‘ಹಿಂದೂ ಸಂಸ್ಕೃತಿಯು ಮಾನವನಿಗೆ, ‘ದೈವತ್ವವನ್ನು ಪಡೆಯುವ ಅಭಿಲಾಷೆಯನ್ನಿಟ್ಟುಕೊಂಡು ತನ್ನಲ್ಲಿ ಸಾತ್ತ್ವಿಕ ಮನೋಭಾವನೆಯನ್ನು ಬೆಳೆಸಲು ಶ್ರಮಿಸಬೇಕು’, ಎಂದು ಕಲಿಸಿತು. ಆದುದರಿಂದ ಈ ಜಗತ್ತು ಸತ್ತ್ವದ ಒಂದು ದಾರದಿಂದ ನೇಯಲ್ಪಟ್ಟಿಲ್ಲ. ಅದು ಸತ್ತ್ವ, ರಜ ಮತ್ತು ತಮ ಈ ಮೂರು ದಾರಗಳಿಂದ ನೇಯಲ್ಪಟ್ಟಿದೆ. ಈ ಜಗತ್ತಿನಲ್ಲಿ ಬದುಕಲು, ಗೆಲ್ಲಲು, ಕಡಿಮೆಪಕ್ಷ ಇತರರಿಂದ, ಅನ್ಯಾಯದಿಂದ ಸೋಲುವುದು ಬೇಡವಾಗಿದ್ದರೆ ಅವರು ಸತ್ತ್ವ, ರಜ ಮತ್ತು ತಮ ಈ ಮೂರೂ ಸ್ಥಿತಿಗಳನ್ನು ಯಶಸ್ವಿಯಾಗಿ ಎದುರಿಸಬೇಕಾದಂತಹ ತ್ರಿಶೂಲ ಸಾಧನವನ್ನೇ ಬಳಸಬೇಕು. ಆದುದರಿಂದ ಪಾತ್ರಾಪಾತ್ರತೆಯ ವಿವೇಚನೆಯನ್ನು ನೀಡುವ ಈ ಭಗವದ್ಗೀತೆಯ ಬೋಧನೆಯನ್ನು ಮರೆಯಬಾರದು.
(ಆಧಾರ : ‘ಸಹಾ ಸೊನೆರಿ ಪಾನೆ’ ಗ್ರಂಥದಿಂದ -ಸೊನೆರಿ ಪಾನ ಐದು ಅಧ್ಯಾಯ ನಾಲ್ಕು)
ಸಂಕಲನಕಾರರು : ಶ್ರೀ ದುರ್ಗೇಶ ಜಯವಂತ ಪರುಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಲಿ.