೧. ಪ.ಪೂ. ಡಾಕ್ಟರರಿಗೆ ತಮ್ಮ ಪ್ರತಿಯೊಂದು ವಿಚಾರ ಮತ್ತು ಕೃತಿಯತ್ತ ಸತತ ಗಮನವಿರುವುದು ಮತ್ತು ಅವರು ತಕ್ಷಣ ಯೋಗ್ಯ ವಿಚಾರ ಮತ್ತು ಕೃತಿ ಮಾಡುವುದು
‘ಗುರುಕೃಪಾಯೋಗದಂತೆ ಸಾಧನೆಯನ್ನು ಮಾಡುವಾಗ ಪ.ಪೂ. ಡಾಕ್ಟರರು ಸಾಧಕರಿಗೆ ತಮ್ಮ ತಪ್ಪುಗಳ ಕಡೆಗೆ ಸತತವಾಗಿ ಗಮನವಿಡಲು ಹೇಳಿ ಪ್ರತಿ ಎರಡು ಗಂಟೆಗಳಿಗೊಮ್ಮೆ ತಪ್ಪುಗಳ ತಖ್ತೆಯಲ್ಲಿ ಬರೆಯಲು ಹೇಳಿದ್ದಾರೆ; ಆದರೆ ಪ.ಪೂ. ಡಾಕ್ಟರರ ಈ ಕ್ರಿಯೆ ಸತತವಾಗಿ ನಡೆದಿರುತ್ತದೆ ಮತ್ತು ಒಂದು ವೇಳೆ ತಪ್ಪಿ ವಿಚಾರ ಅಥವಾ ಕೃತಿಯಲ್ಲಿ ಶೇ. ೧ ರಷ್ಟು ಅಯೋಗ್ಯವೆನಿಸಿದರೂ, ಅದು ತಕ್ಷಣ ಅವರ ಗಮನಕ್ಕೆ ಬರುತ್ತದೆ ಮತ್ತು ಅವರು ಅದರಲ್ಲಿ ತಕ್ಷಣ ಸುಧಾರಣೆ ಮಾಡುತ್ತಾರೆ. ಇದು ಮುಂದಿನ ಉದಾಹರಣೆಗಳಿಂದ ಗಮನಕ್ಕೆ ಬರುವುದು.
೧ ಅ. ಸಾಧಕನಿಗೆ ಉಪಾಯಕ್ಕಾಗಿ ಜುಬ್ಬಾ ಕೊಡುವ ಸಂದರ್ಭದಲ್ಲಿ ಪ.ಪೂ. ಡಾಕ್ಟರರಿಂದ ಆದ ವಿಚಾರಪ್ರಕ್ರಿಯೆ ಮತ್ತು ಅದರಿಂದ ಅವರು ಮಾಡಿದ ಯೋಗ್ಯ ಕೃತಿ ! : ‘ನಾನು ಬಳಸಿದ ವಸ್ತುಗಳು, ಉದಾ. ಬಟ್ಟೆ, ಹೊದಿಕೆ, ಬಾಲ್‌ಪೆನ್ನು ಇತ್ಯಾದಿ ವಸ್ತುಗಳನ್ನು ಸಾಧಕರು ಬಳಸಿದ ನಂತರ ಅವರಿಗೆ ಅವುಗಳಿಂದ ಚೈತನ್ಯ ಸಿಗುತ್ತದೆ ಮತ್ತು ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯವಾಗುತ್ತವೆ’, ಎಂದು ಕಳೆದ ಅನೇಕ ವರ್ಷಗಳಿಂದ ಸಾಧಕರು ಅನುಭವಿಸುತ್ತಿದ್ದಾರೆ; ಆದ್ದರಿಂದ ಅವರಿಗೆ ನಾನು ಬಳಸಿದ ಹಳೆಯ ವಸ್ತುಗಳನ್ನು ಕೊಡುತ್ತೇನೆ.
