ಹೋಳಿ ‘ಛಪರಿ’ ಜನರ (ಮೂರ್ಖರ) ನೆಚ್ಚಿನ ಹಬ್ಬ! – ಫರಾಹ ಖಾನ್

  • ಫರಾಹ ಖಾನ್ ಅವರ ಹಿಂದೂ ದ್ವೇಷದ ಹೇಳಿಕೆ

  • ಫರಾಹ ಖಾನ್ ಅವರು ಕ್ಷಮೆಯಾಚಿಸಬೇಕೆಂದು ಆಕ್ರೋಶಗೊಂಡ ಹಿಂದೂಗಳ ಆಗ್ರಹ!

ಮುಂಬಯಿ – ಚಲನಚಿತ್ರ ನಿರ್ದೇಶಕಿ ಫರಾಹ ಖಾನ್ ‘ಸೆಲೆಬ್ರಿಟಿ ಮಾಸ್ಟರ್‌ಶೆಫ್’ ನಲ್ಲಿ ತೀರ್ಪುಗಾರರಾಗಿದ್ದರು. ಇತ್ತೀಚೆಗೆ ಈ ಕಾರ್ಯಕ್ರಮದ ಒಂದು ಭಾಗದಲ್ಲಿ ಹೋಳಿಯ ಬಗ್ಗೆ ಟೀಕೆ ಮಾಡುತ್ತಾ ಫರಾಹ ಖಾನ್, “ಹೋಳಿ ಎಲ್ಲಾ ‘ಛಪರಿ’ ಜನರ (ಮೂರ್ಖರ) ನೆಚ್ಚಿನ ಹಬ್ಬ” ಎಂದಿದ್ದರು. ಈ ಬಗ್ಗೆ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದು, ಫರಾಹ ಖಾನ್ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

1. ಈ ವಿಡಿಯೋದಲ್ಲಿ ನಟ ಗೌರವ್ ಖನ್ನಾ ಮತ್ತು ಶೆಫ್ ವಿಕಾಸ ಖನ್ನಾ ಹಿನ್ನೆಲೆಯಲ್ಲಿ ಪರಸ್ಪರ ಮಾತನಾಡುತ್ತಿರುವುದು ಕಂಡುಬರುತ್ತದೆ, ಆದರೆ ಫರಾಹ ಖಾನ್ ಕ್ಯಾಮೆರಾವನ್ನು ನೋಡುತ್ತಾ, “ಹೋಳಿ ಎಲ್ಲಾ ‘ಛಪರಿ’ ಜನರ ನೆಚ್ಚಿನ ಹಬ್ಬ” ಎಂದು ಹೇಳುತ್ತಾರೆ.

2. ಈ ಟೀಕೆಯಿಂದ ಫರಾಹ ಖಾನ್ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬ ಹಿಂದೂವು, “ಹೋಳಿಯನ್ನು ‘ಛಪರಿ ಬಾಯ್ಸ್’ (ಮೂರ್ಖ ಹುಡುಗರ) ಹಬ್ಬ ಎಂದು ಕರೆದ ಫರಾಹ ಖಾನ್ ಅವರಿಗೆ ಧೈರ್ಯವಿದ್ದರೆ ಈದ್‌ನ್ನೂ ಅದೇ ರೀತಿ ಕರೆಯಲಿ. ಹಿಂದೂ ಹಬ್ಬಗಳನ್ನು ಅವಮಾನಿಸುವುದು ಜಾತ್ಯತೀತೆಯಲ್ಲ, ಮಾನಸಿಕ ದಿವಾಳಿತನ. ಕ್ಷಮೆಯಾಚಿಸಿ, ಇಲ್ಲದಿದ್ದರೆ ಇಂಥವರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಜನರಿಗೆ ತಿಳಿದಿದೆ”, ಎಂದು ಬರೆದಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಟ ಗೌರವ್ ಖನ್ನಾ ಅವರು ಹೋಳಿಯನ್ನು ತಮ್ಮ ‘ನೆಚ್ಚಿನ ಹಬ್ಬ’ ಎಂದು ಕರೆದಿದ್ದರು. 3. ಈ ಕಾರ್ಯಕ್ರಮದಲ್ಲಿ ನಟ ಗೌರವ ಖನ್ನಾ ಇವರು ಹೋಳಿಯನ್ನು ತನ್ನ ‘ನೆಚ್ಚಿನ ಹಬ್ಬ’ ಎಂದು ಹೇಳಿದ್ದರು. ಹೋಳಿಗೆ ನಮಸ್ಕರಿಸುತ್ತಾ ಗೌರವ್ ಖನ್ನಾ ಅವರು ವಿಶೇಷ ‘ಡಿಶ್’ (ವಿಶೇಷ ಪದಾರ್ಥ) ತಯಾರಿಸಿದ್ದರು ಮತ್ತು ಅದರಲ್ಲಿ ಎಲ್ಲಾ ಬಣ್ಣಗಳನ್ನು ಸೇರಿಸಿದ್ದರು. ಶೆಫ್ ವಿಕಾಸ್ ಖನ್ನಾ ಮತ್ತು ರಣವೀರ ಬ್ರಾರ್ ಅವರು ಗೌರವ್ ಖನ್ನಾ ಅವರನ್ನು ಶ್ಲಾಘಿಸಿದರು, ಆದರೆ ಫರಾಹ ಖಾನ್ ಅವರು ಹೋಳಿ ‘ಛಪರಿ’ ಜನರ ನೆಚ್ಚಿನ ಹಬ್ಬ ಎಂದು ಟೀಕಿಸಿದ್ದರು.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರು ಹಿಂದೂಗಳ ವಿರುದ್ಧ ವಿಷ ಕಾರಲು ಒಂದು ಅವಕಾಶವನ್ನೂ ಬಿಡುವುದಿಲ್ಲ, ಇದು ಅದಕ್ಕೆ ಸಾಕ್ಷಿ. ಇಂಥವರು ಹಿಂದೂಗಳ ಹಬ್ಬ-ಉತ್ಸವಗಳು, ದೇವರುಗಳ ಬಗ್ಗೆ ಟೀಕೆ ಮಾಡುವ ಧೈರ್ಯ ಮಾಡದಂತೆ ಹಿಂದೂಗಳು ಜಾಗರೂಕರಾಗಿರಬೇಕು !