ಭಾಜಪದ ಪದಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಗೋವಾದ ಆಧ್ಯಾತ್ಮಿಕ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ !

ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನದ ಪರಿಣಾಮ !

ಪ್ರದರ್ಶನ ಸಭಾಂಗಣದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರದ ಬಲಭಾಗದಲ್ಲಿ ಶ್ರೀ. ರವಿಕುಮಾರ್ ಮೆಹ್ತಾ, ಎಡದಿಂದ ಶ್ರೀ. ರಾಕೇಶ ಶರ್ಮಾ ಮತ್ತು ಶ್ರೀ. ಕೃಷ್ಣ ಮಾಂಡವಾ

ಪ್ರಯಾಗರಾಜ್ (ಉತ್ತರ ಪ್ರದೇಶ), ಜನವರಿ 29 (ಸುದ್ದಿ) – ಹಿಮಾಚಲ ಪ್ರದೇಶದ ಶಿಮ್ಲಾದ ಭಾಜಪ ಪದಾಧಿಕಾರಿ ಶ್ರೀ. ರವಿಕುಮಾರ್ ಮೆಹ್ತಾ ಅವರು ತಮ್ಮ ಹೈಕೋರ್ಟ್ ನ್ಯಾಯಾಧೀಶ ಸ್ನೇಹಿತ ರಾಕೇಶ್ ಶರ್ಮಾ ಅವರೊಂದಿಗೆ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನಕ್ಕೆ ಭೇಟಿ ನೀಡಿದರು. ಅವರು ಪ್ರದರ್ಶನವನ್ನು ನೋಡಿದ ನಂತರ, ಯಾವುದೋ ಅಜ್ಞಾತ ಶಕ್ತಿ ತಮ್ಮನ್ನು ಪ್ರದರ್ಶನ ಸ್ಥಳಕ್ಕೆ ಎಳೆದುತಂದಿದೆ. ಪ್ರದರ್ಶನ ಸಭಾಂಗಣದಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಪ್ರತಿಮೆಗೆ ಅವರು ಭಾವಪೂರ್ಣ ನಮಸ್ಕಾರ ಮಾಡಿದರು. ಶ್ರೀ. ಮೆಹ್ತಾ ಸ್ವತಃ ಒಂದು ಶಾಲೆಯನ್ನು ನಡೆಸುತ್ತಾರೆ. ಅವರು 70 ರಿಂದ 75 ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಗುಂಪಿನೊಂದಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ ಗೋವಾಕ್ಕೆ ಬರಲಿದ್ದಾರೆ. “ನಾನು ವಿದ್ಯಾರ್ಥಿಗಳನ್ನು ಗೋವಾದಲ್ಲಿರುವ ನಿಮ್ಮ ಆಧ್ಯಾತ್ಮಿಕ ಸಂಶೋಧನಾ ಕೇಂದ್ರಕ್ಕೆ ಕೆಲವು ಗಂಟೆಗಳ ಕಾಲ ಕರೆತರುತ್ತೇನೆ, ಇದರಿಂದ ಅವರು ಹೊಸದನ್ನು ಕಲಿಯಬಹುದು” ಎಂದು ಹೇಳಿದರು. ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮಕ್ಕಳಿಗೆ ಈ ಸಾಧನೆಯ ಬಗ್ಗೆ ತಿಳಿಸಬೇಕೆಂದು’, ಅವರು ವಿನಂತಿಸಿದರು.