‘ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿ ಇದ್ದರೆ, ಪಾಕಿಸ್ತಾನದೊಂದಿಗಿನ ಎಲ್ಲಾ ಮಾರ್ಗಗಳನ್ನು ತೆರೆಯಬೇಕು !’ – ಮೆಹಬೂಬಾ ಮುಫ್ತಿ

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ದೇಶವಿರೋಧಿ ಹೇಳಿಕೆ

ಶ್ರೀನಗರ (ಜಮ್ಮು-ಕಾಶ್ಮೀರ) – ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದಾರೆ. ಎಲ್ಲವೂ ಸರಿಯಾಗಿದ್ದರೆ, ಪಾಕಿಸ್ತಾನದೊಂದಿಗಿನ ಎಲ್ಲಾ ಮಾರ್ಗಗಳನ್ನು ತೆರೆಯಿರಿ. ಇದರಿಂದ ಅವರು ಇಲ್ಲಿಗೆ ಬಂದು ನಾವು ಇಲ್ಲಿ ಹೇಗೆ ಬದುಕುತ್ತಿದ್ದೇವೆ ಮತ್ತು ಇಲ್ಲಿ ಏನಿದೆ ಎಂದು ನೋಡಬಹುದು, ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಹೇಳಿದ್ದಾರೆ. (ಅದಕ್ಕಾಗಿ ಪ್ರತ್ಯಕ್ಷ ಕಾಶ್ಮೀರಕ್ಕೆ ಬರುವ ಯಾವುದೇ ಅವಶ್ಯಕತೆ ಇಲ್ಲ. ವಿಡಿಯೋ ಮಾಡಿಯೂ ಪಾಕಿಸ್ತಾನಿಗಳಿಗೆ ತೋರಿಸಬಹುದು. ಇದಕ್ಕಾಗಿ ಮೆಹಬೂಬಾ ಮುಫ್ತಿ ಅವರೇ ಮುಂದಾಗಬೇಕು! ವಾಸ್ತವಿಕವಾಗಿ ಪಾಕಿಸ್ತಾನಿಗಳಿಗೆ ಕಾಶ್ಮೀರದ ಈಗಿನ ಪರಿಸ್ಥಿತಿ ಗೊತ್ತಿರುವುದರಿಂದಲೇ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ! – ಸಂಪಾದಕರು)

ಜಮ್ಮು-ಕಾಶ್ಮೀರದ ಸೂತ್ರವನ್ನು ಜೀವಂತವಾಗಿಟ್ಟುಕೊಂಡು ಭಾಜಪ ದೇಶಾದ್ಯಂತ ಮತಗಳನ್ನು ಗೆಲ್ಲಲು ಬಯಸುತ್ತದೆ . ಪಾಕಿಸ್ತಾನ ಸೇನೆಯೂ ಕಾಶ್ಮೀರದ ಸಮಸ್ಯೆಯನ್ನು ಜೀವಂತವಾಗಿಡಲು ಬಯಸುತ್ತದೆ. ಬಹುಶಃ ಭಾಜಪದವರು ಎಲ್ಲಾದರೂ ಸ್ಫೋಟ ಸಂಭವಿಸಬೇಕು, ಯಾರಾದರೂ ಹುತಾತ್ಮರಾಗಬೇಕು, ಇದರಿಂದ ಅವರು ದೇಶದಲ್ಲಿ ಹಿಂದೂ-ಮುಸಲ್ಮಾನ ಎಂಬ ವಿಭಜನೆಯನ್ನು ಉಂಟುಮಾಡಬಹುದು ಎಂದು ತಿಳಿದುಕೊಂಡಿರಬಹುದು. ಎಲ್ಲಿಯವರೆಗೆ ನಾವು ಒಂದೇ ವೇದಿಕೆಯ ಮೇಲೆ ಬರುವುದಿಲ್ಲವೋ ಅಲ್ಲಿಯವರೆಗೆ ಜಮ್ಮು ಕಾಶ್ಮೀರದ ಸಮಸ್ಯೆ ಬಗೆಹರಿಯುವುದಿಲ್ಲ’, ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನದ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿರುವುದರಿಂದ ಕಾಶ್ಮೀರವು ಸ್ವಲ್ಪ ಮಟ್ಟಿಗೆ ಶಾಂತವಾಗಿದೆ. ಈಗ ಅದನ್ನು ತೆರೆದು ಮತ್ತೆ ಕಾಶ್ಮೀರದಲ್ಲಿ ಅಶಾಂತಿ ತರುವುದು ಮೆಹಬೂಬಾ ಅವರ ಸಂಚು ಆಗಿದೆಯೆಂದು ಈಗ ಸ್ಪಷ್ಟವಾಗಿ ಕಂಡು ಬರುತ್ತದೆ. ಹೀಗೆ ಬೇಡಿಕೆ ಇಟ್ಟಿರುವ ಬಗ್ಗೆ ಮೆಹಬೂಬಾ ಮೇಲೆ ಅಪರಾಧ ದಾಖಲಿಸಿ ಜೈಲಿಗೆ ಹಾಕಬೇಕು!