ಸನಾತನ ಧರ್ಮದ ಸಾಕಾರರೂಪವಾಗಿರುವ ಮತ್ತು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡುವ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
‘ಯಾವ ರೀತಿ ವೇದಗಳು ಅಪೌರುಷೇಯವಾಗಿವೆಯೋ, ಅದರಂತೆ ಸನಾತನ ಧರ್ಮವೂ ಅಪೌರುಷೇಯವಾಗಿದೆ. ಅಪೌರುಷೇಯವಾಗಿರುವ ಸನಾತನದ ಧರ್ಮವು ಪ್ರಾಣಿಮಾತ್ರರ ಅಭ್ಯುದಯನ್ನು ಮಾಡುತ್ತಿರುತ್ತದೆ. ಪ್ರಾಣಿಮಾತ್ರರಿಗೆ ‘ಧರ್ಮ ಹೇಗಿದೆ ?’, ಎಂದು ತಿಳಿಯಬೇಕು ಮತ್ತು ಅದರಂತೆ ಅನುಕರಣೆ ಮಾಡಲು ಸುಲಭವಾಗಬೇಕೆಂದು; ಈಶ್ವರನು ಸಗುಣ ರೂಪದಲ್ಲಿ ಭೂಮಿಗೆ ಬರುತ್ತಾನೆ. ಈಶ್ವರನು ಧರ್ಮಕ್ಕಾಗಿಯೇ ಭೂಮಿಗೆ ಬರುತ್ತಾನೆ. ಶ್ರೀರಾಮನನ್ನು ವರ್ಣಿಸುವಾಗ ಮಾರೀಚನು ಅಸುರ ರಾವಣನಿಗೆ ಹೇಳುತ್ತಾನೆ, ರಾಮೋ ವಿಗ್ರಹವಾನ್ ಧರ್ಮಃ |’ (ವಾಲ್ಮೀಕಿರಾಮಾಯಣ, ಅರಣ್ಯಕಾಂಡ, ಸರ್ಗ ೩೭, ಶ್ಲೋಕ ೧೩) ಅಂದರೆ ‘ಶ್ರೀರಾಮನು ಧರ್ಮದ ಮೂರ್ತಿಮಂತ ಸ್ವರೂಪನಾಗಿದ್ದಾನೆ.’ ಅಂದರೆ ಶ್ರೀರಾಮನು ಸ್ವಯಂ ಧರ್ಮದ ಮೂರ್ತಿಮಂತ ರೂಪವಾಗಿದ್ದಾನೆ. ಕಲಿಯುಗದಲ್ಲಿ ಧರ್ಮದ ಇಂತಹ ಮೂರ್ತಿಮಂತ ರೂಪ ದೊರಕುವುದು ಅಸಾಧ್ಯವಿದೆ. ೨೬೦೦ ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಭಗವಂತನು ‘ಆದಿ ಶಂಕರಾಚಾರ್ಯ’ರ ರೂಪದಲ್ಲಿ ಬಂದು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡಿದನು. ಅನಂತರ ಸನಾತನ ಧರ್ಮದ ಮೂರ್ತಿಮಂತ ರೂಪವೆಂದು ಭೂಮಿಯಲ್ಲಿ ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡಿದ್ದರೆ, ಅದು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯಾಗಿದ್ದಾರೆ !
ಅಹಂಕಾರದ ಯುಗವಾದ ಕಲಿಯುಗದಲ್ಲಿ ಸಾಧಕರಿಂದ ಸ್ವಭಾವದೋಷಗಳು ಮತ್ತು ಅಹಂನ ನಿರ್ಮೂಲನೆ ಮಾಡಿಸುವ ‘ಧರ್ಮಮಾರ್ತಂಡ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ’ !
