
ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಸುರಜಿತ ಮಾಥೂರ್ ಇವರು ಸಾಧಕರ ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುತ್ತಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿ ಸಾಧಕರಿಗೆ ‘ಸುಪ್ರಿಯಾರಲ್ಲಿ ಯಾವ ಬದಲಾವಣೆಯ ಅರಿವಾಗುತ್ತದೆ ?’, ಎಂಬ ವಿಷಯದಲ್ಲಿ ನಡೆದಿರುವ ಸಂಭಾಷಣೆಯ ಕೆಲವು ಅಂಶವನ್ನು ನಾವು ಕನ್ನಡ ಸನಾತನ ಪ್ರಭಾತದ ೨೬/೧೯ ನೇ ಸಂಚಿಕೆಯಲ್ಲಿ ನೋಡಿದೆವು. ಈ ವಾರ ಅದರ ಉಳಿದ ಅಂಶವನ್ನು ನೋಡೋಣ.

೭. ಸತ್ಸಂಗದಲ್ಲಿ ‘ಸುಪ್ರಿಯಾರವರ ಮೂಲಕ ‘ದೇವರೆ ಮಾತನಾಡುತ್ತಿದ್ದಾರೆ’, ಎಂದು ಅನಿಸುತ್ತದೆ’, ಎಂದು ಶ್ರೀ. ಘನಶಾಮ್ ಗಾವಡೆ ಇವರು ಹೇಳಿದಾಗ ‘ಪ.ಪೂ. ಡಾಕ್ಟರರೆ ಎಲ್ಲವನ್ನೂ ಮಾತನಾಡಿಸಿಕೊಳ್ಳುತ್ತಾರೆ’, ಎಂದು ಸೌ. ಸುಪ್ರಿಯಾ ಮಾಥೂರ್ ಹೇಳುವುದು
ಶ್ರೀ. ಘನಶಾಮ ಗಾವಡೆ : ಈ ಹಿಂದೆ ನಾನು ಕೂಡ ಸುಪ್ರಿಯಾರವರ ವ್ಯಷ್ಟಿ ಸಾಧನೆಯ ವರದಿಯಲ್ಲಿ ಭಾಗವಹಿಸುತ್ತಿದ್ದೆ. ಆಗ ನಾನು ಕಲಿಯುವ ಸ್ಥಿತಿಯಲ್ಲಿದ್ದ ಕಾರಣ ನನಗೆ ಒಳ್ಳೆಯದೆನಿಸುತ್ತಿತ್ತು. ಈಗ ನಾನು ಅಕ್ಕ ತೆಗೆದುಕೊಳ್ಳುವ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಯ ಸತ್ಸಂಗಕ್ಕೆ ಹೋಗುತ್ತಿದ್ದೇನೆ, ಆದರೆ ನನಗೆ ‘ಅವರ ಸತ್ಸಂಗಕ್ಕೆ ಯಾವಾಗ ಹೋಗುವುದು ?’, ಎಂದು ಅನಿಸುತ್ತದೆ. ಅಕ್ಕ ಯಾವಾಗ ಸತ್ಸಂಗ ತೆಗೆದುಕೊಳ್ಳುತ್ತಾರೊ, ಆಗ ‘ಅಲ್ಲಿ ಅಕ್ಕ ಅಲ್ಲ, ಪ್ರತ್ಯಕ್ಷ ದೇವಿಯೆ ಮಾತನಾಡುತ್ತಾಳೆ’, ಎಂದು ನನಗೆ ಅನಿಸುತ್ತದೆ. ನಾನು ಅಕ್ಕರವರಿಗೆ ಹೇಳಿದೆ, ”ಅಕ್ಕ, ಸತ್ಸಂಗದಲ್ಲಿ ನೀವು ಮಾತನಾಡುವುದಿಲ್ಲ, ನಿಮ್ಮ ಮೂಲಕ ದೇವರೇ ಮಾತನಾಡುತ್ತಾರೆ.
ಸೌ. ಸುಪ್ರಿಯಾ ಮಾಥೂರ್ : ಪ.ಪೂ. ಡಾಕ್ಟರ್, ನನಗೆ ಯಾವುದೇ ದೃಷ್ಟಿಕೋನವೂ ಗೊತ್ತಿಲ್ಲ ಅಥವಾ ಹೆಚ್ಚಿನ ಮಾಹಿತಿಯೂ ಇಲ್ಲ; ಆದರೆ ನಿಮಗೆ ಸಾಧಕರ ಮೇಲೆ ಎಷ್ಟು ಪ್ರೀತಿಯಿದೆಯೆಂದರೆ, ನನಗೆ ಏನೂ ಗೊತ್ತಿಲ್ಲ ಆದರೂ ನನ್ನಿಂದ ಅವರಿಗೆ ಆವಶ್ಯಕವಿರುವ ವಿಷಯವೇ ಬರುತ್ತದೆ ಅಥವಾ ಅವರಿಗೆ ಪ್ರೋತ್ಸಾಹ ಸಿಗುತ್ತದೆ.
ಸೌ. ರಾಧಾ ಗಾವಡೆ : ಪರಮಪೂಜ್ಯ ಡಾಕ್ಟರ್, ಸುಪ್ರಿಯಾರವರಿಗೆ ಎಂದಾದರೊಮ್ಮೆ ಅವರನ್ನು ಪ್ರಶಂಸಿಸಲು ಏನಾದರೂ ಹೇಳಿದರೆ, ಅವರು ಅದರ ಶ್ರೇಯಸ್ಸನ್ನು ತೆಗೆದುಕೊಳ್ಳುವುದೇ ಇಲ್ಲ. ‘ದೇವರೆ ಅದನ್ನು ಸೂಚಿಸಿದರು ಹಾಗೂ ಹೇಳಿಸಿಕೊಂಡರು’, ಎನ್ನುತ್ತಾರೆ.
೮. ಸಾಧಕರಲ್ಲಿ ‘ಕೇಳಿಸಿಕೊಳ್ಳುವ ಸ್ಥಿತಿ ಇದೆಯೋ ಇಲ್ಲ ?’ ಎಂಬುದನ್ನು ಗುರುತಿಸಿ ಅವರಿಗೆ ‘ಯೋಗ್ಯ ಯಾವುದು’, ಎಂಬುದನ್ನು ಹೇಳಬೇಕು !
ಸೌ. ಸುಪ್ರಿಯಾ ಮಾಥೂರ್ : ಕೆಲವು ಪ್ರಸಂಗಗಳಲ್ಲಿ ನಾನು ಯಜಮಾನರಿಗೆ ‘ಯಾವುದು ಯೋಗ್ಯವಾಗಿದೆ’, ಎಂಬುದನ್ನು ಹೇಳುತ್ತೇನೆ; ಆದರೆ ಕೆಲವೊಮ್ಮೆ ನನ್ನನ್ನು ಪತ್ನಿ ಎಂದು ನೋಡುವುದರಿಂದ ಅವರು ಗಾಂಭೀರ್ಯದಿಂದ ಕೇಳಿಸಿಕೊಳ್ಳುವ ಅಂಶ ಕಡಿಮೆಯಿರುತ್ತದೆ. ಆದ್ದರಿಂದ ‘ಅವರ ಕೇಳಿಸಿಕೊಳ್ಳುವ ಸ್ಥಿತಿ ಹೇಗಿದೆ’, ಎಂದು ವಿಚಾರ ಮಾಡಿ ನಾನು ಅವರೊಂದಿಗೆ ಮಾತನಾಡುತ್ತೇನೆ. ನನಗೆ ಯಾವಾಗ ಅವರು ಅಂತರ್ಮುಖರಾಗಿಲ್ಲ ಎಂದು ಅನಿಸುತ್ತದೊ, ಆಗ ನಾನು ಅವರಿಗೆ ಏನೂ ಹೇಳುವುದಿಲ್ಲ.’
ಸೌ. ಕಸ್ತೂರಿ ಭೋಸಲೆ : ಪರಮಪೂಜ್ಯ ಡಾಕ್ಟರ್, ಈ ಸಂದರ್ಭದಲ್ಲಿ ಓರ್ವ ಸಾಧಕಿಯ ವಿಷಯದಲ್ಲಿ ಅರಿವಾದ ಅಂಶವೆಂದರೆ, ಯಾವಾಗ ಅವಳ ಆಧ್ಯಾತ್ಮಿಕ ತೊಂದರೆ ತೀವ್ರವಾಗಿರುತ್ತದೊ, ಆಗ ಅವಳು ಕೇಳಿಸಿ ಕೊಳ್ಳುವ ಸ್ಥಿತಿಯಲ್ಲಿರುವುದೆ ಇಲ್ಲ. ನಂತರ ತೊಂದರೆ ಕಡಿಮೆಯಾದಾಗ ಅವಳಿಗೆ ಏನೇ ಹೇಳಿದರೂ ಅವಳು ಸ್ವೀಕರಿಸುತ್ತಾಳೆ ಹಾಗೂ ಕ್ಷಮೆಯಾಚಿಸುತ್ತಾಳೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಚೆನ್ನಾಗಿದೆ.
೯. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ವ್ಯಷ್ಟಿ ಸಾಧನೆಯಲ್ಲಿನ ಭಾವಕ್ಕಿಂತ ಸಮಷ್ಟಿ ಸಾಧನೆಯಲ್ಲಿ ಭಾವವಿರಬೇಕು’, ಎಂದು ಹೇಳುತ್ತಾರೆ.
ಶ್ರೀ. ಸುರಜಿತ ಮಾಥೂರ್ : ಗುರುದೇವರೆ, ನನ್ನ ಭಾವಜಾಗೃತಿಯ ಪ್ರಯತ್ನ ಕಡಿಮೆಯಾಗುತ್ತದೆ. ನನಗೆ ಭಾವದ ಸ್ಥಿತಿಯಲ್ಲಿರಲು ಸಾಧ್ಯವಾಗುವುದಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ವ್ಯಷ್ಟಿ ಸಾಧನೆಯಲ್ಲಿ ಭಾವ ಇರುತ್ತದೆ. ಭಾವದ ಸ್ಥಿತಿಯಲ್ಲಿರುವುದೆಂದರೆ, ವ್ಯಷ್ಟಿ ಸಾಧನೆಯ ಸ್ಥಿತಿಯಲ್ಲಿರುವುದು. ನಾವು ಆ ಸ್ಥಿತಿಯಲ್ಲಿರಬಾರದು. ನಮಗೆ ಸಮಷ್ಟಿ ಸಾಧನೆಯಲ್ಲಿನ ಭಾವವಿರಬೇಕು, ಅಂದರೆ ಯಾವುದೇ ಒಂದು ಸೇವೆ ಮಾಡುವಾಗ ಅದು ಭಾವಪೂರ್ಣವಾಗಬೇಕು. ಇತರರೊಂದಿಗೆ ಮಾತನಾಡುವಾಗ ಭಾವಪೂರ್ಣವಾಗಿ ಮಾತನಾಡಲು ಬರಬೇಕು !’
(ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿನ ಸಂಭಾಷಣೆ) (ಮುಕ್ತಾಯ)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !