ಬಂಗಾಳದಲ್ಲಿ ಶೇ. 9 ರಷ್ಟು ಹಿಂದೂಗಳು ಒಂದಾದರೂ, ರಾಮರಾಜ್ಯ ದೂರವಿಲ್ಲ ! – ನಟ ಮಿಥುನ ಚಕ್ರವರ್ತಿ

ಪ್ರಸಿದ್ಧ ಚಲನಚಿತ್ರ ನಟ ಮತ್ತು ಬಿಜೆಪಿ ನಾಯಕ ಮಿಥುನ ಚಕ್ರವರ್ತಿಯವರ ಹೇಳಿಕೆ

ಉತ್ತರ 24 ಪರಗಣ (ಬಂಗಾಳ) – ಬಂಗಾಳದಲ್ಲಿ ಸಾಮಾನ್ಯವಾಗಿ ಮತ ಚಲಾಯಿಸದ ಶೇ. 9 ರಷ್ಟು ಹಿಂದೂ ಮತದಾರರು ಮುಂದೆ ಬಂದು ಭಾಜಪವನ್ನು ಬೆಂಬಲಿಸಿದರೆ, ರಾಜ್ಯದಲ್ಲಿ ‘ರಾಮರಾಜ್ಯ’ ಸ್ಥಾಪಿಸಬಹುದು ಎಂದು ಬಾರಾಸತನಲ್ಲಿ ಶ್ರೀ ರಾಮ ನವಮಿಯ ಸಂದರ್ಭದಲ್ಲಿ ಪ್ರಸಿದ್ಧ ಚಲನಚಿತ್ರ ನಟ ಮತ್ತು ಭಾಜಪದ ನಾಯಕ ಮಿಥುನ ಚಕ್ರವರ್ತಿಯವರು ಹೇಳಿದರು. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ಕೇಂದ್ರ ಸಚಿವ ಸುಕಾಂತ ಮಜುಮದಾರ ಕೂಡ ಇದ್ದರು.

ಬಂಗಾಳಿ ಹಿಂದೂಗಳಿಗೂ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು !

ಕೆಲವು ದಿನಗಳಹಿಂದೆ ಬರಾಕಪೂರದಲ್ಲಿಯೂ ಮಿಥುನ ಚಕ್ರವರ್ತಿಯವರು ಇದೇ ರೀತಿಯ ಹೇಳಿಕೆ ನೀಡಿದ್ದರು. 2026 ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾಜಪಕ್ಕೆ ಸೋಲಾದರೆ ಬಂಗಾಳಿ ಹಿಂದೂಗಳಿಗೆ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣವಾಗುವುದು. ಒಂದುವೇಳೆ ನಾವು (ಭಾಜಪ) ಗೆಲ್ಲದಿದ್ದರೆ, ಬಂಗಾಳದಲ್ಲಿನ ಹಿಂದೂಗಳ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಬಹುದು. ಭಾಜಪವನ್ನು ಬೆಂಬಲಿಸುವ ಬಂಗಾಳಿ ಹಿಂದೂಗಳು ಸುರಕ್ಷಿತವಾಗಿರುವುದಿಲ್ಲ. ಆದರೆ ಅದೇ ಜನರು ಪುನಃ ಅಧಿಕಾರಕ್ಕೆ ಬಂದರೆ, ಅವರು ನಮ್ಮನ್ನು ಬಿಡುವುದಿಲ್ಲ. ಆದುದರಿಂದ, ಬಂಗಾಳದಲ್ಲಿ ಹಿಂದೂಗಳು ಈಗಲೇ ಕಾರ್ಯಪ್ರವೃತ್ತರಾಗಬೇಕು ಇಲ್ಲದಿದ್ದರೆ ತುಂಬಾ ತಡವಾಗಬಹುದು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ಮೊದಲು ರಾಷ್ಟ್ರಪತಿ ಆಳ್ವಿಕೆಯನ್ನು ತಂದು ದೇಶ ಮತ್ತು ಹಿಂದೂಗಳನ್ನು ರಕ್ಷಿಸಬೇಕು!