ದೆಹಲಿಯಲ್ಲಿ ‘ಆಪ್’ಗೆ ಮಣ್ಣುಮುಕ್ಕಿಸಿದ ಭಾಜಪ; 27 ವರ್ಷಗಳ ನಂತರ ದೆಹಲಿಯ ಗದ್ದುಗೆ ಏರಿದ ಭಾಜಪ !

  • ಅರವಿಂದ ಕೇಜರಿವಾಲ್, ಮನಿಷ ಸಿಸೊದಿಯಾ ಮತ್ತು ಸೌರಭ ಭಾರದ್ವಜ ಸೋಲುಂಡರು

  • ಮುಖ್ಯಮಂತ್ರಿ ಆತಿಷಿ ಚುರೇಶಿ ಮುನ್ನಡೆ

  • ಭಾಜಪದ ಪರವೇಶ ವರ್ಮಾ ಮುಖ್ಯಮಂತ್ರಿಯಾಗುವ ಸಾಧ್ಯತೆ

ನವ ದೆಹಲಿ – ದೆಹಲಿ ವಿಧಾನಸಭೆಯ ಚುನಾವಣೆಯಲ್ಲಿ ಆಢಳಿತಾರೂಢ ಆಮ್ ಆದ್ಮಿ ಪಕ್ಷ ಸೋಲುಂಡುವ ಮೂಲಕ 27 ವರ್ಷಗಳ ನಂತರ ಭಾಜಪ ದೆಹಲಿಯ ಗದ್ದುಗೆಯನ್ನು ಏರಲಿದೆ. 70 ಚುನಾವಣಾ ಕ್ಷೇತ್ರಗಳ ಪೈಕಿ ಭಾಜಪಗೆ 48, ಆಪ್‌ಗೆ 22 ಸ್ಥಾನ ಸಿಕ್ಕಿದೆ. ಕಾಂಗ್ರೆಸ್ ಗೆ ಒಂದೇ ಒಂದು ಸ್ಥಾನ ಸಿಗದೆ ಮುಖಭಂಗ ಅನುಭವಿಸಬೇಕಾಯಿತು. ವಿಶೇಷವೆಂದರೆ ಈ ಚುನಾವಣೆಯಲ್ಲಿ ಆಪ್‌ನ ಸರ್ವಾಧಿಕಾರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಅರವಿಂದ ಕೆಜರಿವಾಲ್, ಉಪಮುಖ್ಯಮಂತ್ರಿ ಮನಿಷ ಸಿಸೊದಿಯಾ ಹಾಗೂ ಇತರ ಸಚಿವರಾದ ಸೌರಭ ಭಾರದ್ವಜ, ಸತ್ಯೆಂದ್ರ ಜೈನ್, ಸೋಮನಾಥ ಭಾರತಿ ಇವರು ಸೋಲನ್ನು ಅನುಭವಿಸಿದ್ದಾರೆ. ಇತ್ತೀಚಿನ ಮುಖ್ಯಮಂತ್ರಿಯಾಗಿರುವ ಆತಿಷಿಯು ಕೊನೇಯ ಸುತ್ತಿನಲ್ಲಿ ಜಯಗಳಿಸಿದ್ದಾರೆ. ಆಪ್‌ನಿಂದ ಭಾಜಪಕ್ಕೆ ಬಂದ ಕಪಿಲ ಮಿಶ್ರಾ ಹಾಗೂ ಕೈಲಾಶ ಗೆಹಲೊತ ಗೆಲುವು ಸಾಧಿಸಿದ್ದಾರೆ.

ದೆಹಲಿ ಜನತೆಯ ಸೇವೆ ಮಾಡಲು ನಾವು ಇನ್ನೂ ಹೆಚ್ಚು ಶ್ರಮ ಪಟ್ಟು ಕೆಲಸ ಮಾಡುವೆವು ! – ಪ್ರಧಾನಿ ಮೋದಿ

ಅಭಿವೃದ್ಧಿ ಮತ್ತು ಸುರಾಜ್ಯದ ಗೆಲುವು ಆಗಿದೆ. ದೆಹಲಿಯ ಎಲ್ಲಾ ಸಹೋದರ-ಸಹೋದರಿಯರಿಗೆ ನಾನನು ವಂದಿಸುತ್ತೇನೆ. ಅವರು ನಮಗೆ ಐತಿಹಾಸಿಕ ಗೆಲವನ್ನು ತಂದುಕೊಟ್ಟಿದ್ದಾರೆ. ಎಲ್ಲರ ಆಶಿರ್ವಾದ ನಮಗೆ ಸಿಕ್ಕಿದೆ. ನಾನು ನಿಮಗೆಲ್ಲರಿಗೆ ತುಂಬಾ ಧನ್ಯವಾದ ಅರ್ಪಿಸುತ್ತೇನೆ. ದೆಹಲಿಯ ಸರ್ವತೋಮುಖ ಅಭಿವೃದ್ಧಿ ಮಾಡಲಾಗುವುದು, ಇದರಲ್ಲಿ ಸಂದೇಹವಿಲ್ಲ ದೆಹಲಿವಾಸಿಗಳ ಜೀವನ ಉತ್ತಮವಾಗಲಿದೆ, ಇದಕ್ಕಾಗಿ ನಾವು ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳುವೆವು.

ಅಭಿವೃದ್ಧಿ ಶೀಲ ಭಾರತದ ನಿರ್ಮಾಣದಲ್ಲಿ ದೆಹಲಿಯ ಪಾತ್ರ ಮಹತ್ವದ್ದಾಗಿರುತ್ತದೆ. ಈ ಗೆಲುವಿಗೆ ಪ್ರಚಂಡ ಶ್ರಮಿಸಿದ ಭಾಜಪದ ಕಾರ್ಯಕರ್ತರ ಮೇಲೆ ನನಗೆ ಅಭಿಮಾನ ಇದೆ. ದೆಹಲಿವಾಸಿಗಳ ಸೇವೆ ಮಾಡಲು ನಾವು ಇನ್ನೂ ಹೆಚ್ಚು ಸದೃಢವಾಗಿ ಕಾರ್ಯ ಮಾಡುವೆವು’, ಎಂದು ಹೇಳಿದರು.

ಕೇಜ್ರಿವಾಲ್ ಅವರನ್ನು ಸೋಲಿಸುವವರೇ ಭವಿಷ್ಯದ ಮುಖ್ಯಮಂತ್ರಿಯಾಗಲು ಸಾಧ್ಯ!

ಭಾಜಪದ ಶಾಸಕ ಪರವೇಶ ವರ್ಮಾ ಇವರು ಅರವಿಂದ ಕೆಜರಿವಾಲ್ ಇವರಿಗೆ 3 ಸಾವಿರದ 182 ಮತಗಳ ಅಂತರಗಳಿಂದ ಸೋಲಿಸಿದ್ದೂ ಈಗ ಅವರನ್ನು ಭಾವೀ ಮುಖ್ಯಮಂತ್ರಿ ಎಂದು ನೋಡಲಾಗುತ್ತಿದೆ. ಅವರ ತಂದೆ ಸಾಹಿಬ ಸಿಂಗ್ ವರ್ಮಾ ಇವರು 1990ರ ದಶಕದಲ್ಲಿ ದೆಹಲಿಯಲ್ಲಿ ಭಾಜಪ ಇರುವಾಗ ಮುಖ್ಯಮಂತ್ರಿ ಆಗಿದ್ದರು. ಅದೇ ರೀತಿ ಅಟಲ ಬಿಹಾರಿ ವಾಜಪೆಯಿ ಇವರ ಸರಕಾರದಲ್ಲಿನ ಕೇಂದ್ರ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಭಾಜಪದ 40 ಸ್ಥಾನಗಳು ಹೆಚ್ಚಾದರೆ ‘ಆಪ್’ನ 40 ಸ್ಥಾನ ಇಳಿಯಿತು

