ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಕಠೋರ ಮತಾಂತರ ವಿರೋಧಿ ಕಾನೂನು ಜಾರಿಯಾಗಲಿದೆ! – ನಿತೇಶ್ ರಾಣೆ, ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ

ಮುಂಬಯಿ – ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಘಟನೆಗಳಿಗೆ ಕಡಿವಾಣ ಹಾಕುವುದಕ್ಕಾಗಿ, ಪ್ರಖರ ಹಿಂದುತ್ವನಿಷ್ಠ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ರಾಜ್ಯದಲ್ಲಿ ವಿಶೇಷ ಮತಾಂತರ ವಿರೋಧಿ ಕಾನೂನಿಗೆ (ಕಾಯಿದೆಗೆ) ಸಂಬಂಧಿಸಿದಂತೆ ಸಮಿತಿಯನ್ನು ರಚಿಸಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಫಡ್ನವೀಸ್ ಅವರಿಗೆ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಈ ನಿರ್ಧಾರದಿಂದಾಗಿ ಮಹಾರಾಷ್ಟ್ರ ಸರಕಾರವು ಅಸಂಖ್ಯ ಹಿಂದೂ ತಾಯಂದಿರು ಮತ್ತು ಸಹೋದರಿಯರಿಗೆ ಭಾರಿ ಭದ್ರತೆಯನ್ನು ಒದಗಿಸಲಿದೆ.

ರಾಜ್ಯದಲ್ಲಿನ ಹಲವು ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಹಿಂದೂ ಸಮಾಜವು ಕೆಲವು ವರ್ಷಗಳಿಂದ ಇಂತಹ ಸಮರ್ಥ ಮತಾಂತರ ವಿರೋಧಿ ಕಾನೂನಿನ ಬೇಡಿಕೆ ಮಾಡುತ್ತಿದ್ದವು. ಅವರ ಆಶಯದ ಪ್ರಕಾರ ಸಮಿತಿಯ ರಚನೆಯೊಂದಿಗೆ ದೇಶದಲ್ಲೇ ಅತ್ಯಂತ ಕಠೋರ ಮತಾಂತರ ವಿರೋಧಿ ಕಾನೂನು ಶೀಘ್ರದಲ್ಲೇ ರಾಜ್ಯಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ನಾನು ಹಿಂದೂ ಸಮುದಾಯಕ್ಕೆ ನೀಡುತ್ತೇನೆ ಎಂದು ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ಹಾಗೂ ಸಿಂಧುದುರ್ಗ ಜಿಲ್ಲೆಯ ಉಸ್ತುವಾರಿ ಸಚಿವ ನಿತೇಶ್ ರಾಣೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಹೇಳಿದ್ದಾರೆ.