ಬೆಂಗಳೂರು: ಅತ್ಯಾಚಾರದ ದೂರು ನೀಡಲು ಬಂದ ಸಂತ್ರಸ್ತೆಯ ಮೇಲೆ ಮತ್ತೆ ಅತ್ಯಾಚಾರವೆಸಗಿದ ಪೊಲೀಸ್ ಕಾನ್‌ಸ್ಟೆಬಲ್ !

ಬೆಂಗಳೂರು : 17 ವರ್ಷದ ಅಪ್ರಾಪ್ತ ಬಾಲಕಿಗೆ ಆಕೆಯ ಸ್ನೇಹಿತ ವಿಕ್ಕಿ ಮದುವೆಯ ಆಮಿಷವೊಡ್ಡಿ ಅತ್ಯಾಚಾರವೆಸಗಿದ್ದ. ವಿಷಯ ತಿಳಿದು ಕುಟುಂಬಸ್ಥರು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ಆಗ ಕಾನ್‌ಸ್ಟೆಬಲ್ ಅರುಣ್, “ನಿನಗೆ ಖಂಡಿತಾ ನ್ಯಾಯ ದೊರಕಿಸಿಕೊಡುತ್ತೇನೆ, ಹೆದರಬೇಡ” ಎಂದು ನಂಬಿಸಿ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಸಂತ್ರಸ್ತೆ ನೀಡಿದ ದೂರಿನಲ್ಲಿ, ಕಾನ್‌ಸ್ಟೆಬಲ್ ಅರುಣ್ ತನಗೆ ಮಾದಕ ಪದಾರ್ಥ ಬೆರೆಸಿದ ಮದ್ಯ ನೀಡಿ ಪ್ರಜ್ಞೆ ತಪ್ಪಿಸಿದ ನಂತರ ಅತ್ಯಾಚಾರವೆಸಗಿದ್ದಾನೆ. ಪ್ರಜ್ಞೆ ಬಂದಾಗ, “ಈ ವಿಷಯವನ್ನು ಎಲ್ಲಿಯಾದರೂ ಹೇಳಿದರೆ, ನಿನ್ನ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ” ಎಂದು ಬೆದರಿಸಿದ್ದಾನೆ. ಆದರೂ ಧೈರ್ಯಗೆಡದ ಸಂತ್ರಸ್ತೆ ಪೊಲೀಸರಿಗೆ ನಡೆದ ವಿಷಯವನ್ನೆಲ್ಲಾ ತಿಳಿಸಿದಳು. ನಂತರ ಪೊಲೀಸರು ಆಕೆಯ ಸ್ನೇಹಿತ ವಿಕ್ಕಿ ಮತ್ತು ಕಾನ್‌ಸ್ಟೆಬಲ್ ಅರುಣ್ ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ಇದು ಬೇಲಿಯೇ ಹೊಲವನ್ನು ಮೇಯ್ದಂತಾದ ದುರಂತ. ಇಂತಹ ಪೊಲೀಸರಿಗೆ ಮರಣದಂಡನೆಯೇ ಸೂಕ್ತ !