ನವದೆಹಲಿ – ಸರ್ವೋಚ್ಚ ನ್ಯಾಯಾಲಯ ನಾಳೆ, ಫೆಬ್ರವರಿ 17 ರಂದು 1991 ರ (ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991) ಕಾಯ್ದೆಯ ಕುರಿತಾದ ಒಟ್ಟುಗೂಡಿಸಿದ ಅರ್ಜಿಗಳ ವಿಚಾಣೆ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಲಿದೆ.
1. 1991 ರ ಈ ಕಾನೂನು ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿದ್ದ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪಕ್ಕೆ ಬದಲಾವಣೆಗಳನ್ನು ನಿಷೇಧಿಸುತ್ತದೆ.
2. ಈ ಕಾನೂನಿನ ಸಿಂಧುತ್ವವನ್ನು ಹಲವಾರು ಅರ್ಜಿಗಳ ಮೂಲಕ ಪ್ರಶ್ನಿಸಲಾಗಿದೆ.
3. ಕೆಲವು ಸಮಾಜಕಂಟಕರು ತಥಾಕಥಿತ ಧಾರ್ಮಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
4. ಡಿಸೆಂಬರ್ 12, 2024 ರಂದು, ಸರ್ವೋಚ್ಚ ನ್ಯಾಯಾಲಯ ವಾರಣಾಸಿಯ ಜ್ಞಾನವಾಪಿ ಮತ್ತು ಮಥುರಾದ ಶಾಹಿ ಈದ್ಗಾ ಸೇರಿದಂತೆ ಮಸೀದಿಗಳ ಸಮೀಕ್ಷೆಯನ್ನು ಕೋರಿ ಹಿಂದುತ್ವನಿಷ್ಠ ಗುಂಪುಗಳು ಸಲ್ಲಿಸಿದ ಸುಮಾರು 18 ಪ್ರಕರಣಗಳ ವಿಚಾರಣೆಗೆ ತಡೆ ನೀಡಿತ್ತು.
5. ಮತ್ತೊಂದೆಡೆ, ಎಂಐಎಂ ಮುಖ್ಯಸ್ಥ ಸಂಸದ ಅಸಾದುದ್ದೀನ ಓವೈಸಿ ಅವರು ಜನವರಿ 2 ರಂದು ಸಲ್ಲಿಸಿದ ಅರ್ಜಿಯಲ್ಲಿ, ಪೂಜಾ ಸ್ಥಳಗಳ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಸಂಪಾದಕೀಯ ನಿಲುವುಸಂಸತ್ತು ಕಾನೂನನ್ನು ಮಾಡಿದ ನಂತರ, ಅದನ್ನು ತಿದ್ದುಪಡಿ ಮಾಡುವ ಅಥವಾ ರದ್ದುಗೊಳಿಸುವ ಅಧಿಕಾರ ಸಂಸತ್ತಿಗೆ ಇರುತ್ತದೆ. ಆದ್ದರಿಂದ, ಕಾನೂನಿನ ಸಾಂವಿಧಾನಿಕತೆಯ ನಿರ್ಣಯವನ್ನು ತೆಗೆದುಕೊಳ್ಳಲು ನ್ಯಾಯಾಲಯದ ಸಮಯವನ್ನು ತೆಗೆದುಕೊಳ್ಳುವ ಬದಲು, ಸಂಸತ್ತು ಅದನ್ನು ಸರ್ವಾನುಮತದಿಂದ ರದ್ದು ಗೊಳಿಸಬೇಕು, ಎನ್ನುವುದು ಹಿಂದೂ ಸಮಾಜದ ಭಾವನೆಯಾಗಿದೆ! |