ಒಮ್ಮೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವ ಓರ್ವ ಸಾಧಕನು ಊರಿಗೆ ಹೋಗಲಿದ್ದನು. ಅವನಿಗೆ ಉಪಾಯಕ್ಕಾಗಿ ನನ್ನ ಒಂದು ಜುಬ್ಬ ಅಥವಾ ಪೈಜಾಮ್ ಬೇಕಿತ್ತು. ಇತರರಿಗೆ ಬಳಸಲು ವಸ್ತುಗಳನ್ನು ಕೊಟ್ಟಿರುವುದರಿಂದ ಆಗ ನನ್ನ ಬಳಿ ಕೊಡಲು ಹಳೆ ಜುಬ್ಬ ಇರಲಿಲ್ಲ. ಆ ಸಮಯದಲ್ಲಿ ನನ್ನಲ್ಲಿನ ಮಿತವ್ಯಯದಿಂದ ನನ್ನ ಮನಸ್ಸಿನಲ್ಲಿ ಒಂದು ಕ್ಷಣ, ‘ಇಂದು ನಾವು ಬೇರೆ ಏನಾದರು ಕೊಡೋಣ’ ಎಂಬ ವಿಚಾರ ಬಂದಿತು. ಆ ಸಮಯದಲ್ಲಿ ನನಗೆ ತಕ್ಷಣ ಶ್ರೀಕೃಷ್ಣನ ಬೆರಳು ಕತ್ತರಿಸಿದಾಗ ಅವನ ಬೆರಳಿನಿಂದ ಬರುವ ರಕ್ತವನ್ನು ನಿಲ್ಲಿಸಲು ತನ್ನ ಭರ್ಜರಿ ರೇಶ್ಮೆ ಸೀರೆಯನ್ನು ಹರಿದು ಅದರ ಚಿಂದಿಯನ್ನು ಬೆರಳಿಗೆ ಕಟ್ಟುವ ದ್ರೌಪದಿಯ ನೆನಪಾಯಿತು ಮತ್ತು ನನಗೆ ನನ್ನ ಬಗ್ಗೆ ನಾಚಿಕೆ ಅನಿಸಿತು; ಆದ್ದರಿಂದ ನಾನು ಅವನಿಗೆ ಸದ್ಯ ಬಳಸುತ್ತಿರುವ ಹೊಸ ಜುಬ್ಬವನ್ನು ಕೊಟ್ಟೆನು.’ – ಡಾ. ಆಠವಲೆ (ವೈಶಾಖ ಕೃಷ್ಣ ದ್ವಿತೀಯಾ, ಕಲಿಯುಗ ವರ್ಷ ೫೧೧೨ (೩೦.೪.೨೦೧೦))

೧ ಆ. ಇತರರ ತಪ್ಪುಗಳ ಕಡೆಗೆ ನೋಡುವ ದೃಷ್ಟಿಕೋನದಲ್ಲಿ ಆಗುತ್ತಿರುವ ಬದಲಾವಣೆ
೧ ಆ ೧. ೧೯೯೯ ವರೆಗೆ : ‘ಯಾರಾದರು ತಪ್ಪು ಮಾಡಿದಾಗ, ನನಗೆ ಸಿಟ್ಟು ಬರುತ್ತಿತ್ತು. ಆಗ ನಾನು ತಪ್ಪಿನ ಗಾಂಭೀರ್ಯಕ್ಕನುಸಾರ ಸಾಧಕರ ಮೇಲೆ ಸಿಟ್ಟು ಮಾಡುತ್ತಿದ್ದೆನು ಅಥವಾ ಬೈಯ್ಯುತ್ತಿದ್ದೆನು.
೧ ಆ ೨. ೨೦೦೦ ದಿಂದ ೨೦೦೯ : ಬೇರೆಯವರ ತಪ್ಪಿನಿಂದ ನನ್ನ ಹಾನಿಯಾದರೆ, ನನಗೆ ಸ್ವಲ್ಪ ಸಿಟ್ಟು ಬರುತ್ತಿತ್ತು; ಆದರೆ ಸಮಷ್ಟಿಗೆ ಹಾನಿಯಾದರೆ, ನನಗೆ ಹೆಚ್ಚು ಸಿಟ್ಟು ಬರುತ್ತಿತ್ತು. ಆಗ ನಾನು ತಪ್ಪಿನ ಗಾಂಭೀರ್ಯಕ್ಕನುಸಾರ ಸಾಧಕರ ಮೇಲೆ ಸಿಟ್ಟು ಮಾಡುತ್ತಿದ್ದೆನು ಅಥವಾ ಸ್ವಲ್ಪ ಮಟ್ಟಿಗೆ ಬೈಯ್ಯುತ್ತಿದ್ದೆನು.
೧ ಆ ೩. ೨೦೧೦ : ೨೫.೬.೨೦೧೦ ರಂದು ಮೀರಜದಿಂದ, ‘ಭಕ್ತಿಯೋಗ ಗ್ರಂಥದ ಬೆರಳಚ್ಚು ಮಾಡಲು ಕಳುಹಿಸಿದ ಬರವಣಿಗೆಯಲ್ಲಿನ ೧೦-೧೫ ಪುಟಗಳು ಕಳೆದುಹೋಗಿವೆ’ ಎಂಬ ಸಂದೇಶ ಬಂದಿತು. ಆಗ ‘ಸಮಷ್ಟಿಗೆ ಆ ಪುಟಗಳಲ್ಲಿನ ಬರವಣಿಗೆ ಓದಲು ಸಿಗಲಾರದು, ಅಂದರೆ ಸಮಷ್ಟಿಯ ಹಾನಿ ಆಯಿತು’, ಇದರ ಬಗ್ಗೆ ನನಗೆ ಏನು ಅನಿಸಲಿಲ್ಲ’, ಇದು ನನಗೆ ಆಶ್ಚರ್ಯವೇ ಆಗಿತ್ತು. ವಿಚಾರ ಮಾಡಿದ ನಂತರ ನಾನು ಕೋಪಗೊಳ್ಳದಿರುವ ಕಾರಣವು ನನ್ನ ಗಮನಕ್ಕೆ ಬಂದಿತು. ಆ ಕಾರಣವು ಹೀಗಿತ್ತು, ‘ಈಶ್ವರನಿಗೆ ಆ ಬರವಣಿಗೆಯು ಗ್ರಂಥದಲ್ಲಿ ಬೇಡವಾಗಿರಬಹುದು; ಆದ್ದರಿಂದ ಅದು ಕಳೆದುಹೋಯಿತು.’ ಇತರರಿಗೆ ‘ಈಶ್ವರೇಚ್ಛೆ, ಸಾಕ್ಷೀಭಾವ, ಪ್ರಾರಬ್ಧ’, ಎಂದು ಶಬ್ದದಲ್ಲಿ ನಾನು ಹೇಳುತ್ತಿರುತ್ತೇನೆ. ಅದನ್ನು ನನಗೆ ಆಚರಣೆಯಲ್ಲಿ ತರಲು ಸಾಧ್ಯವಾಯಿತು; ಇದರಿಂದ ಒಳ್ಳೆಯದೆನಿಸಿತು.
೨.೭.೨೦೧೦ ರಂದು ಮೀರಜದಿಂದ, ‘ಕಳೆದು ಹೋದ ಬರವಣಿಗೆಗಳು ಸಿಕ್ಕಿದವು’ ಎಂಬ ಸಂದೇಶ ಬಂದಿತು. ಆಗ ನನ್ನ ಗಮನಕ್ಕೆ ಬಂದ ವಿಷಯವೆಂದರೆ, ‘ಇಂತಹ ಪ್ರಸಂಗದಲ್ಲಿ ನನಗೆ ಏನು ಅನಿಸುತ್ತದೆ ?’, ಎಂಬುದರ ಬಗ್ಗೆ ದೇವರು ನನ್ನ ಪರೀಕ್ಷೆ ಮಾಡಿದನು.’ – ಡಾ. ಆಠವಲೆ (ಜೇಷ್ಠ ಹುಣ್ಣಿಮೆ, ಕಲಿಯುಗ ವರ್ಷ ೫೧೧೨ (೨೬.೬.೨೦೧೦)) ಮೇಲಿನ ಎರಡು ಉದಾಹರಣೆಗಳಿಂದ ಗಮನಕ್ಕೆ ಬಂದ ಅಂಶವೆಂದರೆ, ‘ಪ.ಪೂ. ಡಾಕ್ಟರರು ‘ಪರಾತ್ಪರ ಗುರು’ ಆದ ನಂತರವೂ ತಮ್ಮ ವಿಚಾರ ಮತ್ತು ಕೃತಿಗಳ ಕಡೆಗೆ ಸತತವಾಗಿ ಗಮನವಿಡುತ್ತಾರೆ; ಆದ್ದರಿಂದ ಅವರ ವಿಚಾರಗಳು ಮತ್ತು ಕೃತಿಗಳು ಯಾವಾಗಲೂ ಆದರ್ಶವೇ ಇರುತ್ತವೆ.’
