ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರ ಆಯಾ ಸಮಯದ ಛಾಯಾಚಿತ್ರಗಳಿಂದ ಮಾಡಿದ ಅವರಲ್ಲಿನ ಸಾಧನೆಯಲ್ಲಿನ ಘಟಕಗಳ ಅಭ್ಯಾಸ !

ಈ ಲೇಖನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಯವರ ೧೯೮೩, ಅಂದರೆ ಅವರು ಸಾಧನೆ ಪ್ರಾರಂಭಿಸಿದ ವರ್ಷದಿಂದ ೨೦೨೨, ಅಂದರೆ ಸಪ್ತರ್ಷಿಗಳು ಅವರನ್ನು ‘ಸಚ್ಚಿದಾನಂದ ಪರಬ್ರಹ್ಮ’ ಎಂದು ಘೋಷಣೆ ಮಾಡಿದ ಈ ಅವಧಿಯಲ್ಲಿನ ಸಾಧನೆಯ ಘಟಕಗಳನ್ನು ನೀಡಲಾಗಿದೆ. ಅವರ ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರ ಆಯಾ ಸಮಯದ ಛಾಯಾಚಿತ್ರಗಳಿಂದ ಅವರ ಸಾಧನೆಯಲ್ಲಿನ ಘಟಕಗಳ ಅಭ್ಯಾಸಮಾಡಲು ಪ್ರಯತ್ನ ಮಾಡಲಾಗಿದೆ. ಈ ಲೇಖನದಲ್ಲಿ ೧೯೮೩ ರಿಂದ ೧೯೯೫ ಈ ಅವಧಿಯಲ್ಲಿ ಮಾಡಿದ ಅವರ ಸಾಧನೆಯಲ್ಲಿನ ಘಟಕಗಳ ಅಭ್ಯಾಸವನ್ನು ಮಂಡಿಸಿದ್ದು ೧೯೮೭, ೧೯೯೧ ಮತ್ತು ೧೯೯೫ ರಲ್ಲಿನ ಛಾಯಾಚಿತ್ರಗಳನ್ನು ಕೊಡಲಾಗಿದೆ. (ಛಾಯಾಚಿತ್ರಗಳನ್ನು ಸಾಲಿನಲ್ಲಿ ನೋಡಬಹುದು.)                

(ಭಾಗ ೧)

ವರ್ಷ ೧೯೮೭ (ಶೇ. ೬೧ ಆಧ್ಯಾತ್ಮಿಕ ಮಟ್ಟ)
ವರ್ಷ ೧೯೯೧ (ಶೇ. ೭೦ ಆಧ್ಯಾತ್ಮಿಕ ಮಟ್ಟ)
ವರ್ಷ ೧೯೯೫ (ಶೇ. ೭೯ ಆಧ್ಯಾತ್ಮಿಕ ಮಟ್ಟ)

೧. ೧೯೮೩ ರಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸಾಧನೆಯನ್ನು ಆರಂಭಿಸಿದರು ಮತ್ತು ಅವರಿಗೆ ೨೪.೭.೧೯೮೭ ರಂದು ಗುರುಪ್ರಾಪ್ತಿ ಆಯಿತು

 ‘ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ೧೯೮೩ ರಲ್ಲಿ ಅಧ್ಯಾತ್ಮಶಾಸ್ತ್ರದ ಅಧ್ಯಯನವನ್ನು ಆರಂಭಿಸಿದರು. ಅದಕ್ಕಾಗಿ ಅವರು ಅಧ್ಯಾತ್ಮದಲ್ಲಿನ ಅಧಿಕಾರಿಗಳಾಗಿರುವ ೨೫ ಕ್ಕಿಂತಲೂ ಹೆಚ್ಚು ಸಂತರನ್ನು ಸಂಪರ್ಕಿಸಿ ಅಧ್ಯಾತ್ಮಶಾಸ್ತ್ರದ ತಾತ್ತ್ವಿಕ ಮತ್ತು ಪ್ರಾಯೋಗಿಕ ಅಂಗಗಳನ್ನು ತಿಳಿದು ಕೊಂಡರು. ಈ ಅಭ್ಯಾಸದಿಂದ ಅಧ್ಯಾತ್ಮಶಾಸ್ತ್ರದ ಶ್ರೇಷ್ಠತೆಯ ಅರಿವಾದ ನಂತರ ಅವರು ಸಂತರು ಹೇಳಿದಂತೆ ಸ್ವತಃ ಸಾಧನೆಯನ್ನುಆರಂಭಿಸಿದರು. ಸಾಧನೆಯಲ್ಲಿ ಗುರುಗಳನ್ನು ನಾವು ಮಾಡಿಕೊಳ್ಳುವುದಿರುವುದಿಲ್ಲ, ನಾವು ಸಾಧನೆ ಮಾಡಲು ಆರಂಭಿಸಿದ ನಂತರ, ಯೋಗ್ಯ ಹಂತದಲ್ಲಿ ನಮ್ಮ ಜೀವನದಲ್ಲಿ ಗುರುಗಳು ತಾವಾಗಿಯೇ ಬರುತ್ತಾರೆ. ಅದೇ ರೀತಿ ೨೪.೭.೧೯೮೭ ರಂದು, ಅಂದರೆ ೧೯೮೩ ರಿಂದ ಸಾಧನೆ ಮಾಡಿದ ನಂತರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಮಧ್ಯಪ್ರದೇಶದ ಇಂದೂರಿನಲ್ಲಿನ ಸಂತರಾದ ಪ.ಪೂ. ಭಕ್ತರಾಜ ಮಹಾರಾಜರು ‘ಗುರು’ಗಳೆಂದು ಲಭಿಸಿದರು. ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಡಹಾಣುವಿನ ಪ.ಪೂ. ಅಣ್ಣಾ ಕರಂದೀಕರ್‌ ಇವರು ಡಾ. ಆಠವಲೆಯವರನ್ನು ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಿಗೆ ತಂದರು. ಆಗ ಡಾ. ಆಠವಲೆಯವರು ವರ್ಷವಿಡೀ ಪ.ಪೂ. ಅಣ್ಣಾ ಕರಂದೀಕರ್‌ ಇವರಲ್ಲಿಗೆ ಅಧ್ಯಾತ್ಮಶಾಸ್ತ್ರ ಕಲಿಯಲು ಹೋಗುತ್ತಿದ್ದರು.

