ರತಿಜ್ಞೆ ಮಾಡಿಸಿಕೊಂಡರು, ‘‘ನಾನು ಬದುಕಿರುವವರೆಗೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಧ್ವನಿ ಎತ್ತುತ್ತಲೇ ಇರುತ್ತೇನೆ. ಗೋಮಾತೆಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತೇನೆ. ಲವ್ ಜಿಹಾದಿಗಳು ಮತ್ತು ಮತಾಂತರ ಮಾಡುವವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡುತ್ತೇನೆ. ನಾನು ಹಿಂದೂ ಧರ್ಮದ ರಕ್ಷಣೆಗಾಗಿ ಕಾರ್ಯ ಮಾಡುತ್ತೇನೆ.’’
‘‘ನಾನು ಛತ್ರಪತಿ ಶಿವಾಜಿ ಮಹಾರಾಜರ ಮಾವಳನಾಗಿದ್ದು (ಸೈನಿಕನಾಗಿದ್ದು), ಕಟ್ಟಕಡೆಯ ಹಿಂದೂವಿನ ರಕ್ಷಣೆಗಾಗಿ ಕಟಿಬದ್ಧನಾಗಿದ್ದೇನೆ’’ ಎಂಬ ಪ್ರತಿಜ್ಞೆಯನ್ನು ನೆರೆದವರಿಂದ ಮಾಡಿಸಿಕೊಂಡರು.
ಸಭೆ ನಡೆದದ್ದು ಹೀಗೆ!
ಪ್ರಾರಂಭದಲ್ಲಿ ಶಂಖನಾದದ ನಂತರ ಶಾಸಕ ಟಿ. ರಾಜಾಸಿಂಗ್, ಸನಾತನ ಸಂಸ್ಥೆಯ ಧರ್ಮಪ್ರಚಾರಕಿ ಸದ್ಗುರು ಸ್ವಾತಿ ಖಾಡಯೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ರಾಜ್ಯ ಸಂಘಟಕ ಶ್ರೀ ಸುನೀಲ್ ಘನವಟ್ ಅವರು ದೀಪಪ್ರಜ್ವಲನೆ ಮಾಡಿದರು. ಟಿ. ರಾಜಾಸಿಂಗ್ ಅವರು ಛತ್ರಪತಿ ಶಿವರಾಯರ ಮೂರ್ತಿಗೆ ಪುಷ್ಪಹಾರ ಅರ್ಪಿಸಿದರು. ಪುರೋಹಿತರ ವೇದಮಂತ್ರ ಪಠಣದಿಂದ ವಾತಾವರಣವು ಚೈತನ್ಯಮಯವಾಯಿತು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚೈತನ್ಯ ತಾಗಡೆ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಂಯೋಜಕರಾದ ಶ್ರೀ. ಉದಯ ಮಹಾ ಅವರು ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯ ಪರಿಚಯ ಮಾಡಿಕೊಟ್ಟರು.
| ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯಾಗಿ ೧೦೦ ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಘಕ್ಕೆ ಕೃತಜ್ಞತಾಪೂರ್ವಕ ಗೌರವ ಮತ್ತು ಅಭಿನಂದನೆಗಳನ್ನು ಸಲ್ಲಿಸಲಾಯಿತು. |
ಸಂತರ ವಂದನೀಯ ಉಪಸ್ಥಿತಿ!
ಶ್ರೀ ಈಶ್ವರದಾಸ ಮಹಾರಾಜ, ಪೂಜ್ಯ ಬಾಲಕದಾಸ ಮಹಾರಾಜ ಮತ್ತು ಸನಾತನ ಸಂಸ್ಥೆಯ ಪೂಜ್ಯ ಅಶೋಕ ಪಾತ್ರಿಕರ

ಉಪಸ್ಥಿತರಿದ್ದ ಗಣ್ಯರು
ಭಾಜಪ ಸಂಸದ ಅನುಪ ಧೋತ್ರೆ, ಭಾಜಪ ಶಾಸಕ ರಣಧೀರ ಸಾವರಕರ, ಮಹಾಪೌರರಾದ ಶಾರದಾ ಖೇಡಕರ, ಉಪಮಹಾಪೌರರಾದ ಅಮೋಲ ಗೋಗೇ, ಮಾಜಿ ಮಹಾಪೌರರಾದ ಸುಮನ ಗಾವಂಡೆ, ಮಹಾನಗರ ಪಾಲಿಕೆಯ ಸಭಾ ನಾಯಕ ಪವನ ಮಹಲ್ಲೆ, ಶಿವಸೇನೆಯ ನಗರ ಪ್ರಮುಖ ರಾಜೇಶ ಮಿಶ್ರಾ ಮತ್ತು ಉಪಜಿಲ್ಲಾ ಪ್ರಮುಖ ಯೋಗೇಶ ಅಗರವಾಲ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀ. ರಾಜು ಮಂಜುಳಕರ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ. ಧನಂಜಯ ಮೆಹಸರೆ ಹಾಗೂ ಶ್ರೀ. ವಿಜಯ ಇಂಗಳೆ.
ಕ್ಷಣಚಿತ್ರಗಳು
೧. ಬಾಲಸಂಸ್ಕಾರ ವರ್ಗದ ಮೂಲಕ ಬಾಲ ಸಾಧಕರು ಘೋಷಣೆಗಳನ್ನು ಕೂಗುತ್ತಿದ್ದರು. ಸಭೆಯಲ್ಲಿದ್ದವರು ಅದನ್ನು ಮೊಬೈಲ್ ಗಳಲ್ಲಿ ಚಿತ್ರೀಕರಿಸಿ ಅವರಿಗೆ ಉತ್ತಮ ಪ್ರೋತ್ಸಾಹ ನೀಡಿದರು.
೨. ಛತ್ತೀಸಗಢದಿಂದ ೨೫ ಹಿಂದೂ ಯುವಕರು ಬಂದಿದ್ದರು.
೩. ಮಂಟಪದ ವ್ಯವಸ್ಥೆಯು ಅತ್ಯಂತ ಸುಸಜ್ಜಿತವಾಗಿದ್ದರಿಂದ ನಮಗೆ ಕೆಲಸದ ಒತ್ತಡ ಉಂಟಾಗಲಿಲ್ಲ ಎಂದು ಪೊಲೀಸರು ತಿಳಿಸಿದರು. ಸಭೆಗೆ ಅನುಮತಿ ಪಡೆಯುವ ಹಂತದಿಂದ ಹಿಡಿದು ಸಭೆಯ ಅಂತ್ಯದವರೆಗೆ ಪೊಲೀಸರ ಸಂಪೂರ್ಣ ಸಹಕಾರ ಲಭಿಸಿತು.
ನೇರ ಪ್ರಸಾರದ ಮೂಲಕ ಸಭೆಯ ಲಾಭ!‘ಟಿವಿ ೯’ ಈ ಇಲೆಕ್ಟ್ರಾನಿಕ್ ಮೀಡಿಯಾ (ಸುದ್ದಿವಾಹಿನಿಯು) ಈ ಸಭೆಯನ್ನು ಅತಿ ಹೆಚ್ಚು ಸಮಯ, ಅಂದರೆ ೪೫ ನಿಮಿಷಗಳ ಕಾಲ ನೇರ ಪ್ರಸಾರ ಮಾಡಿತು. ಅನ್ಯ ಹಿಂದೂಗಳಿಗೆ ಈ ಪ್ರಸಾರದ ಲಾಭವಾಯಿತು. |
ಅಕೋಲಾದಲ್ಲಿ ನಡೆದ ಈ ಸಭೆಯು ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಯಶಸ್ವಿಯಾಗಿದೆ! – ಉದಯ ಮಹಾ, ಸಂಯೋಜಕರು, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ, ಅಕೋಲಾ
‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯ ಅಡಿಯಲ್ಲಿ ಆಯೋಜಿಸಲಾದ ಹಿಂದೂ ರಾಷ್ಟ್ರ-ಜಾಗೃತಿ ಸಭೆಗಾಗಿ ಧರ್ಮಪ್ರೇಮಿಗಳು ವ್ಯಾಪಕ ಪ್ರಚಾರ ಮಾಡಿದರು. ಇದರ ಪರಿಣಾಮವಾಗಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಪ್ರೇಮಿಗಳು ಆಗಮಿಸಿದರು. ಸಭೆಗೆ ಕೆಲವರು ವಿರೋಧ ವ್ಯಕ್ತಪಡಿಸಿ ‘ನಗರದ ಶಾಂತಿ ಹಾಳಾಗುತ್ತದೆ’ ಎಂದು ಆರೋಪಿಸಿದರು ಹಾಗೂ ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ಹೇರಿದರು. ಆದರೆ ಎಲ್ಲರೂ ಒಗ್ಗೂಡಿ ಪೊಲೀಸರಿಗೆ ಸಭೆಯ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟು ಸಭೆಯ ಅನುಮತಿ ಪಡೆದರು. ಸಭೆಯ ದಿನದಂದು ಮುಂಜಾನೆಯಿಂದಲೇ ಜೋರಾಗಿ ಗಾಳಿ ಬೀಸುತ್ತಿದ್ದರಿಂದ ವೇದಿಕೆಯ ಮೇಲೆ ಫ್ಲೆಕ್ಸ್ (ಬ್ಯಾನರ್) ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ. ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯ ಅಶೋಕ ಪಾತ್ರಿಕರ ಅವರು ಹೇಳಿದಂತೆ ನಾಮಜಪಾದಿ ಉಪಾಯಗಳನ್ನು ಮಾಡಿದ ನಂತರ ಗಾಳಿಯ ವೇಗ ಕಡಿಮೆಯಾಯಿತು. ಸಭೆ ಮುಗಿಯುವವರೆಗೆ ಗಾಳಿಯಿಂದ ಯಾವುದೇ ಅಡಚಣೆ ಉಂಟಾಗಲಿಲ್ಲ. ಸಭೆಗೆ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಧರ್ಮಪ್ರೇಮಿಗಳ ಬೃಹತ್ ಉಪಸ್ಥಿತಿಯಿತ್ತು. ಇಂತಹ ಸಭೆಯ ಸಂಯೋಜಕನಾಗುವ ಭಾಗ್ಯ ಲಭಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.
ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಆಯೋಜಿಸಿದ ಮೊದಲ ಸಭೆ ಇದಾಗಿತ್ತು. ಇದರಲ್ಲಿ ಭಾಗವಹಿಸಿದ ಎಲ್ಲರ ಮನಸ್ಸುಗಳು ಒಂದಾಗಿದ್ದರಿಂದ ಸಮನ್ವಯವು ಅತ್ಯುತ್ತಮವಾಗಿ ಸಭೆಯು ಯಾವುದೇ ಅಡೆತಡೆಗಳಿಲ್ಲದೆ ನಿರ್ವಿಘ್ನವಾಗಿ ನೆರವೇರಿತು.