೨. ಪ.ಪೂ. ಡಾಕ್ಟರರು ಚಿಕ್ಕ ಚಿಕ್ಕ ಪ್ರಸಂಗಗಳನ್ನು ತಮ್ಮ ಬಳಿ ದಿನಾಂಕ ಸಹಿತ ನೊಂದಣಿ ಮಾಡಿ ಇಡುತ್ತಾರೆ
ಪ.ಪೂ. ಡಾಕ್ಟರರು ತಮ್ಮ ಜೀವನದಲ್ಲಿನ ಎಲ್ಲ ಮಹತ್ವದ ಘಟನೆಗಳು, ಎಲ್ಲ ಮಹತ್ವದ ವಿಚಾರಗಳು, ವಿಚಾರಗಳಲ್ಲಿನ ಬದಲಾವಣೆಗಳು, ಮಹತ್ವದ ಕೃತಿಗಳು ಮತ್ತು ಅನುಭವಗಳನ್ನು ದಿನಾಂಕ ಮತ್ತು ತಿಥಿಗಳ ಪ್ರಕಾರ ನೊಂದಣಿ ಮಾಡಿಟ್ಟಿದ್ದಾರೆ. ಈ ರೀತಿ ಯಾವ ಅವತಾರ, ಸಂತರು ಅಥವಾ ಸದ್ಗುರುಗಳು ಇಟ್ಟಿರುವುದು ಕಂಡುಬರುವುದಿಲ್ಲ.
೩. ಪ.ಪೂ. ಡಾಕ್ಟರರ ಚಿತ್ತದ ಮೇಲಿನ ಇಷ್ಟಾನಿಷ್ಟ ಕೇಂದ್ರ ಲಯವಾಗುವುದು
ಶೇ. ೯೫ ರಷ್ಟು ಆಧ್ಯಾತ್ಮಿಕ ಮಟ್ಟದಲ್ಲಿ ಮತ್ತು ‘ಪರಾತ್ಪರ ಗುರು’ ಎಂದು ಕಾರ್ಯನಿರತನಾಗಿರುವಾಗ ಮೋಕ್ಷಪ್ರಾಪ್ತಿಯ ಮಾರ್ಗಕ್ರಮಣದಲ್ಲಿ ಚಿತ್ತದಲ್ಲಿನ ಒಂದೊಂದು ಸಂಸ್ಕಾರ ಶಾಶ್ವತವಾಗಿ ನಾಶಗೊಳ್ಳುತ್ತವೆ. ಆ ಬಗೆಗಿನ ಕುತೂಹಲದಿಂದ ‘ತಿನ್ನುವುದರಲ್ಲಿ, ಊಟದಲ್ಲಿನ ಅವರ ಎಷ್ಟು ಆಸಕ್ತಿ ಉಳಿದಿವೆ ?’, ಎಂಬುದರ ಬಗ್ಗೆ ನಾನು ೧೮.೯.೨೦೧೩ ರಂದು ಗುರುಗಳಿಗೆ ದೂರವಾಣಿ ಕರೆ ಮಾಡಿ ಕೇಳಿದೆನು.
ಆಗ ಅವರು ನನಗೆ, ”ಈಗ ತಿನ್ನುವುದರಲ್ಲಿ ‘ಮೊದಲು ಇಷ್ಟವಾಗುತ್ತಿದ್ದ ಶ್ರೀಖಂಡವನ್ನು ತಿನ್ನಬೇಕು’, ಎಂದು ಅನಿಸುವುದಿಲ್ಲ; ಏಕೆಂದರೆ ಸತತವಾಗಿ ಆನಂದಾವಸ್ಥೆಯಲ್ಲಿರುವುದರಿಂದ ಅದಕ್ಕಿಂತ ಬೇರೆ ವಿಷಯದ ಆನಂದವು ವಿಶೇಷ ಅನಿಸುವುದಿಲ್ಲ. ಸಿಕ್ಕಿದ ಊಟದಲ್ಲಿರುವ ಪದಾರ್ಥಗಳಲ್ಲಿ ಅಷ್ಟೇ ಆನಂದವಿರುತ್ತದೆ; ಆದರೆ ಖಾರದ ಪದಾರ್ಥಗಳು ಬೇಡವೆನಿಸುತ್ತವೆ ಮತ್ತು ಚಿಕ್ಕಂದಿನಿಂದಲೂ ಇಷ್ಟವಾಗದಿರುವ ಹಾಲಿನಲ್ಲಿನ ಕೆನೆ ಇಲ್ಲದಿದ್ದರೆ ಒಳ್ಳೆಯದೆನಿಸುತ್ತದೆ,’’ ಎಂದು ಹೇಳಿದರು.
