ಸ್ವಾಮೀಜಿಯವರು ರಾಮನಾಥಿ (ಗೋವಾ) ಯಲ್ಲಿರುವ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ ನೀಡಿದರು !

ರಾಮನಾಥಿ (ಗೋವಾ) – ಹಿಂದೂ ರಾಷ್ಟ್ರ ನಿರ್ಮಾಣದ ಬುನಾದಿಯನ್ನು ಸನಾತನ ಸಂಸ್ಥೆಯ ಮೂಲಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಹಾಕಿದ್ದಾರೆ. ಇದರ ಅನುಭೂತಿಯನ್ನು ನಾನು ಸ್ವತಃ ಆಶ್ರಮಕ್ಕೆ ಬಂದಾಗ ಪಡೆದುಕೊಂಡೆ. ಸನಾತನದ ಸಾಧಕರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೂ ರಾಷ್ಟ್ರದ ಬಗೆಗಿನ ಅವರ ತಳಮಳ ಮತ್ತು ಭಾವ ಅದ್ಭುತವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಹಿಂದೂ ರಾಷ್ಟ್ರ ಸ್ಥಾಪನೆಯ ಧನಸ್ಸನ್ನು ಎತ್ತಿದ್ದಾರೆ. ಈಶ್ವರನ ಕೃಪೆಯಿಂದ ಶೀಘ್ರದಲ್ಲೇ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ, ಇದಕ್ಕಾಗಿ ಎಲ್ಲಾ ಶಂಕರಾಚಾರ್ಯರು ಮತ್ತು ಮಹಾಮಂಡಲೇಶ್ವರರ ಪರವಾಗಿ ನನ್ನೆಲ್ಲಾ ಶುಭಾಶಯಗಳು. ಪರಬ್ರಹ್ಮ ಗುರುದೇವರ ಈ ಮಹತ್ಕಾರ್ಯಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ. ಸನಾತನ ಧರ್ಮದ ನಿಜವಾದ ಯೋಧ ಡಾ. ಆಠವಲೆ ಆಗಿದ್ದಾರೆ. ಸನಾತನ ಆಶ್ರಮದಲ್ಲಿ ನಾನು ಪಡೆದ ಅದ್ಭುತ ಅನುಭೂತಿಯನ್ನು, ನನ್ನ ಜೀವನದಲ್ಲಿ ಎಂದೂ ಪಡೆದಿರಲಿಲ್ಲ. ಇಲ್ಲಿ ಹಿಂದೂ ರಾಷ್ಟ್ರದ ಬುನಾದಿ ಹಾಕಲಾಗಿದೆ. ಸನಾತನ ಆಶ್ರಮವು ಹಿಂದೂ ರಾಷ್ಟ್ರದ ಪ್ರತಿಕೃತಿಯಾಗಿದೆ. ಇಲ್ಲಿ ಎಲ್ಲಿಯೂ ಯಾವುದೇ ರೀತಿಯ ತೋರಿಕೆಯಿಲ್ಲ, ಇದೊಂದು ನೈಸರ್ಗಿಕ ವಾಸ್ತವವಾಗಿದೆ, ಎಂದು ನ್ಯಾಷನಲ್ ಸೊಸೈಟಿ ಫಾರ್ ಹರೇ ಕೃಷ್ಣ ಕಾನ್ಷಿಯಸ್‌ನೆಸ್ (ನ್ಯಾಶ್‌ಕಾನ್) ನ ವ್ಯವಸ್ಥಾಪಕ ಅಧ್ಯಕ್ಷರಾದ ಶ್ರೀ ಭಗವತ ಶರಣ ಮಹಾಂತ ರಾಧಾಕೃಷ್ಣ ಸ್ವಾಮಿಯವರು ಇತ್ತೀಚೆಗೆ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ನಂತರ ಆಶೀರ್ವಚನ ನೀಡಿದರು.
ಸ್ವಾಮೀಜಿಯವರು ‘ಕನ್ಹಯ್ಯಾ ಆಶ್ರಯ ಗೋಶಾಲೆ’ಯ ಅಧ್ಯಕ್ಷರಾಗಿದ್ದಾರೆ, ಹಾಗೂ ವಿಶ್ವಶಾಂತಿ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ಅವರೊಂದಿಗೆ ಅವರ ಕೆಲವು ಅನುಯಾಯಿಗಳು ಉಪಸ್ಥಿತರಿದ್ದರು. ‘ಸನಾತನ ಪ್ರಭಾತ ಮಾಧ್ಯಮ ಸಮೂಹ’ದ ಸಂಪಾದಕ ಶ್ರೀ. ಯೋಗೇಶ ಜಲತಾರೆ ಅವರು ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮ ಕಾರ್ಯಗಳನ್ನು ಅವರಿಗೆ ಪರಿಚಯಿಸಿದರು. ‘ಸನಾತನ ಪ್ರಭಾತ’ನ ಉಪಸಂಪಾದಕ ಶ್ರೀ. ಉಮೇಶ ನಾಯ್ಕ್ ಅವರು ಮಹಂತ ರಾಧಾಕೃಷ್ಣ ಸ್ವಾಮಿಯವರಿಗೆ ಶಾಲು, ಶ್ರೀಫಲ, ಪುಷ್ಪಹಾರ ಅರ್ಪಿಸಿ, ಹಾಗೂ ಸನಾತನದ ಗ್ರಂಥಗಳನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸನಾತನದ ಕೆಲವು ಸಾಧಕರು ಉಪಸ್ಥಿತರಿದ್ದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