ಛತ್ತೀಸ್‌ಗಢದ ಕಾಂಗ್ರೆಸ್‌ನ ಮಾಜಿ ಶಾಸಕ ಯು.ಡಿ. ಮಿಂಜ್ ಅವರ ದೇಶದ್ರೋಹಿ ಹೇಳಿಕೆ
ನವದೆಹಲಿ – ಛತ್ತೀಸ್‌ಗಢದ ಕಾಂಗ್ರೆಸ್‌ನ ಮಾಜಿ ಶಾಸಕ ಯು.ಡಿ. ಮಿಂಜ್ ಅವರು ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ‘ಪಾಕಿಸ್ತಾನದೊಂದಿಗೆ ಯುದ್ಧವಾದರೆ ಭಾರತದ ಸೋಲು ಖಚಿತ’ ಎಂದು ಹೇಳಿದ್ದಾರೆ. ಆಡಳಿತಾರೂಢ ಭಾಜಪವು ಕಾಂಗ್ರೆಸ್‌ನ ಈ ನಾಯಕನ ಹೇಳಿಕೆಯನ್ನು ಆಕ್ಷೇಪಿಸಿದ ನಂತರ, ‘ನನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದೆ’ ಎಂದು ಮಿಂಜ್ ಅವರು ಹೇಳಿದ್ದಾರೆ. ಏಪ್ರಿಲ್ ೨೬ ರಂದು ಅವರು ಮಾಡಿದ ಈ ಪೋಸ್ಟ್ ಅನ್ನು ಈಗ ತೆಗೆದುಹಾಕಲಾಗಿದೆ.
“If a war breaks out with Pakistan, India’s defeat is certain!” 😡
This anti-national filth was spewed by ex-Congress MLA UD Minj from Chhattisgarh.
How DARE anyone say such a thing?
A sedition case must be filed NOW, and capital punishment pursued! ⚖️🛑
After the… pic.twitter.com/VcePrZQM6T
— Sanatan Prabhat (@SanatanPrabhat) April 29, 2025
ಮಿಂಜ್ ಅವರ ಪೋಸ್ಟ್‌ನಲ್ಲಿ, ‘ಯಾರು ಇಂದು ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಯುದ್ಧದ ಬಗ್ಗೆ ಮಾತನಾಡುತ್ತಿದ್ದಾರೆ, ಅವರು ಪಾಕಿಸ್ತಾನದೊಂದಿಗೆ ಭಾರತವು ಚೀನಾದೊಂದಿಗೂ ಹೋರಾಡಬೇಕಾಗುತ್ತದೆ ಎಂಬುದನ್ನು ತಿಳಿದಿರಬೇಕು ಮತ್ತು ಅಂತಹ ಪರಿಸ್ಥಿತಿಯಲ್ಲಿ ಭಾರತದ ಸೋಲು ಖಚಿತ. ಪಾಕ್ ಆಕ್ರಮಿತ ಕಾಶ್ಮೀರವು ಪ್ರಮುಖ ಭಾಗವಾಗಿದ್ದು, ಅಲ್ಲಿ ಚೀನಾವು ದೊಡ್ಡ ಪ್ರಮಾಣದ ಹೂಡಿಕೆ ಮಾಡಿದೆ. ಬಲೂಚಿಸ್ತಾನದ ಪರಿಸ್ಥಿತಿಯೂ ಇದೇ ಆಗಿದೆ. ಗ್ವಾದರ್ ಬಂದರನ್ನು ಚೀನಾ ಅಭಿವೃದ್ಧಿಪಡಿಸಿದೆ. ಅದರ ಸುರಕ್ಷತೆಗಾಗಿ ಚೀನಾದ ಸೈನ್ಯವು ಅಲ್ಲಿ ನಿಯೋಜನೆಗೊಂಡಿದೆ. ಬಲೂಚಿಸ್ತಾನದ ಬಂಡುಕೋರರಿಗೆ ಚೀನೀ ಸೈನಿಕರೊಂದಿಗೆ ಹೋರಾಡುವ ಶಕ್ತಿ ಇಲ್ಲ. ಈ ಎರಡೂ ಸ್ಥಳಗಳಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ಎಟಾಬಾಬಾದ ಇಂತಹ ಸ್ಥಳವಾಗಿದ್ದು, ಅಲ್ಲಿ ಲಷ್ಕರ್-ಎ-ತೊಯ್ಬಾದ ಜಾಲವಿದೆ. ಭಾರತವು ಈ ಎರಡೂ ಸ್ಥಳಗಳ ಮೇಲೆ ನೇರ ದಾಳಿ ಮಾಡಿದರೆ, ಚೀನಾ ಸ್ವತಃ ಈ ಯುದ್ಧದಲ್ಲಿ ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ, ಅದರ ಬಗ್ಗೆ ಯೋಚಿಸಿ’ ಎಂದು ಬರೆಯಲಾಗಿತ್ತು.
ಸಂಪಾದಕೀಯ ನಿಲುವು
|