ಭಾಜಪದ ವಕ್ತಾರ ಶೆಹಜಾದ್ ಪೂನಾವಾಲಾ ಅವರಿಂದ ವಿರೋಧ ವ್ಯಕ್ತ

ನವ ದೆಹಲಿ – ತೃಣಮೂಲ ಕಾಂಗ್ರೆಸ್ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರ ಮೇಲಿನ ದಾಳಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯಸಭೆಯ ಕಾಂಗ್ರೆಸ್ ಸಂಸದ ಹಾಗೂ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು, ‘ಇಂತಹ ಘಟನೆಗಳು ಎಲ್ಲಿ ನಡೆಯುತ್ತವೆಯೋ, ಅಂತಹ ದೇಶದಲ್ಲಿ ಇರಲು ನನಗೆ ನಾಚಿಕೆಯಾಗುತ್ತದೆ,’’ಎಂದು ಹೇಳಿಕೆ ನೀಡಿದ್ದಾರೆ.
🚨 "I am ashamed to live in India!" – Congress leader and advocate Kapil Sibal attempts to tarnish India's image over attacks on TMC leaders.
⚠️ BJP spokesperson Shehzad Poonawalla strongly opposed the remark.
❓ For decades, Hindus in Bengal have faced violence and… pic.twitter.com/ehJt2HDs6W
— Sanatan Prabhat (@SanatanPrabhat) June 2, 2026
|
#WATCH | Delhi | Over Kapil Sibal's remarks on attack on TMC MP Abhishek Banerjee, BJP National Spokesperson, Shehzad Poonawalla says, "Unfortunately, a person who has made crores of rupees by running his very successful practice in the Supreme Court of India has such a dim view… pic.twitter.com/Ax7D6A94cX
— ANI (@ANI) June 1, 2026
ಸಿಬಲ್ ಅವರಿಗೆ ಪ್ರತ್ಯುತ್ತರ ನೀಡಿದ ಭಾಜಪದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ‘ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಕೆಲಸ ಮಾಡಿ ಸಿಬಲ್ ಅವರು ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ, ಆದರೂ ಅವರಿಗೆ ಭಾರತದಲ್ಲಿ ಇರಲು ನಾಚಿಕೆಯಾಗುತ್ತದೆ. ಸಿಬಲ್ ಅವರು ತಮಗೆ ಭಾರತದಲ್ಲಿ ಇರಲು ನಾಚಿಕೆಯಾಗುತ್ತದೆ ಎಂದು ಹೇಳುತ್ತಾರೆ; ಆದರೆ 2021 ರ ಚುನಾವಣೆಯ ನಂತರ ನಡೆದ ಹಿಂಸಾಚಾರದಲ್ಲಿ ಭಾಜಪ ಮತ್ತು ಕಾಂಗ್ರೆಸ್ಸಿನ 300 ಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆಯಾದಾಗ ಸಿಬಲ್ ಅವರು ಎಂದಿಗೂ ಬಾಯಿ ತೆರೆಯಲಿಲ್ಲ. ಇದಲ್ಲದೆ, ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಮೇಲಿನ ಬಲಾತ್ಕಾರ, ಹಾಗೆಯೇ ಸಂದೇಶಖಾಲಿಯಂತಹ ಪ್ರಕರಣಗಳಲ್ಲೂ ಸಿಬಲ್ ಮೌನವಾಗಿಯೇ ಉಳಿದರು. ಭಾಜಪ ಸರಕಾರದೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಇರುವುದನ್ನು ಒಂದು ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು; ಆದರೆ ಭಾಜಪವನ್ನು ವಿರೋಧಿಸುವ ಭರದಲ್ಲಿ ಕೆಲವು ವಿರೋಧ ಪಕ್ಷದ ನಾಯಕರಲ್ಲಿ ದೇಶದ ಮೇಲೆಯೇ ದಾಳಿ ಮಾಡುವ ಪ್ರವೃತ್ತಿ ಏಕೆ ಕಂಡುಬರುತ್ತದೆ ? ಭಾರತದ ಮೇಲೆ ದ್ವೇಷ ಏಕೆ ?’ ಎಂದು ಪ್ರಶ್ನಿಸಿದ್ದಾರೆ.
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
Corporate Jihad: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ‘ವಿಪ್ರೋ’ದ ಹಿಂದೂ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ !
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್