’ಆಧ್ಯಾತ್ಮಿಕ ಪರಿಪಕ್ವತೆ ಎಂದರೆ…

೧. ’ಇತರರನ್ನು ಬದಲಾಯಿಸಲು ಯೋಚಿಸದೆ ತನ್ನನ್ನು ಬದಲಾಯಿ ಸುವ ಬಗ್ಗೆ ಯೋಚಿಸುವುದು
೨. ಸಮಾಜದಲ್ಲಿರುವ ಜನರನ್ನು ಅವರು ಇದ್ದ ಹಾಗೆಯೇ ಸ್ವೀಕರಿಸುವುದು
೩. ’ಪ್ರತಿಯೊಬ್ಬ ವ್ಯಕ್ತಿಯೂ ಅವನ ಮಟ್ಟದಲ್ಲಿ ಯೋಗ್ಯವೇ ಇರುತ್ತಾನೆ,’ ಎಂಬ ವಿಚಾರ ಮಾಡುವುದು.
೪. ಎಲ್ಲ ಸಂಕಟಗಳನ್ನು ಮೀರಿ ನಿರಂತರವಾಗಿ ಮುಂದೆ ಸಾಗುವ ವಿಚಾರ ಮಾಡುವುದು.
೫. ಅಪೇಕ್ಷೆಯನ್ನಿಡದೇ ಎಲ್ಲರನ್ನೂ ಪ್ರೀತಿಸುವುದು
೬. ಏನು ಮಾಡುತ್ತೇವೋ ಅದನ್ನು ಕೇವಲ ತನ್ನ ಶಾಂತಿಗಾಗಿ ಮಾಡುವುದು
೭. ’ನಾನೆಷ್ಟು ಜ್ಞಾನಿಯಾಗಿದ್ದೇನೆ !’ ಎಂಬುದನ್ನು ಜಗತ್ತಿಗೆ ತೋರಿಸುವುದನ್ನು ನಿಲ್ಲಿಸುವುದು
೮. ’ಯಾವುದೇ ವಿಷಯದಲ್ಲಿ ಇತರರು ನನಗೆ ಸಹಾಯ ಮಾಡಬಹುದು’, ಎಂಬ ಅಪೇಕ್ಷೆಯನ್ನು ಇಡಬಾರದು
೯. ಇತರರೊಂದಿಗೆ ಹೋಲಿಕೆ ಮಾಡುವುದನ್ನು ನಿಲ್ಲಿಸುವುದು
೧೦. ಏಕಾಂತದಲ್ಲಿ ಶಾಂತಿಯನ್ನು ಅನುಭವಿಸುವುದು.
೧೧. ’ನನಗೆ ಏನು ಮತ್ತು ಎಷ್ಟು ಬೇಕಾಗಿದೆ?’ ಎಂಬುದರ ಬದಲು ’ನನಗೆ ಏನು ಮತ್ತು ಎಷ್ಟು ಅಗತ್ಯವಿದೆ ?’ ಎಂಬುದನ್ನು ಅರಿತುಕೊಳ್ಳುವುದು.
೧೨. ಯಾವುದೇ ಪ್ರಸಂಗದಲ್ಲಿ ಆನಂದದಲ್ಲಿ ಇರುವುದು’
(ಕೃಪೆ : ಜಾಲತಾಣ)
ಸಂಗ್ರಹ : ಪೂ. ಅಶೋಕ ಪಾತ್ರೀಕರ (ಸನಾತನದ ೪೨ ನೇ ಸಂತರು, ವಯಸ್ಸು ೭೪ ವರ್ಷಗಳು) ಅಮರಾವತಿ (೧೪.೪.೨೦೨೪)