ದಕ್ಷಿಣಕನ್ನಡ ಜಿಲ್ಲೆಯ ಮಸೀದಿಯಲ್ಲಿ ‘ಜಯ ಶ್ರೀರಾಮ’ ಎಂದು ಘೋಷಣೆ ನೀಡಿದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ದೃಷ್ಟಿಕೋನ !

೧. ಮಸೀದಿಯಲ್ಲಿ ‘ಜಯ ಶ್ರೀರಾಮ’ ಎಂದು ಘೋಷಣೆ ನೀಡಿದ್ದಕ್ಕಾಗಿ ಇಬ್ಬರು ಹಿಂದೂ ಯುವಕರ ಮೇಲೆ ಅಪರಾಧ ದಾಖಲು

‘ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಇಬ್ಬರು ಹಿಂದೂ ಯುವಕರು ಒಂದು ಮಸೀದಿಯಲ್ಲಿ ‘ಜಯ ಶ್ರೀರಾಮ’ ಎಂದು ಘೋಷಣೆ ನೀಡಿದರು; ಈ ಪ್ರಕರಣದಲ್ಲಿ ಪೊಲೀಸರು ಅವರ ವಿರುದ್ಧ ಕ್ರಿಮಿನಲ್‌ ಅಪರಾಧವನ್ನು ದಾಖಲಿಸಿದರು. ಈ ಅಪರಾಧವನ್ನು ರದ್ದುಪಡಿಸಬೇಕೆಂದು ಅವರು ಕ್ರಿಮಿನಲ್‌ ಪ್ರಕ್ರಿಯ ಸಂಹಿತೆಯ ಕಲಮ್‌ ೪೮೨ ಅಂತರ್ಗತ ಕರ್ನಾಟಕ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದರು. ಈ ಯುವಕರು ಮಸೀದಿಯೊಳಗೆ ನುಗ್ಗಿ ಅತಿಕ್ರಮಣ ಮಾಡಿದಂತಹ ಆರೋಪವಿರಲಿಲ್ಲ, ಕೇವಲ ಬೇರೆಯವರ ಪ್ರಾರ್ಥನಾಸ್ಥಳದಲ್ಲಿ ‘ಜಯ ಶ್ರೀರಾಮ’ ಎಂದು ಘೋಷಣೆ ನೀಡಿದರು, ಎಂಬ ಆರೋಪವಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ಅರ್ಜಿದಾರರ ಮತ್ತು ಪೊಲೀಸರ ಹೇಳಿಕೆಯನ್ನು ಆಲಿಸಿತು ಹಾಗೂ ‘ಜಯ ಶ್ರೀರಾಮ’ ಎಂದು ಘೋಷಣೆ ನೀಡುವುದು ಅಪರಾಧವಾಗಲು ಸಾಧ್ಯವಿಲ್ಲ’, ಎಂದು ಸ್ಪಷ್ಟಪಡಿಸಿತು.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೨. ಸರ್ವೋಚ್ಚ ನ್ಯಾಯಾಲಯದಿಂದ ಕರ್ನಾಟಕ ಸರಕಾರಕ್ಕೆ ಉತ್ತರ ನೀಡಬೇಕೆಂದು ಸೂಚನೆ

ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ಣಯದ ವಿರುದ್ಧ ಮತಾಂಧರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದರು. ಇಲ್ಲಿ ನ್ಯಾಯಾಧೀಶರು ‘ಹಿಂದೂ ಯುವಕರು ‘ಜಯ ಶ್ರೀರಾಮ’ ಎಂದು ಹೇಳಿದರೆ ಅಪರಾಧ ಹೇಗಾಗುತ್ತದೆ ?’, ಎಂದು ಮತಾಂಧರಿಗೆ ಪ್ರಶ್ನಿಸಿದರು. ಆಗ ಮತಾಂಧರು ತರ್ಕ ಮಾಡುತ್ತಾ, ‘ಜಯ ಶ್ರೀರಾಮ’ ಎಂದು ಮಸೀದಿಯೊಳಗೆ ಘೋಷಣೆ ನೀಡಿರುವುದರಿಂದ ಸಾಮಾಜಿಕ ಶಾಂತಿ ಭಂಗವಾಗುತ್ತದೆ ಹಾಗೂ ಒಂದು ಸಮಾಜದ ಶ್ರದ್ಧೆ ಹಾಗೂ ಭಾವನೆಗೆ ಸವಾಲೊಡ್ಡಿದಂತಾಗುತ್ತದೆ. ಆದ್ದರಿಂದ ಇದು ಅಪರಾಧವಾಗುತ್ತದೆ.’ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕ ಸರಕಾರದಿಂದ ಉತ್ತರ ಕೇಳಿದೆ. ‘ಹಿಂದೂ ಯುವಕರ ಮೇಲೆ ‘ಮಸೀದಿಯೊಳಗೆ ಪ್ರವೇಶ ಮಾಡಿ ಅತಿಕ್ರಮಣ ಮಾಡಿದರು’, ಎಂದು ಅಪರಾಧ ದಾಖಲಾಗುತ್ತಿದ್ದರೆ ಅದು ಬೇರೆ ವಿಷಯವಾಗುತ್ತಿತ್ತು; ಆದರೆ ಕೇವಲ ‘ಜಯ ಶ್ರೀರಾಮ’ ಎಂದು ಘೋಷಣೆ ನೀಡಿರುವುದರಿಂದ ಅಪರಾಧ ವಾಗುವುದಿಲ್ಲ’, ಎನ್ನುವ ಕರ್ನಾಟಕ ಉಚ್ಚ ನ್ಯಾಯಾಲಯದ ಅಭಿಪ್ರಾಯ ಯೋಗ್ಯವಾಗಿದೆಯೆಂದು ಅನಿಸುತ್ತದೆ. ಈ ಪ್ರಕರಣ ದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿಲುವು ಹೇಗಿರುತ್ತದೆ, ಎಂಬುದನ್ನು ಕಾದು ನೋಡಬೇಕಾಗಿದೆ.’ (೨೦.೧೨.೨೦೨೪)

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