ಪ್ರೇಮಭಾವ ಮತ್ತು ಗುರುಗಳ ಬಗ್ಗೆ ಭಾವವಿರುವ ಕೊಟೇಶ್ವರದ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀಮತಿ ಲಕ್ಷ್ಮಿದೇವಿ ಸದಾನಂದ ಪೈ (ವಯಸ್ಸು ೮೨ ವರ್ಷ)

ಶ್ರೀಮತಿ ಲಕ್ಷ್ಮಿದೇವಿ ಸದಾನಂದ ಪೈ

೧. ಹಸನ್ಮುಖಿ : ಶ್ರೀಮತಿ ಲಕ್ಷ್ಮಿದೇವಿ ಸದಾನಂದ ಪೈಯವರು ಸದಾ ಹಸನ್ಮುಖಿಯಾಗಿರುತ್ತಾರೆ.
೨. ಅಜ್ಜಿಯವರು ಶಾಂತ ಸ್ವಭಾವದವರಿದ್ದು ಅವರು ಅತ್ಯಂತ ನಮ್ರತೆಯಿಂದ ಮಾತನಾಡುತ್ತಾರೆ.
೩. ನಾಮಜಪ ಅಖಂಡವಾಗಿ ಮಾಡುವುದು : ಅಜ್ಜಿಯವರು ಇತರರೊಂದಿಗೆ ಅಧ್ಯಾತ್ಮದ ವಿಷಯದಲ್ಲಿ ಮಾತನಾಡುತ್ತಾರೆ. ಅವರು ಬೆಳಗಿನ ಜಾವ ೫ ಗಂಟೆಗೆ ಎದ್ದು ನಾಮಜಪ ಮಾಡುತ್ತಾರೆ. ಅವರು ಸನಾತನ ಸಂಸ್ಥೆಯೊಂದಿಗೆ ಸಂಪರ್ಕವಾದಾಗಿನಿಂದ ಕುಲದೇವತೆ ಮತ್ತು ದತ್ತ ಜಪ ಮಾಡುತ್ತಿದ್ದಾರೆ. ಈಗ ಅವರು ಶ್ರೀಕೃಷ್ಣನ ಜಪವನ್ನು ಅಖಂಡವಾಗಿ ಮಾಡುತ್ತಿದ್ದಾರೆ.
೪. ಕಠಿಣ ಪ್ರಸಂಗಗಳತ್ತ ಸಾಕ್ಷಿಭಾವದಿಂದ ನೋಡುವುದು : ಕೆಲವು ವರ್ಷಗಳ ಹಿಂದೆ ಅವರ ಪತಿ ಮತ್ತು ಮಗ ತೀರಿಕೊಂಡರು. ಇಂತಹ ಕಠಿಣ ಪ್ರಸಂಗದಲ್ಲಿ ಅವರು ಸ್ಥಿರವಾಗಿದ್ದರು. ‘ಎಲ್ಲವೂ ಪ್ರಾರಬ್ಧಕ್ಕನುಸಾರವೇ ನಡೆಯುತ್ತದೆ’, ಎಂದು ವಿಚಾರ ಮಾಡಿ ಅವರು ಸಾಕ್ಷಿಭಾವದ ಸ್ಥಿತಿಯಲ್ಲಿದ್ದರು.
೫. ಭಾವ
೫ ಅ. ಸಾಪ್ತಾಹಿಕ ‘ಸನಾತನ ಪ್ರಭಾತ’ದ ಬಗ್ಗೆ ಭಾವ : ಅವರ ಮನೆಗೆ ಪ್ರತಿವಾರ ಸಾಪ್ತಾಹಿಕ ‘ಸನಾತನ ಪ್ರಭಾತ’ದ ಸಂಚಿಕೆ ಬರುತ್ತದೆ. ಅಜ್ಜಿಯವರು ಸಂಚಿಕೆ ಬರುವುದನ್ನು ಕಾಯುತ್ತಿರುತ್ತಾರೆ. ಸಂಚಿಕೆ ಬಂದ ದಿನದಂದೇ ಅವರು ಪೂರ್ಣ ಸಂಚಿಕೆಯನ್ನು ಓದುತ್ತಾರೆ. ‘ಸಂಚಿಕೆಯಿಂದ ನನಗೆ ತುಂಬ ಜ್ಞಾನ ಸಿಗುತ್ತದೆ’, ಎಂದು ಅವರು ಹೇಳುತ್ತಾರೆ.
೫ ಆ. ಸಾಧಕರ ಬಗ್ಗೆ ಭಾವ : ಅವರ ಮನೆಗೆ ಯಾರೇ ಸಾಧಕರು ಹೋದರೂ ಅವರಿಗೆ ತಿಂಡಿ ತಿನ್ನಿಸದೇ ಕಳಿಸುವುದಿಲ್ಲ. ಒಮ್ಮೆ ಸಾಧಕರು ಅವರ ಮನೆಗೆ ಹೋದಾಗ ಮುಕ್ಕೋಟಿ ದ್ವಾದಶಿ (ಟಿಪ್ಪಣಿ) ಇತ್ತು. ಅವರಲ್ಲಿ ಆಗ ‘ಗುರುಗಳೇ ಸಾಧಕರ ರೂಪದಲ್ಲಿ ಬಂದಿದ್ದಾರೆ’ ಎಂಬ ಭಾವವಿತ್ತು. ಅವರು ದೇವಸ್ಥಾನದಿಂದ ತಂದ ಪಾಯಸವನ್ನು ಸಾಧಕರಿಗೆ ಕೊಡಲು ಸಾಧ್ಯವಾಯಿತು ಎಂದು ಅವರಿಗೆ ತುಂಬಾ ಕೃತಜ್ಞತೆಯೆನಿಸಿತು.
ಟಿಪ್ಪಣಿ : ಮುಕ್ಕೋಟಿ ಏಕಾದಶಿ : ‘ಈ ಪವಿತ್ರ ದಿನದಂದು ಯಾವ ವ್ಯಕ್ತಿಯ ಮೃತ್ಯು ಆಗುತ್ತದೆಯೋ ಆ ವ್ಯಕ್ತಿ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತನಾಗುತ್ತಾನೆ ಮತ್ತು ನೇರ ವೈಕುಂಠಕ್ಕೆ ಹೋಗುತ್ತಾನೆ’, ಎಂದು ನಂಬಲಾಗುತ್ತದೆ
೫ ಇ. ಸಂತರ ಬಗ್ಗೆ ಭಾವ : ಅಜ್ಜಿಯವರ ಯಜಮಾನರು ನಿಧನರಾಗಿ ೩ ವರ್ಷಗಳಾಯಿತು. ಅಂದಿನಿಂದ ಅವರು ಮನೆಯಿಂದ ಹೊರಗೆ ಕಾಲಿಟ್ಟಿರಲಿಲ್ಲ, ಆದರೆ ಒಮ್ಮೆ ಅವರ ಊರಿನಲ್ಲಿ ಪೂ. ರಮಾನಂದ ಅಣ್ಣನವರು (ಪೂ. ರಮಾನಂದ ಗೌಡ, ಸನಾತನ ೭೫ ನೇ
ಸಂತರು, ವಯಸ್ಸು ೪೮ ವರ್ಷ) ಬಂದಿದ್ದರು. ಆ ದಿನ ಅವರ ಮೊಮ್ಮಗನ ಸಹಾಯದಿಂದ ಸಂತರ ದರ್ಶನಕ್ಕಾಗಿ ಬಂದಿದ್ದರು.
೫ ಈ. ಗುರುಗಳ ಬಗ್ಗೆ ಭಾವ : ಅಜ್ಜಿಯವರಿಗೆ ಅವರ ಗುರುಗಳಾದ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ ಮತ್ತು ಭಗವಂತನ ಬಗ್ಗೆ ತುಂಬಾ ಭಾವವಿದೆ, ಅಜ್ಜಿಯವರ ಭಕ್ತಿಭಾವದಿಂದಾಗಿಯೇ ಅಜ್ಜಿಯವರ ಗುರುಗಳು ಅವರಿಗೆ ಗುರು ಪಾದುಕೆಗಳನ್ನು ಕೊಟ್ಟಿದ್ದಾರೆ, ಅವರು ಪ್ರತಿದಿನ ಗುರುಪಾದುಕೆಗಳಿಗೆ ಆರತಿ ಮಾಡುತ್ತಾರೆ.

– ಸೌ. ಶೋಭಾ (ಆಧ್ಯಾತ್ಮಿಕ ಮಟ್ಟ ಶೇ. ೬೨, ವಯಸ್ಸು ೬೦ ವರ್ಷ)