ಸಮಾಜವಾದಿ ಪಕ್ಷದ ಶಾಸಕ ಅಬೂ ಆಝಮಿಯ ಹಿಂದೂದ್ವೇಷಿ ಹೇಳಿಕೆ
ಮುಂಬಯಿ – ಔರಂಗಜೇಬನು ಒಬ್ಬ ಉತ್ತಮ ಆಡಳಿತಗಾರನಾಗಿದ್ದನು. ಅವನು ತನ್ನ ಆಡಳಿತದ ಅವಧಿಯಲ್ಲಿ ಭಾರತದ ಸರಹದ್ದನ್ನು ಅಫ್ಗಾನಿಸ್ಥಾನ ಮತ್ತು ಬ್ರಹ್ಮದೇಶದವರೆಗೆ ಹಬ್ಬಿಸಿದ್ದನು. ಅವನ ಆಡಳಿತದ ಕಾಲಾವಧಿಯಲ್ಲಿ ಭಾರತವನ್ನು ‘ಸೋನೆ ಕಿ ಚಿಡಿಯಾ’ ಎಂದು ಕರೆಯಲಾಗುತ್ತಿತ್ತು. ಔರಂಗಜೇಬನ ಕಾಲದಲ್ಲಿ ಭಾರತದ ಜಿಡಿಪಿ ಶೇ.24 ರಷ್ಟಿತ್ತು. ಈ ಕಾರಣದಿಂದಾಗಿಯೇ ಬ್ರಿಟಿಷರು ಭಾರತಕ್ಕೆ ಬಂದರು ಎಂದು ಸಮಾಜವಾದಿ ಪಕ್ಷದ ಶಾಸಕ ಅಬು ಆಝಮಿ ಅವರು ರಾಜ್ಯದ ಬಜೆಟ್ ಅಧಿವೇಶನದ ಮೊದಲ ದಿನ ವಿಧಾನಸಭೆಯ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಸದ್ಯ ಔರಂಗಜೇಬನ ಚಿತ್ರಣವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಔರಂಗಜೇಬ್ ತನ್ನ ಕಾಲದಲ್ಲಿ ಅನೇಕ ದೇವಸ್ಥಾನಗಳನ್ನು ನಿರ್ಮಿಸಿದ್ದನು. ಔರಂಗಜೇಬ್ ಕ್ರೂರ ಆಡಳಿತಗಾರನಲ್ಲ. ಆಗಿನ ಕಾಲದ ಯುದ್ಧವು ಧರ್ಮಕ್ಕಾಗಿ ಅಥವಾ ಹಿಂದೂ-ಮುಸಲ್ಮಾನ ಹೀಗೆ ಇರಲಿಲ್ಲ ಎಂದು ಆಝಮಿ ಹೇಳಿದರು.
ಛತ್ರಪತಿ ಸಂಭಾಜಿ ಮಹಾರಾಜರ ಬಗ್ಗೆ ಪ್ರಶ್ನೆ ಕೇಳಿದಾಗ ಪಲಾಯನಗೊಂಡ ಅಬು ಆಝಮಿಮಾಧ್ಯಮ ಪ್ರತಿನಿಧಿಗಳು ಅಬು ಆಝಮಿಯವರಿಗೆ ‘ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರನ್ನು ಯಾವ ರೀತಿ ಕೊಂದಿದ್ದನೋ ಅದು ಸರಿಯೇ?’ ಎಂದು ಪ್ರಶ್ನಿಸಿದಾಗ, ಅಬು ಅದಕ್ಕೆ ಉತ್ತರ ನೀಡದೆ ಅಲ್ಲಿಂದ ಹೊರಟು ಹೋದರು. |
ಗಣ್ಯರ ಪ್ರತಿಕ್ರಿಯೆಗಳು
‘ಮಹಾಪಾಪಿ ಔರಂಗಜೇಬನನ್ನು ಉತ್ತಮ ಆಡಳಿತಗಾರ ಎನ್ನುತ್ತಿರುವ ಅಬು ಆಝಮಿಯವರಿಗೆ ನಾಚಿಕೆಯೆನಿಸಬೇಕು – ಏಕನಾಥ ಶಿಂದೆ, ಉಪಮುಖ್ಯಮಂತ್ರಿ
