ಮಹರ್ಷಿ ಆಧ್ಯಾತ್ಮಿಕ ವಿಶ್ವವಿದ್ಯಾಲಯದೊಂದಿಗೆ ಕಾರ್ಯ ಮಾಡುವೆವು ! – ಆರೋಹ ಶ್ರೀವಾಸ್ತವ, ವೈದಿಕ ಗಡಿಯಾರದ ನಿರ್ಮಾಪಕ

ಪ್ರಯಾಗರಾಜ ಮಹಾಕುಂಭಮೇಳ 2025

ಪ್ರಯಾಗರಾಜ, ಜನವರಿ 30 (ಸುದ್ದಿ) – ಉಜ್ಜೈನಿಯಲ್ಲಿ ಪ್ರಧಾನಿ ಮೋದಿಯವರ ಹಸ್ತದಿಂದ ಉದ್ಘಾಟನೆಯಾಗಿರುವ ವೈದಿಕ ಗಡಿಯಾರದ ಪ್ರಚಾರಕ್ಕಾಗಿ ಶ್ರೀ. ಆರೋಹ ಶ್ರೀವಾಸ್ತವ ಅವರು ಕುಂಭಮೇಳಕ್ಕೆ ಬಂದಿದ್ದರು. ಅವರು ಮಹರ್ಷಿ ಅಧ್ಯಾತ್ಮಿಕ ವಿಶ್ವವಿದ್ಯಾಲಯದ ಪ್ರದರ್ಶನ ಕಕ್ಷೆಗೆ ಭೇಟಿ ನೀಡಿದಾಗ, ಅವರಿಗೆ ಕಕ್ಷೆಯಲ್ಲಿ ಸ್ಥಾಪಿಸಲಾದ ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡು ನಡೆಸಲಾದ ಪ್ರಯೋಗಗಳ ಮಾಹಿತಿ ಬಹಳ ಇಷ್ಟವಾಯಿತು. ನಾವು ವೈದಿಕ ಗಡಿಯಾರದ ಸಂದರ್ಭದಲ್ಲಿ ಮತ್ತಷ್ಟು ಮುಂದುವರಿಯಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದೊಂದಿಗೆ ಕಾರ್ಯ ಮಾಡುತ್ತೇವೆ ಎಂದು ಅವರು ಒತ್ತಿ ಹೇಳಿದರು.

ಆರೋಹ ಶ್ರೀವಾಸ್ತವ ಯಾರು?

ಆರೋಹ ಶ್ರೀವಾಸ್ತವ ಅವರು ವೈದಿಕ ಗಡಿಯಾರವನ್ನು ನಿರ್ಮಿಸಿದ್ದಾರೆ. ಇದು ಪ್ರಸ್ತುತ ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಏಕೈಕ ವೈದಿಕ ಗಡಿಯಾರವಾಗಿದೆ. ಈ ಗಡಿಯಾರವು ವೇದಗಳ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಹಿಂದೂಗಳ ಶುಭ ಮುಹೂರ್ತ ಮುಂತಾದವುಗಳು ಕಾಣಿಸುತ್ತದೆ. ಈ ಗಡಿಯಾರವನ್ನು ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಸ್ಥಾಪಿಸಲಾಗಿದೆ. ಈ ಗಡಿಯಾರವನ್ನು ರಚಿಸಲು, ಶ್ರೀವಾಸ್ತವ ಅನೇಕ ಹಿಂದೂ ಧರ್ಮಗ್ರಂಥಗಳನ್ನು ಮತ್ತು ಜ್ಯೋತಿಷ್ಯಶಾಸ್ತ್ರಗಳನ್ನು ಕೂಡ ಅಧ್ಯಯನ ಮಾಡಿದ್ದಾರೆ.