ಇದರ ಅರ್ಥ ಚಿಕ್ಕಂದಿನಿಂದಲೂ ಇಷ್ಟವಾಗುತ್ತಿರುವ ವಿಷಯಗಳ ಸಂಸ್ಕಾರಗಳು ಮೊದಲು ಹೋಗುತ್ತವೆ; ಆದರೆ ಇಷ್ಟ ವಾಗದಿರುವ ಆಹಾರ ಪದಾರ್ಥಗಳ ಸಂಸ್ಕಾರಗಳು ಬೇಗ ಹೋಗುವುದಿಲ್ಲ, ಹಾಗೆಯೇ ಯಾವುದರಿಂದ ದೇಹಕ್ಕೆ ತೊಂದರೆ ಯಾಗುತ್ತದೆಯೋ, ಅಂತಹ ಪದಾರ್ಥಗಳು ದೇಹಕ್ಕೆ ಕೊನೆವರೆಗೂ ಬೇಡವೆನಿಸುತ್ತವೆ, ಉದಾ. ಖಾರದ ಪದಾರ್ಥಗಳು. ಬದುಕುವ ಇಚ್ಛೆಯಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಕ್ರಿಯೆಯು ಕೊನೆವರೆಗೂ ಹಾಗೆಯೇ ಮುಂದುವರಿಯುತ್ತದೆ. ಅವುಗಳ ಮೇಲೆ ಸಂಸ್ಕಾರಗಳಾಗಿರುವುದಿಲ್ಲ.’
– (ಸದ್ಗುರು) ಡಾ. ವಸಂತ ಬಾಳಾಜಿ ಆಠವಲೆ (ಸದ್ಗುರು ಅಪ್ಪಾಕಾಕಾ, ಪರಾತ್ಪರ ಗುರು ಡಾ. ಆಠವಲೆಯವರ ಹಿರಿಯ ಸಹೋದರ), ಚೆಂಬೂರ, ಮುಂಬೈ. (೨೧.೯.೨೦೧೩)
‘ಸದ್ಗುರು ಡಾ. ವಸಂತ ಬಾಳಾಜಿ ಆಠವಲೆಯವರು ಪರಾತ್ಪರ ಗುರು ಡಾ. ಆಠವಲೆಯವರ ವೈಶಿಷ್ಟ್ಯಗಳ ಬಗ್ಗೆ ಬರೆದ ಬರವಣಿಗೆಯು![]() ಈಶ್ವರೀ ಜ್ಞಾನವಾಗಿದೆ’, ಎಂದು ಅನಿಸುವುದು ‘ಸದ್ಗುರು ಡಾ. ವಸಂತ ಬಾಳಾಜಿ ಆಠವಲೆ (ಸದ್ಗುರು ಅಪ್ಪಾಕಾಕಾ) ಇವರು ಬರೆದಿರುವ ಪರಾತ್ಪರ ಗುರು ಡಾ. ಆಠವಲೆಯವರ ವೈಶಿಷ್ಟ್ಯ ಗಳನ್ನು ಹೇಳುವ ಕಡತಗಳ ಸಂಕಲನ ವನ್ನು ಮಾಡುವಾಗ ನನಗೆ, ‘ಸದ್ಗುರು ಅಪ್ಪಾಕಾಕಾರವರ ಈ ಬರವಣಿಗೆ, ಅವರಿಗೆ ಈಶ್ವರನಿಂದ ದೊರಕಿದ ಜ್ಞಾನವಾಗಿದೆ. ಅವರಲ್ಲಿನ ‘ಅಭ್ಯಾಸುವೃತ್ತಿ’, ‘ಜಿಜ್ಞಾಸೆ’, ಪರಾತ್ಪರ ಗುರು ಡಾಕ್ಟರರ ಬಗೆಗಿನ ಅವರ ಭಾವ’ ಇತ್ಯಾದಿ ಗುಣಗಳಿಂದ ಈಶ್ವರನು ಅವರಿಗೆ ಈ ಜ್ಞಾನವನ್ನು ನೀಡಿದ್ದಾನೆ. ಅವರು ಪರಾತ್ಪರ ಗುರು ಡಾಕ್ಟರರ ವೈಶಿಷ್ಟ್ಯಗಳ ಬಗ್ಗೆ ಮಾಡಿದ ವಿಶ್ಲೇಷಣೆಯು ಬೌದ್ಧಿಕವಾಗಿರದೇ ದೈವೀ ಆಗಿದೆ’ ಎಂದು ಅನಿಸಿತು. – ಸುಶ್ರೀ (ಕು.) ದೀಪಾಲಿ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೨.೨೦೨೫) |
| *ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |


ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !