|

ನವದೆಹಲಿ – ಸಂಯುಕ್ತ ಸಂಸದೀಯ ಸಮಿತಿಯು ವಕ್ಫ್ ಸುಧಾರಣಾ ಮಸೂದೆದ ಸಂದರ್ಭದಲ್ಲಿನ ಸಮಿತಿಯ ವರದಿ ಸಂಸತ್ತಿನಲ್ಲಿ ಪ್ರಸ್ತುತಪಡಿಸಿದ್ದರು. ಅದು ಫೆಬ್ರುವರಿ ೧೩ ರಂದು ಲೋಕಸಭೆಯಲ್ಲಿ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್ ಹಾಗೂ ರಾಜ್ಯಸಭೆಯಲ್ಲಿ ಭಾಜಪದ ಸಂಸದೆ ಮೇಧಾ ಕುಲಕರ್ಣಿ ಇವರು ಮಂಡಿಸಿದರು. ಇದರಿಂದ ಸಂಸತ್ತಿನ ಎರಡು ಸದನದಲ್ಲಿ ರಂಪರಾಧಾಂತ ನಡೆಯಿತು. ಇದರಿಂದ ಎರಡು ಸದನಗಳು ಕೆಲವು ಸಮಯಕ್ಕಾಗಿ ಮುಂದೂಡಲಾಯಿತು. ಈ ಮಸೂದೆಕ್ಕೆ ಯಾರ ಆಕ್ಷೇಪವಿತ್ತು, ಅವರನ್ನು ವರದಿಯಿಂದ ಕೈ ಬಿಡಲಾಗಿದೆ’, ಎಂದು ವಿರೋಧ ಪಕ್ಷದಿಂದ ಆರೋಪಿಸಲಾಗಿದೆ. ಆದ್ದರಿಂದ ರಂಪರಾಧಾಂತ ನಡೆಯಿತು.
The Joint Parliamentary Committee (JPC) on the Waqf (Amendment) Bill, 2024, chaired by BJP MP Jagdambika Pal, presented its report in Parliament.
The Bill seeks to revise the Waqf Act, 1995, focusing on the composition of the Council and Boards, criteria for forming waqf, and… pic.twitter.com/SNGqC8TCci
— Sanatan Prabhat (@SanatanPrabhat) February 13, 2025
೧. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇವರು ಮಾತನಾಡಿ, ಈ ವರದಿ ನಕಲಿಯಾಗಿದೆ. ಇದರಲ್ಲಿ ವಿರೋಧಕರ ಮತಭೇದ ಕೈ ಬಿಡಲಾಗಿದೆ, ಇದು ಸಂವಿಧಾನ ವಿರೋಧಿಯಾಗಿದೆ, ಎಂದು ಹೇಳಿದರು.
೨. ‘ಆಮ್ ಆದ್ಮಿ ಪಕ್ಷದ’ ಸಂಸದ ಸಂಜಯ ಸಿಂಹ ಇವರು ಮಾತನಾಡಿ, ನಾವು ನಮ್ಮ ಅಭಿಪ್ರಾಯ ಮಂಡಿಸಿದ್ದೇವೆ, ಯಾರು ಅದನ್ನು ಒಪ್ಪಲಿ ಅಥವಾ ಒಪ್ಪದಿರಬಹುದು; ಆದರೆ ಅದು ಕಸದ ಬುಟ್ಟಿಗೆ ಹೇಗೆ ಎಸೆಯಬಹುದು ? ಎಂದು ಕೇಳಿದರು.
೩. ಈ ಆಕ್ಷೇಪದಿಂದ ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರು, ನಾನು ಹೇಳುವುದೇನೆಂದರೆ, ವಿರೋಧ ಪಕ್ಷದ ಸದಸ್ಯರು ಸಂಸದೀಯ ಪ್ರಕ್ರಿಯೆ ಪ್ರಕಾರ ಅವರಿಗೆ ಹೇಗೆ ಬೇಕೋ ಹಾಗೆ ಜೋಡಿಸಬಹುದು. ಅವರ ಪಕ್ಷಕ್ಕೆ ಇದರ ಬಗ್ಗೆ ಯಾವುದೇ ಆಕ್ಷೇಪವಿಲ್ಲ’, ಎಂದು ಹೇಳಿದರು.
