ಹಿಂದೂ ರಾಷ್ಟ್ರದ ಬೇಡಿಕೆ ಮಾಡುವವರಲ್ಲಿ ಸನಾತನ ಸಂಸ್ಥೆ ಅಗ್ರಸ್ಥಾನದಲ್ಲಿ ! – ಸತೀಶ ಕುಮಾರ, ಗೋ ರಕ್ಷಾ ದಳ

ಶ್ರೀ. ಸತೀಶ ಕುಮಾರ (ಎಡದಿಂದ ಮೂರನೆಯವರು) ಅವರಿಗೆ ನಿಯತಕಾಲಿಕೆ ‘ಸನಾತನ ಪ್ರಭಾತ’ ಪತ್ರಿಕೆಯನ್ನು ಉಡುಗೊರೆಯಾಗಿ ನೀಡುತ್ತಿರುವಾಗ, ಶ್ರೀ ಮಹೇಶ ಪಾಠಕ (ಎಡದಿಂದ ಎರಡನೇಯವರು), ಜೊತೆಯಲ್ಲಿ ಶ್ರೀ. ಸತೀಶ ಕುಮಾರ ಅವರ ಸಹೋದ್ಯೋಗಿ

ಪ್ರಯಾಗರಾಜ, ಜನವರಿ 30 (ಸುದ್ದಿ.) – ಸನಾತನ ಸಂಸ್ಥೆಯೊಂದಿಗೆ ನನಗೆ 14-15 ವರ್ಷಗಳಿಂದ ಪರಿಚಯವಿದೆ. ಯಾವಾಗ ದೇಶವಾಸಿಗಳ ಮನಸ್ಸಿನಲ್ಲಿಯೂ ಹಿಂದೂ ರಾಷ್ಟ್ರದ ಬಗ್ಗೆ ಯಾವುದೇ ವಿಚಾರವಿಲ್ಲದಿರುವಾಗ, ಭಾರತದಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಮಂಡಿಸುತ್ತಿರುವವರಲ್ಲಿ ಸನಾತನ ಸಂಸ್ಥೆ ಅಗ್ರಸ್ಥಾನದಲ್ಲಿತ್ತು ಎಂದು ನಾನು ಹೇಳಲು ಬಯಸುತ್ತೇನೆ. ಇಂದು, ಅದೇ ಬೇಡಿಕೆ ಪ್ರತಿಯೊಬ್ಬ ಸನಾತನ ಹಿಂದೂವಿನ ಮುಖದಲ್ಲಿದೆ. ಪ್ರತಿಯೊಬ್ಬ ಜಾಗರೂಕ ಹಿಂದೂವಿಗೆ ‘ಹಿಂದೂ ರಾಷ್ಟ್ರ ಆಗಬೇಕು’ ಎಂದು ಅನಿಸುತ್ತಿದೆ.

ಸಂತರು-ಮಹಂತರು ಕೂಡ ಈಗ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಗೋ ರಕ್ಷಾ ದಳವು ಹಿಂದೂ ರಾಷ್ಟ್ರವಾದ ನಂತರ ದೇಶದಲ್ಲಿ ಗೋಹತ್ಯೆ ಖಂಡಿತವಾಗಿಯೂ ನಿಲ್ಲುತ್ತದೆ ಎಂದು ದೃಢವಾಗಿ ನಂಬುತ್ತದೆ. ಎಲ್ಲಾ ಹಿಂದೂ ಬಾಂಧವರಿಗೆ ನಾನು ಸೆಕ್ಟರ್ 9 ರಲ್ಲಿರುವ ಸನಾತನ ಸಂಸ್ಥೆಯ ಪ್ರದರ್ಶನ ಕಕ್ಷೆಗೆ ಖಂಡಿತವಾಗಿಯೂ ಭೇಟಿ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಈ ಪ್ರದರ್ಶನವನ್ನು ನೋಡಿದ ನಂತರ ಒಬ್ಬ ಸನಾತನಿ ಹಿಂದೂ ಹೇಗೆ ಜೀವಿಸಬೇಕು? ಎನ್ನುವ ಮಾಹಿತಿ ಎಲ್ಲರಿಗೂ ಸಿಗುತ್ತದೆ ಎಂದು ಗೋ ರಕ್ಷಾ ದಳದ ಶ್ರೀ. ಸತೀಶ ಕುಮಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸನಾತನ ಸಂಸ್ಥೆಯ ಪ್ರದರ್ಶನ ಕಕ್ಷೆಗೆ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಸನಾತನ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಸನಾತನ ಸಂಸ್ಥೆಯ ವತಿಯಿಂದ ಶ್ರೀ. ಮಹೇಶ ಪಾಠಕ ಅವರು ಶ್ರೀ. ಸತೀಶ ಕುಮಾರ ಮತ್ತು ಅವರ ಸಹೋದ್ಯೋಗಿಗಳಿಗೆ ‘ಸನಾತನ ಪ್ರಭಾತ’ ದಿನಪತ್ರಿಕೆಯನ್ನು ಉಡುಗೊರೆಯಾಗಿ ನೀಡಿದರು.