(ಸದ್ಗುರು) ಡಾ. ಮುಕುಲ ಗಾಡಗೀಳ

೨. ‘ಸಂಮೋಹನ ಉಪಚಾರತಜ್ಞ’ರೆಂದು ಖ್ಯಾತಿ ಪಡೆದಿರುವ ಡಾಕ್ಟರ್‌ (ಆಧುನಿಕ ವೈದ್ಯ) ಆಗಿದ್ದರೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಧ್ಯಾತ್ಮದ ಕಡೆಗೆ ತಿರುಗಲು ಕಾರಣ 

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಧ್ಯಾತ್ಮದ ಕಡೆಗೆ ತಿರುಗುವ ಕಾರಣ ವೈಶಿಷ್ಟ್ಯಪೂರ್ಣವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೧೯೬೪ ರಲ್ಲಿ ವೈದ್ಯಕೀಯ ಶಿಕ್ಷಣ (ಎಮ್‌.ಬಿ.ಬಿ.ಎಸ್‌.) ಪೂರ್ಣಗೊಳಿಸಿದ ನಂತರ ೧೯೬೬ ರಿಂದ ೧೯೭೧ ರ ವರೆಗೆ ಮುಂಬಯಿಯ ವಿವಿಧ ಆಸ್ಪತ್ರೆಗಳಲ್ಲಿ ನೌಕರಿ ಮಾಡಿದರು. ಅನಂತರ ಅವರು ೧೯೭೧ ರಿಂದ ೧೯೭೮ ರ ವರೆಗೆ ಇಂಗ್ಲೆಂಡ್‌ನಲ್ಲಿ ಸಂಮೋಹನ ಉಪಚಾರ ಮಾಡುತ್ತಿದ್ದರು. ೧೯೭೮ ರಲ್ಲಿ ಮುಂಬಯಿಗೆ ಹಿಂದಿರುಗಿದ ನಂತರ ಅವರು ‘ಸಂಮೋಹನ ಉಪಚಾರ ತಜ್ಞ’ರೆಂದು ವ್ಯವಸಾಯವನ್ನು ಆರಂಭಿಸಿದರು. ಅವರು ಆ ಕ್ಷೇತ್ರದಲ್ಲಿ ಖ್ಯಾತ ಆಧುನಿಕ ವೈದ್ಯರಾಗಿದ್ದರು; ಆದರೆ ಅವರಿಗೆ ತಾನು ಎಷ್ಟು ಪ್ರಯತ್ನಿಸಿದರೂ ತನ್ನ ಎಲ್ಲ ರೋಗಿಗಳನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲವೆಂಬುದು ಅರಿವಾಯಿತು, ವೈದ್ಯಕೀಯ ಕ್ಷೇತ್ರಕ್ಕೆ ಮಿತಿಯಿದೆ. ಯಾವ ಕಾಯಿಲೆಗಳನ್ನು ಆಧುನಿಕ ವೈದ್ಯರಾದ ನಾವು ಗುಣಪಡಿಸಲು ಸಾಧ್ಯವಾಗುವುದಿಲ್ಲವೋ, ಅಂತಹ ವ್ಯಾಧಿಗಳನ್ನು ಸಂತ-ಮಹಾತ್ಮರು ಗುಣಪಡಿಸುತ್ತಿದ್ದರು’, ಅದು ಯಾವ ಶಾಸ್ತ್ರವಾಗಿದೆ ?’, ಎಂಬುದನ್ನು ಕಂಡು ಹಿಡಿಯಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ೧೯೮೩ ರಿಂದ ಸಂತ-ಮಹಾತ್ಮರ, ಸದ್ಗುರುಗಳ ಬಳಿ ಹೋಗಲು ಆರಂಭಿಸಿದರು. ಅವರಲ್ಲಿ ಅಧ್ಯಾತ್ಮಶಾಸ್ತ್ರವನ್ನು ಕಲಿಯುವ ಜಿಜ್ಞಾಸೆ ಇತ್ತು. ಸಂತರು ‘ಅಧ್ಯಾತ್ಮಶಾಸ್ತ್ರ’ ಬುದ್ಧಿಗೆ ತಿಳಿಯುವ ವಿಷಯವಲ್ಲ, ಅದನ್ನು ಕಲಿಯಲಿಕ್ಕಿದ್ದರೆ ಸಾಧನೆ ಮಾಡಬೇಕು’ ಎಂದು ಡಾ. ಆಠವಲೆಯವರಿಗೆ ಹೇಳಿದರು. ಸಂತರ ಆಜ್ಞಾಪಾಲನೆ ಮಾಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯನ್ನು ಆರಂಭಿಸಿದರು.

೩. ಸಾಧನೆಯಿಂದ ಆಧ್ಯಾತ್ಮಿಕ ಮಟ್ಟ ಹೆಚ್ಚಾದಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಬದಲಾಗುತ್ತಾ ಹೋದ ಸಾಧನೆಯ ಘಟಕಗಳು

೩ ಅ. ಶೇ. ೬೧ (೧೯೮೭, ಗುರುಪ್ರಾಪ್ತಿ) ರಿಂದ ಶೇ. ೭೯ (೧೯೯೫, ಗುರುಗಳ ದೇಹತ್ಯಾಗ) ಆಧ್ಯಾತ್ಮಿಕ ಮಟ್ಟದ ವರೆಗಿನ ಪ್ರವಾಸ.  

