
‘ಸಂತರು ನಿರ್ದಿಷ್ಟ ಕಾರಣಕ್ಕಾಗಿ ಸಾಧಕರಿಗೆ ಪ್ರತಿದಿನ ನಿರ್ದಿಷ್ಟ ಅವಧಿಗಾಗಿ ನಾಮಜಪ ಮಾಡಲು ಹೇಳುತ್ತಾರೆ, ‘ಸಂತರ ಅಜ್ಞಾಪಾಲನೆಯೆಂದು ಸಾಧಕರಿಗೆ ಹೇಳಿದಷ್ಟು ನಾಮಜಪ ಮಾಡಬೇಕು. ಸಾಧಕರು ಸ್ವಂತ ಮನಸ್ಸಿನಂತೆ ಅದರ ಅವಧಿಯನ್ನು ಹೆಚ್ಚು-ಕಡಿಮೆ ಮಾಡ ಬಾರದು; ಏಕೆಂದರೆ ಆ ಅವಧಿಗಾಗಿ ಸಂತರ ಸಂಕಲ್ಪವಿರುತ್ತದೆ ಎಂದು ಹೇಳಲಾಗುತ್ತದೆ, ಆದರೆ ಕೆಲವೊಮ್ಮೆ ಸಾಧಕರು ಸಂತರು ಹೇಳಿದಂತಹ ನಾಮಜಪ ಮಾಡುತ್ತಿರುವಾಗ ‘ಆ ಅವಧಿಯಲ್ಲಿ ಮನಸ್ಸಿನಲ್ಲಿ ಇತರ ವಿಚಾರ ಬಂದಿದ್ದರಿಂದ ಅಥವಾ ನಾಮಜಪ ಭಾವಪೂರ್ಣ ಆಗಲಿಲ್ಲ’ ಎಂಬ ವಿಚಾರದಿಂದ ಅದನ್ನು ಸರಿ ಮಾಡಲು ಹೆಚ್ಚು ಸಮಯ ನಾಮಜಪ ಮಾಡುತ್ತಾರೆ ಹೀಗೆ ಮಾಡುವುದು ಯೋಗ್ಯವೋ ಅಯೋಗ್ಯವೋ ?’ ಇದರ ಲಾಭ ಮತ್ತು ಹಾನಿ ಹೇಗಿರುತ್ತದೆ. ಇದರ ಬಗ್ಗೆ ದೇವರ ಕೃಪೆಯಿಂದ ನನಗೆ ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನವನ್ನು ಮುಂದೆ ನೀಡುತ್ತಿದ್ದೇನೆ
೧. ಸಂತರು ನಿರ್ದಿಷ್ಟ ಅವಧಿಗಾಗಿ ಹೇಳಿದ ನಾಮಜಪ ಮಾಡುವುದರಿಂದ ಸಾಧಕರಿಗೆ ಆಗುವ ಲಾಭ
೧ ಅ. ಸಂತರು ಹೇಳಿದ ನಾಮಜಪದಲ್ಲಿ ‘ಸಂಪುಟಿತ ಶಕ್ತಿ’ ಇರುವುದು : ಸಂಪುಟಿತ ಶಕ್ತಿ ಇದರಲ್ಲಿ ‘ಸ’ ಎಂಬ ಶಬ್ದದ ಅರ್ಥ ‘ಸಂತರು ಸಾಧಕರ ಕಲ್ಯಾಣದ ವಿಚಾರ ಮತ್ತು ಈಶ್ವರೀ ಶಕ್ತಿ’ ಎಂದಾಗಿದೆ. ‘ಪುಟಿತ’ ಎಂದರೆ ಏಕತ್ರಿತ. ಸಂತರು ಸಾಧಕರ ನಿರ್ದಿಷ್ಟ ಅಡಚಣೆ ಯನ್ನು ಬಿಡಿಸಲು ನಿರ್ದಿಷ್ಟ ನಾಮಜಪ ಮಾಡಲು ಹೇಳುತ್ತಾರೆ. ಆಗ ಆ ನಾಮಜಪಕ್ಕೆ ‘ಸಂತರು ಸಾಧಕರ ಕಲ್ಯಾಣದ ವಿಚಾರ ಮತ್ತು ಈಶ್ವರಿ ಶಕ್ತಿ’ ಜೋಡಿಸಿರುತ್ತದೆ. ಅದರಿಂದ ಸಂತರು ಹೇಳಿದ ನಾಮಜಪ ಸಂಪುಟಿತ ಶಕ್ತಿಯಿಂದ ತುಂಬಿರುತ್ತದೆ. ಸಂತರು ಸಾಧಕರಿಗೆ ನಿರ್ದಿಷ್ಟ ಸಮಯ ಮತ್ತು ನಿರ್ದಿಷ್ಟ ಅವಧಿಗಾಗಿ ಜಪ ಹೇಳಿರುತ್ತಾರೆ. ಅದು ಸಂಖ್ಯಾತ್ಮಕ, ಭಾವಪೂರ್ಣ ಮತ್ತು ಏಕಾಗ್ರತೆಯಿಂದ ಆಗುವುದು ಮಹತ್ವದ್ದಾಗಿದೆ. ಹೀಗೆ ಮಾಡುವುದರಿಂದ ಸಾಧಕರಿಗೆ ಸಂತರ ನಾಮಜಪದ ಪೂರ್ಣ ಲಾಭವಾಗುತ್ತದೆ.
೧ ಆ. ಸಂತರ ನಾಮಜಪದಿಂದ ಸಾಧಕರ ‘ಸಂತಾಪ-ಕ್ರಿಯಾ ಮತ್ತು ಉನ್ಮಪಾತ-ಕ್ರಿಯಾ’ ಘಟಿಸುತ್ತಿರುತ್ತದೆ.
೧ ಆ ೧. ಸಂತಾಪ-ಕ್ರಿಯಾ ಎಂದರೆ ಏನು ? : ‘ಸ ಎಂದರೆ ‘ಈಶ್ವರಿ ಶಕ್ತಿ’ ಮತ್ತು ಪಾತ ಎಂದರೆ ದೀಕ್ಷಾ ಅಥವಾ ನೀಡುವುದು’ ಸಂತರು ನಿರ್ದಿಷ್ಟ್ಟ ನಾಮಜಪದ ಮಾಧ್ಯಮದಿಂದ ಸಾಧಕರಿಗೆ ಈಶ್ವರೀ ಶಕ್ತಿ ನೀಡುತ್ತಿರುತ್ತದೆ. ಅದಕ್ಕೆ ‘ಸಂತಾಪ-ಕ್ರಿಯಾ’ ಎಂದು ಹೇಳಲಾಗುತ್ತದೆ.
೧ ಆ ೧ ಅ. ‘ಸಂಪತಾ’ ಈ ಶಬ್ದವು ಹಂತ ಹಂತವಾಗಿ ಬದಲಾವಣೆ ಯಾಗುವ ಸ್ವರೂಪ ಮತ್ತು ಅರ್ಥ : ಪ್ರಾಚೀನ ಕಾಲದಲ್ಲಿ ಸರ್ವಪ್ರಥಮ ‘ಸಂಪಾತ’ ಈ ಶಬ್ದ ಪ್ರಚಲಿತವಿತ್ತು. ಅನಂತರ ಈ ಶಬ್ದದಲ್ಲಿ ಬದಲಾವಣೆಯಾಗಿ ‘ಸಂಪದಾ’ ಈ ಶಬ್ದ ರೂಢಿಯಾಗಿದೆ. ಸಂಪದಾ ಎಂದರೆ ಗುಣ. ನಂತರ ‘ಸಂಪದಾ’ ಈ ಶಬ್ದವು ರೂಪಾಂತರವಾಗಿ ‘ಸಂಪತ್ತಿ’ ಎಂದರೆ ‘ಅಭಿವೃದ್ಧಿ’ ಎಂದು ಆಗಿದೆ. ಭಾಷೆಯಲ್ಲಿ ‘ಕಾಲಖಂಡ’ ಮತ್ತು ಶಬ್ದದ ಉಪಯೋಗ ಅದಕ್ಕನುಸಾರ ಮೂಲಶಬ್ದದಲ್ಲಿ ಹಂತಹಂತವಾಗಿ ಬದಲಾವಣೆಯಾಗುತ್ತದೆ. ಕಾಲಚಕ್ರದಲ್ಲಿ ಕೆಲವು ಅಂತರದಲ್ಲಿ ಹಂತಹಂತವಾಗಿ ದೊಡ್ಡ ಬದಲಾವಣೆಯಾಗುತ್ತ ಹೋಗುತ್ತದೆ. ಅದಕ್ಕೆ ‘ಕಾಲಖಂಡ’ ಎಂದು ಹೇಳಲಾಗಿದೆ.
೧ ಆ ೨. ಉನ್ಮಪಾತ-ಕ್ರಿಯಾ : ಇದರ ಅರ್ಥ ‘ತೆಗೆಯುವುದು’ ಎಂದಿದೆ. ಸಂತರು ಸಾಧಕರಿಗೆ ನಾಮಜಪವನ್ನು ಹೇಳಿ ಅವರಲ್ಲಿನ ಅಶುದ್ಧಿಯನ್ನು ತೆಗೆಯುತ್ತಾರೆ. ಅದಕ್ಕೆ ‘ಉನ್ಮಪಾತ-ಕ್ರಿಯೆ’ ಎಂದು ಹೇಳಲಾಗಿದೆ.
೧ ಇ. ಸಂತರು ನೀಡಿದ ಜಪದಿಂದ ಸಾಧಕರ ‘ಉನ್ಮಯನ ಕ್ರಿಯೆ’ ಘಟಿಸುವುದು
೧ ಇ ೧. ‘ಉನ್ಮಯನ ಕ್ರಿಯೆ’ ಎಂದರೆ ಏನು ? : ಉನ್ಮ ಇದರ ಅರ್ಥ ‘ಜೋಡಿಸುವುದು’ ಮತ್ತು ಯನ ಈ ಶಬ್ದ ‘ಕಾರ್ಯವಾಗುವುದು’ ಎಂದಿದೆ. ಸಂತರು ಸಾಧಕರಿಗೆ ಹೇಳಿದ ನಾಮಜಪದಲ್ಲಿ ತುಂಬಾ ಈಶ್ವರೀ ಶಕ್ತಿ ಇರುತ್ತದೆ. ಅದರಿಂದ ‘ಸಾಧಕರು ಆ ನಾಮದಿಂದ ಈಶ್ವರನೊಂದಿಗೆ ತಕ್ಷಣ ಜೋಡಿಸಲ್ಪಡುತ್ತಾರೆ ಮತ್ತು ಅವನ ಸಾಧನೆಯಲ್ಲಿನ ಅಡಚಣೆ ವೇಗವಾಗಿ ಕಡಿಮೆಯಾಗಲು ಸಹಾಯವಾಗುತ್ತದೆ. ಈ ಪ್ರಕ್ರಿಯೆಗೆ ಸಾಧಕರ ‘ಉನ್ಮಯನ ಕ್ರಿಯಾ’ ಎಂದು ಹೇಳಲಾಗಿದೆ.