ಕಲಿಯುಗವು ಅಹಂಕಾರ ಮತ್ತು ಅಸತ್ಯದ ಯುಗವಾಗಿದೆ. ‘ವೃಷಭ’ವು ಧರ್ಮದ ಒಂದು ರೂಪವಾಗಿದ್ದು ‘ಸತ್ಯ, ತಪ, ಶೌಚ ಮತ್ತು ದಯೆ’, ಇವು ಧರ್ಮದ ೪ ಸ್ತಂಭಗಳಾಗಿವೆ, ಇವು ವೃಷಭದ ಕಾಲುಗಳಾಗಿವೆ. ಧರ್ಮದ ಈ ೪ ಸ್ತಂಭಗಳಲ್ಲಿ ಕೇವಲ ‘ಸತ್ಯ’ವು ಒಂದೇ ಸ್ತಂಭದ ಮೇಲೆ ನಿಂತಿರುವ ಯುಗವೆಂದರೆ ಕಲಿಯುಗ ! ಅಂದರೆ ಕಲಿಯುಗದಲ್ಲಿ ಧರ್ಮವು ಕೇವಲ ‘ಸತ್ಯ’ ಎಂಬ ಒಂದೇ ಕಾಲಿನ ಮೇಲೆ ನಿಂತಿದೆ. ‘ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಮಾಯೆ’ ಇತ್ಯಾದಿ ವಿವಿಧ ವಿಕಾರ ಗಳಿಂದ ತುಂಬಿದ ಯುಗವೆಂದರೆ ಕಲಿಯುಗ ! ಈ ಯುಗದಲ್ಲಿ ದೋಷಗಳಿಲ್ಲದ ಮನುಷ್ಯ ಸಿಗುವುದು ಕಠಿಣವಿದೆ. ‘ಯೋಗಿ, ಮಹಂತರು, ಸ್ವಾಮಿಗಳು, ತಪಸ್ವಿಗಳು, ಸಂತರು ಮಹಾಪುರುಷರು’ ಮುಂತಾದ ಹೆಸರುಗಳಿಗೆ ಕಳಂಕ ತರುವ ಯುಗವಾಗಿದೆ. ಬಾಹ್ಯಾಂಗದಿಂದ ದೋಷಗಳು ಕಾಣಿಸುವುದಿಲ್ಲ; ಏಕೆಂದರೆ ಅವು ಮಾಯಾವಿಯಾಗಿರುತ್ತವೆ ಮತ್ತು ಅದಕ್ಕೆಂದೇ ಕಲಿಯುಗಕ್ಕೆ ‘ಮಾಯಾವಿ ಯುಗ’ ಎಂದು ಸಂಬೋಧಿಸಲಾಗುತ್ತದೆ. ಇಂತಹ ಈ ಕಲಿಯುಗದಲ್ಲಿ ಸದ್ಯದ ಕಲಿಯುಗವು ಘೋರ ಕಲಿಯುಗವಾಗಿದೆ.
ಅಹಂಕಾರದ ಈ ಯುಗದಲ್ಲಿ ಶುದ್ಧ ಸತ್ವಗುಣಿ ಸತ್ಯಯುಗದ ಅಪೇಕ್ಷೆ ಇಟ್ಟುಕೊಳ್ಳುವುದು ಯೋಗ್ಯವಲ್ಲ. ಹೀಗಿರುವಾಗ ‘ವಿಕಾರಗಳ ಮೇಲೆ ನಿಯಂತ್ರಣ ಸಾಧಿಸಿ, ಹಾಗೆಯೇ ಅವುಗಳು ಭುಗಿಲೇಳಲು ಬಿಡದೇ ಸಂಯಮದಿಂದ ಕೂಡಿದ ರಾಷ್ಟ್ರ ಮತ್ತು ಪ್ರಜೆಗಳನ್ನು ಸಾಧಿಸಬಹುದು’, ಎಂದು ಅರ್ಥಮಾಡಿಕೊಂಡವನು ಧರ್ಮಮಾರ್ತಂಡರೇ ಆಗಿದ್ದಾರೆ. ಅವರು ಸಾಧಕರನ್ನು ಮಾಧ್ಯಮವನ್ನಾಗಿಸಿ ಅವರಿಂದ ದೋಷ ಮತ್ತು ಅಹಂಕಾರ ನಿರ್ಮೂಲನೆಗಾಗಿ ಹೆಚ್ಚೆಚ್ಚು ಪ್ರಯತ್ನ ಮಾಡಿಸಿಕೊಂಡರು.
ಸಾಧಕರು ದೋಷಗಳ ಮೇಲೆ ಪಡೆದ ನಿಯಂತ್ರಣ ಮತ್ತು ಅದಕ್ಕಾಗಿ ಪಟ್ಟ ಪರಿಶ್ರಮಕ್ಕೆ ಗುರುರೂಪದಿಂದ ಆಶೀರ್ವಾದ ನೀಡಿ ಇಂತಹ ಕೆಲವು ಸಾಧಕರಲ್ಲಿ ಚೈತನ್ಯರೂಪಿ ಊರ್ಜೆಯನ್ನು ಪ್ರಕ್ಷೇಪಿಸಿ ಸಾಧಕರ ಪಂಕ್ತಿಯಲ್ಲಿ ಕೆಲವು ಆದರ್ಶ ಸಾಧಕರನ್ನು ರೂಪಿಸಿದರು. ‘ದೋಷಗಳಿಂದ ತುಂಬಿದ ಕಲಿಯುಗದಲ್ಲಿಯೂ ಸಂಯಮ ಮತ್ತು ದೋಷಗಳ ನಿಯಂತ್ರಣದಿಂದ ಸತ್ಯಯುಗ ವನ್ನು ತರಬಹುದು’, ಎಂದು ಮನುಕುಲಕ್ಕೆ ಕಲಿಸಿದ, ಧರ್ಮಮಾರ್ತಂಡರೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಧರ್ಮದ ಸಿದ್ಧಾಂತಗಳು ಮನುಷ್ಯನಿಗೆ ತಿಳಿಯಲು ವೈಜ್ಞಾನಿಕ ಪರಿಭಾಷೆಯಲ್ಲಿ ಗ್ರಂಥಗಳನ್ನು ಬರೆಯುವುದು
ಕಳೆದ ೨೦೦೦ ವರ್ಷಗಳಲ್ಲಿ ಮನುಷ್ಯನಿಗೆ ಧರ್ಮದ ಸಿದ್ಧಾಂತಗಳು ಮತ್ತು ಗಹನ ತತ್ತ್ವಗಳು ಇವೆಲ್ಲವೂ ಕೇವಲ ಸಂಸ್ಕೃತ ಭಾಷೆಯಲ್ಲಿ ಲಭ್ಯವಾಗಿವೆ. ಪ್ರಸ್ತುತ ವೈಜ್ಞಾನಿಕ ಯುಗದಲ್ಲಿ ಸಾಮಾನ್ಯ ಮನುಷ್ಯನಿಗೆ ಸಂಸ್ಕೃತವನ್ನು ಕಲಿತು ಧರ್ಮದ ಜ್ಞಾನವನ್ನು ಪಡೆಯಲು ಅಸಾಧ್ಯವಾಗಿತ್ತು. ಕಳೆದ ೨೦೦ ವರ್ಷಗಳಲ್ಲಿ ವಿಜ್ಞಾನವನ್ನು ಬಳಸುವುದು ಹೆಚ್ಚಾಯಿತು ಮತ್ತು ಮನುಷ್ಯನಿಗೆ ವಿಜ್ಞಾನದ ಭಾಷೆ ಇಷ್ಟವಾಗತೊಡಗಿತು. ‘ಶೇಕಡಾವಾರು, ವಿಷಯಗಳಿಗನುಸಾರ ವರ್ಗೀಕರಣ, ವೈಜ್ಞಾನಿಕ ಪರೀಕ್ಷೆ, ಅನುಭವ ಮತ್ತು ಅನುಭೂತಿಗಳನ್ನು ಪಡೆದವರ ಪ್ರತ್ಯಕ್ಷ ಪ್ರಮಾಣ’ ಮುಂತಾದವುಗಳು ಮನುಷ್ಯನಿಗೆ ಇಷ್ಟವಾಗತೊಡಗಿತು. ಸನಾತನ ಧರ್ಮದ ಸಿದ್ಧಾಂತ ಮತ್ತು ಜ್ಞಾನವನ್ನು ಸುಲಭವಾಗಿ ಮಾಡದೇ ಮನುಷ್ಯನಿಗೆ ತಿಳಿಯುವಂತೆ ಪರಿಭಾಷೆಯಲ್ಲಿ ಬರೆಯಲು ತುಂಬಾ ಧೈರ್ಯ ಮಾಡಬೇಕಾಗುತ್ತದೆ. ‘ಧರ್ಮ, ವರ್ಣಾಶ್ರಮವ್ಯವಸ್ಥೆ, ಅಧ್ಯಾತ್ಮ, ಸಾಧನಾಮಾರ್ಗ, ಧರ್ಮಾಚರಣೆ, ಹಬ್ಬಗಳು, ಉತ್ಸವಗಳು, ವ್ರತಗಳು, ದೇವಸ್ಥಾನಗಳು’ ಮುಂತಾದ ವಿಷಯಗಳ ವರ್ಗೀಕರಣ, ಮರುಲೇಖನ ಮತ್ತು ಪ್ರಸ್ತುತೀಕರಣ ಮಾಡಿ ಹೊಸ ಗ್ರಂಥಗಳನ್ನು ರಚಿಸುವ ಕಾರ್ಯವನ್ನು ಮಾಡಲು ಧರ್ಮನಾರಾಯಣನ ಒಂದು ರೂಪವೇ ಆಗಿರಬೇಕು. ಇಂತಹ ಕಾರ್ಯವನ್ನು ಮಾಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಇದುವರೆಗೆ ೩೬೬ ಗ್ರಂಥಗಳ ಸಂಕಲನ ಮಾಡಿದರು ಮತ್ತು ೧೩ ಭಾಷೆಗಳಲ್ಲಿ ಮುದ್ರಿಸಿದ ೧ ಕೋಟಿಗಿಂತಲೂ ಹೆಚ್ಚು ಗ್ರಂಥಗಳು ಜಗತ್ತಿನಾದ್ಯಂತ ವಿತರಣೆ ಮಾಡಿದ್ದಾರೆ.
