
ಪ್ರಯಾಗರಾಜ್ – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ಇಸ್ಕಾನ ನ ಮುಖ್ಯಸ್ಥ ಶ್ರೀ ಗೌರಂಗ ದಾಸ್ ಅವರನ್ನು ಇತ್ತೀಚೆಗೆ ಭೇಟಿಯಾದರು. ಈ ಸಂದರ್ಭದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ಶ್ರೀ ಗೌರಂಗ ದಾಸ್ ಅವರನ್ನು ಗೋವಾದಲ್ಲಿ ಬರುವ ಜೂನ್ ತಿಂಗಳಲ್ಲಿ ನಡೆಯುವ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕೆ ಬರುವಂತೆ ಆಮಂತ್ರಣ ನೀಡಿದರು.

ಇದರ ಜೊತೆಗೆ ಸದ್ಗುರು ಡಾ. ಪಿಂಗಳೆ ಅವರು ಶ್ರೀ ಗೌರಂಗದಾಸ್ ಅವರಿಗೆ ಹಿಂದೂ ಜನಜಾಗೃತಿ ಸಮಿತಿ ಮಾಡುತ್ತಿರುವ ಸಮಾಜ, ರಾಷ್ಟ್ರ ಮತ್ತು ಧರ್ಮ ಹಾಗೆಯೇ ಹಿಂದೂ ರಾಷ್ಟ್ರಕ್ಕಾಗಿ ಮಾಡುತ್ತಿರುವ ಕಾರ್ಯದ ಮಾಹಿತಿಯನ್ನು ಸವಿಸ್ತಾರವಾಗಿ ತಿಳಿಸಿದರು. ಶ್ರೀ ಗೌರಂಗ ದಾಸ್ ಅವರು ಸಮಿತಿಯ ಸಾಧಕರು ಹಿಂದುತ್ವದ ಕಾರ್ಯಕ್ಕೆ ಸಾಧನೆಯನ್ನು ಸೇರಿಸಿರುವುದನ್ನು ಶ್ಲಾಘಿಸಿದರು ಮತ್ತು ‘ಇದುವೇ ಅಪೇಕ್ಷಿತವಾಗಿದೆ’ ಎಂದು ಹೇಳಿದರು.