ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು !
ನವದೆಹಲಿ – ಅಪ್ರಾಪ್ತ ಬಾಲಕನ ಅಕ್ರಮ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ ಮೂಲದ ಮೌಲ್ವಿ (ಇಸ್ಲಾಮಿಕ್ ಧಾರ್ಮಿಕ ಮುಖಂಡ) ಸೈಯದ್ ಶಾ ಕಜ್ಮಿ ಅಲಿಯಾಸ್ ಮುಹಮ್ಮದ್ ಶಾದ್ ಅವರನ್ನು ಬಂಧಿಸಲಾಗಿತ್ತು. ಅವರಿಗೆ ಕೆಳ ಮತ್ತು ಉಚ್ಚ ನ್ಯಾಯಾಲಯಗಳೆರಡೂ ಜಾಮೀನು ನಿರಾಕರಿಸಿದವು; ಆದರೆ ಸುಪ್ರೀಂ ಕೋರ್ಟ್, “ಅಕ್ರಮ ಧಾರ್ಮಿಕ ಮತಾಂತರವು ಕೊಲೆ, ಅತ್ಯಾಚಾರ ಅಥವಾ ದರೋಡೆಯಷ್ಟು ಗಂಭೀರ ಅಪರಾಧವಲ್ಲ” ಎಂದು ಹೇಳಿ ಆತನಿಗೆ ಜಾಮೀನು ನೀಡಿದೆ. ನ್ಯಾಯಮೂರ್ತಿ ಜೆ.ಬಿ. ಪಾರ್ಡಿವಾಲಾ ನೇತೃತ್ವದ ಇಬ್ಬರು ಸದಸ್ಯರ ಪೀಠವು ಈ ತೀರ್ಪು ನೀಡಿದೆ.
1. ಉತ್ತರ ಪ್ರದೇಶ ಸರಕಾರದ ಪರವಾಗಿ ಯುಕ್ತಿವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಇವರು, ಈ ಪ್ರಕರಣವು ಅಪ್ರಾಪ್ತನ ಬಲವಂತದ ಮತಾಂತರದ ಬಗ್ಗೆ ಎಂದು ಹೇಳಿದ್ದರು. ಆದ್ದರಿಂದ ಇದು ತುಂಬಾ ಗಂಭೀರವಾಗಿದೆ. ಇದಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
2. ಜಾಮೀನು ಮಂಜೂರು ಮಾಡುವಾಗ ಸುಪ್ರೀಂ ಕೋರ್ಟ್, ಪ್ರತಿ ವರ್ಷ ನ್ಯಾಯಾಲಯದ ಸಮ್ಮೇಳನಗಳನ್ನು ನಡೆಸಲಾಗುತ್ತದೆ, ಇದರಲ್ಲಿ ಕೆಳ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ಪ್ರಕರಣಗಳಲ್ಲಿ ತಮ್ಮ ವಿವೇಚನೆಯನ್ನು ಹೇಗೆ ಚಲಾಯಿಸಬೇಕೆಂದು ತಿಳಿಸಲಾಗುತ್ತದೆ ಎಂದು ಹೇಳಿದೆ. ಆದರೂ, ನ್ಯಾಯಾಧೀಶರು ತಮ್ಮ ಇಚ್ಛೆಯಂತೆ ಜಾಮೀನು ನೀಡುವ ಅಥವಾ ನಿರಾಕರಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಕೆಳ ನ್ಯಾಯಾಲಯದ ನಂತರ ಹೈಕೋರ್ಟ್ ಅರ್ಜಿದಾರರಿಗೆ ಜಾಮೀನು ನೀಡುವುದು ಅಪೇಕ್ಷಿತವಿತ್ತು, ಕೆಳ ನ್ಯಾಯಾಲಯದ ನ್ಯಾಯಾಧೀಶರು ಅರ್ಜಿದಾರರಿಗೆ ಜಾಮೀನು ನೀಡದಿದ್ದರೆ, ಕನಿಷ್ಠ ಹೈಕೋರ್ಟ್ ಜಾಮೀನು ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.
3. ನ್ಯಾಯಾಲಯವು, ಅಕ್ರಮ ಮತಾಂತರ ಪ್ರಕರಣದಲ್ಲಿ ಮೊಹಮ್ಮದ್ ಶಾದ್ ವಿರುದ್ಧ ಖಚಿತವಾದ ಪುರಾವೆಗಳಿದ್ದರೆ, ಕೆಳ ನ್ಯಾಯಾಲಯವು ಅದನ್ನು ಪರಿಗಣಿಸಿ ಶಿಕ್ಷೆಯನ್ನು ನಿರ್ಧರಿಸುತ್ತದೆ. ಪ್ರಸ್ತುತ, ಈ ಪ್ರಕರಣವು ಜಾಮೀನಿಗಾಗಿ ಸುಪ್ರೀಂ ಕೋರ್ಟ್ ತಲುಪಿದೆ. ಈ ಪ್ರಕರಣದಲ್ಲಿ ಅರ್ಜಿದಾರರನ್ನು ಕಸ್ಟಡಿಯಲ್ಲಿ ಇಡುವ ಅಗತ್ಯವಿಲ್ಲ ಎಂದು ತೋರುತ್ತದೆ’, ಎಂದು ಹೇಳಿದೆ.