ಈಶ್ವರೀ ಕಾರ್ಯವು ಹೇಗೆ ಪೂರ್ಣಗೊಳ್ಳುತ್ತದೆ ಎಂಬುದಕ್ಕೆ ಸಾಕ್ಷಿ ದೊರೆಯಿತು! – ಯೋಗೇಶ ಅಗರವಾಲ್, ಸಹ-ಸಂಯೋಜಕರು, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಸಭೆಯ ನಿಯೋಜನೆಯಲ್ಲಿ ಅನೇಕ ಅಡೆತಡೆಗಳು ಎದುರಾದವು; ಆದರೆ ಆ ಅಡೆತಡೆಗಳು ದೂರ ಕೂಡ ಆದವು. ‘ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆಯೇ?’ ಎಂಬ ಆತಂಕವಿತ್ತು; ಆದರೆ ಶ್ರದ್ಧೆಯಿಟ್ಟರೆ ಭಗವತ್ ಕಾರ್ಯವು ಹೇಗೆ ಪೂರ್ಣಗೊಳ್ಳುತ್ತದೆ ಎಂಬುದನ್ನು ನಮಗೆ ಅನುಭವಿಸಲು ಸಾಧ್ಯವಾಯಿತು. ವಿಪರೀತ ಜನಸಂದಣಿ ಇದ್ದರೂ ಸಹ ಸಭೆಯು ಅತ್ಯಂತ ಶಾಂತಿಯುತವಾಗಿ ನಡೆಯಿತು. ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಯಾವುದೇ ಫಲಾಪೇಕ್ಷೆಯಿಲ್ಲದೆ (ಉಚಿತವಾಗಿ) ಸಭೆಯಲ್ಲಿ ಪಾಲ್ಗೊಂಡು ಪ್ರಚಾರ ಮಾಡಿದರು. |
ಸಭೆಯ ಹಿಂದಿನ ದಿನ ಮತ್ತು ಮರುದಿನ ಕ್ರಮವಾಗಿ ೪೬ ಡಿಗ್ರಿ ಮತ್ತು ೪೫ ಡಿಗ್ರಿ ತಾಪಮಾನವಿತ್ತು; ಆದರೆ ಸಭೆಯ ದಿನದಂದು ತಾಪಮಾನವು ೪೨ ಡಿಗ್ರಿ ಇದ್ದುದರಿಂದ ಬಿಸಿಲಿನ ತಾಪದ ತೊಂದರೆ ಕಡಿಮೆಯಾಯಿತು. ಪ್ರಚಾರದ ಅವಧಿಯಲ್ಲಿ ತೀವ್ರವಾದ ಬಿಸಿಲಿದ್ದರೂ ಕೂಡ ಸಾಧಕರಿಗೆ ಯಾವುದೇ ತೊಂದರೆಯಾಗಲಿಲ್ಲ.
ಅನುಭೂತಿಪ್ರಾರ್ಥನೆ ಮಾಡಿದಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸೂಕ್ಷ್ಮ ರೂಪದಲ್ಲಿ ಸಭಾಸ್ಥಳಕ್ಕೆ ಕರೆದೊಯ್ಯುವುದು, ಅವರ ಅಸ್ತಿತ್ವದಿಂದಾಗಿ ಕೆಟ್ಟ ಶಕ್ತಿಗಳು ಓಡಿಹೋಗುವುದು ಮತ್ತು ಸಭಾಸ್ಥಳದಲ್ಲಿ ಚೈತನ್ಯಮಯ ವಾತಾವರಣ ನಿರ್ಮಾಣವಾಗಿರುವುದು ಕಂಡುಬಂದಿತು.![]() “ಕೆಲವು ಕಾರಣಗಳಿಂದಾಗಿ ನನಗೆ ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಲ್ಲಿ, ‘ನನಗೆ ಈ ಸಭೆಯನ್ನು ಸೂಕ್ಷ್ಮ ರೂಪದಲ್ಲಿ ಅನುಭವಿಸಲು ಸಾಧ್ಯವಾಗಲಿ’ ಎಂದು ಪ್ರಾರ್ಥಿಸಿದೆ. ಆಗ ಅವರು ನನ್ನ ಕೈ ಹಿಡಿದು ನನ್ನನ್ನು ಸೂಕ್ಷ್ಮ ರೂಪದಲ್ಲಿ ವೇದಿಕೆಯ ಸ್ಥಳಕ್ಕೆ ಕರೆದೊಯ್ದರು. ವೇದಮಂತ್ರ ಪಠಣದ ಸಮಯದಲ್ಲಿ, ದೇವತೆಗಳು ಆಕಾಶದಿಂದ ಮೂವರೂ ವಕ್ತಾರರ ಮೇಲೆ ಪುಷ್ಪವೃಷ್ಟಿ ಮಾಡುತ್ತಿರುವುದು ಕಾಣಿಸಿತು. ಗುರುದೇವರ ಅಸ್ತಿತ್ವದಿಂದಾಗಿ ಕೆಟ್ಟ ಶಕ್ತಿಗಳು ಅಲ್ಲಿಂದ ಓಡಿಹೋದವು. ಅವು ಸಭಾಸ್ಥಳದ ಹೊರಗೆ ನಿಂತು ವಕ್ತಾರರ ಮಾರ್ಗದರ್ಶನವನ್ನು ಕೇಳುತ್ತಿದ್ದವು. ವಕ್ತಾರರ ಸುತ್ತಲೂ ಹಳದಿ ಬಣ್ಣದ ವಲಯ ನಿರ್ಮಾಣವಾಗಿತ್ತು. ಸಭಾಸ್ಥಳದಲ್ಲಿ ಚೈತನ್ಯಮಯ ವಾತಾವರಣ ನಿರ್ಮಾಣವಾಗಿತ್ತು ಮತ್ತು ಧರ್ಮಾಭಿಮಾನಿಗಳಲ್ಲಿ ಹೊಸ ಉತ್ಸಾಹ ಕಂಡುಬಂದಿತು. ನಂತರ ಗುರುದೇವರು ಪುನಃ ನನ್ನನ್ನು ಆಕಾಶ ಮಾರ್ಗದ ಮೂಲಕ ಮನೆಗೆ ತಂದು ಬಿಟ್ಟರು. ಅವರು ನೀಡಿದ ಈ ಅನುಭೂತಿಗಾಗಿ ಅವರ ಚರಣಗಳಲ್ಲಿ ನಾನು ಕೃತಜ್ಞಳಾಗಿದ್ದೇನೆ. – ಸೌ. ನಂದಾ ಖಂಡಾಗಳೆ (ಆಧ್ಯಾತ್ಮಿಕ ಮಟ್ಟ ಶೇ. ೬೩), ನಾಗಪೂರ |


ಸಭೆಯಿಂದ ಪ್ರಭಾವಿತರಾದ ಧರ್ಮಾಭಿಮಾನಿಗಳ ಮಾತು
೧. ಎಲ್ಲಾ ವಕ್ತಾರರ ಭಾಷಣಗಳು ಕಾನೂನಿನ ಚೌಕಟ್ಟಿನಲ್ಲೇ ಇದ್ದವು. ಇಂತಹ ಸಭೆಗಳು ದೇಶಾದ್ಯಂತ ನಡೆಯಬೇಕು. – ಶ್ರೀ ಮನೋಹರ ಕಳಲಿಯಾ, ವ್ಯಾಪಾರಿ ಸಂಘಟನೆಯ ಮಾಜಿ ಅಧ್ಯಕ್ಷರು, ಚಂದ್ರಾಪುರ.
೨. ಅಕೋಲಾದ ಹಿಂದೂ ಸಮಾಜವು ರಾಷ್ಟ್ರಕ್ಕಾಗಿ ಜಾಗೃತವಾಗಿದೆ. ಈ ಕಾರ್ಯಕ್ಕಾಗಿ ಪ್ರತಿಯೊಬ್ಬರೂ ತನು, ಮನ ಮತ್ತು ಧನವನ್ನು ಅರ್ಪಿಸಿ ಸೇವೆ ಸಲ್ಲಿಸಬೇಕು. – ಶ್ರೀ. ಹೇಮೇಂದ್ರ ರಾಜಗುರು, ಆಲ್ ಇಂಡಿಯಾ ಗುಜರಾತಿ ಸಮಾಜದ ಉಪಾಧ್ಯಕ್ಷರು (ಮಹಾರಾಷ್ಟ್ರ ಮತ್ತು ಗೋವಾ ರಾಜ್ಯ).
೩. ಮದರಸಾಗಳು ಮತ್ತು ಮಸೀದಿಗಳಿಗೆ ನೀಡಲಾಗುವ ಅನುದಾನವನ್ನು ಕಾಯಂ ಆಗಿ ನಿಲ್ಲಿಸಬೇಕು. ಪ್ರತಿಯೊಬ್ಬ ಭಯೋತ್ಪಾದಕನೂ ಮುಸಲ್ಮಾನೇ ಯಾಕಾಗಿರುತ್ತಾನೆ? ಎಂಬುದು ನಿರಂತರವಾದ ಪ್ರಶ್ನೆಯಾಗಿದೆ. ಮದರಸಾಗಳು ಭಯೋತ್ಪಾದಕರ ಕಾರ್ಖಾನೆಗಳಾಗಿವೆ ಎಂಬುದು ಸಾಬೀತಾಗಿದೆ. ಆದ್ದರಿಂದ ಅವುಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. – ಶ್ರೀ. ಚಾರುದತ್ತ ಗೋವಿಂದರಾವ ಟಿಕಲೆ (ಭಾರದ್ವಾಜ), ಸ್ವರಾಜ ಪೇಟೆ, ಅಕೋಲಾ.
ಇಂತಹ ಧರ್ಮನಿಷ್ಠ ನ್ಯಾಯವಾದಿಗಳು ಎಲ್ಲೆಡೆ ಇರಬೇಕು!

