
ಶ್ರೀಮತಿ ಸರೋಜಿನಿ ಜೆ ಉಪಾಧ್ಯಾಯ ಇವರ ಬಗ್ಗೆ ಸಾಧಕಿಗೆ ಗಮನಕ್ಕೆ ಬಂದ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.
೧. ಚಿಕ್ಕಂದಿನಿಂದಲೇ ಮಾರುತಿಯ ಉಪಾಸನೆ ಮಾಡುವುದು ಮತ್ತು ಗಂಡನ ಮನೆಯಲ್ಲಿಯೂ ಧಾರ್ಮಿಕ ವಾತಾವರಣ ಇರುವುದು : ‘ಶ್ರೀಮತಿ ಸರೋಜಿನಿ
ಯವರು (ಅಮ್ಮನವರು) ೭ ವರ್ಷದವರಿ ದ್ದಾಗಿನಿಂದಲೇ ಹನುಮಂತನ ಉಪಾಸನೆ ಮಾಡುತ್ತಿದ್ದರು. ಅವರ ತಂದೆಯವರು ಹನುಮಂತನ ಆವಾಹನೆ ಮಾಡುತ್ತಿದ್ದರು ಮತ್ತು ಭವಿಷ್ಯ ಹೇಳುತ್ತಿದ್ದರು. ಅಮ್ಮನವರಿಗೆ ಅಲ್ಲಿಂದಲೇ ಮಾರುತಿಯ ಬಗ್ಗೆ ಉತ್ಕಟ ಭಕ್ತಿ ನಿರ್ಮಾಣವಾಗಿತ್ತು. ಅಮ್ಮನವರು ಮದುವೆ ಆಗಿ ಗಂಡನ ಮನೆಗೆ ಬಂದಾಗ ಈ ಮನೆ ಕೂಡ ಧಾರ್ಮಿಕ ವಾತಾವರಣದ ಮನೆಯಾಗಿತ್ತು. ಅವರ ಮಾವನವರು ಉಡುಪಿ ದೇವಸ್ಥಾನದಲ್ಲಿ ಕುಲಗುರುಗಳಾಗಿ ವೇದಪಾಠ ಮಾಡಿಸುತ್ತಿದ್ದರು.
೨. ಹನುಮಂತನು ಸೂಕ್ಷ್ಮದಿಂದ ಹೇಳಿದಂತೆ ಅಯೋಧ್ಯೆಯ ಅಂಗಡಿಯಿಂದ ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ಒಟ್ಟಾಗಿರುವ ಚಿತ್ರವನ್ನು ಖರೀದಿಸುವುದು ಮತ್ತು ಪ್ರತಿದಿನ ಚಿತ್ರದ ಪೂಜೆ ಮಾಡುವುದು : ಅಮ್ಮನವರು ೧೩ ವರ್ಷಗಳ ಹಿಂದೆ ಒಮ್ಮೆ ಅಯೋಧ್ಯೆಗೆ ಹೋಗಿದ್ದರು. ಅಲ್ಲಿ ಅಂಗಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ಭಾವಚಿತ್ರ ಕಾಣಿಸಿತು. ಇವರಿಗೆ ಆ ಭಾವಚಿತ್ರವನ್ನು ತೆಗೆದುಕೊಳ್ಳಬೇಕು ಎಂದು ಅನಿಸುತ್ತಿತ್ತು. ಆದರೆ ಇವರ ತಮ್ಮನವರು ಬೇಗ ಹೋಗೋಣ. ‘ಆ ಚಿತ್ರ ತೆಗೆದುಕೊಳ್ಳು ವುದು ಬೇಡ’ ಎಂದು ಕೈ ಹಿಡಿದು ಎಳೆಯುತ್ತಿದ್ದರು. ಅಗ ಸ್ವತಃ ಹನುಮಂತನೇ ಅಮ್ಮನವರಿಗೆ ಸೂಕ್ಷ್ಮದಲ್ಲಿ ಬಂದು ‘ನನ್ನನ್ನು ಬಿಟ್ಟು ಹೋಗುತ್ತೀಯಾ ?’ ಎಂದು ಹೇಳಿದರು, ನಂತರ ಛಾಯಾಚಿತ್ರವನ್ನು ಖರೀದಿಸಿದರು ಮತ್ತು ಈಗಲೂ ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ.
೩. ‘ಮಾರುತಿಯ ಕೃಪೆಯಿಂದ ಹೊಸ ಮನೆ ಕಟ್ಟಲು ಸಾಧ್ಯ ವಾಯಿತು’, ಎಂಬ ಭಾವವಿರುವುದು : ಕೆಲವು ವರ್ಷಗಳ ಹಿಂದೆ ಅವರು ಸಣ್ಣ ಹಳೆಯ ಮನೆಯಲ್ಲಿ ವಾಸಿಸುತ್ತಿದ್ದರು. ಅದು ಮಳೆಗಾಲದಲ್ಲಿ ಸೋರುತ್ತಿತ್ತು. ಒಮ್ಮೆ ಅಮ್ಮನವರಿಗೆ ರಾತ್ರಿ ಕನಸಿ ನಲ್ಲಿ ಮಾರುತಿಯು ದರ್ಶನ ನೀಡಿ, ‘ನಾನು ನಿನ್ನ ಮನೆಯ ಪಕ್ಕದಲ್ಲಿರುವ ಮಾವಿನ ಮರದ ಮೇಲೆ ಕುಳಿತಿದ್ದೇನೆ. ನಿನಗೆ ಇಷ್ಟು ಎತ್ತರದ ಮನೆ ಮಾಡಿಕೊಟ್ರೆ ಸಾಕಲ್ವಾ ! ನೀನೇಕೆ ಚಿಂತಿಸುತ್ತೀ ?’ ಎಂದು ಹೇಳಿದ. ಕೆಲವು ವರ್ಷ ಕಳೆದ ಮೇಲೆ ಅಮ್ಮನವರು ಮನೆ ಕಟ್ಟಿದರು. ‘ಮಾರುತಿಯ ಕೃಪೆಯಿಂದಲೇ ಮನೆ ಕಟ್ಟಲು ಆಯಿತು’, ಅಮ್ಮನವರು ನಮಗೆ ಹೇಳಿದರು
೪. ದೇವರ ಬಗ್ಗೆ ಭಾವ : ಅಮ್ಮವನರು ಪ್ರತಿದಿನ ಹನುಮಂತನ ಸ್ತೋತ್ರವನ್ನು ಪಠಿಸುತ್ತಾರೆ. ಅವರು ಪೂಜಿಸುವ ಶ್ರೀಕೃಷ್ಣನ ಮೂರ್ತಿಯಲ್ಲಿ ತುಂಬಾ ಚೈತನ್ಯದ ಅನುಭವವಾಗುತ್ತದೆ.
೫. ಅವರ ಮನೆಯಲ್ಲಿ ತುಂಬ ಸಾತ್ತ್ವಿಕತೆ ಇದೆ.
೬. ಇಳಿವಯಸ್ಸಿನಲ್ಲಿಯೂ ಚಟುವಟಿಕೆಯಿಂದಿರುವುದು : ಅಮ್ಮ ಇಳಿ ವಯಸ್ಸಿನಲ್ಲಿಯೂ ಮನೆಯಲ್ಲಿ ದನದ ಹಾಲು ಕರೆಯುತ್ತಾರೆ, ಕೈತೋಟದ ಕೆಲಸ ಅಂದರೆ ಮನೆಗೆ ಬೇಕಾದ ತರಕಾರಿ ಬೆಳೆಸುವುದು ಸಹ ಮಾಡುತ್ತಾರೆ.
೭. ಪ್ರೇಮಭಾವ : ಅವರಲ್ಲಿ ಮಾತನಾಡುವಾಗ ‘ನಮಗೆ ಅವರೊಂದಿಗೆ ಎಷ್ಟೋ ವರ್ಷದ ಸ್ನೇಹ ಇದ್ದಂತೆ’ ಅನ್ನಿಸುತ್ತದೆ. ಇವರು ಪಕ್ಷಿಗಳಿಗೂ ಅಷ್ಟೇ ಪ್ರೀತಿ ನೀಡುತ್ತಾರೆ, ಗದ್ದೆಗೆ ಬರುವ ಗುಬ್ಬಚ್ಚಿಗಳನ್ನು ಅವರು ಓಡಿಸುವುದಿಲ್ಲ. ಇವರ ಗದ್ದೆಯಲ್ಲಿ ಗುಂಪು ಗುಂಪಾಗಿ ಪಕ್ಷಿಗಳು ಕಾಣಿಸುತ್ತವೆ. ಅನೇಕ ನವಿಲುಗಳು ಪ್ರತಿದಿನ ಇವರ ಮನೆಯ ಅಂಗಳಕ್ಕೆ ಬರುತ್ತವೆ.
೮. ಸಂತರ ಬಗ್ಗೆ ಗೌರವಭಾವ : ಒಮ್ಮೆ ಅಮ್ಮನವರು ಪೂ. ರಮಾನಂದ ಗೌಡ ಇವರ ಮಾರ್ಗದರ್ಶನವನ್ನು ಕೇಳಲು ಬಂದಿದ್ದರು. ಆಗ ಅವರಿಗೆ ತುಂಬ ಆನಂದವಾಯಿತು. ಅವರು ಸಂತರಲ್ಲಿ ಮನಮುಕ್ತವಾಗಿ ಮಾತನಾಡಿದರು. ಅಮ್ಮನವರು ತಾವು ಆಶ್ರಮಕ್ಕೆ ಬರಬೇಕು ಎಂದು ತಮ್ಮ ಇಚ್ಛೆಯನ್ನು ವ್ಯಕ್ತ ಪಡಿಸಿದರು.
೯. ಅಮ್ಮನವರಲ್ಲಿ ಸಹಜತೆ, ಮುಗ್ಧತೆ ಮತ್ತು ಪ್ರೀತಿ ಇಂತಹ ಅನೇಕ ಗುಣಗಳಿವೆ.
– ಸೌ. ಶೋಭಾ (ಆಧ್ಯಾತ್ಮಿಕ ಮಟ್ಟ ಶೇ. ೬೨, ವಯಸ್ಸು ೬೦ ವರ್ಷ). (೫.೩.೨೦೨೪)