ಆರೋಗ್ಯಶಾಲಿ ಜೀವನಕ್ಕಾಗಿ ವ್ಯಾಯಾಮ
ಭಾಗ ೧೭

‘ಕಲಿಯುಗದಲ್ಲಿ ಮನುಷ್ಯನ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಸದ್ಯ ಅನೇಕ ಕಾರಣಗಳಿಂದ ಜನರು ಜಾಗರಣೆ ಮಾಡುತ್ತಾರೆ. ಎರಡು ದಿನಗಳ ಉಪವಾಸ ಸಹಿಸಿಕೊಳ್ಳಬಹುದು; ಆದರೆ ಎರಡು ದಿನ ನಿದ್ರೆ ಪೂರ್ಣಗೊಳ್ಳದಿದ್ದರೆ ಮೂರನೇ ದಿನ ಅವನ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮಗಳು ಕಂಡುಬರುತ್ತವೆ.
‘ಆರೋಗ್ಯವನ್ನು ಸುಧಾರಿಸಲು ಸಾಕಷ್ಟು ನಿದ್ರೆ ಪಡೆಯುವುದು ವ್ಯಾಯಾಮದಷ್ಟೇ ಮುಖ್ಯವಾಗಿದೆ. ವ್ಯಾಯಾಮ ಮಾಡುವಾಗ ಪ್ರಚೋದಿಸಲ್ಪಟ್ಟ ಸ್ನಾಯುಗಳ ಪೋಷಣೆ ಮತ್ತು ಪುನರ್ನಿರ್ಮಾಣ ನಿದ್ರೆಯಲ್ಲಿಯೇ ನಡೆಯುತ್ತದೆ. ನಿದ್ರೆಯಲ್ಲಿ ದೇಹವು ಶಕ್ತಿಯನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತದೆ, ಒಟ್ಟಾರೆ ದಿನವಿಡೀ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಕಷ್ಟು ನಿದ್ರೆ ಮಾಡದಿದ್ದರೆ ಮಾನಸಿಕ ಒತ್ತಡ ಮತ್ತು ಚಿಂತೆಯೂ ಹೆಚ್ಚಾಗುತ್ತದೆ.’

‘ಆಧುನಿಕ ಸಂಶೋಧನೆಯಿಂದ ತಿಳಿದುಬಂದಿರುವುದೇ ನೆಂದರೆ, ನಿದ್ರೆ ಪೂರ್ಣವಾಗದಿದ್ದರೆ ವ್ಯಾಯಾಮ ಮಾಡುವ ಸಾಮರ್ಥ್ಯ ಕಡಿಮೆಯಾಗಿ ದೌರ್ಬಲ್ಯ ಹೆಚ್ಚುತ್ತದೆ ಹಾಗೂ ಇತರ ದೈಹಿಕ ಕ್ರಿಯೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿದ್ರೆ ಪೂರ್ಣಗೊಳ್ಳದ ಈ ಪರಿಣಾಮಗಳು ವ್ಯಾಯಾಮದ ಉದ್ದೇಶಕ್ಕೆ ಮಾರಕವೇ ಆಗಿವೆ.
ನಿಜವಾಗಿ ನಿಯಮಿತವಾಗಿ ವ್ಯಾಯಾಮ ಮಾಡುವ ವ್ಯಕ್ತಿಯು ಕಡಿಮೆಪಕ್ಷ ೬-೭ ಗಂಟೆಗಳ ವರೆಗೆ ನಿದ್ರೆ ಮಾಡುವುದು ಅವಶ್ಯಕವಾಗಿದೆ. ರಾತ್ರಿ ೧೦ ರಿಂದ ಬೆಳಗ್ಗೆ ೭ ಗಂಟೆಯ ವರೆಗೆ ಮಾಡಿದ ನಿದ್ರೆ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಈ ಸಮಯದಲ್ಲಿ ಮಲಗುವುದರಿಂದ ನಿದ್ರೆಯ ಚಕ್ರದಲ್ಲಿ ಸರಿಯಾದ ಸಮತೋಲನ ಸಾಧಿಸಬಹುದು. ವ್ಯಾಯಾಮದ ಶೇ. ೧೦೦ ರಷ್ಟು ಲಾಭ ಪಡೆಯಲು, ದಿನವಿಡೀ ತಾಜಾತನದಿಂದ ಇರಲು ಮತ್ತು ಮನಸ್ಸನ್ನು ಶಾಂತವಾಗಿಡಲು ನಿದ್ರೆ ಪೂರ್ಣಗೊಳ್ಳುವುದು ಅತ್ಯಂತ ಅವಶ್ಯಕ.
ತಮ್ಮ ಜೀವನಶೈಲಿಯನ್ನು ಸುಧಾರಿಸಲು ಮತ್ತು ದೇಹಕ್ಕೆ ಸರಿಯಾದ ಪೋಷಣೆ ಸಿಗಲು ನಿದ್ರೆಯ ಮಹತ್ವವನ್ನು ಗಮನ ದಲ್ಲಿಟ್ಟುಕೊಂಡು ಅದರಂತೆ ದಿನಚರಿಯನ್ನು ಅನುಸರಿಸಿ !
– ಸೌ. ಅಕ್ಷತಾ ರೂಪೇಶ ರೇಡಕರ, ಭೌತಿಕೋಪಚಾರ ತಜ್ಞರು (ಫಿಜಿಯೋಥೆರಪಿಸ್ಟ್), ಫೋಂಡಾ, ಗೋವಾ. (೩೦.೯.೨೦೨೪)
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!