
‘ಸನಾತನದ ಓರ್ವ ಸಾಧಕನು ಕೆಲವು ವರ್ಷಗಳ ವರೆಗೆ ತಳಮಳದಿಂದ, ಶ್ರಮಪಟ್ಟು ಮತ್ತು ತುಂಬಾ ಸಮಷ್ಟಿ ಸೇವೆಯನ್ನು ಮಾಡುತ್ತಿದ್ದನು. ೨೦೦೬ ರಲ್ಲಿ ಅವನಿಗೆ ಓರ್ವ ಸಂತರು ಗುರುಮಂತ್ರವನ್ನು ನೀಡಿದರು. ಅಂದಿನಿಂದ ಹಿಡಿದು ಜನವರಿ ೨೦೨೫ ರ ವರೆಗೆ ಆ ಸಾಧಕನು ಸಮಷ್ಟಿ ಸೇವೆ ಮಾಡುವುದನ್ನು ನಿಲ್ಲಿಸಿದ್ದನು. ಅವನಿಗೆ, ‘ಸಂತರು ಗುರುಮಂತ್ರವನ್ನು ನೀಡಿದ್ದಾರೆ ಎಂದರೆ ಎಲ್ಲವೂ ಅದರಲ್ಲಿದೆ. ಈಗ ಕೇವಲ ನಾಮಜಪ ಮಾಡಿದರೆ ಸಾಕು. ಸಮಷ್ಟಿ ಸೇವೆ ಮಾಡುವುದು ಅವಶ್ಯಕತೆಯಿಲ್ಲ,’ ಎಂದೆನಿಸಿತು.
ಸಾಧಕನ ಈ ದೃಷ್ಟಿಕೋನವು ತಪ್ಪಾಗಿದೆ; ಏಕೆಂದರೆ ‘ನಾಮಜಪ ಮಾಡುವುದು’, ಇದು ವ್ಯಷ್ಟಿ ಸಾಧನೆಯಾಗಿದೆ. ಈ ಕಲಿಯುಗದಲ್ಲಿ ಅದಕ್ಕೆ ಕೇವಲ ಶೇ. ೩೦ ರಷ್ಟು ಮಹತ್ವವಿದೆ, ಮತ್ತು ಸಮಷ್ಟಿ ಸಾಧನೆಗೆ ಶೇ. ೭೦ ರಷ್ಟು ಮಹತ್ವವಿದೆ !
ಸಂತರು ಗುರುಮಂತ್ರವನ್ನು ಯಾವಾಗ ನೀಡುತ್ತಾರೆ ? ಯಾವಾಗ ಅವರಿಗೆ, ‘ಯಾವುದಾದರೊಬ್ಬ ಸಾಧಕನು ಅಥವಾ ಶಿಷ್ಯನು ಯೋಗ್ಯ ಮಾರ್ಗದಿಂದ ಆಧ್ಯಾತ್ಮಿಕ ಮಾರ್ಗಕ್ರಮಣ ಮಾಡುತ್ತಿದ್ದಾನೆ, ಹಾಗೆಯೇ ಯೋಗ್ಯ ರೀತಿಯಲ್ಲಿ ಸಮಷ್ಟಿ ಸೇವೆಯನ್ನು ತಳಮಳದಿಂದ ಮಾಡುತ್ತಿದ್ದಾನೆ’, ಎಂದು ಎನಿಸುತ್ತದೆಯೋ, ಆಗಲೇ ಅವರು ಅವನ ಆಧ್ಯಾತ್ಮಿಕ ಉನ್ನತಿಯು ಇನ್ನೂ ಶೀಘ್ರಗತಿಯಿಂದಾಗಲು ಅವನಿಗೆ ಗುರುಮಂತ್ರವನ್ನು ನೀಡುತ್ತಾರೆ.
ಸಾಧಕನು ಇದೆಲ್ಲ ವಿರುದ್ಧವಾಗಿ ಮಾಡಿದನು. ಅವನು ಸಮಷ್ಟಿ ಸೇವೆ ಮಾಡುವುದನ್ನು ಬಿಟ್ಟು ಬಿಟ್ಟನು. ಹಾಗೆಯೇ ‘ತಾನು ಮಾಡುತ್ತಿರುವುದು ಸರಿಯಿದೆಯೇ ?’, ಎಂದು ಗುರುಮಂತ್ರವನ್ನು ನೀಡಿದ ಸಂತರಿಗೆ ಕೇಳಲಿಲ್ಲ. ಆದ್ದರಿಂದ ಅವನ ಸಾಧನೆಯಲ್ಲಿನ ೧೯ ವರ್ಷಗಳು ವ್ಯರ್ಥವಾದವು. ಈ ದೃಷ್ಟಿಕೋನವನ್ನು ಸಾಧನೆ ಮಾಡುವವರೆಲ್ಲರೂ ಗಮನದಲ್ಲಿಡಬೇಕು !’
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೪.೨.೨೦೨೫)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !