
ನವ ದೆಹಲಿ – ವಿಮಾನಯಾನ ಕಂಪನಿ ಆಕಾಸಾ ಏರ್, ಪ್ರಯಾಗರಾಜ್‌ಗೆ ವಿಮಾನಗಳ ಹೆಚ್ಚಿದ ದರವನ್ನು ಶೇಕಡಾ 30 ರಿಂದ 45 ರಷ್ಟು ಕಡಿಮೆ ಮಾಡಿದೆ. ಹಾಗೂ ವಿಮಾನಗಳ ಸಂಖ್ಯೆಯನ್ನೂ ಹೆಚ್ಚಿಸಿದೆ. ಇದಕ್ಕೂ ಮೊದಲು, ‘ಇಂಡಿಗೋ ಏರ್‌ಲೈನ್ಸ್’ ಕೂಡ ಇದೇ ರೀತಿಯ ಕಡಿತಗಳನ್ನು ಮಾಡಿತ್ತು. ಈ ಎರಡು ವಿಮಾನಯಾನ ಸಂಸ್ಥೆಗಳನ್ನು ಹೊರತುಪಡಿಸಿ, ಬೇರೆ ಯಾವುದೇ ವಿಮಾನಯಾನ ಸಂಸ್ಥೆಗಳು ದರವನ್ನು ಕಡಿತಗೊಳಿಸಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸೂಚನೆಗಳ ಹೊರತಾಗಿಯೂ, ಈ ಸಂಸ್ಥೆಗಳಿಂದ ಬಹಳ ಕಡಿಮೆ ಪ್ರತಿಕ್ರಿಯೆ ಬಂದಿದೆ. ಇದು ಸಾಮಾನ್ಯವಾಗಿ ವಿಮಾನ ಟಿಕೆಟ್‌ಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
🚨 Akasa Air slashes fares to Prayagraj by 30-45%! IndiGo had earlier cut prices by 30-50%.
Despite the Union Government’s recent bill to monitor airfares, many airlines haven’t followed suit. Are they defying the system, or is there a lack of willpower? 🤔🤔#MahaKumbh2025
✈️… pic.twitter.com/73blVJEk3H— Sanatan Prabhat (@SanatanPrabhat) February 1, 2025
ಕೇಂದ್ರ ಸರಕಾರದಿಂದ ಒಂದು ತಿಂಗಳ ಹಿಂದೆಯೇ ಟಿಕೆಟ್ ಬೆಲೆಗಳ ಮೇಲ್ವಿಚಾರಣೆಗಾಗಿ ಮಸೂದೆಯನ್ನು ಅಂಗೀಕರಿಸಿತು !
ಕೇಂದ್ರ ಸರಕಾರವು ಡಿಸೆಂಬರ್ 2024 ರಲ್ಲಿ ‘ಭಾರತೀಯ ವಿಮಾನ ಮಸೂದೆ’ಯನ್ನು ಅಂಗೀಕರಿಸಿತು. ಈ ನಿಟ್ಟಿನಲ್ಲಿ, ಡಿಸೆಂಬರ್ 3, 2024 ರಂದು, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ ಮೋಹನ್ ನಾಯ್ಡು ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಡಿಯಲ್ಲಿ ನಾವು ವಿಮಾನ ಟಿಕೆಟ್‌ಗಳ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ವಿಮಾನಯಾನ ಸಂಸ್ಥೆಗಳು ನಿರ್ದಿಷ್ಟ ಪ್ರದೇಶ ಅಥವಾ ಮಾರ್ಗಕ್ಕೆ ಬೆಲೆಗಳನ್ನು ನಿಗದಿಪಡಿಸಿದಾಗ, ಅವರು ಅದನ್ನು ಸಚಿವಾಲಯಕ್ಕೆ ಕಳುಹಿಸಬೇಕು. ವಿಮಾನಯಾನ ಸಂಸ್ಥೆಗಳು 24 ಗಂಟೆಗಳ ಒಳಗೆ ಬೆಲೆಗಳನ್ನು ಬದಲಾಯಿಸಲು ಅವಕಾಶ ನೀಡುವ 2010 ರ ಸುತ್ತೋಲೆಯಿಂದ ಸರಕಾರ ನಿಬಂಧನೆಯನ್ನು ತೆಗೆದುಹಾಕುತ್ತಿದೆ. ಹೊಸ ವ್ಯವಸ್ಥೆಯು ವಿಮಾನಯಾನ ಸಂಸ್ಥೆಗಳು ತಮ್ಮ ಇಚ್ಛೆಯಂತೆ ದರಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಖಚಿತಪಡಿಸುತ್ತದೆ. ಬೆಲೆ ಅಕ್ರಮಗಳನ್ನು ತಡೆಗಟ್ಟುವುದು ಈ ಬದಲಾವಣೆಗಳ ಉದ್ದೇಶವಾಗಿದೆ. ವಿಮಾನಯಾನ ಸಂಸ್ಥೆಗಳು ತಮಗೆ ಇಷ್ಟ ಬಂದಂತೆ ವರ್ತಿಸಲು ಸಾಧ್ಯವಾಗದಂತೆ ನಾವು ‘ದರ ಮೇಲ್ವಿಚಾರಣಾ ವ್ಯವಸ್ಥೆ’ಯನ್ನು ಬಲಪಡಿಸುತ್ತಿದ್ದೇವೆ. ಶುಲ್ಕ ನಿಯಮಗಳನ್ನು ಉಲ್ಲಂಘಿಸಿದರೆ ವಿಮಾನಯಾನ ಸಂಸ್ಥೆಗಳಿಗೆ ದಂಡ ವಿಧಿಸಲು ಸರಕಾರ ನಿಯಮಗಳನ್ನು ಜಾರಿಗೆ ತಂದಿದೆ. (ಸರಕಾರ ಈ ಮಸೂದೆಯನ್ನು ಅಂಗೀಕರಿಸಿದ್ದರೆ, ಕಳೆದ ಒಂದೂವರೆ ತಿಂಗಳಲ್ಲಿ ವಿಮಾನ ಪ್ರಯಾಣ ದರಗಳ ಹೆಚ್ಚಳದ ಮೇಲೆ ಸರಕಾರ ಏಕೆ ಕಣ್ಣಿಟ್ಟಿಲ್ಲ? ಇದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ! ಅಲ್ಲದೆ, ಸರಕಾರ ಇವುಗಳಿಗೆ ಯಾವ ದಂಡವನ್ನು ವಿಧಿಸಲಿದೆ?) ಇದನ್ನೂ ಹೇಳಲೇಬೇಕಾಗಬಹುದು ! – ಸಂಪಾದಕರು)
ಸಂಪಾದಕೀಯ ನಿಲುವುದೇಶದಲ್ಲಿ ಅನೇಕ ಸಣ್ಣ ಮತ್ತು ದೊಡ್ಡ ವಿಮಾನಯಾನ ಸಂಸ್ಥೆಗಳು ಇವೆ. ಅವುಗಳಲ್ಲಿ ಇಂಡಿಗೊ ಮತ್ತು ಅಕಾಸಾ ಮಾತ್ರ ಪ್ರಯಾಗರಾಜ್‌ಗೆ ಪ್ರಯಾಣ ದರ ಹೆಚ್ಚಳವನ್ನು ಕಡಿಮೆ ಮಾಡಿವೆ. ಕೇಂದ್ರ ಸರಕಾರದ ವಿನಂತಿಯ ಹೊರತಾಗಿಯೂ, ಇತರ ಸಂಸ್ಥೆಗಳು ಸ್ಪಂದಿಸುತ್ತಿಲ್ಲ. ಇದು “ಅವರು ದುರಹಂಕಾರಿಗಳೇ ಅಥವಾ ವ್ಯವಸ್ಥೆಯಲ್ಲಿ ಇಚ್ಛಾಶಕ್ತಿಯ ಕೊರತೆಯಿದೆಯೇ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. |
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir