

ಯಾಗರಾಜ, ಜನವರಿ ೨೯ (ಸುದ್ಧಿ) – ಮಹಾಕುಂಭ ಕ್ಷೇತ್ರದ ಕೈಲಾಸಪುರಿ ಭಾರದ್ವಾಜ್ ಮಾರ್ಗ ಚೌಕ್ ಬಳಿಯ ಸೆಕ್ಟರ್ ೬ ರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ’ಹಿಂದೂ ರಾಷ್ಟ್ರ’ ಪ್ರದರ್ಶನವನ್ನು ಸ್ಥಾಪಿಸಲಾಗಿದೆ. ಇಲ್ಲಿ ಅಪಾರಪ್ರಮಾಣದಲ್ಲಿ ಭಕ್ತರ ದಟ್ಟಣೆ ಆಗುತ್ತಿದೆ. ಅನೇಕ ಭಕ್ತರು ಕಕ್ಷೆಯಲ್ಲಿ ಫಲಕಗಳ ಮಾಹಿತಿಗಳನ್ನು ಮಾಡುತ್ತಿದ್ದಾರೆ, ಪ್ರದರ್ಶನದ ಚಿತ್ರಗಳು ಮತ್ತು ವೀಡಿಯೊಗಳನ್ನು ಮಾಡುತ್ತಿದ್ದಾರೆ. ಭಕ್ತರು ‘ಹಿಂದೂ ರಾಷ್ಟ್ರವಾಗಬೇಕು’, ‘ಹಿಂದೂಗಳಿಗೆ ಹಿಂದೂ ರಾಷ್ಟ್ರವಾಗುವುದು ಅಗತ್ಯವಿದೆ’ ಎಂಬ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರು.


ಕ್ಷಣಚಿತ್ರಗಳು
೧. ಕಕ್ಷೆಗೆ ಭೇಟಿ ನೀಡುವ ಭಕ್ತರಲ್ಲಿ ಮಹಿಳೆಯರ ಸಂಖ್ಯೆ ಗಮನರ್ಹವಾಗಿದೆ.
೨. ಕಕ್ಷೆಯಲ್ಲಿದ್ದ ಮರಾಠಿಯ ಸಾತ್ತ್ವಿಕ ಲಿಪಿಯ ವಹಿಯನ್ನು ನೋಡಿದ ಒಬ್ಬ ಸಣ್ಣ ಹುಡುಗ ವಹಿಯಲ್ಲಿ ಅಕ್ಷರಗಳನ್ನು ಬರೆಯಲು ಆರಂಭಿಸಿದ.