೧. ಸಭೆಗೂ ಮುನ್ನ ‘ಅಕೋಲಾ ಬಾರ್ ಅಸೋಸಿಯೇಷನ್’ ನ್ಯಾಯವಾದಿಗಳಿಂದ ‘ಸಂವಾದ ಸಭೆ’ಯಲ್ಲಿ ಅಭೂತಪೂರ್ವ ಸಹಭಾಗ!
ಸಭೆಗೂ ಮೊದಲು ಶ್ರೀ ಸುನಿಲ್ ಘನವಟ್ ಅವರ ಪ್ರಮುಖ ಉಪಸ್ಥಿತಿಯಲ್ಲಿ ‘ಅಕೋಲಾ ಬಾರ್ ಅಸೋಸಿಯೇಷನ್’ನ ನ್ಯಾಯವಾದಿಗಳೊಂದಿಗೆ ಒಂದು ಸಂವಾದ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ, ಹಿಂದೂಗಳ ರಕ್ಷಣೆ, ಹಿಂದೂ ಕಾರ್ಯಕರ್ತರ ಸುರಕ್ಷತೆ ಹಾಗೂ ಮತಾಂಧರ ವಿರುದ್ಧದ ಕಾನೂನು ಹೋರಾಟಕ್ಕಾಗಿ ಒಂದು ‘ಕಾನೂನು ತಜ್ಞರ ತಂಡ’ವನ್ನು ಸಿದ್ಧಪಡಿಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಎಲ್ಲಾ ನ್ಯಾಯವಾದಿಗಳು ಅತ್ಯಂತ ಉತ್ಸಾಹದಿಂದ ಈ ಕಾರ್ಯಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿದರು.
೨. ‘ರಾಷ್ಟ್ರಭಕ್ತ ನ್ಯಾಯವಾದಿಗಳ ಸಮಿತಿ’ಯ ೧೦೦ಕ್ಕೂ ಹೆಚ್ಚು ನ್ಯಾಯವಾದಿಗಳ ಪರವಾಗಿ ರಾಜಾಸಿಂಗ್ ಅವರಿಗೆ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಕಾನೂನು ನೆರವಿನ ಭರವಸೆಯ ಪತ್ರವನ್ನು ನೀಡಲಾಯಿತು!
ನ್ಯಾಯವಾದಿ ಮುಕುಂದ ಜಾಲನೇಕರ್, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ನ್ಯಾಯವಾದಿ ಪಪ್ಪು ಮೋರವಾಲ, ನ್ಯಾಯವಾದಿ ಅನಿರುದ್ಧ ದೇಶಪಾಂಡೆ, ನ್ಯಾಯವಾದಿ ಆನಂದ ತಾಯಡೆ, ನ್ಯಾಯವಾದಿ ರಾಹುಲ್ ಚುಟಕೆ, ನ್ಯಾಯವಾದಿ ರವಿ ಜುಂಜಾಳೇಕರ, ನ್ಯಾಯವಾದಿ ರಶ್ಮಿ ಯಾದವ ಮತ್ತು ನ್ಯಾಯವಾದಿ (ಶ್ರೀಮತಿ) ಶ್ರುತಿ ಭಟ್.
ಬೇಟಿ ಸುರಕ್ಷಿತ, ರಾಷ್ಟ್ರ ಸುರಕ್ಷಿತ’ ಅಭಿಯಾನಕ್ಕೆ ಚಾಲನೆ!

