Sambhal Police Public Warning : ಜುಮ್ಮಾ ವರ್ಷಕ್ಕೆ 52 ಬಾರಿ ಬರುತ್ತದೆ, ಆದರೆ ಹೋಳಿ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ. ಮುಸಲ್ಮಾನ ಸಮುದಾಕ್ಕೆ ಬುದ್ಧಿ ಹೇಳಿದ ಪೊಲೀಸ್ ಅಧಿಕಾರಿ ಅನುಜ್ ಚೌಧರಿ

ಸಂಭಲ್ (ಉತ್ತರ ಪ್ರದೇಶ) ಜಿಲ್ಲೆಯ ಮುಖ್ಯ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಅವರಿಂದ ಮುಸಲ್ಮಾನರಿಗೆ ಸೂಚನೆ!

ಮುಖ್ಯ ಪೊಲೀಸ್ ಅಧಿಕಾರಿ ಅನುಜ್ ಚೌಧರಿ

ಸಂಭಲ್ (ಉತ್ತರ ಪ್ರದೇಶ) – ಹೋಳಿ ಹಿನ್ನೆಲೆಯಲ್ಲಿ ಸಂಭಲ್ ಜಿಲ್ಲೆಯಲ್ಲಿ ಶಾಂತಿ ಸಮಿತಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮುಖ್ಯ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಕಠಿಣ ಶಬ್ದಗಳಲ್ಲಿ ಸೂಚನೆ ನೀಡಿದರು. ಈ ವರ್ಷ ಹೋಳಿ ಶುಕ್ರವಾರದಂದು ಬರುತ್ತಿದೆ. ಆ ಹಿನ್ನೆಲೆಯಲ್ಲಿ ಅವರು, ಜುಮ್ಮಾ ವರ್ಷಕ್ಕೆ 52 ಬಾರಿ ಬರುತ್ತದೆ, ಆದರೆ ಹೋಳಿ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ. ಮುಸಲ್ಮಾನ ಸಮುದಾಯದ ಜನರಿಗೆ ಹೋಳಿ ಬಣ್ಣಗಳಿಂದ ನಿಮ್ಮ ಧರ್ಮ ಕೆಡುತ್ತದೆ ಎಂದು ಅನಿಸಿದರೆ, ಆ ದಿನ ಮನೆಯಿಂದ ಹೊರಗೆ ಬರಬೇಡಿ. ನಿಮ್ಮ ಧರ್ಮವನ್ನು ನೀವು ಗೌರವಿಸಿದರೆ, ಇತರ ಧರ್ಮದ ಜನರ ಧರ್ಮವನ್ನೂ ಗೌರವಿಸಿ. ಶಾಂತಿ ಸಮಿತಿ ಸಭೆಯಲ್ಲಿ ಹಿಂದೂ ಮತ್ತು ಮುಸಲ್ಮಾನ ಎರಡೂ ಸಮುದಾಯದ ಜನರು ಭಾಗವಹಿಸಿದ್ದರು.

ಅನುಜ್ ಚೌಧರಿ ಮಾತು ಮುಂದುವರೆಸಿ, ಹೋಳಿ ದಿನದಂದು ಯಾರಾದರೂ ದುಷ್ಕೃತ್ಯ ಎಸಗುತ್ತಿರುವುದು ಕಂಡುಬಂದರೆ ಅವರಿಗೆ ಬಹುಮಾನ ನೀಡಲಾಗುವುದಿಲ್ಲ. ನಾವು ಸಂಭಲ್‌ನಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳುಮಾಡಲು ಬಿಡುವುದಿಲ್ಲ. ಹೋಳಿ ಹಬ್ಬದ ದಿನ ಜನರು ಮನೆಯಿಂದ ಹೊರಗೆ ಬಂದರೆ, ಎಲ್ಲರೂ ಒಂದೇ ಎಂಬಷ್ಟು ದೊಡ್ಡ ಮನಸ್ಸು ಅವರಲ್ಲಿರಬೇಕು. ಮುಸಲ್ಮಾನ ಸಮುದಾಯದವರು ವರ್ಷವಿಡೀ ಈದ್‌ಗಾಗಿ ಕಾಯುವಂತೆಯೇ ಹಿಂದೂ ಸಮುದಾಯದವರು ಹೋಳಿಗಾಗಿ ಕಾಯುತ್ತಾರೆ. ಬಣ್ಣಗಳನ್ನು ಎರಚಿ ಮತ್ತು ಸಿಹಿ ತಿಂದು ಹೋಳಿ ಆಚರಿಸಲಾಗುತ್ತದೆ ಮತ್ತು ಈದ್ ಸಮಯದಲ್ಲಿ ಜನರು ಶೇವಿಗೆ ಮಾಡಿ ಪರಸ್ಪರ ಭೇಟಿಯಾಗುತ್ತಾರೆ. ಆದ್ದರಿಂದ ಎಲ್ಲರೂ ಪರಸ್ಪರ ಗೌರವಿಸಬೇಕು.

ಸಂಪಾದಕೀಯ ನಿಲುವು

ಯೋಗಿ ಆದಿತ್ಯನಾಥ್ ಅವರಂತಹ ಮುಖ್ಯಮಂತ್ರಿಗಳು ಇರುವುದರಿಂದಲೇ ಪೊಲೀಸರು ಕಾನೂನಿನ ಪ್ರಕಾರ ಜನರನ್ನು ನಡೆದುಕೊಳ್ಳಲು ಹೇಳಬಹುದು ಮತ್ತು ಕಾನೂನುಬಾಹಿರವಾಗಿ ವರ್ತಿಸುವವರನ್ನು ಹದ್ದುಬಸ್ತಿನಲ್ಲಿಡಬಹುದು. ಇದರಿಂದ “ರಾಜ ಕಾಲಸ್ಯ ಕಾರಣಂ” (ರಾಜ ಕಾಲಕ್ಕೆ ಕಾರಣ) ಎಂಬ ಮಾತು ಸಾರ್ಥಕವಾಗುತ್ತದೆ! ಹೀಗಾಗಿ ಇಂತಹ ಆಡಳಿತಗಾರರು ಎಲ್ಲೆಡೆ ಇರಬೇಕು!