೩ ಅ ೧. ೧೯೮೭ ರಲ್ಲಿ ಗುರುಪ್ರಾಪ್ತಿಯಾಗುವುದು ಮತ್ತು ಆಗ ಶೇ. ೬೧ ಆಧ್ಯಾತ್ಮಿಕ ಮಟ್ಟ ಇರುವುದು : ಈ ಕಲಿಯುಗದಲ್ಲಿ ಸಾಧನೆ ಮಾಡದಿರುವ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೨೦ ಇರುತ್ತದೆ. ಇಂತಹ ವ್ಯಕ್ತಿ ಸಂಪೂರ್ಣ ಮಾಯೆಯಲ್ಲಿರುತ್ತಾನೆ. ಸಾಧನೆ ಮಾಡಿ ವ್ಯಕ್ತಿ ಸಂಪೂರ್ಣ ಈಶ್ವರನೊಂದಿಗೆ ಏಕರೂಪವಾದಾಗ ಅವನ ಆಧ್ಯಾತ್ಮಿಕ ಮಟ್ಟ ಶೇ. ೧೦೦ ರಷ್ಟಾಗುತ್ತದೆ. ಅಲ್ಪಸ್ವಲ್ಪ ಸಾಧನೆ ಮಾಡಿ ವ್ಯಕ್ತಿ ಶೇ. ೫೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದಾಗ ಅವನಲ್ಲಿ ಮಾಯೆ ಮತ್ತು ಈಶ್ವರನ ಕಡೆಗಿನ ಆಸಕ್ತಿ ಸರಿಸಮಾನವಾಗಿರುತ್ತವೆ. ಆದ್ದರಿಂದ ಅವನಲ್ಲಿ ಸಾಧನೆ ಮಾಡುವ ಸಂಪೂರ್ಣ ನಿರ್ಧಾರ ಆಗಿರುವುದಿಲ್ಲ. ಸಾಧನೆಯಲ್ಲಿ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟಕ್ಕೆ ತುಂಬಾ ಮಹತ್ವವಿದೆ.

ಈ ಮಟ್ಟದಲ್ಲಿ ಮಾಯೆಯ ಆಸಕ್ತಿ ತುಂಬಾ ಕಡಿಮೆಯಾಗಿ ಸಾಧನೆಯ ನಿರ್ಧಾರ ಆಗಿರುತ್ತದೆ ಮತ್ತು ಆ ವ್ಯಕ್ತಿಯಲ್ಲಿ ಚೈತನ್ಯ ಕಾರ್ಯನಿರತವಾಗಿರುತ್ತದೆ. ಮಹತ್ವದ ವಿಷಯವೆಂದರೆ ಆ ವ್ಯಕ್ತಿ ಜನ್ಮ-ಮರಣದ ಚಕ್ರದಿಂದ ಮುಕ್ತನಾಗಿರುತ್ತಾನೆ. ಸಾಧನೆ ಮಾಡಿದ್ದರಿಂದ ೧೯೮೭ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟ ಶೇ. ೬೧ ಆದಾಗ ಅವರಿಗೆ ಪ.ಪೂ. ಭಕ್ತರಾಜ ಮಹಾರಾಜರು ಗುರುಗಳೆಂದು ಲಭಿಸಿದರು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಭಾವ, ಅಂತರ್ಮನಸ್ಸಿನ ಸಾಧನೆ ಮತ್ತು ಸಾಧನೆಯ ತಳಮಳ ಈ ಘಟಕಗಳು ಶೇ. ೨೦ ರಿಂದ ೨೪ ರಷ್ಟಿದ್ದವು. ಸಾಮಾನ್ಯ ವ್ಯಕ್ತಿಯಲ್ಲಿ ಈ ಘಟಕಗಳು ಶೂನ್ಯವಿರುತ್ತವೆ. ಈ ಆಧ್ಯಾತ್ಮಿಕ ಮಟ್ಟದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಹಂ ಶೇ. ೧೫, ಅಂದರೆ ತುಂಬಾ ಕಡಿಮೆಯಿತ್ತು. ಸಾಮಾನ್ಯ ವ್ಯಕ್ತಿಯಲ್ಲಿ ಅಹಂ ಶೇ. ೨೫ ರಿಂದ ೩೦ ಇರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಈಶ್ವರಪ್ರಾಪ್ತಿಗಾಗಿ ತ್ಯಾಗದ ಪ್ರಮಾಣ ಶೇ. ೨೫ ರಷ್ಟಿತ್ತು; ಏಕೆಂದರೆ ಕಳೆದ ೪ ವರ್ಷಗಳಿಂದ ಅವರು ಪ್ರತಿ ವಾರದ ಶನಿವಾರ ಮತ್ತು ರವಿವಾರ ಸಂತರಲ್ಲಿಗೆ ಅಧ್ಯಾತ್ಮ ಕಲಿಯಲು ಹೋಗುತ್ತಿದ್ದರು. ವ್ಯವಸಾಯದ ರಜೆಯ ದಿನವನ್ನು ಕೂಡ ಅವರು ಸತ್ಕಾರ್ಯಕ್ಕೆ ವಿನಿಯೋಗಿಸುತ್ತಿದ್ದರು. ಅದರ ಜೊತೆಗೆ ಅವರು ನಾಮಜಪವನ್ನೂ ಆರಂಭಿಸಿದ್ದರು. ಇದು ಅವರ ಮನಸ್ಸಿನ ತ್ಯಾಗ ಆಗಿತ್ತು. ಅವರಲ್ಲಿ ಮಾಯೆಯಲ್ಲಿನ ಕರ್ತವ್ಯದ ಆಸಕ್ತಿ ಶೇ. ೧೦, ಅಂದರೆ ತುಂಬಾ ಕಡಿಮೆ ಇತ್ತು. ಸಾಮಾನ್ಯ ವ್ಯಕ್ತಿಯಲ್ಲಿ ಅದು ಶೇ. ೩೦ ರಿಂದ ೫೦ ರಷ್ಟಿರುತ್ತದೆ. ೧೯೮೭ ರಲ್ಲಿ ಅವರಿಗೆ ಗುರುಪ್ರಾಪ್ತಿಯಾಗಿ ಅವರ ಮೇಲೆ ಶೇ. ೨೫ ರಷ್ಟು ಗುರುಕೃಪೆ ಕಾರ್ಯನಿರತವಾಗಿತ್ತು. ಇದರ ಕಾರಣವೆಂದರೆ, ಕಳೆದ ೪ ವರ್ಷಗಳಿಂದ ಅವರು ಸಂತರು ಹೇಳಿದಂತೆ ಸಾಧನೆ ಮಾಡುತ್ತಿದ್ದರು. ಆದ್ದರಿಂದ ಅವರ ಮೇಲೆ ಪ್ರತ್ಯಕ್ಷ ಗುರುಕೃಪೆ ಕಾರ್ಯನಿರತವಾಗಿತ್ತು.

೩ ಅ ೧ ಅ. ೧೯೮೩ ರಲ್ಲಿ ಸಾಧನೆಯ ಆರಂಭದಲ್ಲಿಯೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟ ಶೇ. ೫೭ ರಷ್ಟಿತ್ತು, ಇದರಿಂದ ಅವರ ಪೂರ್ವಜನ್ಮದ ಸಾಧನೆ ಇರುವುದು ತಿಳಿಯುತ್ತದೆ : ೧೯೮೩ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ವಿವಿಧ ಸಂತರಲ್ಲಿಗೆ ಹೋಗಿ ಸಾಧನೆಯನ್ನು ಆರಂಭಿಸಿದರು, ಆಗ ಅವರ ಆಧ್ಯಾತ್ಮಿಕ ಮಟ್ಟ ಶೇ. ೫೭ ರಷ್ಟಿತ್ತು. ೧೯೮೩ ಕ್ಕಿಂತ ಮೊದಲು ಅವರು ಸಾಧನೆ ಮಾಡುತ್ತಿರಲಿಲ್ಲ, ಆದರೂ ಅವರು ಸಾಧನೆಯನ್ನು ಆರಂಭಿಸುವಾಗ ಅವರ ಆಧ್ಯಾತ್ಮಿಕ ಮಟ್ಟ ಶೇ. ೫೭ ರಷ್ಟಿತ್ತು, ಇದು ವೈಶಿಷ್ಟ್ಯಪೂರ್ಣ ವಾಗಿದೆ. ಇದರಿಂದ ಅವರಲ್ಲಿ ಪೂರ್ವಜನ್ಮದ ಸಾಧನೆ ಇತ್ತು ಎಂಬುದು ಗಮನಕ್ಕೆ ಬರುತ್ತದೆ. ‘ಯಾವುದೇ ವ್ಯಕ್ತಿ ಹಿಂದಿನ ಜನ್ಮದಲ್ಲಿ ಸಾಧನೆ ಮಾಡಿ ಎಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿರುತ್ತಾನೆಯೋ, ಅದೇ ಆಧ್ಯಾತ್ಮಿಕ ಮಟ್ಟ ಅವನ ಪುನರ್ಜನ್ಮದ ಸಮಯದಲ್ಲಿ ಇರುತ್ತದೆ. ಇದು ಅಧ್ಯಾತ್ಮದಲ್ಲಿನ ಒಂದು ನಿಯಮವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟ ಶೇ. ೫೭ ರಷ್ಟಿರುವಾಗ ಅವರಲ್ಲಿನ ಭಾವ, ಅಂತರ್ಮನಸ್ಸಿನ ಸಾಧನೆ, ಸಾಧನೆಯಲ್ಲಿನ ತಳಮಳ, ತ್ಯಾಗ ಇತ್ಯಾದಿ ಸಾಧನೆಯಲ್ಲಿನ ಘಟಕಗಳ ಪ್ರಮಾಣ ಶೇ. ೧೦ ರಿಂದ ೧೬ ರಷ್ಟಿತ್ತು. ಅವರ ಆಧ್ಯಾತ್ಮಿಕ ಮಟ್ಟ ಶೇ. ೬೧ ಆದಾಗ ಆ ಘಟಕಗಳ ಪ್ರಮಾಣ ಶೇ. ೨೦ ರಿಂದ ೨೫ ರಷ್ಟಾಗಿತ್ತು. ಇದೇ ಶೇ. ೬೦ ಆಧ್ಯಾತ್ಮಿಕ ಮಟ್ಟ ಆಗುವುದರ ವೈಶಿಷ್ಟ್ಯವಾಗಿದೆ.

೩ ಅ ೨. ೧೯೯೧ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಆಧ್ಯಾತ್ಮಿಕ ಮಟ್ಟ ಶೇ. ೭೦ ಆಗುವುದು, ಅಂದರೆ ಅವರಿಗೆ ಸಂತಪದವಿ ಪ್ರಾಪ್ತವಾಯಿತು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೧೯೮೭ ರಿಂದ ೧೯೯೧ ಅಂದರೆ ಕೇವಲ ೪ ವರ್ಷ ಸಾಧನೆ ಮಾಡಿ ಶೇ. ೬೧ ಆಧ್ಯಾತ್ಮಿಕ ಮಟ್ಟದಿಂದ ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದರು. ಇದರಿಂದ ಅವರು ಅವರ ಗುರು ಪ.ಪೂ. ಭಕ್ತರಾಜ ಮಹಾರಾಜರು ಹೇಳಿದಂತೆ ಎಷ್ಟು ತಳಮಳದಿಂದ ಸಾಧನೆ ಮಾಡಿದರು, ಎಂಬುದು ಗಮನಕ್ಕೆ ಬರುತ್ತದೆ. ಇದರ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡುತ್ತಿದ್ದೇವೆ.

ಅ. ಪ.ಪೂ. ಭಕ್ತರಾಜ ಮಹಾರಾಜರು ಅಖಂಡ (೨೪ ಗಂಟೆ) ನಾಮಸ್ಮರಣೆ ಮಾಡಲು ಹೇಳಿದರು. ಡಾ. ಆಠವಲೆಯವರಿಗೆ ಅಧ್ಯಾತ್ಮಶಾಸ್ತ್ರದ ಸಂಶೋಧನೆ ಮಾಡಲಿಕ್ಕಿದ್ದ ಕಾರಣ ಅವರು ‘ನಾಮಸ್ಮರಣೆ ಮಾಡಿ ನೋಡೋಣ,’ ಎಂದು ವಿಚಾರ ಮಾಡಿ ಅದನ್ನು ಮಾಡಲು ಆರಂಭಿಸಿದರು. ಯಾವುದೇ ಕೃತಿ ಮಾಡು ವಾಗ ಚಿತ್ತ ನಾಮದ ಕಡೆಗಿರಬೇಕೆಂದು ಗುರುಗಳು ಅವರಿಗೆ ಹೇಳಿದ್ದರು. ೮ ತಿಂಗಳ ನಂತರ ಪ.ಪೂ. ಭಕ್ತರಾಜ ಮಹಾರಾಜರು ಅವರಿಗೆ, ”ಈಗ ನಿಮ್ಮ ನಾಮ ಅಂತರ್ಮನಸ್ಸಿನಲ್ಲಿ (ಅಂದರೆ ನಿರಂತರ) ನಡೆಯುತ್ತಿದೆ !’’ ಎಂದು ಹೇಳಿದರು.

ಆ. ಸತತವಾಗಿ ನಡೆಯುತ್ತಿರುವ ನಾಮಜಪದಿಂದ ಮನಸ್ಸಿನ ತ್ಯಾಗ ಆರಂಭವಾದ ನಂತರ ಪ.ಪೂ. ಭಕ್ತರಾಜ ಮಹಾರಾಜರು ಡಾ. ಆಠವಲೆಯವರಿಗೆ, ”ಕಾಂದಳಿಯಲ್ಲಿ ನಮ್ಮ ಆಶ್ರಮವಿದೆ, ಅಲ್ಲಿಗೆ ಹೋಗಿ ಶಾರೀರಿಕ ಸೇವೆ ಮಾಡಿ’’ ಎಂದು ಹೇಳಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಚಾಚೂ ತಪ್ಪದೆ, ಪ್ರತಿ ಶನಿವಾರ-ರವಿವಾರ ಶಾರೀರಿಕ ಕಷ್ಟದ ಸೇವೆಗಳನ್ನು ಮಾಡಲು ಆರಂಭಿಸಿದರು. ಈ ರೀತಿ ಗುರುಗಳು ಅವರ ತನುವಿನ ತ್ಯಾಗವನ್ನು ಮಾಡಿಸಿಕೊಂಡರು.

ಇ. ಒಂದು ದಿನ ಪ.ಪೂ. ಡಾ. ಆಠವಲೆಯವರು ಪ.ಪೂ. ಭಕ್ತರಾಜ ಮಹಾರಾಜರಿಗೆ, ”ನನ್ನಲ್ಲಿ ನಿಮಗೆ ಗುರುದಕ್ಷಿಣೆ ಕೊಡಲು ನನ್ನ ಚಿಕಿತ್ಸಾಲಯದ ವಾಸ್ತು ಮಾತ್ರ ಉಳಿದಿದೆ, ನಾನು ಅದನ್ನು ನಿಮಗೆ ಅರ್ಪಣೆ ಮಾಡುತ್ತೇನೆ,’’ ಎಂದರು. ಆಗ ಪ.ಪೂ. ಭಕ್ತರಾಜ ಮಹಾರಾಜರು, ”ಚಿಕಿತ್ಸಾಲಯದ ಪ್ರತಿ ಗುರುವಾರದ ಉತ್ಪನ್ನದ ನಾಲ್ಕನೇ ಭಾಗ ನನಗೆ ಕೊಟ್ಟರೆ ಸಾಕು’’ ಎಂದು ಹೇಳಿದರು. ಈ ರೀತಿ ಪ.ಪೂ. ಡಾ. ಆಠವಲೆಯವರಿಂದ ಧನದ ತ್ಯಾಗ ಮಾಡಿಸಿಕೊಂಡರು. ಅಧ್ಯಾತ್ಮದಲ್ಲಿ ತ್ಯಾಗಕ್ಕೆ ಅತ್ಯಂತ ಮಹತ್ವವಿದೆ. ತನು, ಮನ, ಮತ್ತು ಧನ ಈ ಮೂರೂ ಬಗೆಯ ತ್ಯಾಗವಾಗಬೇಕು. ಈ ತ್ಯಾಗದ ಹೊರತು ಸದ್ಗುರುಪ್ರಾಪ್ತಿ ಆಗಲು ಸಾಧ್ಯವಿಲ್ಲ.

೩ ಅ ೨ ಅ. ಸಂತಪದವಿಯಲ್ಲಿರುವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಸಾಧನೆಯಲ್ಲಿನ ಘಟಕಗಳ ಪ್ರಮಾಣ : ಪ.ಪೂ. ಭಕ್ತರಾಜ ಮಹಾರಾಜರು ಪ.ಪೂ. ಡಾ. ಆಠವಲೆಯವರಿಗೆ ಅಹಂ-ನಿರ್ಮೂಲನೆ ಮಾಡುವುದು, ಈಶ್ವರೇಚ್ಛೆಯಿಂದ ವರ್ತಿಸುವುದು ಇತ್ಯಾದಿ ಸಾಧನೆಯಲ್ಲಿನ ಅಂಗಗಳನ್ನು ಕಲಿಸಿದರು. ಇದರಿಂದ ಪ.ಪೂ. ಡಾ. ಆಠವಲೆಯವರಲ್ಲಿನ ಭಾವ, ಅಂತರ್ಮನಸ್ಸಿನಲ್ಲಿನ ಸಾಧನೆ, ಸಾಧನೆಯ ತಳಮಳ, ತ್ಯಾಗ ಇತ್ಯಾದಿ ಸಾಧನೆಯಲ್ಲಿನ ಘಟಕಗಳಲ್ಲಿನ ಶೇ. ೫-೬ ರಷ್ಟು ಹೆಚ್ಚಾಗಿ ಅದು ಸುಮಾರು ಶೇ. ೨೯ ರಷ್ಟಾಯಿತು. ವಿಶೇಷವೆಂದರೆ ಅವರಲ್ಲಿನ ಆನಂದ ಮತ್ತು ವ್ಯಾಪಕತ್ವದ ಪ್ರಮಾಣದ ಸುಮಾರು ಶೇ. ೧೦ ರಷ್ಟು ಹೆಚ್ಚಾಯಿತು. ಅದೇ ರೀತಿ ಅವರಲ್ಲಿನ ಅಹಂ ಮತ್ತು ಮಾಯೆಯಲ್ಲಿನ ಕರ್ತತ್ವದ ಆಸಕ್ತಿಯ ಪ್ರಮಾಣ ಅನುಕ್ರಮವಾಗಿ ಶೇ. ೧೧ ಮತ್ತು ಶೇ. ೬ ರಷ್ಟು ಕಡಿಮೆಯಾಯಿತು.