2020ರ ಅಂದರೆ ಹಿಂದಿನ ಚುನಾವಣೆಯ ತುಲನೆಯಲ್ಲಿ ಭಾಜಪದ 40 ಸ್ಥಾನಗಳು ಹೆಚ್ಚಾದವು. ಹಿಂದಿನ ಸಲ ಭಾಜಪಾಗೆ ಕೇವಲ 8 ಸ್ಥಾನಗಳು ಸಿಕ್ಕಿದ್ದವು. ಆಪ್ 40 ಸ್ಥಾನಗಳನ್ನು ಕಳೆದುಕೊಂಡಿದೆ. ಹಿಂದಿನ ಸಲ 62 ಸ್ಥಾನಗಳು ಸಿಕ್ಕಿದ್ದವು. ಕಾಂಗ್ರೆಸ್‌ಗೆ ಹಿಂದಿನ ಬಾರಿ ಒಂದೇ ಒಂದು ಸ್ಥಾನ ಸಿಕ್ಕಿರಲಿಲ್ಲ ಮತ್ತು ಈ ಸಲ ಕೂಡ ಒಂದೇ ಒಂದು ಸ್ಥಾನ ಸಿಗಲಿಲ್ಲ.

ಭಾಜಪ ಮತ ಹಂಚಿಕೆ ಶೇಕಡಾವಾರು 9 ಕ್ಕಿಂತ ಹೆಚ್ಚಾಗಿದೆ ಹಾಗೂ ಆಪ್ ಪಕ್ಷ ಶೇಕಡಾ 10 ಕಳೆದುಕೊಂಡಿದೆ.

ಕಳೆದ ಚುನಾವಣೆಗೆ ಹೋಲಿಸಿದರೆ ಈ ವರ್ಷ ಭಾಜಪ ಮತ ಹಂಚಿಕೆ ಶೇಕಡಾ 9 ಕ್ಕಿಂತ ಹೆಚ್ಚಾಗಿದೆ. ಅದೇ ಸಮಯದಲ್ಲಿ, ಆಪ್ ಶೇಕಡಾ 10 ಕ್ಕಿಂತ ಹೆಚ್ಚು ಹಾನಿಯಾಗಿದೆ. ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆಲ್ಲದಿದ್ದರೂ, ಅದರ ಮತ ಪಾಲು ಶೇಕಡಾ 2 ರಷ್ಟು ಹೆಚ್ಚಾಗಿದೆ. (ಈಗ ಕಾಂಗ್ರೆಸ್ ಇದನ್ನೇ ‘ಯಶಸ್ಸು’ ಎಂದು ಹೇಳಿಕೊಳ್ಳುವ ಪರಿಸ್ಥಿತಿ ಎದುರಾಗಿದೆಯೆನ್ನುವುದನ್ನು ತಿಳಿಯಬೇಕಾಗಿದೆ ! – ಸಂಪಾದಕರು)

ಕೇಜ್ರಿವಾಲ್ ಅವರ ಸೋಲು !

2020 ರಲ್ಲಿ, ಕೇಜ್ರಿವಾಲ ಮೂರನೇ ಬಾರಿಗೆ ಮುಖ್ಯಮಂತ್ರಿಯಾದರು, ಆದರೆ ಮದ್ಯ ಹಗರಣದಿಂದಾಗಿ ಜೈಲಿಗೆ ಹೋದ ಕೇಜ್ರೀವಾಲರು ಹೊರಗೆ ಬಂದ ಬಳಿಕ ರಾಜೀನಾಮೆ ನೀಡಿದರು. ಅವರು 4 ವರ್ಷ, 7 ತಿಂಗಳು ಮತ್ತು 6 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಇದಾದ ನಂತರ, ಅವರು ಅತಿಷಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಂಗಪುರ ಕ್ಷೇತ್ರದಿಂದ 600 ಮತಗಳಿಂದ ಸೋತರು. ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ಆದರೆ ಸಾರ್ವಜನಿಕರ ನಿರ್ಣಯ ನಮ್ಮ ಪರವಾಗಿರಲಿಲ್ಲ, ನಾವು ಅವರ ನಿರ್ಣಯವನ್ನು ಒಪ್ಪಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ದೆಹಲಿ ಗಲಭೆ ಆರೋಪಿ ತಾಹಿರ ಹುಸೇನ ಸೋಲು.

