Prayagraj Airfare Hike : ಪ್ರಯಾಗರಾಜಗೆ ಹೋಗುವ ವಿಮಾನಗಳ ದರವನ್ನು ಕಡಿಮೆ ಮಾಡಲು ಕೇಂದ್ರ ಸರಕಾರದಿಂದ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ

ಪ್ರಯಾಗರಾಜ (ಉತ್ತರ ಪ್ರದೇಶ) – ಮಹಾಕುಂಭಮೇಳಕ್ಕಾಗಿ ಪ್ರಯಾಗರಾಜಗೆ ಹೋಗುವ ವಿಮಾನ ಟಿಕೆಟ್‌ಗಳ ಬೆಲೆಯನ್ನು ವಿಮಾನಯಾನ ಸಂಸ್ಥೆಗಳು ಹಲವು ಪಟ್ಟುಗಳನ್ನು ಹೆಚ್ಚಿಸಿದ ನಂತರ ಸಾರ್ವಜನಿಕರಿಂದ ಟೀಕೆಗಳಾಗುತ್ತಿವೆ. ಕೇಂದ್ರ ಸರಕಾರವು ದರವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯವು ‘ಪ್ರಯಾಗರಾಜಗೆ ವಿಮಾನ ದರಗಳನ್ನು ತರ್ಕಬದ್ಧಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಮಹಾಕುಂಭದ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಸಂಚಾರ ಬೇಡಿಕೆಯನ್ನು ಪೂರೈಸಲು ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ’ ಎಂದು ತಿಳಿಸಿದೆ. ಪ್ರಸ್ತುತ ನಿಯಮಗಳ ಪ್ರಕಾರ, ವಿಮಾನ ದರಗಳು ನಿಯಂತ್ರಣವಿಲ್ಲವಾಗಿದೆ ಮತ್ತು ಸರಕಾರವೂ ಕೂಡ ಯಾವುದೇ ನಿಯಂತ್ರಣ ಮಾಡುತ್ತಿಲ್ಲ.

ಸಂಪಾದಕೀಯ ನಿಲುವು

ಕೇವಲ ಸೂಚನೆ ನೀಡಿದ್ದರಿಂದ ವಿಮಾನಯಾನ ಸಂಸ್ಥೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ದರವನ್ನು ಒಂದೇ ಒಂದು ರೂಪಾಯಿ ಕೂಡ ಕಡಿಮೆ ಮಾಡಿಲ್ಲ. ಇದು ಸರಕಾರದ ಸೂಚನೆಗೆ ಬೆಲೆ ಇಲ್ಲ ಎಂದು ಕಂಡು ಬರುತ್ತದೆ. ಇದರಿಂದ ಅವರ ಉದ್ಧಟತನ ಗಮನಕ್ಕೆ ಬರುತ್ತದೆ. ಸರಕಾರ ಇಚ್ಛಾಶಕ್ತಿ ತೋರಿಸಿ ಪ್ರಯತ್ನ ಮಾಡಿದರೆ ಮಾತ್ರ ಜನರಿಗೆ ನೆಮ್ಮದಿ ಸಿಗುತ್ತದೆ !