೩ ಅ ೨ ಆ. ಸಾಧನೆಯಿಂದ ಆನಂದಾವಸ್ಥೆಯನ್ನು ಅನುಭವಿಸಲು ಆರಂಭವಾದಾಗ ಗುರುಗಳಿಂದ ಕಲಿಯಲು ಸಿಕ್ಕಿದ ಒಂದು ಪ್ರಸಂಗ : ಅಂದಿನ ಒಂದು ಪ್ರಸಂಗವೆಂದರೆ ಸಾಧನೆಯಿಂದಾಗಿ ಆನಂದಾವಸ್ಥೆಯನ್ನು ಅನುಭವಿಸಲು ಆರಂಭವಾದ ನಂತರ ಒಂದು ದಿನ ಪ.ಪೂ. ಡಾ. ಆಠವಲೆಯವರು ಪ.ಪೂ. ಭಕ್ತರಾಜ ಮಹಾರಾಜರಿಗೆ, ”ಇನ್ನು ಮುಂದೆ ನಾನು ನಿಮಗೆ (ಅಧ್ಯಾತ್ಮದಲ್ಲಿನ) ಒಂದು ಪ್ರಶ್ನೆಯನ್ನೂ ಕೇಳುವುದಿಲ್ಲ’’, ಎಂದು ಹೇಳಿದರು. (ಜಿಜ್ಞಾಸೆಯಿಂದಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ಅಧ್ಯಾತ್ಮದಲ್ಲಿನ ಅನೇಕ ವಿಷಯಗಳ ಬಗ್ಗೆ ಸಂದೇಹ ನಿವಾರಣೆ ಮಾಡಿಕೊಳ್ಳುತ್ತಿದ್ದರು.) ಆಗ ಅವರು ಪ.ಪೂ. ಡಾಕ್ಟರರ ಮೇಲೆ ತುಂಬಾ ಕೋಪಗೊಂಡರು. ‘ಜಿಜ್ಞಾಸುವೇ ಜ್ಞಾನದ ಅಧಿಕಾರಿಯಾಗುತ್ತಾನೆ !’, ಎಂಬುದನ್ನು ಅವರು ಇದರಿಂದ ಕಲಿಸಿದರು. ಗುರುಗಳ ಆಜ್ಞಾಪಾಲನೆಯಿಂದ ಪ.ಪೂ. ಡಾ. ಆಠವಲೆಯವರ ಮೇಲಿನ ಗುರುಕೃಪೆ ಶೇ. ೪೦ ರಷ್ಟಾಯಿತು. ಆಗ ಭಕ್ತರಾಜ ಮಹಾರಾಜರು ಪ.ಪೂ. ಡಾ. ಆಠವಲೆಯವರ ಬಗ್ಗೆ ‘ಇವನು ಜೀವನ್ಮುಕ್ತನಾಗಿದ್ದಾನೆ !’ ಎಂದು ಹೇಳಲು ಪ್ರಾರಂಭಿಸಿದರು.

೩ ಅ ೩. ೧೯೯೫ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಆಧ್ಯಾತ್ಮಿಕ ಮಟ್ಟ ಶೇ. ೭೯ ರಷ್ಟಾಗುವುದು : ೧೭ ನವೆಂಬರ್‌ ೧೯೯೫ ರಂದು ಪ.ಪೂ. ಭಕ್ತರಾಜರು ದೇಹತ್ಯಾಗ ಮಾಡಿದರು. ಅಷ್ಟರ ವರೆಗೆ ಅವರ ಶಿಷ್ಯ ಪ.ಪೂ. ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟ ಶೇ. ೭೯ ಆಗಿತ್ತು. ೧೯೯೧ ರಲ್ಲಿ ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟವಿದ್ದ ಪ.ಪೂ. ಡಾ. ಆಠವಲೆಯವರು ಶೀಘ್ರಗತಿಯಲ್ಲಿ ಮುಂದಿನ ೪ ವರ್ಷಗಳಲ್ಲಿ ಶೇ. ೭೯ ರ ಮಟ್ಟವನ್ನು ತಲುಪಿದರು. ಇದರ ಕಾರಣವೆಂದರೆ, ಗುರು ಪ.ಪೂ. ಭಕ್ತರಾಜ ಮಹಾರಾಜರು ಏನೆಲ್ಲ ಹೇಳಿದ್ದರೊ, ಅದೆಲ್ಲವನ್ನೂ ಪ.ಪೂ. ಡಾಕ್ಟರರು ತಕ್ಷಣ ಮಾಡಿದರು.

೩ ಅ ೩ ಅ. ಗುರುಗಳ ಆಜ್ಞಾಪಾಲನೆ ಮಾಡಿದ್ದರಿಂದ ಸಮಷ್ಟಿ ಸಾಧನೆಯಲ್ಲಿ ಮುಂದೆ ಮುಂದೆ ಹೋದರು

೧. ಅಧ್ಯಾತ್ಮ ಪ್ರಸಾರಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೧.೮.೧೯೯೧ ರಂದು ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯನ್ನು ಸ್ಥಾಪಿಸಿದರು.

೨. ೧೯೯೨ ರಲ್ಲಿ ‘ಮಹಾರಾಷ್ಟ್ರದಲ್ಲಿ ಅಧ್ಯಾತ್ಮದ ಪ್ರಸಾರ ಮಾಡಿ’, ಎಂದು ಪ.ಪೂ. ಭಕ್ತರಾಜ ಮಹಾರಾಜರು ಹೇಳಿದರು.

೩. ೧೯೯೩ ರಲ್ಲಿ ‘ಈಗ ಭಾರತದಾದ್ಯಂತ ಅಧ್ಯಾತ್ಮ ಪ್ರಚಾರ ಮಾಡಿ’, ಎಂದು ಪ.ಪೂ. ಭಕ್ತರಾಜ ಮಹಾರಾಜರು ಹೇಳಿದರು.