೪. ಲೋಕಸಭೆಯ ಕಾರ್ಯಕಲಾಪ ಮುಂದೂಡಿದ ನಂತರ ಪ್ರಿಯಾಂಕ ವಾಡ್ರಾ, ರಾಹುಲ್ ಗಾಂಧಿ ಇವರ ಜೊತೆಗೆ ಕಾಂಗ್ರೆಸ್ಸಿನ ಸಂಸದರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು. ‘ವಕ್ಫ್ ಸುಧಾರಣಾ ಮಸೂದೆ’ ತಂದು ಭಾಜಪ ತಿರಸ್ಕಾರ ಪಸರಿಸುತ್ತಿದೆ, ಎಂದು ವಿರೋಧ ಪಕ್ಷದಲ್ಲಿನ ಸಂಸದರು ಆರೋಪಿಸಿದರು.
‘ವಕ್ಫ್ ನಾಶ ಮಾಡುವುದಕ್ಕಾಗಿ ಈ ಮಸೂದೆ ತರಲಾಗಿದೆ !’ – ಅಸದ್ದುದ್ದೀನ್ ಓವೈಸಿ

ಎ.ಐ.ಎಂ. ಐ .ಎಂ. ನ (ಆಲ್ ಇಂಡಿಯಾ ಮಜಲೀಸ್-ಏ-ಇತ್ತೆ ಹಾದುಲ್ ಮುಸ್ಲಿಮಿನ’ ನ (ಅಖಿಲ ಭಾರತೀಯ ಮುಸ್ಲಿಂ ಏಕತಾಸಂಘ)) ಸಂಸದ ಅಸದುದ್ದೀನ್ ಓವೈಸಿ ಇವರು, ಈ ಮಸೂದೆ ಸಂವಿಧಾನ ವಿರೋಧಿ ಆಗಿದೆ ಮತ್ತು ಸಂವಿಧಾನದ ಕಲಂ ೧೪, ೧೫ ಮತ್ತು ೨೯ ಇದರ ಉಲ್ಲಂಘನೆ ಆಗುತ್ತದೆ. ಈ ಮಸೂದೆ ವಕ್ಫ್ ಕಾಪಾಡಲು ಅಲ್ಲ, ಅದನ್ನು ನಾಶಗೊಳಿಸುವುದಕ್ಕಾಗಿ ಮತ್ತು ಮುಸಲ್ಮಾನರಿಂದ ಮಸೀದಿ, ದರ್ಗಗಳು ಮತ್ತು ಕಬ್ರಸ್ಥಾನ ಕಸಿದುಕೊಳ್ಳುವುದಕ್ಕಾಗಿ ಇದೆ. (ಪ್ರಸ್ತುತ ಮಸೂದೆದ ಪ್ರಕಾರ ವಕ್ಫ್ ವಿಸರ್ಜನೆ ಗೊಳಿಸಲಾಗುವುದಿಲ್ಲ; ಆದರೆ ವಕ್ಫ್ ರದ್ದಗೊಳಿಸುವುದು ಭಾರತದ ದೃಷ್ಟಿಯಿಂದ ಆವಶ್ಯಕವಾಗಿದೆ. ಅದಕ್ಕಾಗಿ ಸರಕಾರವು ಯಾರ ವಿರೋಧವನ್ನು ಲೆಕ್ಕಿಸದೆ ಇಚ್ಛಾಶಕ್ತಿ ತೋರಿಸುವುದು ಅಗತ್ಯವಾಗಿದೆ ! – ಸಂಪಾದಕರು)
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!