೧ ಈ. ಚಿತ್ತದಿಂದ ಕರ್ಮದೋಷ ಹೊರಗೆ ಬೀಳುವುದು : ಸಾಧಕರಿಗೆ ಕೆಲವು ಪ್ರಸಂಗ ನಡೆಯುತ್ತಿದ್ದಾಗ ಅಥವಾ ಹಿಂದಿನ ಜನ್ಮದಲ್ಲಿನ ತಪ್ಪಿನ ಕರ್ಮದಿಂದ ಕೆಲವು ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ಪೀಡೆ ಭೋಗಿಸಬೇಕಾಗುತ್ತದೆ. ಸಂತರು ಸಾಧಕರಿಗೆ ಸಾಧನೆಯಲ್ಲಿನ ನಿರ್ದಿಷ್ಟ ಅಡಚಣೆ ದೂರ ಮಾಡಲು ನಾಮಜಪ ಹೇಳುತ್ತಾರೆ. ಈ ನಾಮದಿಂದ ಆ ಅಡಚಣೆಯ ಮುಂದೆ ಸಾಧಕರ ಯಾವುದಾದರೂ ಕರ್ಮದೋಷ ಇದ್ದರೆ ಅದಕ್ಕೆ ಆಘಾತವಾಗುತ್ತದೆ. ಆಗ ಆ ಕರ್ಮದೋಷ ಪ್ರಕಟವಾಗಿ ರೌದ್ರರೂಪ ಧಾರಣೆ ಮಾಡುತ್ತದೆ. ಅದರಿಂದ ಸಾಧಕರಿಗೆ ಜಪ ಮಾಡುತ್ತಿರುವಾಗ ವಿವಿಧ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಯಾಗುತ್ತದೆ. ಸಾಧಕರು ಪಟ್ಟುಹಿಡಿದು ನಾಮಜಪ ಮಾಡುತ್ತಿದ್ದರೆ ಆ ಕರ್ಮದೋಷದ ವೇಗ ನಿಧಾನವಾಗಿ ಕಡಿಮೆ ಯಾಗುತ್ತದೆ. ಪರಿಣಾಮ ಸಾಧಕರಿಗೆ ಸಾಧನೆ ಮಾಡುವುದು ಸುಲಭವಾಗುತ್ತದೆ.
೨. ಸಂತರು ಸಾಧಕರಿಗೆ ಹೇಳಿದ ನಾಮಜಪದಲ್ಲಿ ಬರುವ ಅಡಚಣೆ
೨ ಅ. ಮನಸ್ಸಿನ ಸಂಘರ್ಷದಲ್ಲಿ ಹೆಚ್ಚಾಗುವುದು : ನಾಮಜಪದಲ್ಲಿ ಮೂಲದಲ್ಲಿಯೇ ಈಶ್ವರೀ ಶಕ್ತಿ ಇರುತ್ತದೆ. ಸಂತರು ಸಾಧಕರಿಗೆ ಹೇಳಿದರ ನಾಮದಲ್ಲಿ ಸಂತರ ಈಶ್ವರೀ ಶಕ್ತಿಯೂ ಒಗ್ಗೂಡಿರು ತ್ತದೆ. ಅದರಿಂದ ಅದರಿಂದ ಯಾವಾಗ ಸಾಧಕರು ಸಂತರು ಹೇಳಿದ ನಾಮಜಪವನ್ನು ಮಾಡುತ್ತಾರೋ ಆಗ ಅವನ ಮನಸ್ಸು ಶುದ್ಧವಾಗಲು ಬೇಗನೆ ಪ್ರಾರಂಭವಾಗುತ್ತದೆ. ಅದರಿಂದ ಆ ಸಾಧಕನ ಚಿತ್ತದಲ್ಲಿನ ಸ್ವಭಾವದೋಷ ಮತ್ತು ಅಹಂಯುಕ್ತ ವಿಚಾರಗಳು ಜಾಗೃತಾವಸ್ಥೆಗೆ ಬಂದು ಹೊರಗೆ ಬೀಳುತ್ತದೆ. ಆಗ ನಾಮಜಪ ಮಾಡುತ್ತಿರುವಾಗ ಸಾಧಕರ ಮನಸ್ಸಿನ ಸಂಘರ್ಷ ಹೆಚ್ಚಾಗುತ್ತದೆ. ಅದರಿಂದ ಸಾಧಕರ ಮನಸ್ಸಿನ ಶುದ್ಧಿ ಪ್ರಕ್ರಿಯೆ ಘಟಿಸುತ್ತಿರುತ್ತದೆ.
