ದೇವಸ್ಥಾನದ ಪಾವಿತ್ರ್ಯ ಕಾಪಾಡುವುದಕ್ಕಾಗಿ ನಿರ್ಣಯ
ನವದೆಹಲಿ – ಆಂಧ್ರಪ್ರದೇಶದಲ್ಲಿನ ತಿರುಪತಿ ಬಾಲಾಜಿ ದೇವಸ್ಥಾನದ ಆಡಳಿತದಿಂದ ಅವರ ೨೮ ಹಿಂದುಯೇತರ ಸಿಬ್ಬಂದಿಯನ್ನು ತೆಗೆದು ಹಾಕುವ ನಿರ್ಣಯ ತೆಗೆದುಕೊಂಡಿದೆ. ‘ತಿರುಮಲ ತಿರುಪತಿ ದೇವಸ್ಥಾನ’ದ (ಟಿಟಿಡಿ) ನಿಯಮದ ವಿರುದ್ಧ ಕೆಲಸ ಮಾಡಿರುವುದರ ಕುರಿತು ಈ ಎಲ್ಲರನ್ನೂ ತಪ್ಪಿತಸ್ಥರನ್ನಾಗಿ ಮಾಡಲಾಗಿದೆ. ದೇವಸ್ಥಾನ ಆಡಳಿತವು ಎಲ್ಲಾ ೧೮ ಹಿಂದೂಯೆತರ ಸಿಬ್ಬಂದಿಗೆ ಎರಡು ಶರತ್ತು ವಿಧಿಸಿತ್ತು. ಒಂದು ಅವರೇ ಬೇರೆ ಸರಕಾರಿ ಇಲಾಖೆಯಲ್ಲಿ ವರ್ಗಾವಣೆ ಪಡೆಯಬೇಕು ಅಥವಾ ಸ್ವಯಂ ನಿವೃತ್ತಿ ಪಡೆಯಬೇಕು. ದೇವಸ್ಥಾನದ ಪಾವಿತ್ರ್ಯ ಕಾಪಾಡುವುದಕ್ಕಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ದೇವಸ್ಥಾನ ಮಂಡಳಿ ಹೇಳಿದೆ. ‘ಟಿಟಿಡಿ’ಯ ಅಧ್ಯಕ್ಷ ಬಿ. ಆರ್. ನಾಯ್ಡು ಇವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ತಿರುಪತಿ ದೇವಸ್ಥಾನದಲ್ಲಿ ಕೆಲಸ ಮಾಡುವ ಹಿಂದೂಯೆತರರು ತಮ್ಮ ಧಾರ್ಮಿಕ ಪದ್ಧತಿ ಪಾಲನೆ ಮಾಡುವ ೧೮ ಸಿಬ್ಬಂದಿಯ ಮೇಲೆ ಕ್ರಮ ಕೈಗೊಂಡಿದೆ. (ಸರ್ವಧರ್ಮ ಸಮಭಾವದ ತಮಟೆ ಹೊಡೆಯುವ ದೇವಸ್ಥಾನ ಆಡಳಿತದಲ್ಲಿ ಹಿಂದೂಯೆತರರನ್ನು ಸಮಾವೇಶಗೊಳಿಸುವ ಬಗ್ಗೆ ಬೆಂಬಲ ಮಾಡುವವರು ಇದರ ಬಗ್ಗೆ ಏನು ಹೇಳುವರು ? – ಸಂಪಾದಕರು) ‘ಟಿಟಿಡಿ’ ಇಲ್ಲಿ ಕೆಲಸ ಮಾಡಿದರು ಕೂಡ ಇವರೆಲ್ಲರೂ ತಮ್ಮ ತಮ್ಮ ಧಾರ್ಮಿಕ ಪರಂಪರೆಯ ಪಾಲನೆ ಮಾಡುತ್ತಿದ್ದರು. ಈಗ ಅವರ ಮೇಲೆ ಶಿಸ್ತುಭಂಗದ ಕ್ರಮ ಕೈಗೊಳ್ಳುವ ಆದೇಶ ನೀಡಿದ್ದಾರೆ.
ಸಂಪಾದಕೀಯ ನಿಲುವು
ಶ್ಲಾಘನೀಯ ನಿರ್ಣಯ ತೆಗೆದುಕೊಂಡಿರುವ ತಿರುಪತಿ ಬಾಲಾಜಿ ದೇವಸ್ಥಾನ ಆಡಳಿತಕ್ಕೆ ಅಭಿನಂದನೆ ! |