
‘ಪ.ಪೂ. ಡಾಕ್ಟರರು ‘ನನಗೆ ಛಾಯಾಚಿತ್ರಗಳನ್ನು ಮತ್ತು ಧ್ವನಿಚಿತ್ರಮುದ್ರಿಕೆಗಳನ್ನು ಪರಿಶೀಲಿಸುವ ಸೇವೆಯನ್ನು ಹೇಗೆ ಕಲಿಸಿದರು ?’, ಎಂಬ ವಿಷಯದಲ್ಲಿ ಮತ್ತು ‘ಅವರಿಂದ ನನಗೆ ಕಲಿಯಲು ಸಿಕ್ಕಿದ ಅಂಶಗಳು ಮತ್ತು ನನಗೆ ಬಂದಿರುವ ಅನುಭೂತಿಗಳು ಅಥವಾ ಇನ್ನಿತರ ಲೇಖನಗಳು’, ಈ ವಿಷಯದಲ್ಲಿ ನನಗೆ ಲೇಖನ ಬರೆಯಲು ಹೇಳಿದ್ದರು. ಅದಕ್ಕಾಗಿ ಅವರು ನನಗೆ ತುಂಬಾ ಪ್ರೋತ್ಸಾಹವನ್ನೂ ನೀಡಿದರು. ಆಗ ನನಗೆ ಲೇಖನ ಬರೆಯಲು ಪ್ರಯತ್ನಿಸುವಾಗ ಬಂದಿರುವ ಅಡಚಣೆಗಳು, ಶಾರೀರಿಕ ತೊಂದರೆಗಳು ಹಾಗೂ ಅವುಗಳನ್ನು ದೂರಗೊಳಿಸಿ ‘ನಾನು ಲೇಖನ ಬರೆಯಬೇಕು’, ಎಂದು ಪ.ಪೂ.ಡಾಕ್ಟರರು ಮಾಡಿದ ಪ್ರಯತ್ನದ ಸ್ವಲ್ಪ ಭಾಗವನ್ನು ಕಳೆದ ವಾರದ ಸಂಚಿಕೆಯಲ್ಲಿ ರಂದು ನೋಡಿದೆವು. ಈ ವಾರ ಅದರ ಮುಂದಿನ ಭಾಗವನ್ನು ನೋಡೋಣ.
(ಭಾಗ ೨)
ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ:https://sanatanprabhat.org/kannada/137422.html |
೬. ಪ.ಪೂ. ಡಾಕ್ಟರರು ‘ಲೇಖನವನ್ನು ಬರೆಯಲು ಹೊಳೆಯದಿದ್ದರೆ, ಪ್ರತಿದಿನ ಧ್ವನಿಚಿತ್ರಮುದ್ರಿಕೆ ಮತ್ತು ಛಾಯಾಚಿತ್ರಗಳಲ್ಲಿ ನಾನು ಹೇಳಿರುವ ತಿದ್ದುಪಡಿಗಳನ್ನು ಅವು ಇದ್ದ ಹಾಗೆ ಬರೆದಿಡು’, ಎಂದು ಹೇಳುವುದು ಹಾಗೂ ‘ಚಿಂತೆ ಮಾಡಬೇಡ, ನಿನಗೆ ಸಾಧ್ಯವಾಗುವುದು’, ಎಂದು ಹೇಳಿ ನನ್ನನ್ನು ಪ್ರೋತ್ಸಾಹಿಸುವುದು
ಒಮ್ಮೆ ಪ.ಪೂ. ಡಾಕ್ಟರು ನನ್ನನ್ನು ಉದ್ದೇಶಿಸಿ, ”ನಿನಗೆ ಇನ್ನೂ ಹೇಗೆ ಮತ್ತು ಏನು ಬರೆಯಬೇಕು’, ಎಂಬುದು ಹೊಳೆಯದಿದ್ದರೆ, ನಾನು ಪ್ರತಿದಿನ ಧ್ವನಿಚಿತ್ರಮುದ್ರಿಕೆ (ವಿಡಿಯೋ) ಮತ್ತು ಛಾಯಾ ಚಿತ್ರಗಳಲ್ಲಿ ಏನೆಲ್ಲ ತಿದ್ದುಪಡಿ ಮಾಡಲು ಹೇಳಿರುವೆನೊ, ಅವುಗಳನ್ನು ಇದ್ದ ಹಾಗೆಯೆ ಬರೆದಿಡು’’ ಎಂದು