ನಿಷೇಧಿತ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಚು
ನವದೆಹಲಿ – ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಈ ನಿಷೇಧಿತ ಜಿಹಾದಿ ಸಂಘಟನೆಯ ಹೊಸ ಸಂಚು ಬಹಿರಂಗವಾಗಿದೆ. ಇದರ ಅಡಿಯಲ್ಲಿ ಈ ಸಂಘಟನೆಯು ರಾಷ್ಟ್ರೀಯ ಪೌರತ್ವ ನೋಂದಣಿಯಿಂದ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ – ಎನ್‌ಆರ್‌ಸಿಯಿಂದ) ತಪ್ಪಿಸಿಕೊಳ್ಳಲು ಜಾರ್ಖಂಡ್‌ನ ಬುಡಕಟ್ಟು ಹುಡುಗಿಯರನ್ನು ಮದುವೆಯಾಗುತ್ತಿದೆ. ಈ ಸಂಚನ್ನು ಕಾರ್ಯಗತಗೊಳಿಸಲು ಈ ಸಂಘಟನೆಯು ರಾಜ್ಯದಲ್ಲಿ 10 ಸಾವಿರ ಎಕರೆಗಿಂತಲೂ ಹೆಚ್ಚು ಭೂಮಿಯನ್ನು ಖರೀದಿಸಿದೆ. ಗುಪ್ತಚರ ಇಲಾಖೆಯು ಈ ಬಗ್ಗೆ ವರದಿಯನ್ನು ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿದೆ.
ಸಂಪೂರ್ಣ ಪ್ರಕರಣವೇನು?
ಗುಪ್ತಚರ ಇಲಾಖೆಯ ವರದಿಯ ಪ್ರಕಾರ, ಪಿಎಫ್‌ಐ ಅನ್ನು ನಿಷೇಧಿಸಿದ ನಂತರವೂ, ಸಂತಾಲ ಭೂಮಿ ಎಂದು ಕರೆಯಲ್ಪಡುವ ಪಾಕೂರ್, ಜಮತಾರಾ, ಗೋಡ್ಡಾ ಮತ್ತು ಸಾಹೇಬ್‌ಗಂಜ್ ಜಿಲ್ಲೆಗಳಲ್ಲಿ ಈ ಸಂಘಟನೆಯು ವೇಗವಾಗಿ ವಿಸ್ತರಿಸಿದೆ. ರಾಜಮಹಲ್, ಉಧ್ವಾ, ಬರ್ಹೆತ್ ಮತ್ತು ತಲ್ಜಾರಿ ಬ್ಲಾಕ್‌ಗಳ ಅಯೋಧ್ಯೆ, ಜೋಗ್ಟೋಲಾ, ವೃಂದಾವನ, ಬಲುಗ್ರಾಮ, ಕರಮ್ಟೋಲಾ, ಮಹಾರಾಜಪುರ, ತೀನ್ ಪಹಾಡ್ ಬಜಾರ್, ಜೋಂಕಾ, ಗಂಗಾಟಿಯಾ ಮತ್ತು ಪದರ್‌ಕೋಲಾದಂತಹ ಹಳ್ಳಿಗಳಲ್ಲಿ ಜಿಹಾದಿಗಳು ವೇಗವಾಗಿ ಭೂಮಿ ಖರೀದಿಸಿದ್ದಾರೆ. ಅನೇಕ ಹಳ್ಳಿಗಳಲ್ಲಿ, ಅವರು ಶಸ್ತ್ರಾಸ್ತ್ರಗಳನ್ನು ಬಳಸಿ ಜನರ ಭೂಮಿಯನ್ನು ಬಲವಂತವಾಗಿ ನಿಯಂತ್ರಿಸಿದ್ದಾರೆ. ಬೆದರಿಸಿ, ಅತ್ಯಲ್ಪ ಬೆಲೆಗೆ ಭೂಮಿ ಖರೀದಿಸಲಾಗಿದೆ. ಪಿಎಫ್‌ಐ ತಮ್ಮ ಸದಸ್ಯರ ಮೂಲಕ ಮಾತ್ರ ಬುಡಕಟ್ಟು ಸಮುದಾಯದ ಭೂಮಿಯನ್ನು ನಿಯಂತ್ರಿಸುತ್ತಿಲ್ಲ, ಬದಲಾಗಿ ಬಾಂಗ್ಲಾದೇಶಿ ನುಸುಳುಕೋರರಿಗೆ ಜಾರ್ಖಂಡ್‌ನಲ್ಲಿ ತಮ್ಮ ಭೂಮಿಯನ್ನು ಒಟ್ಟುಗೂಡಿಸಲು ಮತ್ತು ಜಂಗಮ ಮತ್ತು ಸ್ಥಿರ ಆಸ್ತಿಗಳನ್ನು ಖರೀದಿಸಲು ಹಣವನ್ನು ನೀಡುತ್ತಿದೆ.
ಪಿಎಫ್‌ಐ ಜಿಹಾದಿ ಭಯೋತ್ಪಾದಕರಿಗೆ ಮಾರ್ಗವನ್ನು ಸಿದ್ಧಪಡಿಸುತ್ತಿದೆ!
ಪಿಎಫ್‌ಐನ ಜಿಹಾದಿ ಕಾರ್ಯಕರ್ತರು ಸಂಚಿನ ಭಾಗವಾಗಿ ಜಾರ್ಖಂಡ್‌ನ ಬುಡಕಟ್ಟು ಸಮುದಾಯದ ಹುಡುಗಿಯರನ್ನು ಮೋಸಗೊಳಿಸಿ ಅವರನ್ನು ಮದುವೆಯಾಗುತ್ತಿದ್ದಾರೆ, ಇದರಿಂದ ಅವರು ಭಯೋತ್ಪಾದಕರಿಗೆ ಭಾರತದ ಇತರ ರಾಜ್ಯಗಳಿಗೆ ಸುರಕ್ಷಿತ ಪ್ರವೇಶವನ್ನು ಒದಗಿಸಲು ಒಂದು ಮಾರ್ಗವನ್ನು ಸಿದ್ಧಪಡಿಸಬಹುದಾಗಿದೆ. ಇಲ್ಲಿಯವರೆಗೆ 12 ಸಾವಿರಕ್ಕೂ ಹೆಚ್ಚು ಹುಡುಗಿಯರನ್ನು ಪಿಎಫ್‌ಐ ಕಾರ್ಯಕರ್ತರು ಮೋಸಗೊಳಿಸಿ ಮದುವೆಯಾಗಿದ್ದಾರೆ.
ಸಂಪಾದಕೀಯ ನಿಲುವುಇದು ಆಗುವವರೆಗೆ ಸರಕಾರ, ಆಡಳಿತ, ಪೊಲೀಸರು ನಿದ್ರಿಸುತ್ತಿದ್ದರೇ? ಅವರು ಈಗ ಇದರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೆ? ಜಾರ್ಖಂಡ್ ಎರಡನೇ ಪಾಕಿಸ್ತಾನವಾಗಲಿದೆಯೇ? ಇದಕ್ಕೆ ಯಾರು ಉತ್ತರಿಸುತ್ತಾರೆ? |