ದೆಹಲಿಯಲ್ಲಿ 2020 ರ ಗಲಭೆಯ ಆರೋಪಿ ಆಮ್ ಆದ್ಮಿ ಪಕ್ಷದ ಕಾರ್ಪೊರೇಟರ್ ತಾಹಿರ್ ಹುಸೇನ್, ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರವಾದ ಮುಸ್ತಫಬಾದ್‌ನಿಂದ ಎ.ಐ.ಎಮ್.ಐ.ಎಮ್. ಪರವಾಗಿ ಸ್ಪರ್ಧಿಸಿದ್ದರು. ಅವರನ್ನು ಭಾಜಪ ಅಭ್ಯರ್ಥಿ ಮೋಹನ್ ಸಿಂಗ್ ಬಿಷ್ಟ ಸೋಲಿಸಿದರು. ತಾಹಿರ್ ಹುಸೇನ್ ನಾಲ್ಕನೇ ಸ್ಥಾನ ಪಡೆದರು. ಆಪ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದರು. ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಭಾಜಪ ಅಭ್ಯರ್ಥಿ ಗೆದ್ದಿದ್ದರಿಂದ ಮುಸ್ಲಿಮರು ಭಾಜಪಕ್ಕೆ ಮತ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ನಾವು ಜನರ ನಿರ್ಣಯವನ್ನು ಒಪ್ಪಿಕೊಳ್ಳುತ್ತೇವೆ ! – ಕಾಂಗ್ರೆಸ್

ಕಾಂಗ್ರೆಸ್ ನಾಯಕ ಸಂದೀಪ ದೀಕ್ಷಿತ ಇವರು, ನಾವು ಅಂಶಗಳನ್ನು ಪ್ರಸ್ತುತಪಡಿಸಿದ್ದೇವೆ; ಆದರೆ ನನಗೆ ಅನಿಸುತ್ತದೆ, ಜನರಿಗೆ ನಾವು ಸರಕಾರ ರಚಿಸುವುದಿಲ್ಲ ಎಂದು ಜನರು ಭಾವಿಸಿದ್ದರು. ಜನರ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.

ನಾವು ಆಪ್ ಪಕ್ಷದ ಸುಳ್ಳು ಭರವಸೆಗಳ ವಿರುದ್ಧ ಧ್ವನಿ ಎತ್ತಿದ್ದೇವೆ ! – ಭಾಜಪ

ಭಾಜಪದ ಅಭ್ಯರ್ಥಿಗಳು ತುಂಬಾ ಶ್ರಮಪಟ್ಟರು. ದೆಹಲಿಯ ಮತದಾರರು ಅಭಿವೃದ್ಧಿ ಆಧಾರಿತ ಮತ್ತು ಭ್ರಷ್ಟಾಚಾರ ಮುಕ್ತ ಸರಕಾರಕ್ಕೆ ಮತ ಹಾಕಿದ್ದಾರೆ. ಆಮ್ ಆದ್ಮಿ ಪಕ್ಷ ಸುಳ್ಳು ಭರವಸೆಗಳನ್ನು ನೀಡಿತ್ತು. ನಾವು ನಿಜವಾದ ಅಂಶಗಳ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ. “ನಾವು ಹದಗೆಟ್ಟ ರಸ್ತೆಗಳು, ಮದ್ಯ ನೀತಿ ವಿವಾದ, ಕಲುಶಿತ ನೀರು ಮತ್ತು ಭ್ರಷ್ಟಾಚಾರದಂತಹ ವಿಷಯಗಳ ಬಗ್ಗೆ ನಮ್ಮ ಧ್ವನಿಯನ್ನು ಎತ್ತಿದ್ದೇವೆ ಮತ್ತು ಆಪ್ ನೀಡಿದ ಸುಳ್ಳು ಭರವಸೆಗಳನ್ನು ಬಹಿರಂಗಪಡಿಸಿದ್ದೇವೆ” ಎಂದು ಭಾಜಪ ವಿಜೇತ ಅಭ್ಯರ್ಥಿ ಮತ್ತು ರಾಜ್ಯ ಅಧ್ಯಕ್ಷ ವೀರೇಂದ್ರ ಸಚದೇವಾ ಹೇಳಿದರು.