ಹೇಳಿದರು. ಆಗ ಅವರು ೧-೨ ಉದಾಹರಣೆಗಳನ್ನು ಹೇಳಿ ‘ಹೀಗೆ ಬರೆಯ ಬೇಕು’, ಎಂದು ನನಗೆ ಹೇಳಿ ಗೋಡೆಯ ಮೇಲೆ ಬೆರಳಿನಿಂದ ಬರೆದು ತೋರಿಸಿದರು. ಇದರಿಂದ ನನ್ನ ಕಣ್ಣುಗಳು ತುಂಬಿ ಬಂದವು. ಅವರು ನನಗೆ, ”ಹೇಗೆ ಬರೆಯುವುದು ?’, ಎಂದು ವಿಚಾರ ಮಾಡುತ್ತಿದ್ದಿಯಲ್ಲವೆ ?’’ ಎಂದು ಕೇಳಿದರು, ನಾನು ”ಹೌದು’’ ಎಂದು ಹೇಳಿದೆನು. ಆಗ ಅವರು ನಕ್ಕರು. ಅಂದರೆ ಆ ಮೃದು ಹಾಸ್ಯ ನನಗೆ ಪ್ರೋತ್ಸಾಹ ನೀಡುವಂತಹದ್ದಾಗಿತ್ತು, ‘ಚಿಂತೆ ಮಾಡಬೇಡ. ನಿನಗೆ ಸಾಧ್ಯವಿದೆ ನನಗೆ ಗೊತ್ತಿದೆ’ ಎಂದರು.
೭. ಪ.ಪೂ. ಡಾಕ್ಟರರು ಸಾಧಕಿಯ ಲೇಖನದಲ್ಲಿನ ಒಂದೊಂದೇ ಅಡಚಣೆಯನ್ನು ನಿವಾರಿಸಿ ಸಾಧಕಿಯನ್ನು ಲೇಖನ ಬರೆಯಲು ಸಿದ್ಧಗೊಳಿಸುವುದು
ಇತರರಿಗಾಗಿ ಹಾಗೂ ಅದು ಕೂಡ ನಿರಪೇಕ್ಷವಾಗಿ ಇಷ್ಟು ಯಾರು ಮಾಡುತ್ತಾರೆ ? ಪದೇ ಪದೇ ಹೇಳಿಯೂ ಒಬ್ಬ ವ್ಯಕ್ತಿ ಕೇಳುವುದಿಲ್ಲವೆಂದಾದರೆ, ಸಹಜವಾಗಿಯೆ ಯಾರಿಗಾದರೂ ಕೋಪಬರಬಹುದು. ಇದು ಅವರ ಅಧಿಕಾರವೇ ಆಗಿದೆ, ಆದರೂ ಪ.ಪೂ. ಡಾಕ್ಟರರು ಕೋಪಿಸಿಕೊಳ್ಳದೇ, ಅಷ್ಟೆ ತಾಳ್ಮೆಯಿಂದ ಹಾಗೂ ಪಟ್ಟು ಹಿಡಿದು ನನಗೆ ಹೇಳುತ್ತಿದ್ದರು. ಬೇರೆ ಬೇರೆ ಪರ್ಯಾಯಗಳನ್ನು ಸೂಚಿಸುತ್ತಿದ್ದರು. ನನಗೆ ತಿಳಿಯದಿರುವ ನನ್ನ ಅನೇಕ ಅಡಚಣೆಗಳನ್ನು ನಾನು ಹೇಗೆ ನಿವಾರಿಸಲಿ ? ನಾನು ಒಂದೊಂದೇ ಅಡಚಣೆಯನ್ನು ನಿವಾರಿಸುವ ಬದಲು ಅವರು ನನ್ನ ಎಲ್ಲ ಅಡಚಣೆಗಳನ್ನು ದೂರಗೊಳಿಸುತ್ತಿದ್ದರು. ನಾವು ಹೇಳುತ್ತೇವಲ್ಲ, ‘ನಾವು ಒಂದು ಹೆಜ್ಜೆ ಹಾಕಿದರೆ, ದೇವರು ನಮ್ಮ ಕಡೆಗೆ ೧೦ ಹೆಜ್ಜೆ ನಡೆದುಕೊಂಡು ಬರುತ್ತಾನೆ’; ಆದರೆ ನಮ್ಮ ಗುರುಗಳು ಎಷ್ಟು ಶ್ರೇಷ್ಟರೆಂದರೆ, ನಾನು ಒಂದು ಹೆಜ್ಜೆಯನ್ನೂ ಇಟ್ಟಿಲ್ಲ, ಆದರೂ ಅವರೇ ನನ್ನತ್ತ ಬಂದರು ಹಾಗೂ ನಾನು ಕಾರ್ಯ ಮಾಡಲು ಸಿದ್ಧಳಾದೆ.
೮. ಪ.ಪೂ. ಡಾ. ಆಠವಲೆಯವರ ವಿಷಯದಲ್ಲಿನ ಲೇಖನ ಆರಂಭಿಸಬೇಕು ಎಂದು ನಿಶ್ಚಯಿಸಿದ ಕೂಡಲೆನನ್ನ ಶಾರೀರಿಕ ತೊಂದರೆಗಳು ತುಂಬಾ ಹೆಚ್ಚಾದವು
ಅಡಚಣೆಗಳು ಇಲ್ಲಿಗೆ ಮುಗಿಯಲಿಲ್ಲ. ಯಾವ ರಾತ್ರಿ ಈ ಪ್ರಸಂಗ ಘಟಿಸಿತೊ, ‘ಆ ದಿನದ ಸೇವೆಯನ್ನು ರಾತ್ರಿ ಜಾಗರಣೆ ಮಾಡಿ ಮುಗಿಸಿ ಮರುದಿನದಿಂದ ಲೇಖನ ಆರಂಭಿಸುವುದು’, ಎಂದು ನಾನು ನಿರ್ಧರಿಸಿದೆನು; ಆದರೆ ಆ ರಾತ್ರಿ ನನಗೆ ತುಂಬಾ ಕೈ ನೋವು ಆರಂಭವಾಯಿತು. ನನಗೆ ಕೈ ನೋವು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ನನಗೆ ಕೈಯ ನರಕ್ಕೆ ಪೆಟ್ಟಾದಾಗ ಆಗುವಂತಹ ತೀವ್ರ ವೇದನೆಗಳು ಆಗುತ್ತಿದ್ದವು.

೯. ಪ.ಪೂ. ಡಾಕ್ಟರರ ಕೃಪೆಯಿಂದ ಹಾಗೂ ಸಾಧಕಿಯರ ಸಹಾಯದಿಂದ ತೊಂದರೆ ಕಡಿಮೆಯಾಗುವುದು
ಪ.ಪೂ. ಡಾಕ್ಟರರ ಕೃಪೆಯಿಂದ ಹಾಗೂ ಸಾಧಕಿಯರ ಪ್ರಯತ್ನದಿಂದ ಮರುದಿನ ಸಾಯಂಕಾಲದ ವರೆಗೆ ಕೈ ನೋವು ಸ್ವಲ್ಪ ಕಡಿಮೆಯಾಯಿತು. ಬಿಂದುಒತ್ತಡ ಉಪಚಾರ ಮಾಡುವ ಸಾಧಕಿ ಪ್ರಯತ್ನ ಮಾಡಿ ವೇದನೆಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಿದಳು. ಸುಶ್ರೀ (ಕು.) ಸೋನಲ ಇಡೀ ರಾತ್ರಿ ಜಾಗರಣೆ ಮಾಡಿ ನನ್ನ ಕೈಗೆ ಮರ್ದನ ಮತ್ತು ಶಾಖ (ಕಾವು) ಕೊಡುತ್ತಿದ್ದಳು; ಆದರೆ ವೇದನೆಗಳು ಸ್ವಲ್ಪವೂ ಕಡಿಮೆಯಾಗುತ್ತಿರಲಿಲ್ಲ. ಯಾವುದೇ ಕಾರಣವಿಲ್ಲದೆ ಅನಿರೀಕ್ಷಿತವಾಗಿ ಇಷ್ಟು ತೀವ್ರ ವೇದನೆಗಳು ಆಗುವ ಕಾರಣವೇನಿರಬಹುದು ?’, ಎಂಬುದೂ ಯಾರಿಗೂ ತಿಳಿಯುತ್ತಿರಲಿಲ್ಲ. ಪ.ಪೂ. ಡಾಕ್ಟರ ಕೃಪೆಯಿಂದ ಹಾಗೂ ಸಾಧಕಿಯ ಪ್ರಯತ್ನದಿಂದ ಮರುದಿನ ಸಾಯಂಕಾಲದ ವರೆಗೆ ನನ್ನ ಕೈನೋವು ಸ್ವಲ್ಪ ಕಡಿಮೆಯಾಯಿತು. ಅನಂತರ ನಾನು ಲೇಖನ ಬರೆಯಲು ಆರಂಭಿಸಿದೆನು. ಆಗ ನನಗೆ ಆ ಪ್ರಸಂಗ ನೆನಪಾಗಿ ಆ ನೋವಿನ ಕಾರಣವೂ ಗಮನಕ್ಕೆ ಬಂದಿತು. ನನಗೆ ‘ಟಿಎಡಿವೆ ಠಿಚೀಟಿ’ ಗಾಗಿ ಮಾತ್ರೆಯನ್ನು ತಿಂದರೆ ತಲೆ ತಿರುಗುತ್ತದೆ. ಈ ಹಿಂದೆಯೂ ನನಗೆ ಈ ಮಾತ್ರೆಯನ್ನು ಸೇವಿಸಿದಾಗ ತಲೆ ತಿರುಗುತ್ತಿತ್ತು ಹಾಗೂ ಈಗ ಆಧುನಿಕ ವೈದ್ಯರು ನನಗೆ ಮೊದಲಿಗಿಂತ ಹೆಚ್ಚು ಶಕ್ತಿಯ ಮಾತ್ರೆಯನ್ನು ಕೊಟ್ಟಿದ್ದರು. ನಾನು ಆ ಮಾತ್ರೆಯನ್ನು ಸೇವಿಸಿದ್ದೆ; ಆದರೆ ಅನಂತರ ನಾನು ರಾತ್ರಿ ಮಲಗದೆ ಲೇಖನದ ಸೇವೆಯನ್ನು ಮಾಡಿದೆ.
೧೦. ಈ ಮೇಲಿನ ಅಂಶಗಳನ್ನು ಬೆರಳಚ್ಚು ಮಾಡಿಯೂ ಮುಂದೆ ಕಳುಹಿಸಲಿಲ್ಲ
ನನ್ನ ಇಂತಹ ಸ್ಥಿತಿಯಲ್ಲಿಯೂ ‘ನನ್ನಿಂದ ಲೇಖನ ಆಗುವುದೆಂದರೆ, ಇದು ಚಮತ್ಕಾರವೆಂದೇ ಹೇಳಬೇಕು. ಪ.ಪೂ. ಡಾಕ್ಟರರು ನಮ್ಮ ಜೀವನದಲ್ಲಿರುವಾಗ ನಮ್ಮ ಎಲ್ಲ ಅಡಚಣೆ ಗಳು ದೂರವಾಗುವುದು ಖಚಿತ; ಆದರೆ ಅದಕ್ಕಾಗಿ ನಾವು ‘ಅವರ ಮೇಲೆ ಶ್ರದ್ಧೆಯನ್ನಿಟ್ಟು ಅವರು ಹೇಳಿದ ಹಾಗೆ ಮಾಡುತ್ತಿರಬೇಕು’, ಎಂಬುದು ನನ್ನ ಗಮನಕ್ಕೆ ಬಂದಿತು. ಈ ಮೇಲಿನ ಎಲ್ಲ ಪ್ರಸಂಗಗಳು ಮತ್ತು ದೇವರು ನನ್ನಿಂದ ಮಾಡಿಸಿಕೊಂಡಿರುವ ಲೇಖನ ೨೦೨೦ ರದ್ದಾಗಿದೆ; ಆದರೆ ಈ ಮೇಲಿನ ಅಂಶಗಳನ್ನು ನಾನು ಆ ಸಮಯದಲ್ಲಿ ಬೆರಳಚ್ಚು ಮಾಡಿದ್ದರೂ ಮುಂದೆ ಕಳುಹಿಸಲಿಲ್ಲ, ಇದು ನನ್ನಿಂದಾದ ದೊಡ್ಡ ತಪ್ಪು.
