ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಇವರ ಹೇಳಿಕೆ !
ಭಾಗ್ಯನಗರ (ತೆಲಂಗಾಣ) – ಭಾರತದಲ್ಲಿ ಹಿಂದೂ ಬಹುಸಂಖ್ಯಾತರಾಗಿಲ್ಲದಿದ್ದರೆ ನಾವು ನಮ್ಮ ಅಸ್ತಿತ್ವ ಕಳೆದುಕೊಳ್ಳುವೆವು. ನೀವು ಇದಕ್ಕೆ ಒಪ್ಪದಿದ್ದರೆ, ನೆರೆಯ ದೇಶಗಳಲ್ಲಿ, ಯುರೋಪಗಳಲ್ಲಿ ಮತ್ತು ಮಧ್ಯಪೂರ್ವದಲ್ಲಿ ಏನು ನಡೆಯುತ್ತಿದೆ, ಅದನ್ನು ನೋಡಿ. ನಾನು ಎಂದಿಗೂ ಯಾವುದೇ ಧರ್ಮ, ಜಾತಿ ಅಥವಾ ಸಮಾಜದ ವಿರುದ್ಧ ಮಾತನಾಡಿಲ್ಲ; ಆದರೆ ಸನಾತನ ಧರ್ಮದ ಪರವಾಗಿ, ದೃಢವಾಗಿ ನಿಂತರೆ, ಜನರು ನನ್ನನ್ನು ‘ಟ್ರೋಲ್’ ಮಾಡುತ್ತಾರೆ. (ವಿರೋಧಿಸುತ್ತಾರೆ), ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನ ಸೇನಾ ಪಕ್ಷದ ಪ್ರಮುಖ ಪವನ ಕಲ್ಯಾಣ ಇವರು ಹೇಳಿಕೆ ನೀಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ.
ನಾನು ಹುಸಿ ಜಾತ್ಯತೀತವಾದಿ ಅಲ್ಲ !
ಕೆಲವು ತಿಂಗಳ ಹಿಂದೆ ಪವನ ಕಲ್ಯಾಣ ಇವರು ತಿರುಪತಿಗೆ ಭೇಟಿ ನೀಡಿದ ನಂತರ ಮಂದಿರ ಪರಿಸರದಲ್ಲಿ ನಡೆಯುತ್ತಿರುವ ಹಿಂದುಗಳ ಮತಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅವರು, ನಾನು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಯಾವಾಗ ನಾನು ಅಲ್ಲಿಂದ ಹೊರಗೆ ಬಂದೆ ಆಗ ಅಲ್ಲಿಯ ಜನರು ಆ ಭಾಗದಲ್ಲಿನ ಹೆಚ್ಚುತ್ತಿರುವ ಮತಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನಾನು ಹುಸಿ ಜಾತ್ಯತೀತವಾದ ಅಲ್ಲ; ಆದರೆ ಜಾತ್ಯತೀತತೆಯನ್ನು ನಾನು ಗೌರವಿಸುತ್ತೇನೆ. ಇತರ ಧರ್ಮಗಳಿಗೆ ಅಪಾಯ ನಿರ್ಮಾಣವಾದರೆ ನಾನು ಧ್ವನಿ ಎತ್ತುತ್ತೇನೆ ಹಾಗೆಯೇ ನಾನು ಯಾವ ಹಿಂದೂ ಧರ್ಮದ ಅನುಯಾಯಿ ಆಗಿದ್ದೇನೆ, ಅದೇ ಅನ್ಯಾಯ ಎದುರಿಸಬೇಕಾದರೆ ಅದಕ್ಕಾಗಿ ಕೂಡ ಧ್ವನಿ ಎತ್ತುವೆನು. ಇದನ್ನು ಮಾಡಿ ನಾನು ಮತಗಳನ್ನು ಗಳಿಸುತ್ತೇನೆ ಅಥವಾ ಅವುಗಳನ್ನು ಕಳೆದುಕೊಳ್ಳುತ್ತೇನೆ ಇದನ್ನು ನಾನು ಲೆಕ್ಕಿಸುವುದಿಲ್ಲ, ಎಂದು ಹೇಳಿದರು.
ಸಂಪಾದಕೀಯ ನಿಲುವುಯಾವುದು ಸತ್ಯವಿದೆ, ಅದನ್ನೇ ಪವನ ಕಲ್ಯಾಣ ಇವರು ಸ್ಪಷ್ಟವಾಗಿ ಮಂಡಿಸಿದ್ದಾರೆ. ಹಿಂದುಗಳು ಇದನ್ನು ಗಾಂಭೀರ್ಯತೆಯಿಂದ ಯೋಚಿಸಬೇಕು ಮತ್ತು ಭಾರತವನ್ನು ಆದಷ್ಟು ಬೇಗನೆ ಹಿಂದು ರಾಷ್ಟ್ರ ಎಂದು ಘೋಷಿಸಿ ಸ್ವಂತದ ಅಸ್ತಿತ್ವದ ರಕ್ಷಣೆ ಮಾಡಿಕೊಳ್ಳುವುದು ಆವಶ್ಯಕವಾಗಿದೆ! |