ಪ್ರಯಾಗರಾಜ (ಉತ್ತರ ಪ್ರದೇಶ) – ಮಹಾಕುಂಭ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿದ ನಂತರ, ಕೇಂದ್ರ ಗೃಹ ಸಚಿವ ಅಮಿತ ಶಾಹ ಅವರು, ಇದು ಏಕತೆಯ ಮಹಾಕುಂಭವಾಗಿದ್ದು, ಸನಾತನ ಸಂಸ್ಕೃತಿಯ ವಿಶಿಷ್ಟ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಅವರು ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿದರು.
ಶಾಹ ಅವರು ಮಹಾಕುಂಭದ ಭವ್ಯ ಉತ್ಸವವನ್ನು ‘ಏಕತೆಯ ಮಹಾಕುಂಭ’ ಎಂದು ಕರೆದರು. ಅವರು, “ಮಹಾಕುಂಭವು ನಮ್ಮ ಸನಾತನ ಸಂಸ್ಕೃತಿಯ ಅವಿಚ್ಛಿನ್ನ ಹರಿವಿನ ಮತ್ತು ಅಖಂಡ ಸಂಪ್ರದಾಯದ ಪ್ರತೀಕವಾಗಿದೆ” ಎಂದು ಹೇಳಿದರು. ಈ ಉತ್ಸವವು ನಮ್ಮ ಜೀವನ ದರ್ಶನದ ಮೇಲೆ ಮತ್ತು ಸಾಮರಸ್ಯವನ್ನು ಆಧರಿಸಿದ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ’, ಎಂದು ಹೇಳಿದರು.