೪. ೧೯೯೩ ರಲ್ಲಿ ಪ.ಪೂ. ಭಕ್ತರಾಜ ಮಹಾರಾಜರು ಪ.ಪೂ.ಡಾ. ಆಠವಲೆಯವರಿಗೆ, ”ಡಾಕ್ಟರ್, ಈಗ ವಾರದಲ್ಲಿ ಒಂದೇ ದಿನ ರೋಗಿಗಳನ್ನು ನೋಡಿ,’’ ಎಂದರು. ಅವರ ಆಜ್ಞಾಪಾಲನೆ ಮಾಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಚಿಕಿತ್ಸಾಲಯವನ್ನು ವಾರದಲ್ಲಿ ಒಂದೇ ದಿನ ತೆರೆಯಲು ಆರಂಭಿಸಿದರು ಮತ್ತು ಉಳಿದ ೬ ದಿನ ಅಧ್ಯಾತ್ಮಪ್ರಸಾರ ಮಾಡಲು ಆರಂಭಿಸಿದರು.

೫. ಶೀಘ್ರ ಈಶ್ವರಪ್ರಾಪ್ತಿಗಾಗಿ ೧೯೯೪ ರಲ್ಲಿ ‘ಗುರುಕೃಪಾಯೋಗ’ ಈ ಸಾಧನಾ ಮಾರ್ಗದ ನಿರ್ಮಿತಿ : ೧೯೯೩ ರಲ್ಲಿ ಪ.ಪೂ. ಭಕ್ತರಾಜ ಮಹಾರಾಜರು ಪ.ಪೂ. ಡಾ. ಆಠವಲೆಯವರಿಗೆ, ”ಡಾಕ್ಟರ್, ನೀವು ನಮಗೆ ತನು, ಮನ, ಧನವನ್ನು ನೀಡಿದಿರಿ. ನಾವು ನಿಮಗೆ ಜ್ಞಾನ, ಭಕ್ತಿ, ಮತ್ತು ವೈರಾಗ್ಯ ನೀಡಿದೆವು’’ ಎಂದು ಹೇಳಿದರು. ‘ಜ್ಞಾನ, ಭಕ್ತಿ ಮತ್ತು ವೈರಾಗ್ಯ’ ಇದರ ಅರ್ಥ, ‘ಜ್ಞಾನಯೋಗ, ಭಕ್ತಿಯೋಗ ಮತ್ತು ವೈರಾಗ್ಯ, ಅಂದರೆ ಕರ್ಮಫಲದ ಅಪೇಕ್ಷೆಯನ್ನಿಡದೆ ಕರ್ಮ ಮಾಡಲು ಕಲಿಸುವ ಕರ್ಮಯೋಗ.’ ಇದರ ಅರ್ಥವೆಂದರೆ, ಪ.ಪೂ. ಭಕ್ತರಾಜ ಮಹಾರಾಜರು ಜ್ಞಾನಯೋಗ, ಭಕ್ತಿಯೋಗ ಮತ್ತು ಕರ್ಮಯೋಗ ಸಮ್ಮಿಶ್ರವಾಗಿರುವ ‘ಗುರುಕೃಪಾಯೋಗ’ವನ್ನು ಆಗಲೆ ಕಲಿಸಿದರು.

೬. ೧೯೯೪ ರಿಂದ ತಮ್ಮ ಚಿಕಿತ್ಸಾಲಯವನ್ನು ಮುಚ್ಚಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೂರ್ಣವೇಳೆ ಗುರುಕಾರ್ಯ (ಅಧ್ಯಾತ್ಮಪ್ರಸಾರ) ಮಾಡಲು ಆರಂಭಿಸಿದರು.

೭. ನಂತರ ೧೯೯೫ ರಲ್ಲಿ ಪ.ಪೂ. ಭಕ್ತರಾಜ ಮಹಾರಾಜರು, ‘ಈಗ ಜಗತ್ತಿನಾದ್ಯಂತ ಅಧ್ಯಾತ್ಮಪ್ರಸಾರ ಮಾಡಿ’ ಎಂದು ಹೇಳಿದರು. ಈ ರೀತಿ ಪ.ಪೂ. ಭಕ್ತರಾಜ ಮಹಾರಾಜರು ಪ.ಪೂ. ಡಾ. ಆಠವಲೆಯವರನ್ನು ಮುಂದೆ ಕರೆದುಕೊಂಡು ಹೋದರು.

೩ ಅ ೩ ಆ. ಗುರುಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರನ್ನು ಹೇಗೆ ಸಿದ್ಧಪಡಿಸಿದರು, ಎಂಬುದರ ಕೆಲವು ಉದಾಹರಣೆಗಳು 

೧. ಮಾಯೆಯ ಆಸಕ್ತಿಯನ್ನು ನಾಶಗೊಳಿಸಲು (ಮನೆಯವರಿಂದ ವಿರಕ್ತಿ ಉಂಟಾಗಲು) ಪ.ಪೂ. ಭಕ್ತರಾಜರು ಪ.ಪೂ. ಡಾ. ಆಠವಲೆಯವರನ್ನು ದೀಪಾವಳಿಗೆ ಅವರಲ್ಲಿಗೆ ಕರೆಯುತ್ತಿದ್ದರು.

೨. ಪ.ಪೂ. ಭಕ್ತರಾಜ ಮಹಾರಾಜರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ‘ಗುರುಗಳ ಸಗುಣ ದೇಹದ ಆಸಕ್ತಿಗಿಂತ (ಅವರಲ್ಲಿಗೆ ಹೋಗುವುದಕ್ಕಿಂತ) ಗುರುಕಾರ್ಯ ಮಹತ್ವದ್ದೆಂದು’, ಕಲಿಸಿದರು ಮತ್ತು ನಂತರ ಅದರ ವಿರುದ್ಧ ‘ಗುರುಕಾರ್ಯಕ್ಕಿಂತ ಗುರುಚರಣ ಮಹತ್ವದ್ದು’, ಎಂಬುದನ್ನೂ ಕಲಿಸಿದರು. (ಗುರುಗಳು ಮಟ್ಟ ಮತ್ತು ಅವಶ್ಯಕತೆಗನುಸಾರ ಕಲಿಸಿದರು.)

