ಅಜ್ಮೇರ್ ದರ್ಗಾದಲ್ಲಿ ಶಿವ ದೇವಾಲಯವಿರುವುದರಿಂದ ಮಹಾಶಿವರಾತ್ರಿಯಂದು ಪೂಜೆ ಮಾಡಲು ಅನುಮತಿ ನೀಡಿ ! – ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ

ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ

ಅಜ್ಮೇರ್ (ರಾಜಸ್ಥಾನ) – ಮಹಾಶಿವರಾತ್ರಿಯಂದು ಇಲ್ಲಿನ ಅಜ್ಮೇರ್ ದರ್ಗಾದಲ್ಲಿ ಭಗವಾನ್ ಶಿವನನ್ನು ಪೂಜಿಸಲು ಅನುಮತಿ ನೀಡುವಂತೆ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಮನವಿ ಮಾಡಿದ್ದಾರೆ. ಈ ಸಂಬಂಧ ಅಜ್ಮೇರ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಅಜ್ಮೇರ್ ದರ್ಗಾದಲ್ಲಿ ಶಿವನ ದೇವಸ್ಥಾನವಿದೆ ಎಂದು ವಿಷ್ಣು ಗುಪ್ತಾ ಅವರು ಈಗಾಗಲೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಇದರ ಪ್ರಕರಣ ವಿಚಾರಣಾ ಹಂತದಲ್ಲಿದೆ. ಗುಪ್ತಾ ಅವರ ಅರ್ಜಿಯಲ್ಲಿ ಹರ್ವಿಲಾಸ್ ಶಾರದಾ ಅವರು 1911 ರಲ್ಲಿ ಬರೆದ ಪುಸ್ತಕವನ್ನು ಉಲ್ಲೇಖಿಸಿದ್ದಾರೆ.

ವಿಷ್ಣು ಗುಪ್ತಾ ಅವರು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ, ಮಹಾಶಿವರಾತ್ರಿ ಹಬ್ಬವು ವರ್ಷಕ್ಕೊಮ್ಮೆ ಬರುತ್ತದೆ, ಹಿಂದೂಗಳು ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಅವರು ಭಗವಾನ್ ಶಿವನಿಗೆ ಸಮರ್ಪಿತರಾಗಿದ್ದಾರೆ ಮತ್ತು ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಪ್ರಾಮುಖ್ಯತೆ ಇದೆ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ಅನೇಕ ಸ್ಥಳಗಳಲ್ಲಿ ಹಿಂದೂ ದೇವಾಲಯಗಳನ್ನು ಕೆಡವಿ, ಮುಸ್ಲಿಮರು ಮಸೀದಿ ಅಥವಾ ದರ್ಗಾಗಳನ್ನು ನಿರ್ಮಿಸಿದ್ದಾರೆ. ಇದು ಇತಿಹಾಸ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಎಲ್ಲಾ ಸ್ಥಳಗಳ ಸಮೀಕ್ಷೆ ನಡೆಸಿ ಸತ್ಯಾಂಶವನ್ನು ಹೊರತರಬೇಕಾಗಿದೆ. ಇಲ್ಲವಾದರೆ ಇಂತಹ ಬೇಡಿಕೆಗಳು ಬರುತ್ತಲೇ ಇರುತ್ತವೆ !