ಔರಂಗಜೇಬನು ಹಿಂದೂಗಳ ಮೇಲೆ ಅನ್ಯಾಯ ಮತ್ತು ದೌರ್ಜನ್ಯ ನಡೆಸಿದನು, ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿದನು. ಅಂತಹ ಔರಂಗಜೇಬ ಒಬ್ಬ ಉತ್ತಮ ಆಡಳಿತಗಾರ ಹೇಗೆ ಆಗುತ್ತಾನೆ? ಅವನನ್ನು ಹೀಗೆ ಹೊಗಳುವುದು ದುರದೃಷ್ಟಕರವಾಗಿದೆ. ಔರಂಗಜೇಬನು ಮಹಾಪಾಪಿಯಾಗಿದ್ದನು. ಅವನ ಬಗ್ಗೆ ಈ ರೀತಿ ಹೇಳಿಕೆ ನೀಡುವ ಅಬು ಆಝಮಿಯವರಿಗೆ ನಾಚಿಕೆಯಾಗಬೇಕು. ದೇಶಭಕ್ತ ಮತ್ತು ರಾಷ್ಟ್ರಪುರುಷರ ಅವಮಾನ ಮಾಡಿದ್ದಕ್ಕಾಗಿ ಅಬು ಆಝಮಿಯವರು ಕ್ಷಮೆ ಕೋರಬೇಕು. ನಾವು ಛತ್ರಪತಿ ಸಂಭಾಜಿ ಮಹಾರಾಜರ ಅವಮಾನವನ್ನು ಸಹಿಸುವುದಿಲ್ಲ ಎಂದು ಶಿಂಧೆ ಕಠೋರವಾಗಿ ನುಡಿದರು.
ಅಬು ಆಝಮಿಗೆ ಇತಿಹಾಸ ಗೊತ್ತಿಲ್ಲ! – ರಾಮ ಕದಮ್, ಶಾಸಕರು, ಭಾಜಪ
ಅಬು ಆಝಮಿಗೆ ಇತಿಹಾಸವೇ ಗೊತ್ತಿಲ್ಲ. ಅವರ ಹೇಳಿಕೆ ತಪ್ಪಾಗಿದೆ. ನಾಳೆ ಅವರು ಸಭಾಂಗಣಕ್ಕೆ ಬಂದಾಗ, ನಾನು ಅವರಿಗೆ ಇತಿಹಾಸದ ಪುಸ್ತಕವನ್ನು ಕೊಡುವವನಿದ್ದೇನೆ. ಔರಂಗಜೇಬನು ನಮ್ಮ ಛತ್ರಪತಿ ಸಂಭಾಜಿ ಮಹಾರಾಜರನ್ನು ಯಾವ ರೀತಿ ಬಂಧಿಸಿದ್ದನು, ಯಾವ ರೀತಿ ಅಮಾನುಷವಾಗಿ ಕ್ರೂರ ಚಿತ್ರಹಿಂಸೆ ನೀಡಿದ್ದನು ಎಂಬುದು ಅಬು ಆಝಮಿಗೆ ತಿಳಿದಿಲ್ಲವೇ? ಎಂದು ಕದಮ್ ಪ್ರಶ್ನಿಸಿದರು.
ಈ ರೀತಿ ಅವಮಾನ ಮಾಡುವವರ ವಿರುದ್ಧ ಕ್ರಮ ಕೈಕೊಳ್ಳಬೇಕು – ಆದಿತ್ಯ ಠಾಕರೆ, ಶಾಸಕರು, ಠಾಕರೆ ದಳ
ಔರಂಗಜೇಬಿನ ಬಗ್ಗೆ ಇಂತಹ ಹೇಳಿಕೆ ನೀಡುವವರು ಸುಪಾರಿ ಪಡೆದು ವಿವಾದದ ಕಿಡಿಯನ್ನು ಹೊತ್ತಿಸುತ್ತಿದ್ದಾರೆಯೇ ಎಂಬುದನ್ನು ನೋಡಬೇಕಿದೆ. ಈ ರೀತಿ ಅವಮಾನ ಮಾಡುವವರ ವಿರುದ್ಧ ಕ್ರಮ ಕೈಕೊಳ್ಳಬೇಕೆಂದು ಠಾಕ್ರೆ ಆಗ್ರಹಿಸಿದರು.
ಸಂಪಾದಕೀಯ ನಿಲುವು
|