೩. ಪ.ಪೂ. ಡಾ. ಆಠವಲೆಯವರು ೧೯೯೨ ರಿಂದ ೧೯೯೫ ಈ ಅವಧಿಯಲ್ಲಿ ಪ.ಪೂ. ಭಕ್ತರಾಜ ಮಹಾರಾಜರಿಗೆ ಅಧ್ಯಾತ್ಮದ ವಿಷಯದ ಸಾವಿರಾರು ಪ್ರಶ್ನೆಗಳನ್ನು ಕೇಳಿ ಸಂದೇಹ ನಿವಾರಣೆ ಮಾಡಿಕೊಂಡರು. ಅವರು ಈ ರೀತಿಯಲ್ಲಿ ಗುರುಗಳಿಂದ ಕಲಿತರು.

೩ ಅ ೩ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಹೆಚ್ಚಾಗಿರುವ ಸಾಧನೆಯ ಘಟಕಗಳು : ಈ ರೀತಿಯಲ್ಲಿ ಮಾಡಿದ ಆಜ್ಞಾಪಾಲನೆ, ಸಾಧನೆಯಲ್ಲಿನ ತಳಮಳ, ಜಿಜ್ಞಾಸೆಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಭಾವ, ಅಂತರ್ಮನಸ್ಸಿನಲ್ಲಿನ ಸಾಧನೆ, ಸಾಧನೆಯ ತಳಮಳ, ತ್ಯಾಗ, ಆನಂದ, ಪ್ರೀತಿ ಮತ್ತು ವ್ಯಾಪಕತೆ ಈ ಗುಣಗಳು ಸುಮಾರು ಶೇ. ೨೯ ರಿಂದ ಸುಮಾರು ಶೇ. ೩೫ ರ ವರೆಗೆ ತಲುಪಿದವು. ಪ್ರಸ್ತುತ ಕಲಿಯುಗದಲ್ಲಿ ಸಾಧನೆ ಮಾಡುವ ವ್ಯಕ್ತಿಯಲ್ಲಿನ ಸಾಧನೆಯಲ್ಲಿನ ಘಟಕಗಳ ಪ್ರಮಾಣ ಹೆಚ್ಚೆಂದರೆ ಶೇ. ೩೦ ರಷ್ಟಿರಬಹುದು. ಏಕೆಂದರೆ ಸದ್ಯ ಸಾಮಾನ್ಯ ವ್ಯಕ್ತಿಯ ಕ್ಷಮತೆ ಅಷ್ಟೇ ಇದೆ. ಇದರ ತುಲನೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಸಾಧನೆಯಲ್ಲಿನ ಘಟಕಗಳ ಪ್ರಮಾಣ ಅದಕ್ಕಿಂತ ಹೆಚ್ಚಾಯಿತು, ಇದು ವೈಶಿಷ್ಟ್ಯಪೂರ್ಣವಾಗಿದೆ. ಅವರಲ್ಲಿನ ಅಹಂ ಮತ್ತು ಮಾಯೆಯ ಕರ್ತವ್ಯದ ಆಸಕ್ತಿ ಇವು ಅನುಕ್ರಮವಾಗಿ ಶೇ. ೫ ಮತ್ತು ೪ ರಷ್ಟು, ಅಂದರೆ ಅತ್ಯಲ್ಪವಾದವು. ಆದ್ದರಿಂದಲೆ ೧೫.೫.೧೯೯೫ ರಂದು ಪ.ಪೂ. ಭಕ್ತರಾಜ ಮಹಾರಾಜರು ಪ.ಪೂ. ಡಾ. ಆಠವಲೆಯವರಿಗೆ, ”ನೀವು ಸತ್ತಿದ್ದೀರಿ (ನಿಮ್ಮ ‘ನಾನು’ ಎಂಬುದರ ಅರಿವು ನಾಶವಾಗಿದೆ) !’’ ಎಂದರು.

ಎಲ್ಲಕ್ಕಿಂತ ಮಹತ್ವದ್ದೆಂದರೆ ಈ ಹಂತದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲಿನ ಗುರುಕೃಪೆಯ ಪ್ರಮಾಣ ಶೇ. ೫೦ ರಷ್ಟು, ಅಂದರೆ ತುಂಬಾ ಹೆಚ್ಚಾಯಿತು, ಏಕೆಂದರೆ ಉಳಿದ ಶೇ. ೫೦ ರಷ್ಟು ಗುರುಕೃಪೆಯು ನಿರ್ಗುಣದಲ್ಲಿನ, ಅಂದರೆ ಅವ್ಯಕ್ತ ಗುರುಕೃಪೆಯಾಗಿದೆ.

೩ ಅ ೩ ಈ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಸಾಮಾನ್ಯ ವ್ಯಕ್ತಿತ್ವ : ಇಷ್ಟರವರೆಗಿನ ಸಾಧನೆಯಲ್ಲಿನ ಪ್ರಯಾಣದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಸಾಧನೆಯಲ್ಲಿನ ಎಲ್ಲ ಘಟಕಗಳ ಪ್ರಮಾಣ ಶೇ. ೩೫ ರ ವರೆಗೆ ತಲುಪಿದವು, ಇದು ವೈಶಿಷ್ಟ್ಯಪೂರ್ಣವಾಗಿದೆ; ಏಕೆಂದರೆ ಸಾಮಾನ್ಯ ವ್ಯಕ್ತಿಯಲ್ಲಿ ಕೆಲವು ಗುಣಗಳಿರುತ್ತವೆ, ಕೆಲವು ಇರುವುದಿಲ್ಲ. ತದ್ವಿರುದ್ಧ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಎಲ್ಲ ಗುಣಗಳು ಹೆಚ್ಚಾದವು. ಇದರ ಅರ್ಥ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸರ್ವಗುಣಸಂಪನ್ನರಾಗಿದ್ದು, ಅಸಾಮಾನ್ಯ ವ್ಯಕ್ತಿತ್ವವನ್ನು ಹೊಂದಿದ್ದಾರೆಂಬುದು ಗಮನಕ್ಕೆ ಬರುತ್ತದೆ !

(ಮುಂದುವರಿಯುವುದು)

– ಸದ್ಗುರು ಡಾ. ಮುಕುಲ ಗಾಡಗೀಳ, ಪಿ.ಎಚ್‌.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೫.೨೦೨೪)