ಇಂದು ಹೆಣ್ಣುಮಕ್ಕಳು ಮತ್ತು ಮಹಿಳೆಯರು ಅಸುರಕ್ಷಿತರಾಗಿದ್ದಾರೆ. ಪ್ರತಿದಿನ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ-ಅತ್ಯಾಚಾರದ ಘಟನೆಗಳು ಬೆಳಕಿಗೆ ಬರುತ್ತಿವೆ, ಅಪಹರಿಸಲಾಗುತ್ತಿದೆ. ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ನಾಪತ್ತೆಯಾಗುತ್ತಿರುವ ಹೆಣ್ಣುಮಕ್ಕಳ ರಕ್ಷಣೆಯ ಉದ್ದೇಶದಿಂದ ‘ಬೇಟಿ ಸುರಕ್ಷಿತ, ರಾಷ್ಟ್ರ ಸುರಕ್ಷಿತ’ (ಮಗಳು ಸುರಕ್ಷಿತವಾಗಿದ್ದರೆ ರಾಷ್ಟ್ರ ಸುರಕ್ಷಿತ) ಎಂಬ ಅಭಿಯಾನವನ್ನು ನಡೆಸಲು ನಿರ್ಧರಿಸಲಾಗಿದೆ. ಈ ಅಭಿಯಾನಕ್ಕೆ ಟಿ. ರಾಜಾಸಿಂಗ್ ಅವರು ಚಾಲನೆ ನೀಡಿದರು. ಶೀಘ್ರದಲ್ಲೇ ಈ ಅಭಿಯಾನದ ಕಾರ್ಯವೈಖರಿ ಆರಂಭವಾಗಲಿದೆ.
ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸದಸ್ಯರಿಗೆ ಸತ್ಕಾರ!

ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸದಸ್ಯರನ್ನು ಟಿ. ರಾಜಾಸಿಂಗ ಅವರು ಸತ್ಕರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಸಂಯೋಜಕರಾದ ಶ್ರೀ. ಉದಯ ಮಹಾ, ಶಿವಸೇನೆಯ ಶ್ರೀ. ಯೋಗೇಶ ಅಗರವಾಲ್, ಉದ್ಯಮಿ ಶ್ರೀ. ಸಂಜಯ ಠಾಕೂರ, ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ಸದಸ್ಯರಾದ ಶ್ರೀ. ಅರವಿಂದ ದೇಠೆ ಮತ್ತು ಶ್ರೀ. ಪ್ರಮೋದ ಅಗ್ನಿಹೋತ್ರಿ, ಶ್ರೀ. ನಂದಕಿಶೋರ ಮೆಹರೆ,
ಶ್ರೀ. ಶ್ರೀರಾಮ ಪಾಂಡೆ, ಧರ್ಮಪ್ರೇಮಿ ಶ್ರೀ. ಧನಂಜಯ ಮೆಹಸರೆ, ವಿಶ್ವ ಹಿಂದೂ ಪರಿಷತ್ತಿನ ಶ್ರೀ. ರಾಜು ಮಂಜುಳ್ಕರ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶ್ರೀಕಾಂತ ಪಿಸೋಳಕರ್ ಮತ್ತು ಶ್ರೀ. ಅಮೋಲ್ ವಾನಖಡೆ ಉಪಸ್ಥಿತರಿದ್ದರು.



ಹಿಂದೂತ್ವನಿಷ್ಠರ ಸತ್ಕಾರದ ಸಂದರ್ಭದಲ್ಲಿ ಉಪಸ್ಥಿತರಿದ್ದ ಇತರ ಹಿಂದೂ ರಕ್ಷಕರು!ಸರ್ವಶ್ರೀ ಚಂದ್ರಕಾಂತ ತುರಕುಟೆ, ಆಶಿಶ್ ತಿವಾರಿ, ಅಂಕುಶ್ ಕಾವಡಕರ್, ಶಶಾಂಕ್ ಬೈಸ್ ಮತ್ತು ಅನಿಲ್ ಗರಡ್. |
ಸಭೆಯ ಗಣ್ಯ ವಕ್ತಾರರ ಗೌರವ ಮತ್ತು ಸ್ವಾಗತ!



ಅಕೋಲಾ ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ವರದಿಗೆ ಲಭಿಸಿದ ವ್ಯಾಪಕ ಪ್ರಸಿದ್ಧಿ!

ನೇರ ಪ್ರಸಾರ: ಎ.ಎನ್.ಎನ್. ನ್ಯೂಸ್, ಟಿವಿ ೯ ಮಹಾರಾಷ್ಟ್ರ, ‘ಎಬಿಪಿ ಮಾಝಾ’, ಆರ್.ಆರ್.ಸಿ. ನ್ಯೂಸ್, ಸಕಲ ಹಿಂದೂ ಸಮಾಜ ಯೂಟ್ಯೂಬ್ ಚಾನೆಲ್, ದಿವ್ಯ ಹಿಂದಿ, ಅಜಿಂಕ್ಯ ಭಾರತ, ಸಾಮ್ ಟಿವಿ, ಸತ್ಯ ಲಢಾ.