ಧರ್ಮಗ್ರಂಥಗಳ ಅಧ್ಯಯನವಿರುವ ಪಂಡಿತರು, ಆಚಾರ್ಯರು, ಸ್ಥಾಪಿತ ಮಠಗಳ ಮಠಾಧಿಪತಿಗಳು, ವೇದಮೂರ್ತಿಗಳು ಮುಂತಾದವರ ಎಲ್ಲರ ವಿಚಾರಗಳಲ್ಲಿ ವಿರೋಧಾಭಾಸ ಉಂಟಾಗದಂತೆ ‘ಧರ್ಮಶಾಸ್ತ್ರವನ್ನು ಬೆಳಕಿಗೆ ತಂದು ಧರ್ಮ ಕಾರ್ಯಕ್ಕೆ ಪೂರಕವಾಗಿರುವ ಬರವಣಿಗೆಗಳನ್ನು ಮಾಡುವುದು’, ಇದು ಗುರುದೇವ ಪ.ಪೂ. ಆಠವಲೆಯವರ ವೈಶಿಷ್ಟ್ಯವಾಗಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ಥಾಪಿಸಿದ ‘ಸನಾತನ ಸಂಸ್ಥೆ’ !![]() ಗುರುದೇವರು ಹಾಕಿಕೊಟ್ಟ ಸಾಧನೆಯ ಮಾರ್ಗವೆಂದರೆ ಸ್ವಭಾವದೋಷಗಳು ಮತ್ತು ಅಹಂನ ನಿರ್ಮೂಲನೆ ಮಾಡುತ್ತಾ ಈಶ್ವರಪ್ರಾಪ್ತಿಗಾಗಿ ಭಕ್ತಿ ಮಾಡುವ ಮಾರ್ಗವಾಗಿದೆ. ಆ ಮಾರ್ಗದಲ್ಲಿ ಸಾಗುವ ಸಾವಿರಾರು ಸಾಧಕರ ಸಮೂಹವೆಂದರೆ ‘ಸನಾತನ ಸಂಸ್ಥೆ’ಯಾಗಿದೆ ! ‘ಸನಾತನ ಸಂಸ್ಥೆ’ಯು ಗುರುದೇವರು ಸ್ಥಾಪಿಸಿದ ಕೇವಲ ಒಂದು ನೋಂದಾಯಿತ ಆಧ್ಯಾತ್ಮಿಕ ಸಂಸ್ಥೆಯಾಗಿರದೇ ಅದು ಕಲಿಯುಗದ ಅಂಧಃಕಾರದಲ್ಲಿ ಮತ್ತು ಜನ್ಮ-ಮೃತ್ಯುವಿನ ಚಕ್ರಗಳಲ್ಲಿ ಸಿಲುಕಿದ ಜೀವಗಳಿಗೆ ಭಗವಂತನು ತೋರಿಸಿದ ಪ್ರಕಾಶಮಯ ಮತ್ತು ಜ್ಞಾನಮಯ ಮಾರ್ಗವಾಗಿದೆ. ‘ಸನಾತನ ಸಂಸ್ಥೆಯ ಮಾರ್ಗದಲ್ಲಿ ಸಾಗುವಾಗ ಸಾಧಕರಿಗೆ ಬಂದ ದೈವೀ ಅನುಭವಗಳು ಮುಂದಿನ ೧ ಸಾವಿರ ವರ್ಷಗಳ ವರೆಗೆ ಮನುಕುಲಕ್ಕೆ ದಾರಿದೀಪವಾಗಲಿ ಮತ್ತು ಇವೆಲ್ಲದಕ್ಕೂ ಕಾರಣವಾಗಿರುವ ಸನಾತನ ಧರ್ಮದ ಸಾಕಾರರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೀರ್ತಿಯು ಹತ್ತು ದಿಕ್ಕುಗಳಲ್ಲಿ ಅವಿನಾಶಿಯಾಗಲಿ’, ಇದೇ ಶ್ರೀಮನ್ನಾರಾಯಣನ ಚರಣಗಳಲ್ಲಿ ಪ್ರಾರ್ಥನೆಯಾಗಿದೆ.’ ಶ್ರೀ ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ ೬೮,ವಯಸ್ಸು ೪೨ ವರ್ಷ), ತಮಿಳುನಾಡು.(೧೬. ೩. ೨೦೨೫) |