ಹಿಂದೂ ಸಂಘಟನೆಯ ನಾಯಕನ ಮಗಳ ಮೇಲೆ ಮುಸ್ಲಿಂ ಯುವಕನಿಂದ ಲೈಂಗಿಕ ಕಿರುಕುಳ ಪ್ರಕರಣ!
ವಾರಣಾಸಿ – ವಾರಣಾಸಿ ಜಿಲ್ಲೆಯ ಅಂಬಿಯಾ ಮಂಡಿಯಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಸಂಘಟನೆಯ ನಾಯಕನ ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಮುಸ್ಲಿಂ ಯುವಕ ಹುಡುಗಿಯನ್ನು ಚುಡಾಯಿಸಿದ ತಕ್ಷಣ ಆಕೆ ಕೂಗಾಡಿದ್ದಾಳೆ. ಹುಡುಗಿಯ ಕೂಗು ಕೇಳಿ ಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಅವರು ಆರೋಪಿ ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲು ತಯಾರಿ ನಡೆಸುತ್ತಿದ್ದಾಗ, ಆರೋಪಿ ಯುವಕನ ಕಡೆಯ 100 ಮುಸ್ಲಿಂ ಯುವಕರು ಅಲ್ಲಿಗೆ ಬಂದು ಹಿಂದೂಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿ ಆರೋಪಿಯನ್ನು ಬಿಡಿಸಿಕೊಂಡು ಹೋಗಿದ್ದಾರೆ. ಮುಸ್ಲಿಮರ ಗುಂಪು ಆರೋಪಿ ಯುವಕನನ್ನು ಕರೆದೊಯ್ದ ನಂತರ ಅಂಬಿಯಾ ಮಂಡಿ (ಕೋತ್ವಾಲಿ) ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ.
1. ಪೀಡಿತ ಹುಡುಗಿಯ ತಂದೆಯ ದೂರಿನ ಮೇರೆಗೆ ಕೋತ್ವಾಲಿ ಪೊಲೀಸರು ಗುಡ್ಡು, ರಿಜ್ವಾನ್ ಮತ್ತು ಇತರ ಅಪರಿಚಿತ ಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳ, ಹಲ್ಲೆ ಇತ್ಯಾದಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
2. ಮತ್ತೊಂದೆಡೆ, ಮುಸ್ಲಿಮರ ದಾಳಿಯಲ್ಲಿ ಗಾಯಗೊಂಡ ರಾಹುಲ್ ಪ್ರಜಾಪತಿ ಅವರ ದೂರಿನ ಮೇರೆಗೆ ಬಿಲಾಲ್, ಸಲೀಂ, ರಿಜ್ವಾನ್ ಸೇರಿದಂತೆ 100 ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಯತ್ನ, ಹಲ್ಲೆ, ಗಲಭೆ ಮತ್ತು ಬೆದರಿಕೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
3. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾತ್ರಿ ಅಂಬಿಯಾ ಮಂಡಿ ಪ್ರದೇಶದ ಎಜಾಜ್ ಅಹ್ಮದ್, ಗುಲ್ಜಾರ್, ಹಾಶಿಂ, ಮೊಹಮ್ಮದ್ ಅವರನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ ಮತ್ತು ಇತರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಡಿಸಿಪಿ ಗೌರವ್ ಬನ್ಸಾಲ್ ತಿಳಿಸಿದ್ದಾರೆ. ಈ ಘಟನೆಯ ನಂತರ ಅಂಬಿಯಾ ಮಂಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣವಿದೆ.
ಸಂಪಾದಕೀಯ ನಿಲುವು
|