Rajasthan Firing Cow Protectors : ರಾಜಸ್ಥಾನದಲ್ಲಿ ಗೋರಕ್ಷಕರ ಮೇಲೆ ಗೋಕಳ್ಳರಿಂದ ಗುಂಡಿನದಾಳಿ

ಧೋಲಪುರ (ರಾಜಸ್ಥಾನ) – ರಾಜಸ್ಥಾನದ ಧೋಲಪುರದಲ್ಲಿ ಗೋಕಳ್ಳಸಾಗಣೆದಾರರು ಗೋರಕ್ಷಕರ ಗುಂಪಿನ ಮೇಲೆ ಗುಂಡು ಹಾರಿಸಿದ್ದಾರೆ. ಈ ಗೋಕಳ್ಳಸಾಗಣೆದಾರರು ಒಂದು ಕಂಟೇನರ್‌ನಲ್ಲಿ ಹಸುಗಳನ್ನು ತುಂಬಿಸಿ ಧೋಲಪುರದಿಂದ ಉತ್ತರಪ್ರದೇಶಕ್ಕೆ ಸಾಗಿಸುತ್ತಿದ್ದರು. ಗೋರಕ್ಷಕರು ಅಲ್ಲಿಗೆ ತಲುಪುತ್ತಲೇ, ಗೋ ಕಳ್ಳರು ಅವರ ಮೇಲೆ ಗುಂಡು ಹಾರಿಸಿದರು. ಗುಂಡಿನ ದಾಳಿಯಲ್ಲಿ ಗೋರಕ್ಷಕರೊಬ್ಬರು ಗಾಯಗೊಂಡರು. ಗೋಕಳ್ಳಸಾಗಣೆದಾರರು ಹಸುಗಳಿಂದ ತುಂಬಿದ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ನಾಕಾಬಂದಿ ಹಾಕಿ 3 ಗೋಕಳ್ಳಸಾಗಣೆದಾರರನ್ನು ಬಂಧಿಸಿದರು. ಪೊಲೀಸರು ಗೋಕಳ್ಳಸಾಗಣೆದಾರರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವುದರಿಂದ, ಹಿಂದೂಗಳು ಗೋರಕ್ಷಕರು ಸುರಕ್ಷಿತ ಮತ್ತು ಗೋಕಳ್ಳಸಾಗಣೆದಾರರು ಜೈಲಿನಲ್ಲಿರಬೇಕೆಂದು ಅಪೇಕ್ಷಿಸುತ್ತಾರೆ !