Priyank Kharge Statement : ‘ಹಿಂದೂ ಧರ್ಮದಲ್ಲಿ ಸಮಾನತೆ ಮತ್ತು ಸ್ವಾಭಿಮಾನದ ಮೂಲಕ ಬದುಕಲು ಸಾಧ್ಯ ಇಲ್ಲದಿರುವುದರಿಂದ ಬೌದ್ಧ, ಜೈನ, ಸಿಖ್ ಮತ್ತು ಲಿಂಗಾಯತ ಧರ್ಮದ ಉದಯವಾಗಿದೆ !(ಅಂತೆ)

ಬೆಂಗಳೂರು – ಹಿಂದೂ ಧರ್ಮದಲ್ಲಿ ಸಮಾನತೆ ಮತ್ತು ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ, ಆದ್ದರಿಂದ ನಮ್ಮ ದೇಶದಲ್ಲಿ ಬೌದ್ಧ, ಜೈನ, ಸಿಖ್ ಮತ್ತು ಲಿಂಗಾಯತ ಧರ್ಮ ಉದಯಿಸಿದೆ, ಎಂದು ಸಚಿವ ಪ್ರಿಯಾಂಕ ಖರ್ಗೆ ಇವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿಯ ಒಂದು ಪತ್ರಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.

ಪ್ರಿಯಾಂಕಾ ಖರ್ಗೆ ಮಾತು ಮುಂದುವರೆಸಿ, ಈ ೪ ಧರ್ಮಗಳ ಉದಯ ಹಿಂದೂ ಧರ್ಮದ ವಿರೋಧದಲ್ಲಿ ಆಗಿದೆ. ಹೀಗಿದ್ದರೆ, ಬಸವೇಶ್ವರರು ದೇಶದ್ರೋಹಿ ಆಗಿದ್ದರೆ? ಅವರು ಹಿಂದೂ ವಿರೋಧಿ ಆಗಿದ್ದರೆ? ಎಂಬ ಪ್ರಶ್ನೆ ಕೂಡ ಅವರು ಉಪಸ್ಥಿತಗೊಳಿಸಿದರು.

ಸಂಪಾದಕೀಯ ನಿಲುವು

  • ನಾಲಿಗೆಗೆ ಎಲುಬು ಇಲ್ಲ ಅಂತ ಹೇಗೆ ಬೇಕಾದರೂ ಹೊರಳಿಸಬಹುದು, ಎಂದು ಏನು ಬೇಕಿದ್ದರೂ ಮಾತನಾಡುವ ಪ್ರಿಯಾಂಕ ಖರ್ಗೆ ! ಇಂತಹ ‘ಸಂಶೋಧನೆ ‘ಮಾಡಿರುವುದಕ್ಕಾಗಿ ಪ್ರಿಯಾಂಕಾ ಖರ್ಗೆ ಇವರಿಗೆ ಪ್ರಶಸ್ತಿಯೇ ನೀಡಬೇಕು !
  • ಜೈನ್ ಮತ್ತು ಸಿಖ್ ಇವು ಹಿಂದೂ ಧರ್ಮದಲ್ಲಿನ ಪಂಥಗಳೇ ಆಗಿವೆ ಹಾಗೂ ಲಿಂಗಾಯತ ಧರ್ಮ ಹಿಂದೂ ಧರ್ಮದಲ್ಲಿನ ಒಂದು ಸಂಪ್ರದಾಯವಾಗಿದೆ. ಅದು ಬೇರೆ ಧರ್ಮವಲ್ಲ. ಇದು ಯಾರಿಗೆ ತಿಳಿದಿಲ್ಲ ಅವರು ಈ ರೀತಿಯ ಹಾಸ್ಯಸ್ಪದ ಹೇಳಿಕೆ ನೀಡುತ್ತಾರೆ. ಇಂತಹ ಹೇಳಿಕೆಯಿಂದಲೇ ಸಮಾಜದಲ್ಲಿ ದ್ವೇಷ ನಿರ್ಮಾಣವಾಗುತ್ತದೆ. ಇಂತಹವರ ಮೇಲೆ ದೂರು ದಾಖಲಿಸಬೇಕು !
  • ಜೈನ ಮತ್ತು ಸಿಖ್ ಪಂಥ ಹಿಂದೂ ಧರ್ಮದ ಜೊತೆಗೆ ಇದೆ. ಒಂದ ಕುಟುಂಬದಲ್ಲಿನ ಕೆಲವು ಜನರು ಸಿಖ್ಖರು ಹಾಗೂ ಕೆಲವು ಜನರು ಹಿಂದೂ ಧರ್ಮದ ಪ್ರಕಾರ ಆಚರಣೆ ಮಾಡುತ್ತಾರೆ. ಜೈನರು ಹಿಂದೂ ಧರ್ಮದಿಂದ ತನ್ನನ್ನು ಎಂದಿಗೂ ಬೇರೆ ತಿಳಿದಿಲ್ಲ, ಇದು ಯಾರಿಗೆ ತಿಳಿದಿದೆ ಅವರು ಎಂದಿಗೂ ಈ ರೀತಿಯ ಹೇಳಿಕೆ ನೀಡುವುದಿಲ್ಲ !