UP Christian Conversion : ಮತಾಂತರ ಜಾಲ ಪತ್ತೆ: ಉತ್ತರಪ್ರದೇಶದಲ್ಲಿ ಮೂವರ ಬಂಧನ!

ರಾಯಬರೇಲಿ (ಉತ್ತರಪ್ರದೇಶ) – ರಾಯಬರೇಲಿಯ ಮಿಲ್ ಏರಿಯಾ ಪರಿಸರದಲ್ಲಿ ಪೊಲೀಸರು ಮತಾಂತರದ ಪ್ರಕರಣದಲ್ಲಿ ಮೂರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಿಳೆಯರು ಮತ್ತು ಅಮಾಯಕ ಮಕ್ಕಳಿಗೆ ವಿವಿಧ ಆಮಿಷ ತೋರಿಸಿ ಮತಾಂತರ ಮಾಡಲಾಗುತ್ತಿದ್ದೆಂದು ಆರೋಪವಿದೆ. ಮಿಲ್ ಪರಿಸರದಲ್ಲಿ ದಿಘಿಯಾದಲ್ಲಿ ಕ್ರೈಸ್ತ ಮಿಷೀನರಿಗಳಿಂದ ಪ್ರಾರ್ಥನಾ ಸಭೆಯ ಆಯೋಜನೆ ಮಾಡಲಾಗುತ್ತಿದ್ದವು. ಈ ಜನರು ಎಲ್ಲೆಡೆ ಸುತ್ತಾಡಿ ಹಿಂದೂ ಧರ್ಮದವರಿಗೆ ಹಣ ಮತ್ತು ಇತರ ಆಮೀಷಗಳನ್ನು ನೀಡಿ ಪ್ರಾರ್ಥನಾ ಸಭೆಗೆ ಕರೆದು ಅವರಿಗೆ ಕ್ರೈಸ್ತ ಪಂಥ ಸ್ವೀಕರಿಸಲು ಹೇಳುತ್ತಿದ್ದರು. (ಕಥಿತ ಸರ್ವಧರ್ಮ ಸಮಭಾವದವರು, ಸಾಮ್ಯವಾದಿ ಮತ್ತು ಬುದ್ಧಿ ಪ್ರಾಮಾಣ್ಯವಾದಿಗಳಿಗೆ ಕ್ರೈಸ್ತ ಮಿಶಿನರಿಗಳು ಧಾರ್ಮಿಕ ಬಿರುಕು ನಿರ್ಮಾಣ ಮಾಡುವ ಚಟುವಟಿಕೆ ಕಾಣುವುದಿಲ್ಲ ಅಥವಾ ಅವರು ಅದನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ, ಇದನ್ನು ಅರಿತುಕೊಳ್ಳಿ ! – ಸಂಪಾದಕರು)

೧. ಕ್ಷೇತ್ರ ಅಧಿಕಾರಿ ಅಮಿತ್ ಸಿಂಹ ಇವರು, ಈ ಮತಾಂತರದ ಪ್ರಕರಣದಲ್ಲಿ ಮಿಲ್ ಕ್ಷೇತ್ರ ಪೊಲೀಸ ಠಾಣೆಯಲ್ಲಿ ದಾಖಲಿಸಿರುವ ದೂರಿನ ಆಧಾರದಲ್ಲಿ ಪೊಲೀಸರು ಓರ್ವ ಪುರುಷನ ಸಹಿತ ಇಬ್ಬರೂ ಮಹಿಳೆಯರ ವಿರುದ್ಧ ದೂರು ದಾಖಲಿಸಿ ಬಂಧಿಸಲಾಯಿತು.

೨. ಸೀತಾಪುರದಲ್ಲಿ ಮತಾಂತರದ ಇನ್ನೊಂದು ಘಟನೆಯಲ್ಲಿ ಪೊಲೀಸರು ಪಾದ್ರಿ ಸುರೇಶ ಚಂದ್ರ ಸಹಿತ ೧೨ ಜನರನ್ನು ವಶಕ್ಕೆ ಪಡೆದಿದ್ದಾರೆ. (ಪಾದ್ರಿಯ ಹೆಸರು ಸುರೇಶ ಚಂದ್ರ ಹೇಗೆ? ಮತಾಂತರ ಆದ ನಂತರ ಅವರು ಕ್ರೈಸ್ತರಾಗುತ್ತಾರೆ; ಆದರೆ ಹಿಂದಿನ ಹಿಂದೂ ಹೆಸರು ಹಾಗೆಯೇ ಉಳಿಸಿಕೊಳ್ಳುತ್ತಾರೆ; ಕಾರಣ ಅವರು ಸುಲಭವಾಗಿ ಹಿಂದುಗಳ ಬ್ರೈನ್‌ವಾಷ್ ಮಾಡಿ ಅವರನ್ನು ಸುಲಭವಾಗಿ ಮತಾಂತರ ಮಾಡಬಹುದು !- ಸಂಪಾದಕರು) ಬಜರಂಗದಳದ ಜಿಲ್ಲಾ ಸಂಯೋಜಕ ಅನುಜ ಬದೌರಿಯ ಇವರ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಪೊಲೀಸರು ಈ ಪ್ರಕರಣದಲ್ಲಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಹಿಂದುತ್ವನಿಷ್ಠ ಭಾಜಪ ಸರಕಾರ ಇರುವಾಗಲೂ ಅಲ್ಲಿ ಕ್ರೈಸ್ತ ಮಿಷೀನರಿಗಳು ಹಿಂದುಗಳ ಮತಾಂತರ ಮಾಡುವಷ್ಟು ಉದ್ಧಟರಾಗಿದ್ದಾರೆ. ಅವರಿಗೆ ಸರಿಯಾದ ದಾರಿಗೆ ತರುವುದಕ್ಕಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ, ಇದೇ ಇದರಿಂದ ಕಂಡು ಬರುತ್ತಿದೆ !