ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಫೇರಿ ಮೂಲಕ ಕುಂಭಮೇಳದಲ್ಲಿ ಹಿಂದೂ ರಾಷ್ಟ್ರದ ಘೋಷಣೆ !

ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ್ – ಮೌನಿ ಅಮವಾಸ್ಯೆಯ ಅಮೃತಸ್ನಾನದ ಸಂದರ್ಭದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ, ಜನವರಿ 29 ರಂದು, ಹಿಂದೂ-ರಾಷ್ಟ್ರ ಜಾಗೃತಿ ಫೇರಿಯನ್ನು ಮಾಡಿ ಕುಂಭಮೇಳದಲ್ಲಿ ಹಿಂದೂ ರಾಷ್ಟ್ರದ ಘೋಷಣೆ ಕೂಗಿದರು. ಸೆಕ್ಟರ್ 19 ರಲ್ಲಿನ ಮೋರಿ ಮಾರ್ಗದ ಗಂಗಾ ನದಿಯ ದಡದಿಂದ ಮೋರಿ-ಮುಕ್ತಿ ಚೌಕದ ವರೆಗೆ ಫೇರಿ ನಡೆಸಲಾಯಿತು. ‘ಭಾರತ್ ಹಿಂದೂ ರಾಷ್ಟ್ರ ಬನೇಗಾ, ಜೈ ಶ್ರೀ ರಾಮ್, ಜೈ ಶ್ರೀ ರಾಮ್’, ‘ಹಮ್ ಭಾರತ್ ಭವ್ಯ ಬನಾಯೇಂಗೆ, ಹಮ್ ಹಿಂದೂ ರಾಷ್ಟ್ರ ಬನಾಯೇಂಗೆ’ ಎಂಬ ಘೋಷಣೆಗಳನ್ನು ನೀಡಲಾಯಿತು. ಈ ಫೇರಿಯಲ್ಲಿ ಕುಂಭಮೇಳಕ್ಕೆ ಆಗಮಿಸಿದ್ದ ಸನಾತನ ಸಂಸ್ಥೆಯ ಸಾಧಕರು ಮತ್ತು ಕುಂಭ ಮೇಳಕ್ಕಾಗಿ ಬಂದಿದ್ದ ವಿವಿಧ ಸಂಘಟನೆಗಳ ಧರ್ಮಾಭಿಮಾನಿ ಹಿಂದೂಗಳೂ ಸಹ ಭಾಗಿಯಾಗಿದ್ದರು. ಫೇರಿಯಲ್ಲಿ ಘೋಷಣೆಗಳನ್ನು ಕೂಗುತ್ತಿರುವಾಗ ಅಕ್ಕ ಪಕ್ಕದಲ್ಲಿನ ಭಕ್ತರೂ ಹಿಂದೂ ರಾಷ್ಟ್ರದ ಜೈಕಾರ ಮಾಡಿದರು.

ಈ ಸಂದರ್ಭದಲ್ಲಿ ‘ಲಾನಾ ಹೋಗಾ, ಲಾನಾ ಹೋಗಾ, ಹಿಂದೂ ರಾಷ್ಟ್ರ ಲಾನಾ ಹೋಗಾ’, ‘ಸಭಿ ಸಂತೋಂಕಿ ಯಹೀ ಪುಕಾರ್, ಹಿಂದೂ ರಾಷ್ಟ್ರ ಹೋ ಸಾಕಾರ್’ ಎಂಬ ಘೋಷಣೆಗಳನ್ನು ಸಹ ನೀಡಲಾಯಿತು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸಮನ್ವಯಕ ಶ್ರೀ. ಆನಂದ ಜಾಖೋಟಿಯಾ ಗಂಗಾ ಮಾತೆಯ ಪಾವಿತ್ರ್ಯತೆ ಕಾಪಾಡುವುದು ಹೇಗೆ, ಗಂಗಾ ಸ್ನಾನದ ಆಧ್ಯಾತ್ಮಿಕ ಲಾಭವನ್ನು ಹೇಗೆ ಪಡೆಯುವುದು? ಈ ವಿಷಯದ ಬಗ್ಗೆ ಮಾಹಿತಿ ನೀಡಿದರು. ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದ ಸಂಘಟಕ ಶ್ರೀ. ಸುನಿಲ್ ಘನವಟ ಅವರು ಈ ಸಂಧರ್ಭದಲ್ಲಿ ಮೆರವಣಿಗೆ ತೆಗೆಯವ ಹಿಂದಿನ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಿದರು.