|
ಚಿಕ್ಕಮಗಳೂರು – ಇಲ್ಲಿನ ನೆಲ್ಲೂರು ಮಠ-ಜಾಮಿಯಾ ಮಸೀದಿ ನಡುವಿನ ಎರಡು ದಶಕಗಳ ಸಂಘರ್ಷ ಈಗ ತಾರಕಕ್ಕೇರಿದೆ. ಮಾರ್ಚ್ 4 ರಂದು ನಗರದ ಹನುಮಂತಪ್ಪ ವೃತ್ತದ ಬಳಿ ಮಸೀದಿಯ ಸದಸ್ಯರು ‘ಕರ್ನಾಟಕ ಹೈಕೋರ್ಟ್ ನಮ್ಮ ಪರವಾಗಿ ಆದೇಶ ನೀಡಿದೆ’ ಎಂದು ಹೇಳಿ ಪುರಸಭೆಗೆ ಯಾವುದೇ ಮಾಹಿತಿ ನೀಡದೆ ವಿವಾದಿತ ಸ್ಥಳದಲ್ಲಿನ ಮಠ, ಮನೆ ಮತ್ತು ಹೋಟೆಲ್ ಅನ್ನು ತೆರವುಗೊಳಿಸಲು ಪ್ರಾರಂಭಿಸಿದರು. 250 ಕ್ಕೂ ಹೆಚ್ಚು ಮುಸಲ್ಮಾನರನ್ನು ಒಟ್ಟುಗೂಡಿಸಿ ಬುಲ್ಡೋಜರ್ ಬಳಸಿ ಈ ಕ್ರಮ ಕೈಗೊಳ್ಳಲಾಯಿತು.
1. ಈ ಭೂಮಿ ನೆಲ್ಲೂರು ಮಠಕ್ಕೆ ಸೇರಿದ್ದು ಎಂದು ನೆಲ್ಲೂರು ಮಠದ ಕುಟುಂಬದವರು ಹೇಳುತ್ತಾರೆ, ಆದರೆ ಈ ಭೂಮಿ ಮುಸಲ್ಮಾನರಿಗೆ ಸೇರಿದ್ದು ಎಂದು ಜಾಮಿಯಾ ಮಸೀದಿಯವರು ಹೇಳುತ್ತಾರೆ. ಬುಲ್ಡೋಜರ್ ಕ್ರಮದಿಂದಾಗಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
2. ಬುಲ್ಡೋಜರ್ ಚಲಾಯಿಸುತ್ತಿದ್ದಾಗ, ನೆಲ್ಲೂರು ಮಠದ ಕುಟುಂಬದವರು, ಭಾಜಪ ಕಾರ್ಯಕರ್ತರು ಮತ್ತು ಹಿಂದೂತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರು. ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು.
3. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮಟೆ ಇವರು ಮಸೀದಿಯ ಸದಸ್ಯರಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದರು. ಈ ಸಭೆಯಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರು ಸಹ ಭಾಗವಹಿಸಿದ್ದರು.
4. ಸಭೆಯಲ್ಲಿ ಪೊಲೀಸರು ಜಾಮಿಯಾ ಮಸೀದಿಯ ಸದಸ್ಯರಿಗೆ ‘ಪೊಲೀಸರಿಗೆ ಮತ್ತು ಪುರಸಭೆಗೆ ಮಾಹಿತಿ ನೀಡದೆ ಇದ್ದಕ್ಕಿದ್ದಂತೆ ಕ್ರಮ ಕೈಗೊಂಡಿದ್ದಕ್ಕೆ’ ಕೇವಲ ಅಸಮಾಧಾನ ವ್ಯಕ್ತಪಡಿಸಿದರು.
5. ‘ತೆರವುಗೊಳಿಸಿದ ಕಟ್ಟಡವನ್ನು ಪುನಃ ಪ್ರಾರಂಭಿಸಬೇಕು, ಹಾನಿ ಪರಿಹಾರ ನೀಡಬೇಕು, ಬುಲ್ಡೋಜರ್ ಅನ್ನು ವಶಪಡಿಸಿಕೊಳ್ಳಬೇಕು ಮತ್ತು ಒತ್ತುವರಿ ತೆರವುಗೊಳಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಹಿಂದುತ್ವನಿಷ್ಠರು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಈ ಸಂಬಂಧ ನೆಲ್ಲೂರು ಮಠದ ಕುಟುಂಬ ಮತ್ತು ಹೋಟೆಲ್ ಮಾಲೀಕರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
6. ಹಿಂದೂಗಳ ಹೆಚ್ಚುತ್ತಿರುವ ಒತ್ತಡದಿಂದ ವಕ್ಫ್ ಬೋರ್ಡ್ ಅಧಿಕಾರಿಗಳು ಸೇರಿದಂತೆ ಜಾಮಿಯಾ ಮಸೀದಿಯ 14 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಪಾದಕೀಯ ನಿಲುವು
|