ಎಲೆಕ್ಟ್ರಾನಿಕ್ ಮಾಧ್ಯಮಗಳು: ಎ.ಎನ್.ಎನ್. ನ್ಯೂಸ್, ದಿವ್ಯ ಹಿಂದಿ, ಸತ್ಯ ಲಢಾ (ಡಿಜಿಟಲ್), ಸಿಟಿ ನ್ಯೂಸ್, ಅಜಿಂಕ್ಯ ಭಾರತ, ಮಹಾರಾಷ್ಟ್ರ ಟೈಮ್ಸ್ (ಡಿಜಿಟಲ್), ‘ಝೀ ಮರಾಠಿ’ ನೆಟ್‌ವರ್ಕ್, ಎಂ.ಸಿ.ಎನ್., ಎಲ್.ಎಸ್. ನ್ಯೂಸ್, ಎನ್.ಎನ್. ನ್ಯೂಸ್, ಎಬಿಪಿ ನ್ಯೂಸ್, ಝೀ ನ್ಯೂಸ್.
ದಿನಪತ್ರಿಕೆಗಳು: ದಿವ್ಯ ಮರಾಠಿ, ನವಭಾರತ್, ಲೋಕಮತ್, ಲೋಕಮತ್ ಸಮಾಚಾರ, ದೇಶೋನ್ನತಿ, ನವರಾಷ್ಟ್ರ, ತರುಣ್ ಭಾರತ್, ಮಹಾಸಾಗರ, ದೈನಿಕ ಭಾಸ್ಕರ, ಅಕೋಲಾ ರಿಪೋರ್ಟರ್, ಸಿಟಿ ನ್ಯೂಸ್ ಸೂಪರ್ ಫಾಸ್ಟ್, ಸಕಾಳ್, ಪುಣ್ಯನಗರಿ, ಅಜಿಂಕ್ಯ ಭಾರತ, ಪ್ರತಿಸಾದ್, ವಿದರ್ಭ ಪ್ರಜಾಸತ್ತಾಕ್, ಹಿಂದೂಸ್ತಾನ ಜನಮಾಧ್ಯಮ, ಸತ್ಯ ಲಢಾ.

ಸಭೆಯ ಮೂಲಕ ಭಗವತ್ ಈಶ್ವರೀ ಪ್ರೇರಣೆಯ ಅನುಭವವಾಯಿತು! – ಅರವಿಂದ ದೇಠೆ
ಅಕೋಲಾದಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ಕೇವಲ ಒಂದು ವ್ಯಾಪಕ ಸ್ತರದ ಆಯೋಜನೆಯಾಗಿರಲಿಲ್ಲ, ಬದಲಾಗಿ ಅದು ಹಿಂದೂ ಸಮಾಜದ ಜಾಗೃತಿ ಮತ್ತು ಭಗವತ್ ಪ್ರೇರಣೆಯ ಒಂದು ಸಾಮುದಾಯಿಕ ಅನುಭೂತಿಯೇ ಆಗಿತ್ತು. ನಾವು ಎಷ್ಟೇ ಪ್ರಯತ್ನಗಳನ್ನು ಮಾಡುತ್ತಿದ್ದರೂ ಸಹ, ಈ ಸಂಪೂರ್ಣ ಕಾರ್ಯದ ಹಿಂದೆ ಯಾವುದೋ ಒಂದು ಅದೃಶ್ಯ ದಿವ್ಯ ಶಕ್ತಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನನಗೆ ಅರಿವಾಗುತ್ತಿತ್ತು. ಅನೇಕ ಸೇವೆಗಳು ತಾವಾಗಿಯೇ ಪೂರ್ಣಗೊಳ್ಳುತ್ತಿದ್ದವು ಮತ್ತು ಸಭೆಯು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನೆರವೇರಿತು. – ಶ್ರೀ. ಅರವಿಂದ ದೇಠೆ, ಸದಸ್ಯರು, ಮಹಾರಾಷ್ಟ್ರ ಮಂದಿರ ಮಹಾಸಂಘ.

ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