ಛತ್ತೀಸಗಢದಲ್ಲಿ ಹಿಂದೂಗಳ ಬಲವಂತದ ಮತಾಂತರ: ಇಬ್ಬರು ಪಾದ್ರಿಗಳು ಸೇರಿದಂತೆ 7 ಕ್ರೈಸ್ತರ ಬಂಧನ !

ರಾಯಪುರ – ಛತ್ತೀಸಗಢದ ಎರಡು ನಗರಗಳಲ್ಲಿ ಹಿಂದೂಗಳನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿದ್ದ ಗುಂಪನ್ನು ಹಿಂದೂ ಸಂಘಟನೆಗಳು ಬಹಿರಂಗಪಡಿಸಿವೆ. ರಾಜಧಾನಿ ರಾಯಪುರ ಮತ್ತು ಬಲರಾಮಪುರದಲ್ಲಿ ಪ್ರಾರ್ಥನೆಯ ನೆಪದಲ್ಲಿ ಪ್ರಾರಂಭವಾಗಿದ್ದ ಕ್ರೈಸ್ತ ಮತಾಂತರದ ಸಂಚನ್ನು ಹಿಂದೂ ಸಂಘಟನೆಗಳು ವಿಫಲಗೊಳಿಸಿದವು. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ಪಾದ್ರಿಗಳು ಸೇರಿದಂತೆ 7 ಕ್ರೈಸ್ತರನ್ನು ಬಂಧಿಸಿದ್ದಾರೆ. (ವಿದೇಶಿ ನಿಧಿಯ ಸಹಾಯದಿಂದ ಕ್ರೈಸ್ತ ಮಿಷನರಿಗಳು ಭಾರತದಲ್ಲಿ ಬಡ ಹಿಂದೂಗಳಿಗೆ ವಿವಿಧ ಆಮಿಷಗಳನ್ನು ಒಡ್ಡಿ ಮತಾಂತರಿಸುತ್ತಿರುವ ಅನೇಕ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಿವೆ; ಆದರೆ ಇದನ್ನು ತಡೆಯಲು ಸರಕಾರವು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿರುವುದು ಕಂಡು ಬರುತ್ತಿಲ್ಲ. ಇದನ್ನು ತಡೆಯಲು ಸರಕಾರವು ದೇಶದಲ್ಲಿ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರುವುದು ಅವಶ್ಯಕವಾಗಿದೆ ! – ಸಂಪಾದಕರು)

1. ರಾಯಪುರದ ಮಿತಾನ ವಿಹಾರ ಕಾಲೋನಿಯಲ್ಲಿ ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂದು ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳಿಗೆ ಮಾಹಿತಿ ಬಂದಿತ್ತು. ಈ ಬಗ್ಗೆ ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

2. ರಾಯಪುರ ಉಪ ಪೊಲೀಸ್ ಆಯುಕ್ತ ಲಖನ ಪಟೇಲ್ ಅವರು ಪೊಲೀಸ ತಂಡಗಳೊಂದಿಗೆ ಸ್ಥಳಕ್ಕೆ ತಲುಪಿದರು. ಅಲ್ಲಿ, ಮತಾಂತರಕ್ಕಾಗಿ ಕರೆತರಲಾದ 10 ಜನರನ್ನು ಪೊಲೀಸರು ಹೊರ ತೆಗೆದರು. ಹಾಗೆಯೇ ಪೊಲೀಸರು ಮತಾಂತರಗೊಳಿಸುತ್ತಿದ್ದ ಗುಂಪಿನ ಕೆಲವು ಜನರನ್ನು ವಶಕ್ಕೆ ಪಡೆದರು.

3. ಪೊಲೀಸರು ಛತ್ತೀಸಗಢ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

4. ಹಿಂದೂ ಸಂಘಟನೆಗಳು, ಈ ಪ್ರದೇಶದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಇಲ್ಲಿ ಪ್ರಾರ್ಥನೆಯ ಹೆಸರಿನಲ್ಲಿ ಪಾದ್ರಿಗಳು ಬಡ ಮತ್ತು ದುರ್ಬಲ ಹಿಂದೂಗಳಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

5. ಬಲರಾಮಪುರ ಜಿಲ್ಲೆಯ ಸರೂತ ಗ್ರಾಮದಲ್ಲಿ ಮತಾಂತರದ ಇದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯರು ಒಬ್ಬ ಪಾದ್ರಿ ಮತ್ತು ಅವನ ಸಹಚರರು ಬಡ ಹಿಂದೂಗಳಿಗೆ ಹಣದ ಆಮಿಷ ಒಡ್ಡಿ ಬಲವಂತವಾಗಿ ಮತಾಂತರ ಮಾಡುತ್ತಿದ್ದರು. ಈ ವಿಷಯದ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದರು.

6. ಪೊಲೀಸರು ಮತಾಂತರ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿ, ಒಬ್ಬ ಪಾದ್ರಿ ಸೇರಿದಂತೆ 4 ಜನರನ್ನು ಬಂಧಿಸಿದರು. ಪೊಲೀಸರು ಅವರಿಂದ ದೊಡ್ಡ ಪ್ರಮಾಣದಲ್ಲಿ ಬೈಬಲ್‌ಗಳು ಮತ್ತು ಕ್ರೈಸ್ತ ಧರ್ಮದ ಪ್ರಚಾರ ಸಾಹಿತ್ಯವನ್ನು ವಶಪಡಿಸಿಕೊಂಡರು.

7. ಎರಡೂ ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎರಡು ಘಟನೆಗಳಿಂದಾಗಿ ಛತ್ತೀಸಗಢದಲ್ಲಿ ಮತಾಂತರದ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಮತಾಂತರಗಳು ನಡೆದಿವೆ, ಇದರಲ್ಲಿ ಮಿಷನರಿಗಳು ಬುಡಕಟ್ಟು ಜನಾಂಗದವರು ಸೇರಿದಂತೆ ಬಡ ಹಿಂದೂಗಳನ್ನು ಮತಾಂತರಗೊಳಿಸಲು ಆಮಿಷವೊಡ್ಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾರತದಾದ್ಯಂತ ಕ್ರೈಸ್ತ ಗುಂಪುಗಳಿಂದ ಹಿಂದೂಗಳ ಮತಾಂತರದ ಘಟನೆ ಹೆಚ್ಚಾಗಿದೆ. ಇದನ್ನು ತಡೆಯಲು ಅವರ ವಿರುದ್ಧ ಕಠಿಣ ಕ್ರಮ ಅಗತ್ಯ !