ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಿಂದ ‘ಹೋಳಿ ಮಿಲನ’ ಕಾರ್ಯಕ್ರಮಕ್ಕೆ ಅನುಮತಿ

ಹಿಂದೂ ವಿದ್ಯಾರ್ಥಿಗಳು ಮತ್ತು ಸಂಘಟನೆಗಳ ತೀವ್ರ ವಿರೋಧದ ಪರಿಣಾಮ!

ಅಲಿಗಢ (ಉತ್ತರ ಪ್ರದೇಶ) – ಇಲ್ಲಿನ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಹಿಂದೂ ವಿದ್ಯಾರ್ಥಿಗಳು ಮತ್ತು ಸಂಘಟನೆಗಳ ವಿರೋಧದ ನಂತರ, ವಿಶ್ವವಿದ್ಯಾಲಯ ಆಡಳಿತವು ಹೋಳಿ ಮಿಲನ ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ನೀಡಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿ.ಬಿ. ಸಿಂಗ್ ಅವರು, ಮಾರ್ಚ್ 13 ಮತ್ತು 14 ರಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಯಾವುದೇ ವಿದ್ಯಾರ್ಥಿಯು ಸಭಾಂಗಣಕ್ಕೆ ಬಂದು ಹೋಳಿ ಆಡಬಹುದು ಎಂದು ಹೇಳಿದರು. ಇದು ವಿದ್ಯಾರ್ಥಿಗಳಿಗೆ 2 ದಿನಗಳ ಕಾಲ ತೆರೆದಿರುತ್ತದೆ. ಇಲ್ಲಿ ಬಣ್ಣ ಮತ್ತು ಗುಲಾಲ್ ಎರಚಿ ಆನಂದಿಸಿ, ಎಂದು ಹೇಳಿದರು.

1. ಕೆಲವು ದಿನಗಳ ಹಿಂದೆ, ಹಿಂದೂ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹೋಳಿ ಮಿಲನ ಕಾರ್ಯಕ್ರಮವನ್ನು ಆಚರಿಸಲು ಆಡಳಿತಕ್ಕೆ ಅನುಮತಿ ಕೇಳಿದ್ದರು; ಆದರೆ ಆಡಳಿತವು ಅನುಮತಿ ನೀಡಲು ನಿರಾಕರಿಸಿತ್ತು.

2. ಈ ನಿರಾಕರಣೆಯನ್ನು ಅಖಿಲ ಭಾರತೀಯ ಕರಣಿ ಸೇನೆ, ಇಲ್ಲಿನ ಭಾಜಪದ ಸಂಸದ ಸತೀಶ್ ಗೌತಮ್ ಮುಂತಾದವರು ವಿರೋಧಿಸಿ ಅನುಮತಿ ನೀಡುವಂತೆ ಒತ್ತಾಯಿಸಿದ್ದರು.

ಸಂಪಾದಕೀಯ ನಿಲುವು

ಹಿಂದೂಗಳು ಇದೇ ರೀತಿ ಸಂಘಟಿತರಾಗಿದ್ದರೆ, ಮುಂದೆ ಹಿಂದೂ ಹಬ್ಬಗಳಿಗೆ ಅನುಮತಿ ನಿರಾಕರಿಸಲು ಯಾರಿಗೂ ಧೈರ್ಯ ಬರುವುದಿಲ್ಲ!