೧೧. ಲೇಖನ ಮಾಡುವ ವಿಚಾರ ಮನಸ್ಸಿನಲ್ಲಿ ಬಂದರೂ ಸಾಧಕಿಗೆ ಶಾರೀರಿಕ ತೊಂದರೆ ಆರಂಭವಾಗುವುದು
ಅನಂತರವೂ ಎಂದಾದರೂ ನಾನು ಲೇಖನ ಮಾಡುವ ವಿಚಾರ ಮಾಡಿದಾಗ ನನಗೆ ತುಂಬಾ ತೀವ್ರ ವಿವಿಧ ರೀತಿಯ ತೊಂದರೆಗಳು ಆರಂಭವಾಗುತ್ತಿದ್ದವು ಹಾಗೂ ಆ ತೊಂದರೆಗಳ ಸರಮಾಲೆ ನಿಲ್ಲುತ್ತಿರಲಿಲ್ಲ. ಏನೇ ಇದ್ದರೂ ಪ.ಪೂ. ಡಾಕ್ಟರರ ಇಚ್ಛೆ ಇರುವುದರಿಂದ ಎಷ್ಟೇ ಅಡಚಣೆಯಾದರೂ ಅದನ್ನು ಜಯಿಸುವ ನನ್ನ ತಳಮಳ ಕಡಿಮೆಯಾಯಿತು ಹಾಗೂ ನನಗೆ ಈ ಕಡತವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಹಾಗೂ ಬೇರೆ ಯಾವುದೇ ಲೇಖನ ಬರೆಯಲೂ ಸಾಧ್ಯವಾಗಿಲ್ಲ.
೧೨. ಪ.ಪೂ. ಡಾಕ್ಟರರು ಸಾಧಕಿ ಲೇಖನ ಮಾಡದಿರುವುದನ್ನು ತಪ್ಪೆಂದು ಹೇಳಿ ಅವಳಿಗೆ ಶಿಕ್ಷೆಯ ಪದ್ಧತಿಯನ್ನು ಅವಲಂಬಿಸಲು ಹೇಳುವುದು
ಕೆಲವೊಂದು ಕಾಲದ ನಂತರ ಪ.ಪೂ. ಡಾಕ್ಟರರು ನನಗೆ ಸೇವೆಯಲ್ಲಿನ ವಿವಿಧ ಅನುಭೂತಿಗಳು ಮತ್ತು ಅವರ ಜೊತೆ ಗಿರುವ ಕ್ಷಣಗಳನ್ನು ಬರೆಯದಿರುವ ವಿಷಯವನ್ನು ಪುನಃ ವಿಚಾರಿಸಿದರು. ಆಗ ಅವರು ನಮ್ಮಲ್ಲಿ ಆ ಸಮಯದಲ್ಲಿ ಆಗಿರುವ ಸಂಭಾಷಣೆಯನ್ನು ಬೆರಳಚ್ಚು ಮಾಡಿ ‘ನಿನಗೆ ಈ ಕಡತ ಸಿಗುವುದು, ಆಗ ಆದರೂ ನೀನು ಈ ಲೇಖನ ಬರೆದುಕೊಡಬೇಕು’, ಎಂದು ಹೇಳಿದರು. ಅವರು, ”ನಿನ್ನ ಅನುಭೂತಿ ಕೇಳಿ ನಾನು ನಿನ್ನನ್ನು ಪ್ರಶಂಸೆ ಮಾಡುತ್ತಿದ್ದೇನೆ; ಆದರೆ ಪ್ರಶಂಸೆಯ ಜೊತೆಗೆ ‘ನೀನು ಲೇಖನ ಮಾಡಿಲ್ಲ’, ಎಂಬ ತಪ್ಪನ್ನೂ ನಿನಗೆ ಹೇಳಬೇಕಾಗುತ್ತಿದೆ. ಈ ಬಾರಿಯೂ ಲೇಖನವಾಗದಿದ್ದರೆ, ಅದಕ್ಕೆ ನೀನೇ ಏನಾದರೂ ಶಿಕ್ಷೆ ವಿಧಿಸಿಕೊಳ್ಳಬೇಕು’’, ಎಂದು ಅವರು ಹೇಳಿದರು ಹಾಗೂ ಸೋನಲ್‌ಗೆ (ಅವಳಿಗೆ ಸಹಾಯ ಮಾಡುವ ಸಾಧಕಿಗೆ) ಲೇಖನಕ್ಕಾಗಿ ನನ್ನನ್ನು ಬೆಂಬತ್ತಲು ಹೇಳಿದರು.
೧೩. ‘ಪ.ಪೂ. ಡಾಕ್ಟರರ ಪ್ರತಿಯೊಂದು ವಿಚಾರ ವ್ಯಷ್ಟಿಯ ಮಾತ್ರವಲ್ಲ ಸಮಷ್ಟಿಯ ದೃಷ್ಟಿಯಲ್ಲಿಯೂ ಇರುತ್ತದೆ’, ಎಂಬುದು ಗಮನಕ್ಕೆ ಬರುವುದು
ಆಗ ನನ್ನ ಜೊತೆಗೆ ನನ್ನ ದೊಡ್ಡ ಅಣ್ಣ ಶ್ರೀ. ವಿಜಯ ಸಾಳುಂಖೆ ಇದ್ದನು. ಅವನು, ”ಪೂನಮ್ ನಿಮ್ಮ ವಿಷಯ ಹೇಳುವಾಗ ನನಗೆ ಮತ್ತು ಇನ್ನಿತರರಿಗೂ ಭಾವಜಾಗೃತಿಯಾಗುತ್ತದೆ.’’ ಆಗ ಪ.ಪೂ.ಡಾಕ್ಟರ್, ”ಆದ್ದರಿಂದಲೇ ನಾನು ಅವಳಿಗೆ ಲೇಖನ ಬರೆಯಲು ಹೇಳುತ್ತಿದ್ದೇನೆ; ಏಕೆಂದರೆ ಅವಳ ಮಾತು ಕೇಳಿ ಕೆಲವರ ಭಾವ ಜಾಗೃತಿಯಾಗುತ್ತದೆ, ಆದರೆ ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಿ ಬಂದಾಗ ಅವಳ ಲೇಖನ ಓದಿ ಸಾವಿರಾರು ಸಾಧಕರ ಭಾವಜಾಗೃತಿಯಾಗಬಹುದು’’, ಎಂದರು. ಇದರಿಂದ ‘ಯಾವುದೇ ವಿಷಯ ಹೇಳುವುದರ ಹಿಂದೆ ಅದರ ವ್ಯಾಪಕ ದೃಷ್ಟಿಕೋನವಿರುತ್ತದೆ. ಇದರಿಂದ ಅವರು ಕೇವಲ ನನ್ನಿಂದ ನನ್ನ ಮನಸ್ಸಿನ ಅಡಚಣೆಗಳನ್ನು ದೂರ ಗೊಳಿಸುತ್ತಿರಲಿಲ್ಲ, ಅದರ ಹಿಂದೆ ಸಮಷ್ಟಿಯ ದೃಷ್ಟಿಯಲ್ಲಿಯೂ ವಿಚಾರವಿತ್ತು’, ಎಂಬುದು ನನ್ನ ಗಮನಕ್ಕೆ ಬಂದಿತು.
೧೪. ‘ಗುರುತತ್ತ್ವ ಒಂದೇ ಇರುತ್ತದೆ’, ಎಂಬುದರ ಅನುಭೂತಿ ಬರುವುದು
ಒಂದು ಸೇವೆಯ ನಿಮಿತ್ತ ನನಗೆ ಪೂ. ವಟಕರ್‌ಕಾಕಾರೊಂದಿಗೆ (ಸನಾತನದ ೧೦೨ ನೇಯ ಸಂತರು) ಸಂಪರ್ಕವಾಗಿತ್ತು. ಆಗ ಅವರು ಕೂಡ ನನಗೆ ”ನೀವು ಈ ಹಿಂದೆ ಮಾಡಿದ ಲೇಖನ ತುಂಬಾ ಚೆನ್ನಾಗಿತ್ತು ಹಾಗೂ ಈಗ ನಿಯಮಿತ ಲೇಖನಗಳನ್ನು ಬರೆಯಿರಿ’’, ಎಂದು ಹೇಳಿದರು.
ನಿಜವಾಗಿ ನೋಡಿದರೆ ಅವರಿಗೆ ಲೇಖನದ ವಿಷಯದ ಈ ಮೇಲಿನ ಹಿನ್ನೆಲೆ ಏನೂ ಗೊತ್ತಿರಲಿಲ್ಲ, ಆದರೂ ಅವರು ಹೀಗೆ ಹೇಳುವುದು, ‘ಗುರುತತ್ತ್ವ ಒಂದೇ ಇರುತ್ತದೆ’, ಎಂಬುದರ ಅನುಭೂತಿ ಆಗಿತ್ತು. ಈಗ ಪ.ಪೂ. ಡಾಕ್ಟರ್ ನನಗೆ ನಿರಂತರ ನೆನಪಿಸಲು ಸ್ಥೂಲದಲ್ಲಿ ಸಮೀಪ ಇರುವುದಿಲ್ಲ. ಅವರು ಪೂ. ವಟಕರ ಕಾಕಾರವರ ಮೂಲಕ ನನಗೆ ಲೇಖನದ ಬಗ್ಗೆ ನೆನಪಿಸಿ ಕೊಟ್ಟರು’, ಎಂದು ನನಗೆ ಅನಿಸಿತು.
೧೫. ‘ಗುರುದೇವರು ನನ್ನಿಂದ ಅಥವಾ ಯಾರಿಂದಲೂ ಸಾಧನೆ ಮಾಡಿಸಿಕೊಳ್ಳದೆ ಬಿಡುವುದಿಲ್ಲ’, ಎಂಬುದು ಗಮನಕ್ಕೆ ಬಂದಿತು
ನಾನು ಗುರುಗಳ ಆಜ್ಞೆಯ ಪಾಲನೆ ಮಾಡುವುದಿಲ್ಲವೆಂದರೆ, ನಾನು ಎಷ್ಟು ದೊಡ್ಡ ಅಪರಾಧ ಮಾಡುತ್ತಿದ್ದೇನೆ ! ‘ಪ.ಪೂ. ಡಾಕ್ಟರ್ ನನ್ನಿಂದಾಗಿ ಎಂದಿಗೂ ಬೇಸರಪಟ್ಟುಕೊಳ್ಳಬಾರದು ಒಂದು ವೇಳೆ ಹಾಗಾದರೆ ನನಗೆ ಅದರ ಮೊದಲೇ ನನಗೆ ಮರಣ ಬರಬೇಕು’, ಎಂದು ನನಗನಿಸುತ್ತದೆ. ಅವರನ್ನು ಬೇಸರಪಡಿಸುವುದರ ಪಾಪ ನಾನು ಮಾಡಿದ್ದೇನೆ, ದೇವರೇ ಅದಕ್ಕಾಗಿ ನನ್ನನ್ನು ಕ್ಷಮಿಸುವಿರಾ ?
– ಸುಶ್ರೀ (ಕು.) ಪೂನಮ್ ಸಾಳುಂಖೆ (ಆಧ್ಯಾತ್ಮಿಕ ಮಟ್ಟ ಶೇ. ೬೧), ಸನಾತನ ಆಶ್ರಮ, ರಾಮನಾಥಿ ಗೋವಾ.
(ಮುಂದುವರಿಯುವುದು)