ರಾಜಸ್ಥಾನದ ಅಜಮೇರಿನಲ್ಲಿ ಒಂದೇ ವರ್ಷದಲ್ಲಿ 251 ಹಿಂದೂ ಹುಡುಗಿಯರು ನಾಪತ್ತೆ: ಮುಸಲ್ಮಾನ ಗುಂಪಿನ ಕೈವಾಡ

ಅಜಮೇರ (ರಾಜಸ್ಥಾನ) – 1990ರ ದಶಕದಲ್ಲಿ, ರಾಜಸ್ಥಾನದ ಅಜಮೇರದಲ್ಲಿ ಕಾಮಕಾಂಡವೊಂದು ಬೆಳಕಿಗೆ ಬಂದಿತ್ತು. ಇದರಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಆ ಸಮಯದಲ್ಲಿ ಅಜಮೇರ ದರ್ಗಾಗೆ ಸಂಬಂಧಿಸಿದ ಮುಸ್ಲಿಂ ಮುಖಂಡರು ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಿ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು. 2025 ರಲ್ಲಿ ಈಗ ಅಜಮೇರ ಬಳಿಯ ಬ್ಯಾವರ ಪ್ರದೇಶದಲ್ಲಿ ಇಂತಹದೇ ಘಟನೆಯು ಬೆಳಕಿಗೆ ಬಂದಿದೆ. ಇಲ್ಲಿನ ಮುಸಲ್ಮಾನ ಹುಡುಗರ ತಂಡವೊಂದು ಶಾಲೆಯಲ್ಲಿ ಓದುತ್ತಿರುವ ಹಿಂದೂ ಹುಡುಗಿಯರನ್ನು ತಮ್ಮ ಬಲೆಗೆ ಸೀಲುಕಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ರಾಜಸ್ಥಾನ ವಿಧಾನಸಭೆಯ ಅಧ್ಯಕ್ಷರು `ಅಜಮೇರನಿಂದ 250ಕ್ಕೂ ಹೆಚ್ಚು ಹಿಂದೂ ಹುಡುಗಿಯರು ಕಾಣೆಯಾಗಿದ್ದಾರೆ’ ಎಂದು ಹೇಳಿದ್ದಾರೆ.

1. ರಾಜಸ್ಥಾನ ವಿಧಾನಸಭೆಯ ಅಧ್ಯಕ್ಷರಾದ ವಾಸುದೇವ ದೇವನಾನಿಯವರು ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ವಿಧಾನಸಭೆಯಲ್ಲಿ ಇದಕ್ಕೆ ಸಂಬಂಧಿಸಿದ ಅಂಕಿಅಂಶಗಳು ಬೆಳಕಿಗೆ ಬಂದಿವೆ.

2. ಅಜಮೇರ ಜಿಲ್ಲೆಯ ಮಾನವ ಕಳ್ಳಸಾಗಣೆ ವಿಭಾಗದ ಮುಖ್ಯಸ್ಥರಾದ ಅಶೋಕ ಬಿಷ್ಣೋಯಿರವರು ಮಾತನಾಡಿ, ಕಳೆದ ಒಂದು ವರ್ಷದಲ್ಲಿ 310 ಮಕ್ಕಳು ಕಾಣೆಯಾದ ದೂರುಗಳು ದಾಖಲಾಗಿವೆ, ಅವರಲ್ಲಿ 251 ಹುಡುಗಿಯರು ಎಂದು ಹೇಳಿದರು.

3. ಅಜಮೇರನಿಂದ ಕಾಣೆಯಾದ ಕೆಲವು ಮಕ್ಕಳು ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು `ಇದಕ್ಕಾಗಿ ತಂತ್ರಜ್ಞಾನದ ಸಹಾಯವನ್ನೂ ಪಡೆಯಲಾಗುತ್ತಿದೆ ಹಾಗೂ ಮಕ್ಕಳ ಅಪಹರಣ ಮಾಡುವವರನ್ನು ಬಂಧಿಸಲಾಗಿದೆ’ ಎಂದಿದ್ದಾರೆ.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಬಿಜೆಪಿಯ ಆಡಳಿತವಿರುವಾಗ ಇಂತಹ ಘಟನೆಗಳು ಅಪೇಕ್ಷಿತವಲ್ಲ ! ಹಿಂದೂಗಳ ತಾಯಿ-ಸಹೋದರಿಯರನ್ನು ವಕ್ರ ದೃಷ್ಟಿಯಿಂದ ನೋಡುವ ಧೈರ್ಯ ಯಾರಿಗೂ ಬರಬಾರದು, ಅಂತಹ ಭಯವನ್ನು ಸರಕಾರಿ ವ್ಯವಸ್ಥೆಗಳು ನಿರ್ಮಾಣ ಮಾಡುವುದು ಅವಶ್ಯಕವಾಗಿದೆ !