೨ ಆ. ಕೆಟ್ಟ ಶಕ್ತಿಯೊಂದಿಗೆ ಸೂಕ್ಷ್ಮದಿಂದ ಆಕ್ರಮಣ ಮಾಡುವುದು : ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಸಂತರು ಹೇಳಿದ ನಾಮಜಪವನ್ನು ಆರಂಭಿಸುವಾಗ ಕೆಟ್ಟ ಶಕ್ತಿ ಅವನ ನಾಮಜಪದಲ್ಲಿ ಅಡಚಣೆ ನಿರ್ಮಿಸುತ್ತದೆ ಉದಾ. : ಮನಸ್ಸು ಅಸ್ಥಿರವಾಗುವುದು, ಆಕಸ್ಮಿಕವಾಗಿ ಭಯವಾಗುವುದು, ಕಾರಣವಿಲ್ಲದೆ ಕೋಪ ಬರುವುದು, ಚಿತ್ತದಲ್ಲಿನ ಎಲ್ಲಕ್ಕಿಂತ ದುಃಖದಾಯಕ ಅಥವಾ ಕ್ಲೇಶದಾಯಕ ಘಟನೆ ಜಾಗೃತವಾಗುವುದು, ಮನಸ್ಸು ವಿಚಲಿತ ವಾಗುವುದು, ದೃಶ್ಯ ಕಾಣಿಸುವುದು, ಶಾರೀರಿಕ ವೇದನೆ ಆಗಲು ಆರಂಭವಾಗುವುದು, ಮಂಪರು ಬರುವುದು ಮತ್ತು ಏನೂ ಹೊಳೆಯದಿರುವುದು ಇತ್ಯಾದಿ.
೩. ಸಾಧಕರು ಸಂತರು ಹೇಳಿದ ನಾಮಜಪ ಪೂರ್ಣ ಮಾಡಿದರೆ ತನ್ನ ಶಕ್ತಿ ಕಡಿಮೆಯಾಗುವುದು ಎಂದು ಕೆಟ್ಟ ಶಕ್ತಿಗೆ ತಿಳಿದಿರುತ್ತದೆ. ಅದರಿಂದ ಕೆಟ್ಟ ಶಕ್ತಿ ಸಾಧಕರ ಜಪದಲ್ಲಿ ವಿಘ್ನ ತರಲು ತುಂಬಾ ಪ್ರಯತ್ನಿಸುತ್ತಿರುತ್ತದೆ. ಸಂತರು ನೀಡಿದ ವಿಶಿಷ್ಟ ಜಪ ಪರಿಣಾಮಕಾರಿಯಾಗದಿದ್ದರೆ ಅದನ್ನು ಹೆಚ್ಚು ಸಮಯ ಮಾಡಿದರೆ ಸಾಧಕರಿಗೆ ಸಂತರ ಮತ್ತು ಈಶ್ವರನಿಂದ ಆಶೀರ್ವಾದ ಪ್ರಾಪ್ತವಾಗುತ್ತದೆ.
ಮೇಲಿನ ಎಲ್ಲ ಕಾರಣಗಳಿಂದ ಸಂತರು ನೀಡಿದ ನಿರ್ದಿಷ್ಟ ನಾಮಜಪ ಪೂರ್ಣ ಮಾಡುತ್ತಿರುವಾಗ ಸಾಧಕರಿಗೆ ಅಸಂಖ್ಯಾತ ಅಡಚಣೆ ಬರುತ್ತದೆ. ಅದರಿಂದ ಸಂತರು ನಿರ್ದಿಷ್ಟ ಅವಧಿಗಾಗಿ ಹೇಳಿದ ಜಪ ಪೂರ್ಣವಾದ ಮೇಲೆ ಸಾಧಕರು ಇನ್ನು ಸ್ವಲ್ಪ ಸಮಯ ಜಪ ಮಾಡಿದರೆ ಯಾವುದೇ ಹಾನಿಯಾಗುವುದಿಲ್ಲ; ತದ್ವಿರುದ್ಧ ಅವನಿಗೆ ಆಧ್ಯಾತ್ಮಿಕ ಲಾಭವೇ ಆಗುತ್ತದೆ. ಹಾಗೆಯೇ ಅನೇಕ ಅಡಚಣೆಯಿಂದ ಪಾರಾಗಿ ಸಾಧಕರು ಯಥಾಶಕ್ತಿ ಜಪ ಪೂರ್ಣ ಮಾಡಿದರೆ ಸಂತರ ಮತ್ತು ಈಶ್ವರನ ಹೀಗೆ ಇಬ್ಬರ ಆಶೀರ್ವಾದವು ಪ್ರಾಪ್ತವಾಗುತ್ತದೆ.
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ) ಸನಾತನ ಆಶ್ರಮ, ರಾಮನಾಥಿ, ಗೋವಾ (೨೮.೭.೨೦೨೪)