ವ್ಯಾಯಾಮದ ಪರಿಣಾಮ ಕಾಣಲು ವ್ಯಾಯಾಮಶಾಲೆಯಲ್ಲಿ ಪ್ರತಿದಿನ ಗಂಟೆಗಟ್ಟಲೆ ವ್ಯಾಯಾಮ ಮಾಡಬೇಕೇ ?

’ವ್ಯಾಯಾಮಶಾಲೆಯಲ್ಲಿ ಎಷ್ಟು ಗಂಟೆ ವ್ಯಾಯಾಮ ಮಾಡಬೇಕು ?’, ಎಂಬುದು ಸಂಪೂರ್ಣ ವಾಗಿ ನಿಮ್ಮ ಉದ್ದೇಶದ ಮೇಲೆ ಅವಲಂಬಿಸಿರುತ್ತದೆ. ’ಯಾವುದಾದರೊಂದು ಸ್ಪರ್ಧೆ ಯಲ್ಲಿ ಗೆಲ್ಲುವುದು ಅಥವಾ ದೇಹಕ್ಕೆ ಆಕಾರ ನೀಡುವುದು’, ಇದು ಧ್ಯೇಯವಾಗಿರದಿದ್ದರೆ ವ್ಯಾಯಾಮಶಾಲೆಯಲ್ಲಿ ಗಂಟೆಗಟ್ಟಲೇ ಸಮಯ ಕಳೆಯುವ ಆವಶ್ಯಕತೆ ಇಲ್ಲ. ಸಾಮಾನ್ಯವಾಗಿ ವ್ಯಕ್ತಿಗೆ ’ತೂಕ ಕಡಿಮೆ ಮಾಡುವುದು, ದೇಹದ ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸಿ ಕೀಲುಗಳನ್ನು ಸಡಿಲಗೊಳಿಸುವುದು, ಕಠಿಣ ಕೆಲಸಗಳನ್ನು ಮಾಡಲು ದೇಹವನ್ನು ಸಬಲಗೊಳಿಸುವುದು’, ಇಲ್ಲಿಂದ ’ದಿನನಿತ್ಯದ ಕೃತಿಗಳಲ್ಲಿ ಉತ್ಸಾಹ ಅಥವಾ ವೇಗ ತರುವುದು, ಹಗುರತನವನ್ನು ಅನುಭವಿಸುತ್ತಾ ನಿರೋಗಿ ಜೀವನವನ್ನು ನಡೆಸುವುದು’, ಈ ಉದ್ದೇಶ ಬಹಳ ಮಹತ್ವ ದ್ದಾಗಿದೆ. ಈ ಉದ್ದೇಶವನ್ನು ಸಾಧಿಸಲು ’ಪ್ರತಿದಿನ ೩೦ ರಿಂದ ೪೫ ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಯೋಗ್ಯ ಆಹಾರ ಸೇವಿಸುವುದು’, ಇಷ್ಟು ಸಾಕಾಗುತ್ತದೆ. (ಭಾಗ ೯)

ಸೌ. ಅಕ್ಷತಾ ರೆಡಕರ

ಈ ವ್ಯಾಯಾಮದಲ್ಲಿ ಮುಂದಿನ ವ್ಯಾಯಾಮದ ವಿಧಗಳ ಸಮಾವೇಶವಿರಬಹುದು,

೧. ಹೃದಯ ಮತ್ತು ಪುಪ್ಫುಸಗಳ ಸಾಮರ್ಥ್ಯವನ್ನು ಹೆಚ್ಚಿಸುವ ವಿಧಗಳು, ಉದಾ. ವೇಗವಾಗಿ ನಡೆಯುವುದು, ಓಡುವುದು, ಸೈಕಲ್ ಓಡಿಸುವುದು, ಹಗ್ಗ ಜಿಗಿತ ಇತ್ಯಾದಿ.

೨. ಶಕ್ತಿಯನ್ನು ಹೆಚ್ಚಿಸುವ ವಿಧಗಳು, ಉದಾ. ಡಿಪ್ಸ್, ಬಸ್ಕಿ ಇತ್ಯಾದಿ.

೩. ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸುವ ಪ್ರಕಾರಗಳು, ಉದಾ. ಸ್ಟ್ರೆಚ್ಚಿಂಗ್ ಮತ್ತು ಕೆಲವು ಯೋಗಾಸನಗಳು. ಗಂಟೆಗಟ್ಟಲೇ ವ್ಯಾಯಾಮ ಮಾಡದೇ ಪ್ರತಿದಿನ ಸ್ವಲ್ಪ ಸಮಯ ವ್ಯಾಯಾಮ ಮಾಡಿದರೂ ಒಳ್ಳೆಯ ಪರಿಣಾಮ ಸಿಗಬಹುದು, ಅದರಲ್ಲಿ ಕೇವಲ ಸಾತತ್ಯ ಮತ್ತು ಗುಣಮಟ್ಟ ಇರುವುದು ಮಹತ್ವದ್ದಾಗಿದೆ.’

– ಸೌ. ಅಕ್ಷತಾ ರೂಪೇಶ ರೆಡಕರ, ಭೌತಿಕೋಪಚಾರ ತಜ್ಞರು (ಫಿಜಿಯೋಥೆರಪಿಸ್ಟ್), ಫೋಂಡಾ, ಗೋವಾ. (೧೧.೮.೨೦೨೪)